Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 26:8 - ಕನ್ನಡ ಸಮಕಾಲಿಕ ಅನುವಾದ

8 ಅವನು ಪ್ರಧಾನ ಭೂಮಿಯಲ್ಲಿನ ನಿನ್ನ ಪುತ್ರಿಯರನ್ನು ಖಡ್ಗದಿಂದ ಕೊಂದು ನಿನಗೆ ವಿರೋಧವಾಗಿ ಗುರಾಣಿಯನ್ನು ಎತ್ತುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಅವನು ಬಯಲು ಭೂಮಿಯಲ್ಲಿನ ನಿನ್ನ ಕುಮಾರ್ತೆಯರನ್ನು ಖಡ್ಗದಿಂದ ಹತಿಸಿ, ನಿನಗೆ ವಿರುದ್ಧವಾಗಿ ಒಡ್ಡುಕಟ್ಟಿ, ದಿಬ್ಬವನ್ನು ಹಾಕುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಅವನು ಬಯಲು ಭೂಮಿಯಲ್ಲಿ ನಿನ್ನ ಕುವರಿಯರನ್ನು ಖಡ್ಗದಿಂದ ಹತಿಸಿ, ನಿನಗೆ ವಿರುದ್ಧ ಒಡ್ಡುಕಟ್ಟಿ, ದಿಬ್ಬಹಾಕಿ, ಗುರಾಣಿಯೆತ್ತಿರುವವರನ್ನು ಕಳುಹಿಸಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಅವನು ಬೈಲುಭೂವಿುಯಲ್ಲಿನ ನಿನ್ನ ಕುಮಾರ್ತೆಯರನ್ನು ಖಡ್ಗದಿಂದ ಹತಿಸಿ ನಿನಗೆ ವಿರುದ್ಧವಾಗಿ ಒಡ್ಡುಕಟ್ಟಿ ದಿಬ್ಬಹಾಕಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ನೆಬೂಕದ್ನೆಚ್ಚರನು ನಿನ್ನ ಹೆಣ್ಣುಮಕ್ಕಳನ್ನು (ಚಿಕ್ಕ ಪಟ್ಟಣಗಳನ್ನು) ಕೊಲ್ಲುವನು. ಅವನು ಬುರುಜುಗಳನ್ನು ಕಟ್ಟಿ ನಿನ್ನ ನಗರವನ್ನು ಧಾಳಿ ಮಾಡುವನು. ನಿನ್ನ ನಗರದ ಸುತ್ತಲೂ ಮಣ್ಣಿನ ಮಾರ್ಗ ಮಾಡುವನು. ಕೋಟೆಗೋಡೆಯ ತನಕ ರಸ್ತೆಯನ್ನು ತಯಾರಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 26:8
9 ತಿಳಿವುಗಳ ಹೋಲಿಕೆ  

ಅವನ ಬಲಗೈಯಲ್ಲಿ ಯೆರೂಸಲೇಮಿಗಾಗಿ ಶಕುನವು ಇತ್ತು. ಅಲ್ಲಿ ಅವನು ಬಡಿಯುವ ಆಯುಧಗಳನ್ನಿಟ್ಟು, ಬಾಯಿಬಿಟ್ಟು ಸಂಹಾರ ಧ್ವನಿಗೈದು, ಆರ್ಭಟವಿಟ್ಟು ಬಾಗಿಲುಗಳ ಎದುರಾಗಿ ಬಡಿಯುವ ಆಯುಧಗಳನ್ನಿಟ್ಟು ದಿಬ್ಬ ಹಾಕಿ, ಒಡ್ಡು ಕಟ್ಟಿದ್ದು ಸೂಚನೆಯಾಗಿದೆ.


ಅವನ ಆಳ್ವಿಕೆಯ ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಿನ, ಹತ್ತನೆಯ ದಿವಸದಲ್ಲಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ತನ್ನ ಸಮಸ್ತ ಸೈನ್ಯ ಸಮೇತ ಯೆರೂಸಲೇಮಿಗೆ ವಿರೋಧವಾಗಿ ಬಂದು, ಅದಕ್ಕೆ ಎದುರಾಗಿ ದಂಡಿಳಿದು ಅದರ ಸುತ್ತಲೂ ಮಣ್ಣಿನ ದಿಬ್ಬಗಳನ್ನು ಮಾಡಿಸಿದನು.


“ಇಗೋ, ಪರ್ವತಗಳು ಪಟ್ಟಣದ ಬಳಿಗೆ ಅದನ್ನು ಹಿಡಿಯುವ ಹಾಗೆ ಬಂದಿವೆ. ಪಟ್ಟಣವು ಅದಕ್ಕೆ ವಿರೋಧವಾಗಿ ಯುದ್ಧಮಾಡುವ ಬಾಬಿಲೋನಿಯರ ಕೈಯಲ್ಲಿ ಖಡ್ಗ, ಕ್ಷಾಮ, ವ್ಯಾಧಿಗಳ ಮೂಲಕವಾಗಿ ಒಪ್ಪಿಸಲಾಗಿದೆ. ನೀನು ಹೇಳಿದ್ದು ಉಂಟಾಯಿತು. ಇಗೋ, ನೀನು ಅದನ್ನು ನೋಡುತ್ತೀ.


ಏಕೆಂದರೆ, ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, “ಚೀಯೋನ್ ಸುತ್ತಲಿರುವ ಮರಗಳನ್ನು ಕಡಿಯಿರಿ. ಯೆರೂಸಲೇಮಿಗೆ ವಿರೋಧವಾಗಿ ದಿಬ್ಬ ಹಾಕಿರಿ. ಇದೇ ನೀವು ದಂಡಿಸತಕ್ಕ ಪಟ್ಟಣವು. ಅವಳಲ್ಲಿ ಬರೀ ದಬ್ಬಾಳಿಕೆಯೇ ತುಂಬಿದೆ.


ಯೋವಾಬನ ಜೊತೆಗಿದ್ದ ಸೈನಿಕರು ಬಂದು ಆಬೇಲ್ ಬೇತ್ ಮಾಕಾ ಊರಿಗೆ ಮುತ್ತಿಗೆ ಹಾಕಿ, ಪಟ್ಟಣಕ್ಕೆದುರಾಗಿ ಊರು ಗೋಡೆಯವರೆಗೆ ಮಣ್ಣಿನ ದಿಬ್ಬವನ್ನು ಮಾಡಿದರು. ಯೋವಾಬನ ಸಂಗಡದಲ್ಲಿರುವ ಜನರೆಲ್ಲರೂ ಗೋಡೆಯನ್ನು ಕೆಡವಿಬಿಡುವುದಕ್ಕೆ ಪ್ರಯತ್ನಿಸಿದರು.


ನಿನ್ನ ಶತ್ರುಗಳು ನಿನ್ನ ಸುತ್ತಲೂ ಅಡ್ಡಗೋಡೆಯನ್ನು ಕಟ್ಟಿ, ಎಲ್ಲಾ ಕಡೆಯಲ್ಲಿಯೂ ನಿನ್ನನ್ನು ಮುತ್ತಿಗೆ ಹಾಕಿ ಪ್ರತಿಯೊಂದು ಕಡೆಯಿಂದಲೂ ನಿನ್ನನ್ನು ಬಂಧಿಸುವ ದಿನಗಳು ಬರುವವು.


ಮತ್ತು ಪ್ರಧಾನ ಭೂಮಿಯಲ್ಲಿರುವ ಅದರ ಪುತ್ರಿಯರು ಖಡ್ಗದಿಂದ ಹತರಾಗುವರು. ಆಗ ನಾನೇ ಯೆಹೋವ ದೇವರೆಂದು ಎಲ್ಲರಿಗೂ ತಿಳಿಯುವುದು.


ತನ್ನ ಯುದ್ಧ ಯಂತ್ರಗಳನ್ನು ನಿನ್ನ ಗೋಡೆಗಳಿಗೆ ತಾಕಿಸುವನು. ತನ್ನ ಆಯುಧಗಳಿಂದ ನಿನ್ನ ಗೋಪುರಗಳನ್ನು ಕೆಡವಿಬಿಡುವನು.


ಅವರ ಅರಸನನ್ನು ಧಿಕ್ಕರಿಸುವರು; ಪ್ರಧಾನರು ಅವರನ್ನು ಪರಿಹಾಸ್ಯ ಮಾಡುವರು; ಕೋಟೆಗಳಿಗೆಲ್ಲಾ ಕುಚೋದ್ಯ ಮಾಡುವರು; ಮಣ್ಣಿನ ದಿನ್ನೆಗಳನ್ನು ಮಾಡಿ, ಅವುಗಳನ್ನು ಹಿಡಿಯುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು