Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 26:21 - ಕನ್ನಡ ಸಮಕಾಲಿಕ ಅನುವಾದ

21 ನಾನೂ ನಿನ್ನನ್ನು ಭಯಂಕರವಾದ ಅಂತ್ಯಕ್ಕೆ ತರುವೆನು. ಇನ್ನು ಮೇಲೆ ನೀನು ಇರುವುದಿಲ್ಲ; ಆಮೇಲೆ ನಿನ್ನನ್ನು ಎಷ್ಟು ಹುಡುಕಿದರೂ ನೀನು ಸಿಗುವುದಿಲ್ಲ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ನಿನ್ನನ್ನು ತೀರಾ ಧ್ವಂಸಮಾಡುವೆನು; ನೀನು ಇಲ್ಲವಾಗುವಿ; ಎಷ್ಟು ಹುಡುಕಿದರೂ ನೀನು ಎಂದಿಗೂ ಸಿಕ್ಕುವುದಿಲ್ಲ” ಇದು ಕರ್ತನಾದ ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ನಿನ್ನನ್ನು ಪೂರ್ತಿಯಾಗಿ ಧ್ವಂಸಮಾಡುವೆನು; ನೀನು ಇಲ್ಲವಾಗುವೆ; ಎಷ್ಟು ಹುಡುಕಿದರೂ ನೀನು ಎಂದಿಗೂ ಸಿಕ್ಕುವುದಿಲ್ಲ; ಇದು ಸರ್ವೇಶ್ವರನಾದ ದೇವರ ನುಡಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ನಿನ್ನನ್ನು ತೀರಾ ಧ್ವಂಸಮಾಡುವೆನು; ನೀನು ಇಲ್ಲವಾಗುವಿ; ಎಷ್ಟು ಹುಡುಕಿದರೂ ನೀನು ಎಂದಿಗೂ ಸಿಕ್ಕುವದಿಲ್ಲ; ಇದು ಕರ್ತನಾದ ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ನಿನಗಾದ ಸ್ಥಿತಿಯನ್ನು ನೋಡಿ ಬೇರೆ ಜನರು ಭಯಗ್ರಸ್ತರಾಗುವರು. ನಿನ್ನ ಅಂತ್ಯವು ಆಯಿತು. ಜನರು ನಿನಗಾಗಿ ಹುಡುಕಾಡುವರು. ಆದರೆ ಅವರು ನಿನ್ನನ್ನು ಕಂಡುಹಿಡಿಯುವುದೇ ಇಲ್ಲ.” ಇವು ಒಡೆಯನಾದ ಯೆಹೋವನ ಮಾತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 26:21
9 ತಿಳಿವುಗಳ ಹೋಲಿಕೆ  

ಜನಾಂಗಗಳ ವರ್ತಕರು ನಿನ್ನನ್ನು ನೋಡಿ ಸೀಳಿಹಾಕುತ್ತಾರೆ. ನೀನು ಸಂಪೂರ್ಣ ಧ್ವಂಸವಾಗಿ ಇನ್ನೆಂದಿಗೂ ಇಲ್ಲದಂತಾಗಿರುವೆ.’ ”


ಅನಂತರ ಒಬ್ಬ ಬಲಿಷ್ಠನಾದ ದೂತನು, ಬೀಸುವ ಕಲ್ಲಿನಷ್ಟಿರುವ ದೊಡ್ಡ ಕಲ್ಲೊಂದನ್ನು ತೆಗೆದುಕೊಂಡು ಅದನ್ನು ಸಮುದ್ರದೊಳಗೆ ಬಿಸಾಡಿ: “ಮಹಾನಗರಿಯಾದ ಬಾಬಿಲೋನ್ ಹೀಗೆಯೇ ಬಲಾತ್ಕಾರದಿಂದ ಕೆಡವಲಾಗಿ ಎಂದಿಗೂ ಕಾಣಿಸದು.


ನಿನ್ನನ್ನು ಅರಿತ ಜನರೆಲ್ಲರೂ ನಿನ್ನ ವಿಷಯದಲ್ಲಿ ಭಯಗೊಳ್ಳುವರು. ನೀನು ಸಂಪೂರ್ಣ ಭೀತಿಗೊಳಗಾಗಿ ಇನ್ನೆಂದಿಗೂ ಇಲ್ಲದಂತಾಗುವೆ.’ ”


ಆದರೆ ಅವರು ಅಳಿದೇ ಹೋದರು; ಅವರನ್ನು ಹುಡುಕಿದೆನು; ಆದರೆ ಅವರು ಸಿಕ್ಕಲಿಲ್ಲ.


ಹೀಗೆ ಹೇಳು, ‘ಈ ಪ್ರಕಾರ ಬಾಬಿಲೋನ್ ಮುಳುಗಿ ಹೋಗುವುದು. ನಾನು ಅವಳ ಮೇಲೆ ತರುವ ಕೇಡಿನೊಳಗಿಂದ ಏಳದು. ಅವರು ಬೀಳುವರು.’ ” ಇಲ್ಲಿಯ ತನಕ ಯೆರೆಮೀಯನ ವಾಕ್ಯಗಳು.


ಏಕೆಂದರೆ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಇಗೋ, ನಾನು ನಿನ್ನನ್ನು ನಿನ್ನ ಸ್ನೇಹಿತರೆಲ್ಲರೂ ದಿಗಿಲು ಪಡುವಂತೆ ಮಾಡುತ್ತೇನೆ. ಅವರು ತಮ್ಮ ಶತ್ರುಗಳ ಖಡ್ಗದಿಂದ ಬೀಳುವರು. ನಿನ್ನ ಕಣ್ಣುಗಳು ಅದನ್ನು ನೋಡುವುವು. ಯೆಹೂದ್ಯರನ್ನೆಲ್ಲಾ ನಾನು ಬಾಬಿಲೋನಿನ ಅರಸನ ಕೈಗೆ ಒಪ್ಪಿಸುವೆನು. ಅವನು ಅವರನ್ನು ಬಾಬಿಲೋನಿಗೆ ಒಯ್ದು ಖಡ್ಗದಿಂದ ಕೊಲ್ಲುವನು.


ಯೆಹೋವ ದೇವರ ವಾಕ್ಯವು ನನಗೆ ಬಂದಿತು,


ಆಗ ಅವನು ತನ್ನ ಸ್ವದೇಶದ ಕೋಟೆಗೆ ಮುಖವನ್ನು ತಿರುಗಿಸುವನು. ಆದರೆ ಅವನು ಎಡವಿಬಿದ್ದು, ಕಾಣದೆ ಹೋಗುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು