Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 35:12 - ಕನ್ನಡ ಸಮಕಾಲಿಕ ಅನುವಾದ

12 ಆಗ ನಾನೇ ಯೆಹೋವನೆಂದು ನೀನು ತಿಳಿಯುವೆ ಮತ್ತು ಇಸ್ರಾಯೇಲಿನ ಪರ್ವತಗಳ ವಿಷಯವಾಗಿ, “ಅವು ಹಾಳಾಗಿವೆ ನಮಗೆ ನುಂಗುವುದಕ್ಕೆ ಕೊಡಲಾಗಿವೆ,” ಎಂದು ಹೇಳಿ ಮಾತನಾಡಿದ ನಿನ್ನ ಎಲ್ಲಾ ದೂಷಣೆಗಳನ್ನು ಯೆಹೋವ ದೇವರೆಂಬ ನಾನೇ ಕೇಳಿರುವೆನೆಂದು ತಿಳಿಯುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಆಗ ನಾನೇ ಯೆಹೋವನು ಎಂದು ನೀನು ತಿಳಿದುಕೊಳ್ಳುವೆ. ನೀನು ಇಸ್ರಾಯೇಲಿನ ಪರ್ವತಗಳನ್ನು ನೋಡಿ, ಆಹಾ, ಹಾಳಾದವು! ನಮಗೆ ತುತ್ತಾಗಿವೆ ಎಂದು ಮಾಡಿದ ದೂಷಣೆಗಳು ಯೆಹೋವನಾದ ನನ್ನ ಕಿವಿಗೆ ಬಿದ್ದಿವೆ ಎಂಬುದು ನಿನಗೆ ಗೊತ್ತಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ನೀನು ಇಸ್ರಯೇಲಿನ ಪರ್ವತಗಳನ್ನು ನೋಡಿ, - ‘ಆಹಾ, ಹಾಳಾದವು, ನಮಗೆ ತಿನ್ನುವ ತುತ್ತಾಗಿವೆ,’ ಎಂದು ಮಾಡಿದ ದೂಷಣೆಗಳು ಸರ್ವೇಶ್ವರನಾದ ನನ್ನ ಕಿವಿಗೆ ಬಿದ್ದಿವೆ ಎಂಬುದು ನಿನಗೆ ಗೊತ್ತಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಮತ್ತು ನೀನು ಇಸ್ರಾಯೇಲಿನ ಪರ್ವತಗಳನ್ನು ನೋಡಿ - ಆಹಾ, ಹಾಳಾದವು, ನಮಗೆ ತುತ್ತಾಗಿವೆ ಎಂದು ಮಾಡಿದ ದೂಷಣೆಗಳು ಯೆಹೋವನಾದ ನನ್ನ ಕಿವಿಗೆ ಬಿದ್ದಿವೆ ಎಂಬದು ನಿನಗೆ ಗೊತ್ತಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಆಗ ನಿನ್ನ ಎಲ್ಲಾ ತುಚ್ಛಮಾತುಗಳನ್ನು ನಾನು ಕೇಳಿರುತ್ತೇನೆ ಎಂದು ನೀನು ತಿಳಿದುಕೊಳ್ಳುವೆ. “ಇಸ್ರೇಲ್ ಪರ್ವತದ ವಿರುದ್ಧವಾಗಿ ನೀನು ಆಡಿದ ಉದ್ರೇಕಕಾರಿಯಾದ ಸಂಗತಿಗಳನ್ನೆಲ್ಲ ನಾನು ಕೇಳಿದ್ದೇನೆ. ‘ಇಸ್ರೇಲ್ ನಾಶವಾಯಿತು. ಈಗ ಅದನ್ನು ಲೂಟಿ ಮಾಡೋಣ’ ಎಂದು ನೀನು ಹೇಳಿದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 35:12
10 ತಿಳಿವುಗಳ ಹೋಲಿಕೆ  

ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಏಕೆಂದರೆ ನಿನ್ನ ಶತ್ರುವು ನಿನಗೆ ವಿರೋಧವಾಗಿ, “ಆಹಾ, ಪೂರ್ವದ ಉತ್ತಮ ಸ್ಥಳಗಳು ನಮ್ಮ ಸೊತ್ತಾದವು,” ಎಂದು ಹೇಳುವರು. ’


ಅವರು, “ನಾವು ದೇವರ ಹುಲ್ಲುಗಾವಲು ಪ್ರದೇಶಗಳನ್ನು ಸ್ವಾಧೀನ ಮಾಡಿಕೊಳ್ಳೋಣ,” ಅನ್ನುತ್ತಾರೆ.


ನಾನು ನಿನ್ನನ್ನು ನಿತ್ಯನಾಶನಕ್ಕೆ ಗುರಿಮಾಡುವೆನು. ನಿನ್ನ ನಗರಗಳು ನಿರ್ಜನವಾಗುವುವು, ಆಗ ನಾನೇ ಯೆಹೋವ ದೇವರೆಂದು ನೀನು ತಿಳಿದುಕೊಳ್ಳುವೆ.


ಹತರಾದವರು ನಿಮ್ಮ ಮಧ್ಯದಲ್ಲಿ ಬೀಳುವರು. ಆಗ ನೀವು ನಾನೇ ಯೆಹೋವ ದೇವರೆಂದು ತಿಳಿಯುವಿರಿ.


ಅವರನ್ನು ಕಂಡವರೆಲ್ಲರು ಅವರನ್ನು ನುಂಗಿಬಿಟ್ಟಿದ್ದಾರೆ; ಅವರ ಎದುರಾಳಿಗಳು, ‘ನಾವು ಅವರನ್ನು ನುಂಗಿದ್ದು ದೋಷವಲ್ಲ; ಏಕೆಂದರೆ ನೀತಿಯ ನಿವಾಸವಾದ ಯೆಹೋವ ದೇವರಿಗೆ, ಹೌದು, ಅವರ ಪೂರ್ವಜರ ನಿರೀಕ್ಷೆಯಾದ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದಾರೆ,’ ಎಂದುಕೊಂಡರು.


ನಿನ್ನ ಸಹೋದರನ ವಿಪತ್ತಿನ ದಿನದಲ್ಲಿ ನೀನು ಅವನನ್ನು ಕೀಳು ದೃಷ್ಟಿಯಿಂದ ನೋಡಬಾರದಾಗಿತ್ತು. ಯೆಹೂದದ ಜನರು ನಾಶವಾದಾಗ ನೀನು ಸಂತೋಷಪಡಬಾರದಿತ್ತು. ಅವರ ಕಷ್ಟದ ದಿವಸದಲ್ಲಿ ಅಹಂಕಾರವಾಗಿ ಮಾತನಾಡಬಾರದಾಗಿತ್ತು;


ಯೆಹೋವ ದೇವರೇ, ನಿಮ್ಮನ್ನು ನಿಂದಿಸಿದ ನಮ್ಮ ನೆರೆಯವರಿಗೆ ಏಳರಷ್ಟು ಪ್ರತಿದಂಡನೆಯನ್ನು ಅವರ ಮಡಿಲಿಗೆ ಕೊಡಿರಿ.


ಹೀಗೆ ನಿಮ್ಮ ಬಾಯಿಂದ ನೀವು ನನಗೆ ವಿರೋಧವಾಗಿ ನಿಮ್ಮ ಮಾತುಗಳಿಂದ ಹೆಚ್ಚಿಸಿದ್ದನ್ನೂ ನಾನು ಕೇಳಿದ್ದೇನೆ.


“ಮೋವಾಬಿನ ನಿಂದೆಯನ್ನೂ ಅಮ್ಮೋನ್ಯರ ಬೈಗಳವನ್ನೂ ಅವರು ನನ್ನ ಜನರನ್ನೂ ನಿಂದಿಸಿ, ಅವರ ಮೇರೆಗೆ ವಿರೋಧವಾಗಿ ತಮ್ಮನ್ನು ಹೆಚ್ಚಿಸಿಕೊಂಡದ್ದನ್ನೂ ನಾನು ಕೇಳಿದ್ದೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು