Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 3:11 - ಕನ್ನಡ ಸಮಕಾಲಿಕ ಅನುವಾದ

11 ಸೆರೆಯಾಗಿರುವ ನಿನ್ನ ಜನರ ಬಳಿಗೆ ಹೋಗಿ, ಅವರ ಸಂಗಡ ಮಾತನಾಡು. ಅವರು ಕೇಳಿದರೂ ಕೇಳದಿದ್ದರೂ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ,’ ಎಂದು ಅವರಿಗೆ ಹೇಳು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಸೆರೆಯಾಗಿರುವ ನಿನ್ನ ಸ್ವಂತ ಜನರ ಬಳಿಗೆ ಹೋಗಿ ಅವರು ಕೇಳಿದರೂ, ಕೇಳದೆ ಹೋದರೂ ಅವರನ್ನು ಉದ್ದೇಶಿಸಿ, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ’ ಎಂದು ಅವರಿಗೆ ಸಾರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಸೆರೆಯಾಗಿರುವ ನಿನ್ನ ಸ್ವಜನರ ಬಳಿಗೆಹೋಗಿ ಅವರು ಕೇಳಲಿ ಅಥವಾ ಕೇಳದೆಹೋಗಲಿ ಅವರನ್ನು ಪ್ರಭೋಧಿಸು; ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ,’ ಎಂದು ಅವರಿಗೆ ಸಾರಿಹೇಳು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಸೆರೆಯಾಗಿರುವ ನಿನ್ನ ಸ್ವಜನರ ಬಳಿಗೆ ಹೋಗಿ ಅವರು ಕೇಳಿದರೂ ಕೇಳದೆಹೋದರೂ ಅವರನ್ನು ಪ್ರಬೋಧಿಸಿ - ಕರ್ತನಾದ ಯೆಹೋವನು ಇಂತೆನ್ನುತ್ತಾನೆ ಎಂದು ಅವರಿಗೆ ಸಾರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಬಳಿಕ ಸೆರೆವಾಸದಲ್ಲಿರುವ ನಿನ್ನ ಸ್ವಜನರ ಬಳಿಗೆ ಹೋಗು. ಅವರು ಕೇಳಲಿ, ಕೇಳದಿರಲಿ, ನೀನು ಅವರಿಗೆ, ‘ದೇವರಾದ ಯೆಹೋವನು ಹೀಗೆ ಹೇಳುತ್ತಾನೆ’” ಎಂದು ಹೇಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 3:11
20 ತಿಳಿವುಗಳ ಹೋಲಿಕೆ  

ನೀನು ನನ್ನ ಮಾತುಗಳನ್ನು ಅವರಿಗೆ ಹೇಳಬೇಕು. ಅವರು ಕೇಳಿದರೂ ಸರಿ, ಕೇಳದಿದ್ದರೂ ಸರಿ, ಏಕೆಂದರೆ ಅವರು ತಿರುಗಿಬೀಳುವ ಜನರು.


ಆದರೆ ನಾನು ನಿನ್ನ ಸಂಗಡ ಮಾತನಾಡುವಾಗ ನಾನು ನಿನ್ನ ಬಾಯನ್ನು ತೆರೆಯುವೆನು. ಆಗ ನೀನು ಅವರಿಗೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ.’ ಕೇಳುವವನು ಕೇಳಲಿ, ಕೇಳದವನು ಕೇಳದೇ ಇರಲಿ. ಏಕೆಂದರೆ ಅವರು ತಿರುಗಿಬೀಳುವ ಜನರಾಗಿದ್ದಾರೆಂದು ಹೇಳಬೇಕು.


“ಮನುಷ್ಯಪುತ್ರನೇ, ನಿನ್ನ ಜನರು ಗೋಡೆಗಳ ನೆರಳಿನಲ್ಲೂ ಮನೆಯ ಬಾಗಿಲುಗಳಲ್ಲೂ ನಿಂತು ನಿಜ ಪ್ರಸ್ತಾಪವನ್ನೆತ್ತಿ ಒಬ್ಬರಿಗೊಬ್ಬರು, ‘ಯೆಹೋವ ದೇವರ ಬಾಯಿಂದ ಹೊರಟ ಮಾತೇನೆಂದು ಕೇಳೋಣ ಬನ್ನಿ’ ಎಂದು ಹೇಳಿಕೊಳ್ಳುತ್ತಿದ್ದಾರೆ.


“ಆದರೂ ನಿನ್ನ ಜನರ ಮಕ್ಕಳು, ‘ಯೆಹೋವ ದೇವರ ಮಾರ್ಗವು ಸರಿಯಲ್ಲ’ ಎಂದು ಹೇಳುತ್ತಾರೆ. ಅವರಿಗಾದರೋ ಅವರ ಮಾರ್ಗವೇ ನೀತಿಯುಕ್ತವಲ್ಲ.


“ಆದ್ದರಿಂದ, ನರಪುತ್ರನೇ, ನೀನು ನಿನ್ನ ಜನರ ಮಕ್ಕಳಿಗೆ ಹೇಳು: ‘ಒಬ್ಬ ನೀತಿವಂತನು ಅವಿಧೇಯನಾದರೆ, ಆ ವ್ಯಕ್ತಿಯ ಹಿಂದಿನ ನೀತಿಯು ಯಾವುದಕ್ಕೂ ಲೆಕ್ಕವಿಲ್ಲ. ಹಾಗೆಯೇ ದುಷ್ಟನು ಪಶ್ಚಾತ್ತಾಪಪಟ್ಟರೆ, ಆ ವ್ಯಕ್ತಿಯ ಹಿಂದಿನ ದುಷ್ಟತನವು ಖಂಡನೆಯನ್ನು ತರುವುದಿಲ್ಲ. ಪಾಪಮಾಡುವ ನೀತಿವಂತನು ಹಿಂದೆ ನೀತಿವಂತರಾಗಿದ್ದರೂ ಬದುಕಲು ಬಿಡುವುದಿಲ್ಲ.’


“ಮನುಷ್ಯಪುತ್ರನೇ, ನಿನ್ನ ಜನರ ಮಕ್ಕಳೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳು: ‘ನಾನು ಬಂದು ದೇಶದ ಮೇಲೆ ಯಾವಾಗ ಖಡ್ಗವನ್ನು ತರುವೆನೋ ಆಗ ಆ ದೇಶದ ಜನರು ತಮ್ಮ ಪ್ರಾಂತದ ಒಬ್ಬ ಮನುಷ್ಯನನ್ನು ಆರಿಸಿ ತಮಗೆ ಕಾವಲುಗಾರನನ್ನಾಗಿ ಇಟ್ಟರೆ,


ಅವರು ಕೇಳಲಿ ಅಥವಾ ಕೇಳದೇ ಇರಲಿ, ಏಕೆಂದರೆ ಅವರು ತಿರುಗಿಬೀಳುವ ಜನರು, ಆದರೆ ತಮ್ಮೊಳಗೆ ಪ್ರವಾದಿ ಇರುವನೆಂದು ತಿಳಿದುಕೊಂಡರೆ ಸಾಕು.


“ಆ ಕಾಲದಲ್ಲಿ ನಿನ್ನ ಜನರನ್ನು ಕಾಪಾಡುವುದಕ್ಕಾಗಿ ಮಹಾರಾಜಕುಮಾರನಾದ ಮೀಕಾಯೇಲನು ಏಳುವನು. ಮೊಟ್ಟಮೊದಲು ಜನಾಂಗ ಉಂಟಾದಂದಿನಿಂದ ಇಂದಿನವರೆಗೂ ಸಂಭವಿಸದಂತಹ ಸಂಕಟವು ಸಂಭವಿಸುವುದು. ಆಗ ನಿನ್ನ ಜನರೊಳಗೆ ಎಂದರೆ ಜೀವ ಪುಸ್ತಕದಲ್ಲಿ ಯಾರ ಹೆಸರು ಬರೆಯಲಾಗಿದೆಯೋ, ಅವರೆಲ್ಲರೂ ಬಿಡುಗಡೆಯಾಗುವರು.


ಆಗ ಅವರು ಉತ್ತರವಾಗಿ ಅರಸನ ಮುಂದೆ, “ಯೆಹೂದದ ಸೆರೆಯ ಮಕ್ಕಳಲ್ಲಿ ಒಬ್ಬನಾದ ಆ ದಾನಿಯೇಲನು ಅರಸನಾದ ನಿನ್ನನ್ನಾದರೂ, ನೀನು ರುಜು ಹಾಕಿದ ನಿರ್ಣಯವನ್ನೂ ಲಕ್ಷಿಸದೆ, ದಿನಕ್ಕೆ ಮೂರು ಸಾರಿ ತನ್ನ ಪ್ರಾರ್ಥನೆಯನ್ನು ಮಾಡುತ್ತಾನೆ,” ಎಂದರು.


“ ‘ಇದರ ಅರ್ಥವೇನೆಂದು ನೀನು ನಮಗೆ ಹೇಳುವುದಿಲ್ಲವೋ?’ ಎಂದು ನಿನ್ನ ದೇಶದ ಜನರು ನಿನ್ನನ್ನು ಪ್ರಶ್ನಿಸುವಾಗ,


ಆಮೇಲೆ ನಾನು ಕೆಬಾರ್ ನದಿಯ ದಡದಲ್ಲಿ ವಾಸಿಸುತ್ತಿದ್ದ ತೆಲ್ ಅಬೀಬಿನ ಸೆರೆಯವರ ಬಳಿಗೆ ಬಂದೆನು. ನಾನು ಬಹು ದುಃಖಿತನಾಗಿ ಅವರು ಕುಳಿತಿದ್ದ ಕಡೆಗೆ ನಾನು ಏಳು ದಿನಗಳ ಕಾಲ ಅವರ ಜೊತೆಗೆ ಕುಳಿತುಕೊಂಡೆನು.


ಆಗ ಯೆಹೋವ ದೇವರು, “ಎದ್ದು ಇಲ್ಲಿಂದ ಬೇಗ ಇಳಿದು ಹೋಗು. ಏಕೆಂದರೆ ನೀನು ಈಜಿಪ್ಟ್ ದೇಶದೊಳಗಿಂದ ಬರಮಾಡಿದ ನಿನ್ನ ಜನರು ಕೆಟ್ಟು ಹೋದರು. ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಬಿಟ್ಟು ತಮಗೆ ಎರಕ ಹೊಯ್ದ ವಿಗ್ರಹವನ್ನು ಮಾಡಿಕೊಂಡಿದ್ದಾರೆ,” ಎಂದು ನನಗೆ ಹೇಳಿದರು.


ಆಗ ಯೆಹೋವ ದೇವರು ಮೋಶೆಗೆ, “ನೀನು ಇಳಿದು ಹೋಗು ಏಕೆಂದರೆ ನೀನು ಈಜಿಪ್ಟ್ ದೇಶದೊಳಗಿಂದ ಬರಮಾಡಿದ ನಿನ್ನ ಜನರು ತಮ್ಮನ್ನು ಕೆಡಿಸಿಕೊಂಡಿದ್ದಾರೆ.


ಇದಲ್ಲದೆ ಅವರು ನನಗೆ, “ಮನುಷ್ಯಪುತ್ರನೇ, ನಾನು ನಿನ್ನ ಸಂಗಡ ಆಡುವ ಈ ನನ್ನ ಮಾತುಗಳನ್ನೆಲ್ಲಾ ಕೇಳಿ ಹೃದಯದಲ್ಲಿ ಅಂಗೀಕರಿಸಿಕೋ.


ಆಮೇಲೆ ದೇವರಾತ್ಮರು ನನ್ನನ್ನು ಎತ್ತಿಕೊಂಡು ಹೋದರು. ಮಹಿಮೆಯಿಂದ ಕೂಡಿದ ಯೆಹೋವ ದೇವರ ಮಹಿಮೆಯು ಅವರ ವಾಸಸ್ಥಾನದಲ್ಲಿ ಸ್ತೋತ್ರವಾಗಲಿ ಎಂಬ ಮಹಾಶಬ್ದವು ನನ್ನ ಹಿಂದೆ ಕೇಳಿಸಿತು.


“ಆದ್ದರಿಂದ ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಮನೆತನದವರ ಸಂಗಡ ಮಾತನಾಡಿ ಅವರಿಗೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನಗೆ ವಿರುದ್ಧವಾಗಿ ಬಹಳ ಅಪರಾಧಮಾಡಿದ್ದರಲ್ಲಿಯೂ ನಿಮ್ಮ ಪಿತೃಗಳು ನನ್ನನ್ನು ದೂಷಿಸಿದರು.


ಆದ್ದರಿಂದ ನಾನು ಯೆರೂಸಲೇಮಿನಿಂದ ಬಾಬಿಲೋನಿಗೆ ಕಳುಹಿಸಿದ ಸೆರೆಯವರೆಲ್ಲರೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ,


ಅವರು ಕಠಿಣ ಹೃದಯದವರು ಮತ್ತು ಹಠಮಾರಿ ಆಗಿದ್ದಾರೆ. ನಾನು ನಿನ್ನನ್ನು ಅವರ ಬಳಿಗೆ ಕಳುಹಿಸುತ್ತೇನೆ. ನೀನು ಅವರಿಗೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ,’ ಎಂದು ಹೇಳಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು