ಯೆಹೆಜ್ಕೇಲನು 27:17 - ಕನ್ನಡ ಸಮಕಾಲಿಕ ಅನುವಾದ17 “ ‘ಯೆಹೂದವೂ ಇಸ್ರಾಯೇಲ್ ದೇಶವೂ ನಿನ್ನ ಕಡೆಯ ವರ್ತಕರಾಗಿ ಮಿನ್ನೀಥಿನ ಗೋಧಿಯಿಂದಲೂ ಮಿಠಾಯಿ, ಜೇನು, ಎಣ್ಣೆ ಮತ್ತು ಸುಗಂಧ ತೈಲದಿಂದಲೂ ನಿನ್ನ ಸಂತೆಯಲ್ಲಿ ವ್ಯಾಪಾರ ನಡೆಸಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 “ಯೆಹೂದ್ಯರೂ, ಇಸ್ರಾಯೇಲ್ ದೇಶದವರೂ ನಿನ್ನ ಕಡೆಯ ವರ್ತಕರಾಗಿ ಮಿನ್ನೀಥಿನ ಗೋದಿಯಿಂದಲೂ, ಖಂಡಸಕ್ಕರೆ, ಜೇನು, ಎಣ್ಣೆ ಮತ್ತು ಸುಗಂಧತೈಲದಿಂದಲೂ ನಿನ್ನೊಂದಿಗೆ ವ್ಯಾಪಾರ ನಡೆಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 ಯೆಹೂದ್ಯರೂ, ಇಸ್ರಯೇಲ್ ನಾಡಿನವರೂ ನಿನ್ನ ಕಡೆಯ ವರ್ತಕರಾಗಿ ಮಿನ್ನೀಥಿನ, ಗೋಧಿ, ‘ಪನ್ನಗ್’, ಜೇನು, ಎಣ್ಣೆ, ಸುಗಂಧತೈಲ, ಈ ಸಾಮಗ್ರಿಗಳನ್ನು ನಿನಗೆ ಸೇರಿಸುತ್ತಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)17 ಯೆಹೂದ್ಯರೂ ಇಸ್ರಾಯೇಲ್ ದೇಶದವರೂ ನಿನ್ನ ಕಡೆಯ ವರ್ತಕರಾಗಿ ವಿುನ್ನೀಥಿನ ಗೋದಿ ಕಂಡಸಕ್ಕರೆ ಜೇನು ಎಣ್ಣೆ ಸುಗಂಧತೈಲ ಈ ಸಾಮಗ್ರಿಗಳನ್ನು ನಿನಗೆ ಸೇರಿಸಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್17 “‘ಇಸ್ರೇಲ್ ಮತ್ತು ಯೆಹೂದ ದೇಶದವರು ನಿನ್ನೊಂದಿಗೆ ವ್ಯಾಪಾರ ಮಾಡಿದರು. ಅವರು ನಿನ್ನ ವಸ್ತುಗಳಿಗೆ ಗೋಧಿ, ಆಲೀವ್, ಅಂಜೂರ, ಜೇನು, ಎಣ್ಣೆ ಮತ್ತು ಮುಲಾಮುಗಳನ್ನು ಕೊಟ್ಟರು. ಅಧ್ಯಾಯವನ್ನು ನೋಡಿ |