Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 30:26 - ಕನ್ನಡ ಸಮಕಾಲಿಕ ಅನುವಾದ

26 ನಾನು ಈಜಿಪ್ಟಿನವರನ್ನು ಜನಾಂಗಗಳೊಗೆ ಚದುರಿಸಿ ದೇಶಗಳಲ್ಲಿ ಹರಡಿಸುತ್ತೇನೆ; ಆಗ ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 “ನಾನು ಐಗುಪ್ತ್ಯರನ್ನು ಜನಾಂಗಗಳಲ್ಲಿ ಚದುರಿಸಿ ದೇಶದೇಶಗಳಿಗೆ ಚದುರಿಸಿ ಬಿಡುವಾಗ ನಾನೇ ಯೆಹೋವನು ಎಂದು ಅವರಿಗೆ ತಿಳಿದು ಬರುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ನಾನು ಈಜಿಪ್ಟರನ್ನು ಜನಾಂಗಗಳಲ್ಲಿ ಚದರಿಸಿ ದೇಶವಿದೇಶಗಳಿಗೆ ತೂರಿಬಿಡುವಾಗ ನಾನೇ ಸರ್ವೇಶ್ವರ ಎಂದು ಅವರಿಗೆ ತಿಳಿದುಬರುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ನಾನು ಐಗುಪ್ತ್ಯರನ್ನು ಜನಾಂಗಗಳಲ್ಲಿ ಚದರಿಸಿ ದೇಶದೇಶಗಳಿಗೆ ತೂರಿಬಿಡುವಾಗ ನಾನೇ ಯೆಹೋವನು ಎಂದು ಅವರಿಗೆ ತಿಳಿದುಬರುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ನಾನು ಈಜಿಪ್ಟಿನ ಜನರನ್ನು ದೇಶಾಂತರ ಚದರಿಸಿಬಿಡುವೆನು. ಆಗ ನಾನು ಯೆಹೋವನೆಂದು ಅವರು ತಿಳಿದುಕೊಳ್ಳುವರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 30:26
8 ತಿಳಿವುಗಳ ಹೋಲಿಕೆ  

ಅವನು ಇತರ ದೇಶಗಳ ಮೇಲೂ ತನ್ನ ಕೈಯನ್ನು ಚಾಚುವನು; ಈಜಿಪ್ಟ್ ದೇಶವು ತಪ್ಪಿಸಿಕೊಳ್ಳದು.


ನಾನು ಈಜಿಪ್ಟ್ ದೇಶವನ್ನು ಹಾಳುಬಿದ್ದಿರುವ ದೇಶಗಳಲ್ಲಿ ಸೇರಿಸುವೆನು. ಅದರ ಪಟ್ಟಣಗಳು ಕಾಡಾಗಿರುವ ಪಟ್ಟಣಗಳ ನಡುವೆ ನಲವತ್ತು ವರ್ಷಗಳು ಹಾಳಾಗಿರುವುವು. ನಾನು ಈಜಿಪ್ಟಿನವರನ್ನು ಜನಾಂಗಗಳಲ್ಲಿ ಚದುರಿಸಿ ದೇಶಗಳಲ್ಲಿ ಹರಡಿಸಿಬಿಡುವೆನು.


ಈಜಿಪ್ಟಿನವರನ್ನು ಜನಾಂಗಗಳಲ್ಲಿ ಚದರಿಸಿ ದೇಶಗಳ ಮೇಲೆ ಹರಡುವೆನು.


ಆಮೇಲೆ ಅವರಲ್ಲಿ ಹತರಾದವರು, ಅವರ ವಿಗ್ರಹಗಳ ಮಧ್ಯದಲ್ಲಿ ಅವರ ಬಲಿಪೀಠಗಳ ಸುತ್ತಲಾಗಿಯೂ ಎತ್ತರವಾದ ಪ್ರತಿಯೊಂದು ಗುಡ್ಡದ ಮೇಲೆಯೂ, ಸಮಸ್ತ ಪರ್ವತಗಳ ತುದಿಯಲ್ಲಿಯ ಪ್ರತಿಯೊಂದು ಹಸಿರಾದ ಮರದ ಕೆಳಗೂ, ಪ್ರತಿಯೊಂದು ದಪ್ಪವಾದ ಏಲಾ ಮರದ ಕೆಳಗಡೆಯೂ, ಅವರು ತಮ್ಮ ವಿಗ್ರಹಗಳಿಗೆಲ್ಲಾ ಸುವಾಸನೆಯನ್ನು ಅರ್ಪಿಸುವುದರಲ್ಲಿಯೂ ನಾನೇ ಯೆಹೋವ ದೇವರೆಂದು ತಿಳಿಯುವಿರಿ.


ನಾನು ಬಾಬಿಲೋನಿನ ಅರಸನ ಕೈಗಳನ್ನು ಬಲಪಡಿಸುತ್ತೇನೆ, ಆದರೆ ಫರೋಹನ ಕೈಗಳು ಬಲಹೀನವಾಗುವುವು. ನಾನು ನನ್ನ ಖಡ್ಗವನ್ನು ಬಾಬಿಲೋನಿನ ಅರಸನ ಕೈಗೆ ಕೊಡುವೆನು. ಅವನು ಅದನ್ನು ಈಜಿಪ್ಟಿನ ವಿರೋಧವಾಗಿ ಪ್ರಯೋಗಿಸುವನು. ಆಗ ಅವರು ನಾನೇ ಯೆಹೋವ ದೇವರು ಎಂದು ತಿಳಿದುಕೊಳ್ಳುವರು.


ಹನ್ನೊಂದನೆಯ ವರ್ಷದ, ಮೂರನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು:


ನಾನು ಈಜಿಪ್ಟ್ ದೇಶವನ್ನು ಹಾಳು ಮಾಡಿ ಅದರ ಸೊತ್ತನ್ನೆಲ್ಲಾ ಧ್ವಂಸಮಾಡಿ ಅದರ ನಿವಾಸಿಗಳನ್ನೆಲ್ಲಾ ಹೊಡೆಯುವಾಗ ನಾನೇ ಯೆಹೋವ ದೇವರು ಎಂದು ಅವರಿಗೆ ತಿಳಿಯುವುದು.’


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು