Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 27:27 - ಕನ್ನಡ ಸಮಕಾಲಿಕ ಅನುವಾದ

27 ನಿನ್ನ ಆಸ್ತಿಪಾಸ್ತಿಗಳೂ ಸರಕುಗಳೂ ನಿನ್ನ ನಾವಿಕರೂ ನಿನ್ನ ಅಂಬಿಗರೂ ನಿನ್ನ ಒಡಕುಗಳನ್ನು ಮುಚ್ಚುವವರೂ ನಿನ್ನ ವ್ಯಾಪಾರಿಗಳೂ ನಿನ್ನಲ್ಲಿನ ಸಮಸ್ತ ಸೈನಿಕರೂ ಅಂತೂ ನಿನ್ನೊಳಗೆ ಸೇರಿಕೊಂಡಿರುವ ನಿನ್ನ ಸಿಬ್ಬಂದಿಯೆಲ್ಲವೂ ನಿನ್ನ ನಾಶದ ದಿನದಲ್ಲಿ ಸಮುದ್ರದೊಳಗೆ ನಿನ್ನೊಂದಿಗೆ ಮುಳುಗಿ ಹೋಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ನಿನ್ನ ಆಸ್ತಿಯು, ನಿನ್ನ ವಸ್ತುಗಳು, ನಿನ್ನ ಸರಕುಗಳು, ನಿನ್ನ ನಾವಿಕರು, ನಿನ್ನ ಅಂಬಿಗರು, ನಿನ್ನ ಒಡಕುಗಳನ್ನು ಭದ್ರಪಡಿಸುವವರು, ನಿನ್ನ ವ್ಯಾಪಾರಿಗಳು, ನಿನ್ನಲ್ಲಿನ ಸಮಸ್ತ ಸೈನಿಕರು, ಅಂತು ನಿನ್ನೊಳಗೆ ಸೇರಿಕೊಂಡಿರುವ ನಿನ್ನ ಸಿಬ್ಬಂದಿಯೆಲ್ಲವೂ ನಿನ್ನ ನಾಶದ ದಿನದಲ್ಲಿ ಸಮುದ್ರದೊಳಗೆ ಮುಳುಗಿ ಹೋಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ವಿನಾಶದಿನದೊಳು ಮುಳುಗಿಹೋಗುವುವು ಸಮುದ್ರದೊಳು ನಿನ್ನ ಆಸ್ತಿ, ನಿನ್ನ ದಿನಸು, ನಿನ್ನ ಸರಕುಗಳು ನಿನ್ನ ನಾವಿಕರು, ಅಂಬಿಗರು, ಕಂಡಿ ಭದ್ರಪಡಿಸುವವರು, ನಿನ್ನ ವ್ಯಾಪಾರಿಗಳು, ಸೈನಿಕರೆಲ್ಲರು, ನಿನ್ನ ಸಿಬ್ಬಂದಿಯೆಲ್ಲವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ನಿನ್ನ ಆಸ್ತಿಯು, ನಿನ್ನ ದಿನಸುಗಳು, ನಿನ್ನ ಸರಕುಗಳು, ನಿನ್ನ ನಾವಿಕರು, ನಿನ್ನ ಅಂಬಿಗರು, ನಿನ್ನ ಕಂಡಿಗಳನ್ನು ಭದ್ರಪಡಿಸುವವರು, ನಿನ್ನ ವ್ಯಾಪಾರಿಗಳು, ನಿನ್ನಲ್ಲಿನ ಸಮಸ್ತ ಸೈನಿಕರು, ಅಂತು ನಿನ್ನೊಳಗೆ ಸೇರಿಕೊಂಡಿರುವ ನಿನ್ನ ಸಿಬ್ಬಂದಿಯೆಲ್ಲವೂ ನಿನ್ನ ನಾಶನದ ದಿನದಲ್ಲಿ ಸಮುದ್ರದೊಳಗೆ ಮುಣುಗಿಹೋಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ನಿನ್ನ ಎಲ್ಲಾ ಐಶ್ವರ್ಯವು, ನಿನ್ನ ದಿನಸುಗಳು, ನಿನ್ನ ಸರಕುಗಳು, ನಿನ್ನ ನಾವಿಕರು, ನಿನ್ನ ಅಂಬಿಗರು, ನಿನ್ನ ಕಿಂಡಿಗಳನ್ನು ಭದ್ರಪಡಿಸುವವರು, ನಿನ್ನ ವ್ಯಾಪಾರಿಗಳು, ನಿನ್ನ ಎಲ್ಲಾ ಸೈನಿಕರು, ನಿನ್ನ ಎಲ್ಲಾ ಸಿಬ್ಬಂದಿ ವರ್ಗದವರು ನಾಶನದ ದಿನದಲ್ಲಿ ಸಮುದ್ರದೊಳಗೆ ಮುಳುಗಿಹೋಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 27:27
19 ತಿಳಿವುಗಳ ಹೋಲಿಕೆ  

ಉಗ್ರತೆಯ ದಿನದಲ್ಲಿ ಸಂಪತ್ತು ಲಾಭಕರವಾಗುವುದಿಲ್ಲ; ಆದರೆ ನೀತಿಯ ನಡತೆ ಮರಣದಿಂದ ವಿಮೋಚಿಸುವುದು.


ಈಗಲಾದರೋ ನೀನು ಸಮುದ್ರದಿಂದ ಹಾಳಾದೆ, ನಿನ್ನ ಸರಕುಗಳೂ ನಿನ್ನಲ್ಲಿ ಸೇರಿಕೊಂಡಿದ್ದ ಸಕಲ ಜನರೂ ಆಗಾಧಜಲದಲ್ಲಿ ಮುಳುಗಿ ಹೋದರು.


ಇವರು ಎಲ್ಲಾ ತರಹದ ಸಾಮಾನುಗಳಲ್ಲೂ ನಿನ್ನ ವ್ಯಾಪಾರಿಗಳಾಗಿದ್ದರು. ಎಂದರೆ ಸುಂದರವಾದ ಬಟ್ಟೆಗಳು, ನೀಲಿಬಟ್ಟೆಗಳು, ಕಸೂತಿಯ ಕೆಲಸ ಮತ್ತು ಹಗ್ಗಗಳಿಂದ ಬಲವಾಗಿ ಬಿಗಿದ ಬಣ್ಣಬಣ್ಣದ ವಸ್ತ್ರಗಳ ಮೂಟೆಗಳನ್ನೂ ನಿನಗಾಗಿ ಕಳುಹಿಸುತ್ತಿದ್ದರು.


“ ‘ಶೆಬದವರು, ರಾಮದವರು ನಿನ್ನ ಕಡೆಯ ವರ್ತಕರಾಗಿ ಎಲ್ಲಾ ಶ್ರೇಷ್ಠವಾದ ಸುಗಂಧ ದ್ರವ್ಯದಿಂದಲೂ ಎಲ್ಲಾ ಬೆಲೆಯುಳ್ಳ ರತ್ನಗಳಿಂದಲೂ ಚಿನ್ನದಿಂದಲೂ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು.


“ ‘ಅಪಾರವಾದ ಬಗೆಬಗೆಯ ಆಸ್ತಿಯು ನಿನಗೆ ಬೇಕಾಗಿತ್ತು. ಆದ್ದರಿಂದ ತಾರ್ಷೀಷಿನವರು ನಿನ್ನ ಕಡೆಯ ವರ್ತಕರಾಗಿ ಬೆಳ್ಳಿ, ಕಬ್ಬಿಣ, ತವರ ಹಾಗೂ ಸೀಸಗಳನ್ನು ನಿನಗೆ ಒದಗಿಸುತ್ತಿದ್ದರು.


ನಾನೂ ನಿನ್ನನ್ನು ಭಯಂಕರವಾದ ಅಂತ್ಯಕ್ಕೆ ತರುವೆನು. ಇನ್ನು ಮೇಲೆ ನೀನು ಇರುವುದಿಲ್ಲ; ಆಮೇಲೆ ನಿನ್ನನ್ನು ಎಷ್ಟು ಹುಡುಕಿದರೂ ನೀನು ಸಿಗುವುದಿಲ್ಲ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”


ನಿನ್ನನ್ನು ಬೋಳು ಬಂಡೆಯಂತೆ ಮಾಡುವೆನು. ನೀನು ಅಲ್ಲಿ ಬಲೆಹಾಸುವ ಸ್ಥಳವಾಗುವೆ. ನೀನು ಪುನಃ ಕಟ್ಟಲಾಗದೆ ಹೋಗುವಿ. ಯೆಹೋವ ದೇವರಾದ ನಾನೇ ಅದನ್ನು ಹೇಳಿದ್ದೇನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.


ಅವರು ನಿನ್ನ ಸಂಪತ್ತನ್ನು ಕಸಿದುಕೊಂಡು, ನಿನ್ನ ಸರಕುಗಳನ್ನು ಕೊಳ್ಳೆಹೊಡೆದು, ನಿನ್ನ ಗೋಡೆಗಳನ್ನು ಒಡೆದು, ನಿನ್ನ ರಮ್ಯವಾದ ಮನೆಗಳನ್ನು ಕೆಡವಿ, ನಿನ್ನ ಕಲ್ಲುಗಳನ್ನೂ ನಿನ್ನ ಮರಗಳನ್ನೂ ಧೂಳನ್ನೂ ನೀರಿನಲ್ಲಿ ಹಾಕುವರು.


ಹುಟ್ಟು ಹಾಕುವವರು ನಿನ್ನನ್ನು ಸಿಕ್ಕಿಸಿದ್ದಾರೆ. ಪೂರ್ವದಿಕ್ಕಿನ ಗಾಳಿಯು ಸಮುದ್ರದ ಮಧ್ಯದಲ್ಲಿ ನಿನ್ನನ್ನು ಮುರಿದಿದೆ.


ನಿನ್ನ ನಾವಿಕರ ಕೂಗಾಟಕ್ಕೆ, ಸಮುದ್ರತೀರದ ಪ್ರದೇಶಗಳು ನಡುಗುವುವು.


ನಿನ್ನನ್ನು ಪಾತಾಳಕ್ಕೆ ತಳ್ಳಿಬಿಡುವರು. ಸಮುದ್ರಗಳ ಮಧ್ಯದಲ್ಲಿ ಭಯಂಕರವಾದ ಮರಣದ ಹಾಗೆ ನೀನು ಸಾಯುವೆ.


ಟೈರಿನ ಅರಸರೆಲ್ಲರಿಗೂ, ಸೀದೋನಿನ ಅರಸರೆಲ್ಲರಿಗೂ, ಸಮುದ್ರದ ಆಚೆಯಲ್ಲಿರುವ ದ್ವೀಪದ ಅರಸರಿಗೂ,


ಹನ್ನೊಂದನೆಯ ವರ್ಷ, ತಿಂಗಳಿನ ಮೊದಲನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು.


ಯೆಹೋವ ದೇವರ ವಾಕ್ಯವು ನನಗೆ ಬಂದಿತು:


ಯೆಹೋವ ದೇವರು ಹೀಗೆ ಹೇಳುತ್ತಾರೆ: “ಟೈರ್ ಪಟ್ಟಣದ ಜನರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅವರು ಸಹೋದರರ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳದೆ ಸೆರೆಯಾಳುಗಳ ಸಂಪೂರ್ಣ ಸಮುದಾಯಗಳನ್ನು ಎದೋಮಿಗೆ ಮಾರಿಬಿಟ್ಟರು.


ಟೈರ್ ತನಗಾಗಿ ಬಲವಾದ ಕೋಟೆಯನ್ನು ಕಟ್ಟಿಕೊಂಡು, ಬೆಳ್ಳಿಯನ್ನು ಧೂಳಿನಂತೆಯೂ, ಚೊಕ್ಕ ಬಂಗಾರವನ್ನು ಬೀದಿಗಳ ಕೆಸರಿನಂತೆಯೂ ಕೂಡಿಸಿಕೊಂಡಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು