ಯೆಹೆಜ್ಕೇಲನು 23:32 - ಕನ್ನಡ ಸಮಕಾಲಿಕ ಅನುವಾದ32 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನೀನು ನಿನ್ನ ಸಹೋದರಿಯ ಆಳವಾದ ದೊಡ್ಡ ಪಾತ್ರೆಯಲ್ಲಿ ಕುಡಿಯುವೆ. ನೀನು ಹಾಸ್ಯಕ್ಕೂ ನಿಂದೆಗೂ ಗುರಿಯಾಗುವೆ. ಅದೇ ನಿನಗೆ ಹೆಚ್ಚಾಗುವುದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201932 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಉದ್ದವೂ, ಅಗಲವೂ, ಬಹಳ ತುಂಬುವ, ನಿನ್ನ ಅಕ್ಕನ ಪಾತ್ರೆಯಲ್ಲಿ ನೀನು ಕುಡಿದು, ಹಾಸ್ಯಕ್ಕೂ, ಕುಚೋದ್ಯಕ್ಕೂ ಗುರಿಯಾಗುವಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)32 ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ಆಳವೂ ಅಗಲವೂ ಬಹಳ ಹಿಡಿಯುವುದೂ ಆದ ನಿನ್ನ ಅಕ್ಕನ ಪಾತ್ರೆಯಲ್ಲೇ ನೀನೂ ಕುಡಿದು ಹಾಸ್ಯಕ್ಕೂ ಕುಚೋದ್ಯಕ್ಕೂ ಗುರಿಯಾಗುವೆ. ಸಮಾರಿಯಳೆಂಬ ನಿನ್ನ ಅಕ್ಕನು ಕುಡಿದ ಬೆಚ್ಚುಬೆರಗಿನಾ ಕೊಡದಿಂದಲೇ ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)32 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಉದ್ದವೂ ಅಗಲವೂ ಬಹಳ ಹಿಡಿಯುವದೂ ಆದ ನಿನ್ನ ಅಕ್ಕನ ಪಾತ್ರೆಯಲ್ಲಿ ನೀನು ಕುಡಿದು ಹಾಸ್ಯಕ್ಕೂ ಕುಚೋದ್ಯಕ್ಕೂ ಗುರಿಯಾಗುವಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್32 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನೀನು ನಿನ್ನ ಅಕ್ಕನ ಲೋಟದಿಂದ ಕುಡಿಯುವೆ. ಆ ಲೋಟವು ಆಳವಾಗಿಯೂ ಅಗಲವಾಗಿಯೂ ಇದ್ದು ಪೂರ್ತಿ ತುಂಬಿದೆ (ಶಿಕ್ಷೆ). ಜನರು ನಿನ್ನನ್ನು ನೋಡಿ ನಗಾಡುವರು. ನಿನ್ನನ್ನು ಕಂಡು ಹಾಸ್ಯ ಮಾಡುವರು. ಅಧ್ಯಾಯವನ್ನು ನೋಡಿ |