Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 27:12 - ಕನ್ನಡ ಸಮಕಾಲಿಕ ಅನುವಾದ

12 “ ‘ಅಪಾರವಾದ ಬಗೆಬಗೆಯ ಆಸ್ತಿಯು ನಿನಗೆ ಬೇಕಾಗಿತ್ತು. ಆದ್ದರಿಂದ ತಾರ್ಷೀಷಿನವರು ನಿನ್ನ ಕಡೆಯ ವರ್ತಕರಾಗಿ ಬೆಳ್ಳಿ, ಕಬ್ಬಿಣ, ತವರ ಹಾಗೂ ಸೀಸಗಳನ್ನು ನಿನಗೆ ಒದಗಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 “ಅಪಾರವಾದ ಬಗೆಬಗೆಯ ಆಸ್ತಿಯು ನಿನಗೆ ಬೇಕಾಗಿದ್ದರಿಂದ ತಾರ್ಷೀಷಿನವರು ನಿನ್ನ ಕಡೆಯ ವರ್ತಕರಾಗಿ ಬೆಳ್ಳಿ, ಕಬ್ಬಿಣ, ತವರ ಮತ್ತು ಸೀಸಗಳನ್ನು ಒದಗಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಅಪಾರವಾದ ಬಗೆಬಗೆಯ ಆಸ್ತಿಯು ನಿನಗೆ ಬೇಕಾಗಿತ್ತು. ಆದುದರಿಂದ ತಾರ್ಷೀಷಿನವರು ನಿನ್ನ ಕಡೆಯ ವರ್ತಕರಾಗಿ ಬೆಳ್ಳಿ, ಕಬ್ಬಿಣ, ತವರ ಹಾಗೂ ಸೀಸಗಳನ್ನು ನಿನಗೆ ಒದಗಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಅಪಾರವಾದ ಬಗೆಬಗೆಯ ಆಸ್ತಿಯು ನಿನಗೆ ಬೇಕಾಗಿದ್ದದರಿಂದ ತಾರ್ಷೀಷಿನವರು ನಿನ್ನ ಕಡೆಯ ವರ್ತಕರಾಗಿ ಬೆಳ್ಳಿ ಕಬ್ಬಿಣ ತವರ ಸೀಸಗಳನ್ನು ನಿನಗೆ ಒದಗಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 “‘ತಾರ್ಷೀಷ್ ನಿನ್ನ ಉತ್ತಮ ವ್ಯಾಪಾರ ಕೇಂದ್ರವಾಗಿತ್ತು. ಅವರು ತಮ್ಮ ಬೆಳ್ಳಿ, ಕಬ್ಬಿಣ, ತವರ ಮತ್ತು ಸೀಸ ಲೋಹಗಳನ್ನು ಕೊಟ್ಟು ನಿನ್ನಿಂದ ವಸ್ತುಗಳನ್ನು ಕೊಂಡುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 27:12
22 ತಿಳಿವುಗಳ ಹೋಲಿಕೆ  

ಶೆಬ, ದೆದಾನ್ ಮತ್ತು ತಾರ್ಷೀಷಿನ ವರ್ತಕರು, ಅವಳ ಎಲ್ಲಾ ಹಳ್ಳಿಗಳೊಂದಿಗೆ ಅಲ್ಲಿ ನಿನಗೆ, “ನೀನು ಸುಲಿಗೆ ತೆಗೆದುಕೊಳ್ಳಬೇಕೆಂದು ಬಂದೆಯಾ? ಕೊಳ್ಳೆ ಹೊಡೆಯುವುದಕ್ಕಾಗಿಯೇ ನಿನ್ನ ತಂಡವನ್ನು ಕೂಡಿಸಿದೆಯೋ? ಬಂಗಾರ ಮತ್ತು ಬೆಳ್ಳಿಯನ್ನು ಹೊತ್ತುಕೊಂಡು ಪಶುಗಳನ್ನೂ ಸಂಪತ್ತನ್ನೂ ತೆಗೆದುಕೊಂಡು ಮಹಾ ಸುಲಿಗೆ ತೆಗೆದುಕೊಳ್ಳಬೇಕೆಂದೋ?” ಎನ್ನುವರು.’


ತಾರ್ಷೀಷಿನ ಮಗಳೇ, ನೈಲ್ ನದಿಯಂತೆ ನಿನ್ನ ದೇಶದಲ್ಲಿ ಹಾದುಹೋಗು. ಅಲ್ಲಿ ಇನ್ನು ನಿನ್ನನ್ನು ತಡೆಯುವವರು ಯಾರೂ ಇಲ್ಲ.


ಹೀರಾಮನ ಹಡಗುಗಳ ಜೊತೆಯಲ್ಲಿ ಅರಸನ ಹಡಗುಗಳು ತಾರ್ಷೀಷಿಗೆ ಹೋಗಿ ಮೂರು ವರ್ಷಕ್ಕೆ ಒಂದು ಸಾರಿ ಬಂಗಾರ, ಬೆಳ್ಳಿ, ದಂತ, ಕೋತಿ, ನವಿಲು ಇವುಗಳನ್ನೂ ತರುತ್ತಿದ್ದವು.


ಯಾವಾನನ ಮಕ್ಕಳು: ಎಲೀಷಾ, ತಾರ್ಷೀಷ್, ಕಿತ್ತೀಮ್, ದೋದಾನೀಮ್.


ಆದರೆ ಯೋನನು ಯೆಹೋವ ದೇವರ ಸಮ್ಮುಖದಿಂದ ತಾರ್ಷೀಷಿಗೆ ಓಡಿಹೋಗುವುದಕ್ಕೆ ಎದ್ದು, ಯೊಪ್ಪಕ್ಕೆ ಇಳಿದು ತಾರ್ಷೀಷಿಗೆ ಹೋಗುವ ಹಡಗನ್ನು ಕಂಡು, ಪ್ರಯಾಣದ ದರವನ್ನು ಕೊಟ್ಟು, ಯೆಹೋವ ದೇವರ ಸಮ್ಮುಖದಿಂದ ತಪ್ಪಿಸಿಕೊಂಡು ಹೋಗಲು, ಪ್ರಯಾಣಮಾಡುತ್ತಿದ್ದ ಹಡಗಿನವರೊಡನೆ ತಾರ್ಷೀಷಿಗೆ ಹೋಗುವುದಕ್ಕೆ ಅದನ್ನು ಹತ್ತಿದನು.


“ ‘ಕೈಕೆಲಸದ ವಸ್ತುಗಳು ನಿನ್ನಲ್ಲಿ ಅಪಾರವಾಗಿದ್ದುದರಿಂದಲೂ ಅಪರಿಮಿತವಾದ ಬಗೆಬಗೆಯ ಆಸ್ತಿಯೂ ನಿನಗೆ ಬೇಕಾಗಿದ್ದುದರಿಂದಲೂ ದಮಸ್ಕದವರೂ ನಿನ್ನ ಪರವಾಗಿ ವ್ಯಾಪಾರಮಾಡಿ, ಹೆಲ್ಬೋನಿನ ದ್ರಾಕ್ಷಾರಸವನ್ನು ಹಾಗೂ ಚಾಹರಿನ ಉಣ್ಣೆಯನ್ನು ನಿನ್ನಲ್ಲಿ ತುಂಬಿಸುತ್ತಿದ್ದರು.


“ ‘ನಿನ್ನ ಕೈಕೆಲಸದ ವಸ್ತುಗಳು ಅಪಾರವಾಗಿದ್ದುದರಿಂದ ಅರಾಮ್ಯರು ನಿನ್ನವರಾಗಿ ವ್ಯಾಪಾರಮಾಡಿ ಕೆಂಪರಳು, ರಕ್ತಾಂಬರ, ಕಸೂತಿಯ ವಸ್ತ್ರ, ನಾರುಬಟ್ಟೆ, ಹವಳ, ಮಾಣಿಕ್ಯ ಮೊದಲಾದ ಸರಕುಗಳನ್ನು ನಿನಗೆ ತಂದು ಸುರಿದರು.


ಬೆಳ್ಳಿಯ ತಗಡುಗಳನ್ನು ತಾರ್ಷೀಷಿನಿಂದಲೂ, ಬಂಗಾರವನ್ನು ಊಫಜಿನಿಂದ ತರುತ್ತಾರೆ. ಅದು ಕೆತ್ತನೆಯವನ ಕೆಲಸವು ಮತ್ತು ಎರಕ ಹೊಯ್ಯುವವನ ಕೈಯಿಂದ ಉಂಟಾದವುಗಳೂ ಆಗಿವೆ. ನೀಲಿಯೂ ಧೂಮ್ರ ವರ್ಣವೂ ಅವುಗಳ ವಸ್ತ್ರವಾಗಿದೆ. ಅವುಗಳೆಲ್ಲಾ ಕೌಶಲ್ಯಗಾರರ ಕೈಕೆಲಸವೇ.


ನಿಶ್ಚಯವಾಗಿ ದ್ವೀಪಗಳು, ತಾರ್ಷೀಷಿನ ಹಡಗುಗಳು ಮೊದಲಾಗಿ ನನಗೋಸ್ಕರ ದೂರದಿಂದ ನಿನ್ನ ಪುತ್ರರನ್ನು ತಮ್ಮ ಬೆಳ್ಳಿಬಂಗಾರದ ಸಹಿತವಾಗಿ ನಿನ್ನ ದೇವರಾದ ಯೆಹೋವ ದೇವರ ಬಳಿಗೂ, ನಿನ್ನನ್ನು ವೈಭವದಿಂದ ಶೃಂಗರಿಸಿರುವ ಇಸ್ರಾಯೇಲಿನ ಪರಿಶುದ್ಧನ ಬಳಿಗೂ ತರುವುದರಲ್ಲಿ ಮುಂದಾಗುತ್ತಿವೆ.


ತಾರ್ಷೀಷಿನ ಹಡಗುಗಳೇ, ಗೋಳಾಡಿರಿ! ಏಕೆಂದರೆ ನಿಮ್ಮ ಆಶ್ರಯಸ್ಥಾನವು ಹಾಳಾಯಿತು, ಎಂದು ಆತನು ಹೇಳಿದ್ದಾನೆ.


ತಾರ್ಷೀಷಿಗೆ ದಾಟಿ ಹೋಗಿರಿ, ದ್ವೀಪ ನಿವಾಸಿಗಳೇ ಗೋಳಾಡಿರಿ.


ಎಲ್ಲಾ ತಾರ್ಷೀಷಿನ ಹಡಗುಗಳು ನೋಡತಕ್ಕ ಮನೋಹರವಾದ ಪ್ರತಿಯೊಂದು ನೌಕೆಗಳ ಮೇಲೆಯೂ ಆ ದಿನವು ತಪ್ಪದೇ ಬರುವುದು.


ತಾರ್ಷೀಷಿನ ಅರಸರೂ ದ್ವೀಪಗಳ ಅರಸರೂ ಕಾಣಿಕೆಗಳನ್ನು ಅರಸನಿಗೆ ಸಲ್ಲಿಸಲಿ. ಶೆಬ ಮತ್ತು ಸೆಬದ ಅರಸರು ದಾನಗಳನ್ನು ತಂದೊಪ್ಪಿಸಲಿ.


ಯೆಹೋಷಾಫಾಟನು ಬಂಗಾರಕ್ಕೋಸ್ಕರ ಓಫೀರಿಗೆ ಹೋಗುವುದಕ್ಕೆ ತಾರ್ಷೀಷ್ ಹಡಗುಗಳನ್ನು ಮಾಡಿಸಿದನು. ಆದರೆ ಅವು ಹೋಗಲಿಲ್ಲ. ಆ ಹಡಗುಗಳು ಎಚ್ಯೋನ್ ಗೆಬೆರಿನ ಬಳಿಯಲ್ಲಿ ಒಡೆದುಹೋದವು.


ಅವರ ಸರಕುಗಳಾದ ಚಿನ್ನ, ಬೆಳ್ಳಿ, ಬೆಲೆಬಾಳುವ ಕಲ್ಲು ಹಾಗೂ ಮುತ್ತುಗಳು, ನಯವಾದ ನಾರುಮಡಿ, ಕಡುಗೆಂಪು ವಸ್ತ್ರ, ರೇಷ್ಮೆ, ಊದಾವರ್ಣದ ವಸ್ತ್ರ, ಅಗಿಲು ಮರ ಮತ್ತು ದಂತ ಪಾತ್ರೆಗಳು, ಬೆಲೆಬಾಳುವ ಮರ, ತಾಮ್ರ, ಕಬ್ಬಿಣ ಮತ್ತು ಚಂದ್ರಕಾಂತ ಶಿಲೆ,


ಅರ್ವಾದಿನವರು ಮತ್ತು ಹೆಲೆಕರು ನಿನ್ನ ದಂಡಿನ ಸಂಗಡ ನಿನ್ನ ಗೋಡೆಗಳ ಸುತ್ತಲೂ ಇದ್ದರು. ಗಮ್ಮಾದ್ಯರು ನಿನ್ನ ಗೋಪುರಗಳಲ್ಲಿ ಕಾವಲಾಗಿದ್ದರು. ತಮ್ಮ ಖೇಡ್ಯಗಳನ್ನು ಸುತ್ತಮುತ್ತಲೂ ನಿನ್ನ ಗೋಡೆಗಳ ಮೇಲೆ ನೇತುಹಾಕಿ ಇವರು ನಿನ್ನ ಸೌಂದರ್ಯವನ್ನು ಪರಿಪೂರ್ಣಗೊಳಿಸಿದರು.


“ ‘ಯಾವಾನ್, ತೂಬಲ್, ಮೆಷೆಕ್ ಇವರು ನಿನ್ನ ವರ್ತಕರಾಗಿದ್ದರು. ನರಪ್ರಾಣಿಗಳನ್ನೂ ಕಂಚಿನ ಪಾತ್ರೆಗಳನ್ನೂ ನಿನ್ನ ಬಜಾರಿನಲ್ಲಿ ಮಾರಾಟಕ್ಕಿಟ್ಟರು.


ನಿನ್ನ ಸರಕು ಸಮುದ್ರದಿಂದ ಹೊರಟಾಗ ಅನೇಕ ಜನರಿಗೆ ತೃಪ್ತಿಪಡಿಸಿದೆ. ನಿನ್ನ ಅಪಾರವಾದ ಐಶ್ವರ್ಯದಿಂದಲೂ ವ್ಯಾಪಾರದ ದಿನಸುಗಳಿಂದಲೂ ಭೂರಾಜರನ್ನು ಸಮೃದ್ಧಿಪಡಿಸಿದೆ.


ವ್ಯಾಪಾರದಲ್ಲಿ ನಿನ್ನ ಅಧಿಕ ಚಾತುರ್ಯದಿಂದಲೂ ನಿನ್ನ ಸಂಪತ್ತನ್ನು ವೃದ್ಧಿಮಾಡಿಕೊಂಡಿರುವೆ. ನಿನ್ನ ಆಸ್ತಿಯ ನಿಮಿತ್ತ ನಿನ್ನ ಹೃದಯ ಗರ್ವಪಟ್ಟಿದೆ.


ನಿನ್ನ ಮಿತಿಯಿಲ್ಲದ ವ್ಯಾಪಾರದಿಂದ ನಿನ್ನಲ್ಲಿ ಹಿಂಸಾಚಾರವು ತುಂಬಿ ನೀನು ಪಾಪಿಯಾದೆ; ಆದ್ದರಿಂದ ನಿನ್ನನ್ನು ಅಪವಿತ್ರನೆಂದು ದೇವರ ಪರ್ವತದೊಳಗಿನಿಂದ ನಾನು ತಳ್ಳಿಬಿಟ್ಟೆನು. ಓ ರಕ್ಷಕ ಕೆರೂಬಿಯೇ, ಬೆಂಕಿಯ ಕಲ್ಲುಗಳ ಮಧ್ಯದಿಂದ ನಿನ್ನನ್ನು ನಾಶಮಾಡುವೆನು.


ಅರಸನ ಹಡಗುಗಳು ಹೀರಾಮನ ಸೇವಕರ ಜೊತೆಯಲ್ಲಿ ತಾರ್ಷೀಷಿಗೆ ಹೋಗಿ ಮೂರು ವರ್ಷಕ್ಕೆ ಒಂದು ಸಾರಿ ಬಂಗಾರ, ಬೆಳ್ಳಿ, ದಂತ, ಕೋತಿ, ನವಿಲು ಇವುಗಳನ್ನೂ ತರುತ್ತಿದ್ದವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು