ಯೆಹೆಜ್ಕೇಲನು 23:17 - ಕನ್ನಡ ಸಮಕಾಲಿಕ ಅನುವಾದ17 ಆಗ ಬಾಬಿಲೋನಿನವರು ಅವರ ಪ್ರೀತಿಯ ಹಾಸಿಗೆಯ ಮೇಲೆ ಬಂದು ಆಕೆಯನ್ನು ವ್ಯಭಿಚಾರದಿಂದ ಅಪವಿತ್ರಪಡಿಸಿದರು. ಅವಳು ಅವರಿಂದ ಅಪವಿತ್ರಳಾದ ಮೇಲೆ ಅವರ ಬಗ್ಗೆ ಇವಳಿಗೇ ಜಿಗುಪ್ಸೆ ಹುಟ್ಟಿತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 ಆಗ ಬಾಬೆಲಿನವರು ಇವಳ ಪ್ರೀತಿಯ ಮಂಚವನ್ನೇರಿ ತಮ್ಮ ವ್ಯಭಿಚಾರಿಕೆಯಿಂದ ಇವಳನ್ನು ಕೆಡಿಸಿದರು; ಇವಳು ಅವರಿಂದ ಅಪವಿತ್ರವಾಗಲು, ಅವಳಿಗೆ ಈ ಬಗ್ಗೆ ಜಿಗುಪ್ಸೆಯಾಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)17 ಆ ಬಾಬಿಲೋನಿನವರು ಇವಳ ರತಿಮಂಚವನ್ನೇರಿ ತಮ್ಮ ಕಾಮತೃಷೆಯಿಂದ ಇವಳನ್ನು ಕೆಡಿಸಿದರು; ಇವಳು ಅವರಿಂದ ಎಷ್ಟು ಅಶುದ್ಧಳಾದಳೆಂದರೆ ಇವಳಿಗೇ ಅವರ ಬಗ್ಗೆ ಜಿಗುಪ್ಸೆ ಹುಟ್ಟಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)17 ಆಗ ಬಾಬೆಲಿನವರು ಇವಳ ರತಿಮಂಚವನ್ನೇರಿ ತಮ್ಮ ಸೂಳೆಗಾರಿಕೆಯಿಂದ ಇವಳನ್ನು ಕೆಡಿಸಿದರು; ಇವಳು ಅವರಿಂದ ಹೊಲಸಾಗಲು ಇವಳ ಆಶೆಯು ಅವರಿಂದ ತೊಲಗಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್17 ಆಗ ಆ ಬಾಬಿಲೋನಿನವರು ಬಂದು ಆಕೆಯ ರತಿಮಂಚವನ್ನೆರೀ ಆಕೆಯನ್ನು ಸಂಗಮಿಸಿದರು. ಆಕೆಯನ್ನು ಚೆನ್ನಾಗಿ ಅನುಭೋಗಿಸಿ ಮಲಿನವನ್ನಾಗಿ ಮಾಡಿದರು. ಆದ್ದರಿಂದ ಆಕೆಗೆ ಅವರು ಅಸಹ್ಯವೆನಿಸಿತು. ಅಧ್ಯಾಯವನ್ನು ನೋಡಿ |