ಯೆಹೆಜ್ಕೇಲನು 32:12 - ಕನ್ನಡ ಸಮಕಾಲಿಕ ಅನುವಾದ12 ಪರಾಕ್ರಮಶಾಲಿಗಳ ಖಡ್ಗಗಳಿಂದ ಜನಾಂಗಗಳಲ್ಲಿ ಭಯಂಕರರಾಗಿರುವ ನಿನ್ನ ಸಮೂಹವನ್ನು ನಾನು ಬೀಳುವಂತೆ ಮಾಡುವೆನು. ಅವರು ಈಜಿಪ್ಟಿನ ಮಹತ್ತನ್ನು ಕೆಡಿಸುವರು. ಅದರ ಜನಸಮೂಹವೆಲ್ಲಾ ಹಾಳಾಗುವುದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ನಾನು ನಿನ್ನ ಪ್ರಜೆಯನ್ನು ಅತಿಭಯಂಕರ ಜನಾಂಗದವರಾದ ಬಲಿಷ್ಠರ ಕತ್ತಿಗಳಿಂದ ಸಂಹರಿಸುವೆನು. ಅವರು ಐಗುಪ್ತದ ಮಹತ್ತನ್ನು ನಾಶ ಮಾಡುವರು. ಅದರ ಜನ ಸಮೂಹವೆಲ್ಲಾ ನಿರ್ನಾಮವಾಗುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)12 ನಿನ್ನ ಬಹುಪ್ರಜೆಯನ್ನು ಅತಿ ಭಯಾನಕ ಜನಾಂಗದವರಾದ ಬಲಿಷ್ಠರ ಕತ್ತಿಗಳಿಂದ ಸಂಹರಿಸುವೆನು; ಈಜಿಪ್ಟ್ ಹೆಚ್ಚಳಪಡುವ ವಸ್ತುಗಳನ್ನೇ ಅವರು ಸೂರೆಮಾಡುವರು; ಅದರ ಜನ ನಿರ್ನಾಮವಾಗುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ನಾನು ನಿನ್ನ ಬಹುಪ್ರಜೆಯನ್ನು ಅತಿಭಯಂಕರ ಜನಾಂಗದವರಾದ ಬಲಿಷ್ಠರ ಕತ್ತಿಗಳಿಂದ ಸಂಹರಿಸುವೆನು; ಐಗುಪ್ತವು ಹೆಚ್ಚಳಪಡುವ ವಸ್ತುಗಳನ್ನು ಅವರು ಸೂರೆಮಾಡುವರು; ಅದರ ಜನ ಯಾವತ್ತೂ ನಿರ್ನಾಮವಾಗುವದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್12 ಕ್ರೂರ ರಾಷ್ಟ್ರಗಳ ಆ ಸೈನಿಕರಿಂದ ನಿನ್ನ ಜನರನ್ನು ಯುದ್ಧದಲ್ಲಿ ಹತಗೊಳಿಸುವೆನು. ಈಜಿಪ್ಟಿನ ಜನರನ್ನೂ ಅವರು ಹೆಮ್ಮೆಪಡುವಂತ ವಸ್ತುಗಳನ್ನೂ ಆ ಸೈನಿಕರು ನಾಶಗೊಳಿಸುವರು. ಅಧ್ಯಾಯವನ್ನು ನೋಡಿ |