Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 27:5 - ಕನ್ನಡ ಸಮಕಾಲಿಕ ಅನುವಾದ

5 ಸೆನೀರಿನ ತುರಾಯಿ ಮರಗಳಿಂದ ನಿನ್ನ ಹಡಗಿನ ಹಲಗೆಗಳನ್ನೆಲ್ಲಾ ಕಟ್ಟಿದ್ದಾರೆ. ನಿನಗೆ ಸ್ತಂಭಗಳನ್ನು ಮಾಡುವುದಕ್ಕೆ ಲೆಬನೋನಿನಿಂದ ದೇವದಾರುಗಳನ್ನು ತಂದಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಸೆನೀರಿನ ತುರಾಯಿ ಮರದಿಂದ ನಿನ್ನ ಹಲಗೆಗಳನ್ನು ಮಾಡುವುದಕ್ಕೆ ಮತ್ತು ನಿನ್ನ ಸ್ತಂಭವನ್ನು ರಚಿಸುವುದಕ್ಕೆ ಲೆಬನೋನಿನಿಂದ ದೇವದಾರು ಮರವನ್ನು ತಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ನಿನ್ನ ಪಕ್ಕಗಳ ಮಾಡಿಹರು ಸೆನೀರಿನ ತುರಾಯಿ ಹಲಗೆಗಳಿಂದ ನಿನ್ನ ಸ್ತಂಭ ರಚಿಸಿಹರು ಲೆಬನೋನಿನ ದೇವದಾರು ಮರಗಳಿಂದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಸೆನೀರಿನ ತುರಾಯಿಮರದಿಂದ ನಿನ್ನ ಪಕ್ಕಗಳ ಹಲಿಗೆಗಳನ್ನು ಮಾಡಿ ನಿನ್ನ ಸ್ತಂಭವನ್ನು ರಚಿಸುವದಕ್ಕೆ ಲೆಬನೋನಿನಿಂದ ದೇವದಾರು ಮರವನ್ನು ತಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ನಿನ್ನನ್ನು ಕಟ್ಟಿದವರು ಸೆನೀರ್ ಬೆಟ್ಟದ ತುರಾಯಿ ಮರಗಳನ್ನು ಹಲಗೆಗಳಿಗಾಗಿ ಉಪಯೋಗಿಸಿದರು. ಲೆಬನೋನಿನ ದೇವದಾರು ಮರವನ್ನು ಹಾಯಿ ಮರವನ್ನಾಗಿ ಉಪಯೋಗಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 27:5
11 ತಿಳಿವುಗಳ ಹೋಲಿಕೆ  

ಹೆರ್ಮೋನಿಗೆ ಸೀದೋನ್ಯರು ಸಿರ್ಯೋನೆಂದೂ ಅಮೋರಿಯರು ಸೆನೀರ್ ಎಂದೂ ಕರೆಯುತ್ತಾರೆ.


ತುರಾಯಿ ಮರಗಳೂ, ಲೆಬನೋನಿನ ದೇವದಾರು ಮರಗಳೂ, “ಈಗ ನೀನು ಬಿದ್ದದ್ದರಿಂದ ನಮ್ಮನ್ನು ಕಡಿಯಲು ಯಾರೂ ಬರುವುದಿಲ್ಲ,” ಎಂದು ನಿನ್ನ ವಿಷಯವಾಗಿ ಉಲ್ಲಾಸಗೊಳ್ಳುತ್ತವೆ.


ಬಾ, ವಧುವೇ, ಲೆಬನೋನಿನಿಂದ ಬಾ, ಲೆಬನೋನಿನಿಂದ ನನ್ನೊಡನೆ ಬಾ. ಅಮಾನದ ಶಿಖರಗಳಿಂದ, ಸೆನೀರ್, ಹೆರ್ಮೋನ್ ಶಿಖರಗಳಿಂದ, ಸಿಂಹದ ಗವಿಗಳಿಂದ, ಚಿರತೆಗಳ ಪರ್ವತಗಳಿಂದ ಇಳಿದು ಬಾ.


ಯೆಹೋವ ದೇವರು ನೆಟ್ಟ ಮರಗಳಾದ ಲೆಬನೋನಿನ ದೇವದಾರು ವೃಕ್ಷಗಳಿಗೆ ಬೇಕಾದಷ್ಟು ಜಲವಿರುತ್ತದೆ.


ನೀತಿವಂತರು ಖರ್ಜೂರ ಮರದ ಹಾಗೆ ವೃದ್ಧಿಯಾಗುವರು. ಅವರು ಲೆಬನೋನಿನಲ್ಲಿರುವ ದೇವದಾರಿನ ಹಾಗೆ ಬೆಳೆಯುವರು.


ಯೆಹೋವ ದೇವರ ಧ್ವನಿಯು ದೇವದಾರು ವೃಕ್ಷಗಳನ್ನು ಮುರಿಯುತ್ತದೆ; ಯೆಹೋವ ದೇವರು ಲೆಬನೋನಿನ ದೇವದಾರು ವೃಕ್ಷಗಳನ್ನು ಮುರಿಯುತ್ತಾರೆ.


“ಆದ್ದರಿಂದ ನೀನು ನನಗೋಸ್ಕರ ಲೆಬನೋನಿನಲ್ಲಿ ದೇವದಾರು ಮರಗಳನ್ನು ಕಡಿಯಲು ಆಜ್ಞಾಪಿಸು. ನನ್ನ ಸೇವಕರೂ, ನಿನ್ನ ಸೇವಕರೂ ಕೂಡ ಇರಲಿ. ನೀನು ಹೇಳಿದ ಪ್ರಕಾರ, ನಿನ್ನ ಸೇವಕರ ಕೂಲಿಯನ್ನು ಕೊಡುತ್ತೇನೆ. ಏಕೆಂದರೆ ನಮ್ಮಲ್ಲಿ ಸೀದೋನ್ಯರ ಹಾಗೆ ಮರವನ್ನು ಕಡಿಯಲು ತಿಳಿದವರಿಲ್ಲ ಎಂದು ನೀನು ಬಲ್ಲೆ,” ಎಂದು ಹೇಳಿದನು.


ಸೊಲೊಮೋನನು ತನ್ನ ತಂದೆಗೆ ಬದಲಾಗಿ ಅರಸನಾಗಲು ಅಭಿಷೇಕ ಪಡೆದಿದ್ದಾನೆಂದು ಟೈರಿನ ಅರಸನಾದ ಹೀರಾಮನು ಕೇಳಿದಾಗ, ಅವನು ತನ್ನ ರಾಜದೂತರನ್ನು ಸೊಲೊಮೋನನ ಬಳಿಗೆ ಕಳುಹಿಸಿದನು. ಏಕೆಂದರೆ ಹೀರಾಮನು ಯಾವಾಗಲೂ ದಾವೀದನಿಗೆ ಆಪ್ತಮಿತ್ರನಾಗಿದ್ದನು.


ಮನಸ್ಸೆಯ ಅರ್ಧ ಗೋತ್ರದ ಜನರು ದೇಶದಲ್ಲಿ ವಾಸಮಾಡಿ, ಬಾಷಾನ್ ಮೊದಲುಗೊಂಡು ಬಾಳ್ ಹೆರ್ಮೋನ್, ಸೆನೀರ್, ಹೆರ್ಮೋನ್ ಬೆಟ್ಟದವರೆಗೂ ಹಬ್ಬಿಕೊಂಡರು.


ನಿನ್ನ ಮೇರೆಗಳು ಸಮುದ್ರದ ಮಧ್ಯದಲ್ಲಿವೆ. ನಿನ್ನನ್ನು ಕಟ್ಟಿದವರು ನಿನ್ನನ್ನು ಸರ್ವಾಂಗ ಸುಂದರಿಯನ್ನಾಗಿಸಿದ್ದಾರೆ.


“ಆದ್ದರಿಂದ ಬಂಗಾರದಲ್ಲಿಯೂ, ಬೆಳ್ಳಿಯಲ್ಲಿಯೂ, ಕಂಚಿನಲ್ಲಿಯೂ, ಕಬ್ಬಿಣದಲ್ಲಿಯೂ, ರಕ್ತವರ್ಣ, ಲೋಹಿತ ವರ್ಣ, ನೀಲ ವರ್ಣಗಳಲ್ಲಿಯೂ ಕೆಲಸವನ್ನು ಮಾಡಲು ಜ್ಞಾನವುಳ್ಳವನನ್ನು, ನನ್ನ ತಂದೆ ದಾವೀದನು ಸಿದ್ಧಮಾಡಿದ ಯೆಹೂದದಲ್ಲಿಯೂ, ಯೆರೂಸಲೇಮಿನಲ್ಲಿಯೂ, ನನ್ನ ಬಳಿಯಲ್ಲಿರುವ ಕುಶಲಕರ್ಮಿಗಳ ಸಂಗಡ ಕೆತ್ತಲು ತಿಳುವಳಿಕೆಯುಳ್ಳವನಾಗಿ ಇರುವವನನ್ನು ನನ್ನ ಬಳಿಗೆ ಕಳುಹಿಸು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು