Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 27:3 - ಕನ್ನಡ ಸಮಕಾಲಿಕ ಅನುವಾದ

3 ಟೈರಿಗೆ ಹೇಳು, ಸಮುದ್ರದ ಪ್ರವೇಶದಲ್ಲಿ ವಾಸಿಸುವವಳೇ, ಬಹು ದ್ವೀಪಗಳ ಜನರ ನಡುವೆ ವ್ಯಾಪಾರವನ್ನು ನಡೆಸುವವಳೇ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ, “ ‘ಟೈರ್ ನಗರಿಯೇ, “ನಾನು ಪೂರ್ಣ ಸೌಂದರ್ಯವತಿ,” ಎಂದು ನೀನು ಅಂದುಕೊಂಡಿದ್ದೀಯಲ್ಲಾ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ‘ಸಮುದ್ರ ದ್ವಾರದಲ್ಲಿ ವಾಸಿಸುತ್ತಾ, ಜನಾಂಗಗಳಿಗಾಗಿ ಅನೇಕ ದ್ವೀಪಗಳೊಂದಿಗೆ ವ್ಯಾಪಾರ ಮಾಡುವ ನಗರಿಯೇ!’ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ತೂರೇ, ‘ನಾನು ಪರಿಪೂರ್ಣ ಸುಂದರಿಯಾಗಿದ್ದೇನೆ’ ಎಂದು ನೀನು ಅಂದುಕೊಂಡಿದ್ದೀ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಸಮುದ್ರದ್ವಾರದಲ್ಲಿ ವಾಸಿಸುವ ನಗರಿಯೇ, ರಾಷ್ಟ್ರಗಳಿಗೂ ಹಲವಾರು ದ್ವೀಪಗಳಿಗೂ ನಡುವೆ ವ್ಯಾಪಾರ ನಡೆಸುವವಳೇ, ಸರ್ವೇಶ್ವರನಾದ ದೇವರು ಹೇಳುವುದನ್ನು ಕೇಳು: “ಟೈರ್ ನಗರಿಯೇ, ‘ನಾನೋರ್ವ ನಾವೆ,’ ‘ಸರ್ವಾಂಗ ಸುಂದರಿ ನಾನಾಗಿರುವೆ,’ ಎಂದು ಕೊಚ್ಚಿಕೊಂಡೆಯಲ್ಲವೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಸಮುದ್ರದ್ವಾರದಲ್ಲಿ ವಾಸಿಸುತ್ತಾ ಜನಾಂಗಗಳಿಗಾಗಿ ಬಹುದ್ವೀಪಗಳೊಂದಿಗೆ ವ್ಯಾಪಾರಮಾಡುವ ಪುರಿಯೇ! ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ತೂರೇ, ಪರಿಪೂರ್ಣಸುಂದರಿಯಾಗಿದ್ದೇನೆ ಅಂದುಕೊಂಡಿಯಲ್ಲಾ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಅದರ ಬಗ್ಗೆ ಈ ರೀತಿಯಾಗಿ ಹೇಳು: “‘ತೂರೇ, ನೀನು ಸಮುದ್ರಕ್ಕೆ ಬಾಗಿಲು. ಅನೇಕ ದೇಶಗಳಿಗೆ ನೀನು ವ್ಯಾಪಾರಿ. ಕರಾವಳಿಯ ಅನೇಕ ದೇಶಗಳಿಗೆ ನೀನು ಪ್ರಯಾಣಿಸುವೆ.’ ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ. ತೂರೇ, ನೀನು ಅತಿ ಸುಂದರಳೆಂದು ಭಾವಿಸಿರುವೆ. ನೀನು ಪರಿಪೂರ್ಣ ಸುಂದರಳೆಂದು ತಿಳಿದಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 27:3
15 ತಿಳಿವುಗಳ ಹೋಲಿಕೆ  

ನಿನ್ನ ಮೇರೆಗಳು ಸಮುದ್ರದ ಮಧ್ಯದಲ್ಲಿವೆ. ನಿನ್ನನ್ನು ಕಟ್ಟಿದವರು ನಿನ್ನನ್ನು ಸರ್ವಾಂಗ ಸುಂದರಿಯನ್ನಾಗಿಸಿದ್ದಾರೆ.


ಏಕೆಂದರೆ ಎಲ್ಲಾ ದೇಶಗಳೂ ಆಕೆಯ ಜಾರತ್ವಗಳೆಂಬ ಅತ್ಯಾಸಕ್ತಿಯ ದ್ರಾಕ್ಷಾರಸವನ್ನು ಕುಡಿದಿವೆ. ಭೂಲೋಕದ ಅರಸರು ಆಕೆಯೊಂದಿಗೆ ವ್ಯಭಿಚಾರ ಮಾಡಿದರು, ಭೂಲೋಕದ ವರ್ತಕರು ಆಕೆಯ ಭೋಗ ವಸ್ತುಗಳಿಂದ ಸಿರಿವಂತರಾದರು,” ಎಂದು ಕೂಗಿದನು.


ನಿನ್ನ ವಿಷಯದಲ್ಲಿ ಗೋಳಾಟವನ್ನೆತ್ತಿ ನಿನಗೆ ಹೇಳುವುದೇನೆಂದರೆ: “ ‘ಸಮುದ್ರಗಳ ಬಳಿಯಲ್ಲಿ ವಾಸಿಸಿದವಳೇ, ಪ್ರಸಿದ್ಧ ಪಟ್ಟಣವೇ, ಸಮುದ್ರದ ಮೇಲೆ ಬಲಗೊಂಡ ನಗರವೇ, ಅದರ ಸಮುದ್ರ ಸಂಚಾರವನ್ನೂ ಭಯಪಡಿಸಿದವಳೇ, ಅಯ್ಯೋ, ಹೇಗೆ ನಾಶವಾದೆ?


ಯೆಹೋವ ದೇವರು ಸಮುದ್ರದ ಮೇಲೆ ತನ್ನ ಕೈಚಾಚಿ ರಾಜ್ಯಗಳನ್ನು ನಡುಗಿಸಿದ್ದಾನೆ. ಅವರು ವ್ಯಾಪಾರದ ಪಟ್ಟಣವನ್ನು ಕಾನಾನಿನ ದುರ್ಗಗಳನ್ನು ನಾಶಮಾಡಬೇಕೆಂದು ಆಜ್ಞಾಪಿಸಿದ್ದಾರೆ.


ಪರಿಪೂರ್ಣ ಸೌಂದರ್ಯದ ಚೀಯೋನಿನಿಂದ ದೇವರು ಪ್ರಕಾಶಿಸುತ್ತಿದ್ದಾರೆ.


ಗೆಬಾಲ್ಯರು, ಅಮ್ಮೋನಿಯರು, ಅಮಾಲೇಕ್ಯರು, ಟೈರಿನವರು, ಫಿಲಿಷ್ಟಿಯರು,


“ ‘ಆದರೆ ನೀನು ನಿನ್ನ ಸೌಂದರ್ಯದಲ್ಲಿ ಭರವಸೆಯಿಟ್ಟು, ನಿನ್ನ ಕೀರ್ತಿಯ ನಿಮಿತ್ತವಾಗಿ ವೇಶ್ಯೆಯಾದೆ. ಹಾದುಹೋಗುವ ಪ್ರತಿಯೊಬ್ಬನ ಸಂಗಡ ಮಿತಿಮೀರಿ ವ್ಯಭಿಚಾರ ಮಾಡಿದೆ ಮತ್ತು ನಿನ್ನ ಸೌಂದರ್ಯ ಅವನದಾಯಿತು.


ಅವರು ನಿನ್ನ ಸಂಪತ್ತನ್ನು ಕಸಿದುಕೊಂಡು, ನಿನ್ನ ಸರಕುಗಳನ್ನು ಕೊಳ್ಳೆಹೊಡೆದು, ನಿನ್ನ ಗೋಡೆಗಳನ್ನು ಒಡೆದು, ನಿನ್ನ ರಮ್ಯವಾದ ಮನೆಗಳನ್ನು ಕೆಡವಿ, ನಿನ್ನ ಕಲ್ಲುಗಳನ್ನೂ ನಿನ್ನ ಮರಗಳನ್ನೂ ಧೂಳನ್ನೂ ನೀರಿನಲ್ಲಿ ಹಾಕುವರು.


ಆಕೆಯು ವರ್ತಕರ ಹಡಗುಗಳಂತೆ ಇರುವಳು; ದೂರದಿಂದ ಆಹಾರವನ್ನು ಆಕೆಯು ತರುವಳು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು