Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 26:10 - ಕನ್ನಡ ಸಮಕಾಲಿಕ ಅನುವಾದ

10 ಅವನ ಲೆಕ್ಕವಿಲ್ಲದ ಕುದುರೆಗಳಿಂದ ಎದ್ದ ಧೂಳು ನಿನ್ನನ್ನು ಮುಸುಕುವದು, ಒಡಕು ಬಿದ್ದ ಕೋಟೆಯೊಳಗೆ ಶತ್ರುಗಳು ಪ್ರವೇಶಿಸುವ ಪ್ರಕಾರ ಅವರು ನಿನ್ನ ಬಾಗಿಲುಗಳಲ್ಲಿ ಪ್ರವೇಶಿಸುವಾಗ ಸವಾರರ, ರಥಗಳ, ಚಕ್ರಗಳ ಶಬ್ದದಿಂದ ನಿನ್ನ ಗೋಡೆಗಳು ಕದಲುವುವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಅವನ ಲೆಕ್ಕವಿಲ್ಲದ ಕುದುರೆಗಳಿಂದ ಏಳುವ ಧೂಳಿನಿಂದ ನಿನ್ನನ್ನು ಮುಸುಕುವನು; ಒಡಕು ಬಿದ್ದ ಕೋಟೆಯೊಳಗೆ ಶತ್ರುವು ನುಗ್ಗುವ ಪ್ರಕಾರ ಅವನು ನಿನ್ನ ಬಾಗಿಲುಗಳೊಳಗೆ ನುಗ್ಗುವಾಗ ರಾಹುತ, ಗಾಡಿ, ರಥ ಇವುಗಳ ಶಬ್ದಕ್ಕೆ ನಿನ್ನ ಗೋಡೆಗಳು ಕದಲುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಅವನ ಲೆಕ್ಕವಿಲ್ಲದ ಕುದುರೆಗಳಿಂದೆದ್ದ ಧೂಳು ನಿನ್ನನ್ನು ಮುಸುಕುವುದು; ಒಡಕು ಬಿದ್ದ ಕೋಟೆಯೊಳಗೆ ಶತ್ರು ನುಗ್ಗುವ ಪ್ರಕಾರ ಅವನು ನಿನ್ನ ಬಾಗಿಲುಗಳೊಳಗೆ ನುಗ್ಗುವಾಗ ರಾಹುತ, ಸರಕುಗಾಡಿ, ರಥ, ಇವುಗಳ ಶಬ್ದಕ್ಕೆ ನಿನ್ನ ಗೋಡೆಗಳು ಅದರುವುವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಅವನ ಲೆಕ್ಕವಿಲ್ಲದ ಕುದುರೆಗಳಿಂದೆದ್ದ ದೂಳು ನಿನ್ನನ್ನು ಮುಸುಕುವದು; ಒಡಕುಬಿದ್ದ ಕೋಟೆಯೊಳಗೆ ಶತ್ರುವು ನುಗ್ಗುವ ಪ್ರಕಾರ ಅವನು ನಿನ್ನ ಬಾಗಲುಗಳೊಳಗೆ ನುಗ್ಗುವಾಗ ರಾಹುತ, ಚಕ್ಕಡಿಗಾಡಿ, ರಥ ಇವುಗಳ ಶಬ್ದಕ್ಕೆ ನಿನ್ನ ಗೋಡೆಗಳು ಕದಲುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಅವನ ಕುದುರೆಗಳ ಗೊರಸುಗಳಿಂದ ಹೊರಟ ಧೂಳು ನಿನ್ನನ್ನು ಮುಚ್ಚಿಬಿಡುವದು. ಅವರ ರಾಹುತರ, ಚಕ್ಕಡಿಗಳ, ರಥಗಳ ಶಬ್ದದಿಂದ ನಿನ್ನ ಗೋಡೆಗಳು ನಡುಗುವವು. ಕೋಟೆಗೋಡೆಗಳು ಕೆಡವಲ್ಪಡುವದರಿಂದ ಅವರು ನಗರದೊಳಗೆ ನುಗ್ಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 26:10
11 ತಿಳಿವುಗಳ ಹೋಲಿಕೆ  

ನಿನ್ನ ನಾವಿಕರ ಕೂಗಾಟಕ್ಕೆ, ಸಮುದ್ರತೀರದ ಪ್ರದೇಶಗಳು ನಡುಗುವುವು.


“ಸಾರ್ವಭೌಮ ಯೆಹೋವ ದೇವರು ಟೈರಿಗೆ ಹೀಗೆ ಹೇಳುತ್ತಾರೆ: ನಿನ್ನ ಪತನದ ಶಬ್ದಕ್ಕೂ, ಗಾಯಪಟ್ಟವರು ಕೂಗುವಾಗಲೂ, ನಿನ್ನ ಮಧ್ಯದಲ್ಲಿ ಕೊಲೆಯಾಗುವಾಗಲೂ ಸಮುದ್ರತೀರದ ಪ್ರದೇಶಗಳು ನಡುಗುವುದಿಲ್ಲವೇ?


ಅವನ ಬಲವಾದ ಕುದುರೆಗಳ ಗೊರಸುಗಳ ತುಳಿಯುವಿಕೆಯ ಶಬ್ದದಿಂದಲೂ ಅವನ ರಥಗಳ ಘೋಷದಿಂದಲೂ ಅವನ ಚಕ್ರಗಳ ಧ್ವನಿಯಿಂದಲೂ ತಂದೆಗಳು ಕೈ ಬಲಹೀನತೆಯಿಂದಾಗಿ ತಮ್ಮ ಮಕ್ಕಳ ಕಡೆಗೆ ಹಿಂದಿರುಗಿ ನೋಡರು.


“ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ಉತ್ತರದ ರಾಜಾಧಿರಾಜನೂ ಬಾಬಿಲೋನಿನ ಅರಸನೂ ಆದ ನೆಬೂಕದ್ನೆಚ್ಚರನನ್ನು ಕುದುರೆಗಳ ಸಂಗಡವೂ ಸವಾರರ ಸಂಗಡವೂ ರಥಗಳ ಸಂಗಡವೂ ಬಹುಜನರ ಸಂಗಡವೂ ಟೈರಿನ ಮೇಲೆ ತರುತ್ತೇನೆ.


ಇಗೋ, ಮೇಘಗಳ ಹಾಗೆ ಏರಿ ಬರುವನು. ಆತನ ರಥಗಳು ಬಿರುಗಾಳಿಯ ಹಾಗೆ ಇರುವುವು. ಆತನ ಕುದುರೆಗಳು ಹದ್ದುಗಳಿಗಿಂತ ತೀವ್ರವಾಗಿವೆ. ನಮ್ಮ ಗತಿಯನ್ನು ಏನು ಹೇಳೋಣ, ಏಕೆಂದರೆ ಹಾಳಾದೆವು.


ಕೂಡಲೆ ಯಾಜಕರು ತುತೂರಿಗಳನ್ನು ಊದಿದಾಗ ಜನರು ಆರ್ಭಟಿಸಿದರು. ತುತೂರಿಯ ಶಬ್ದವನ್ನು ಜನರು ಕೇಳಿ ಮಹಾಧ್ವನಿಯಿಂದ ಆರ್ಭಟಿಸಿದಾಗ ಗೋಡೆಯು ನೆಲಸಮವಾಗಿ ಕೆಳಗೆ ಬಿತ್ತು. ಹೀಗೆ ಜನರಲ್ಲಿ ಪ್ರತಿಯೊಬ್ಬನು ಮುಂದೆ ನೇರವಾಗಿ ಒಳಗೆ ನುಗ್ಗಿದರು. ಆಗ ಪಟ್ಟಣವು ಅವರಿಗೆ ಸ್ವಾಧೀನವಾಯಿತು.


ಅವರು ಟಗರು ಕೊಂಬುಗಳ ತುತೂರಿಗಳಿಂದ ದೀರ್ಘಧ್ವನಿಗೈಯುವಾಗ, ಆ ತುತೂರಿಯ ಧ್ವನಿಯನ್ನು ಕೇಳುವ ಜನರೆಲ್ಲರೂ ಮಹಾ ರಭಸದಿಂದ ಆರ್ಭಟಿಸಬೇಕು. ಆಗ ಆ ಪಟ್ಟಣದ ಗೋಡೆಯು ನೆಲಸಮವಾಗಿ ಬಿದ್ದುಹೋಗುವುದು. ಜನರಲ್ಲಿ ಪ್ರತಿಯೊಬ್ಬನು ತನ್ನ ಮುಂದೆ ನೇರವಾಗಿ ಒಳಗೆ ನುಗ್ಗಿಹೋಗಬಹುದು,” ಎಂದು ಹೇಳಿದರು.


ನೇರ್ಗಲ್ ಸರೆಚರ್, ಸಮ್ಗರ್‌ನೆಬೊ, ಕಂಚುಕಿಯರ ಮುಖ್ಯಸ್ಥನಾದ ಸರ್ಸೆಕೀಮ್, ಚೋಯಿಸರ ಮುಖ್ಯಸ್ಥ ನೇರ್ಗಲ್ ಸರೆಚರ್, ಹೀಗೆ ಬಾಬಿಲೋನಿಯದ ಅರಸನ ಎಲ್ಲಾ ಪದಾಧಿಕಾರಿಗಳು ಪುರಪ್ರವೇಶ ಮಾಡಿ, ಮಧ್ಯಮ ದ್ವಾರದೊಳಗೆ ಕುಳಿತುಕೊಂಡರು.


ಅವರು ರಥಗಳ ಸಂಗಡವಾಗಿಯೂ ಬಂಡಿಗಳ ಸಂಗಡವಾಗಿಯೂ ಜನಗಳ ಸಮೂಹದ ಸಂಗಡವಾಗಿಯೂ ಬಲವುಳ್ಳವರಾಗಿ ತಮ್ಮ ಆಯುಧಗಳೊಂದಿಗೆ ನಿನಗೆ ವಿರುದ್ಧವಾಗಿ ಬರುವರು. ಸುತ್ತಲೂ ಖೇಡ್ಯವನ್ನೂ ಗುರಾಣಿಯನ್ನೂ ಶಿರಸ್ತ್ರಾಣವನ್ನೂ ಹಿಡಿದು ನಿನಗೆ ವಿರುದ್ಧವಾಗಿರುವೆನು. ಇದಲ್ಲದೆ ನಾನು ಅವರಿಗೆ ನ್ಯಾಯತೀರ್ಪಿನ ಅಧಿಕಾರ ಕೊಡುವೆನು. ಅವರು ತಮ್ಮ ನ್ಯಾಯಗಳ ಪ್ರಕಾರ ನಿನಗೆ ನ್ಯಾಯತೀರಿಸುವರು.


ತನ್ನ ಯುದ್ಧ ಯಂತ್ರಗಳನ್ನು ನಿನ್ನ ಗೋಡೆಗಳಿಗೆ ತಾಕಿಸುವನು. ತನ್ನ ಆಯುಧಗಳಿಂದ ನಿನ್ನ ಗೋಪುರಗಳನ್ನು ಕೆಡವಿಬಿಡುವನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು