Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 21:7 - ಕನ್ನಡ ಸಮಕಾಲಿಕ ಅನುವಾದ

7 ‘ನೀನು ಏಕೆ ನರಳಾಡುತ್ತೀ?’ ಎಂದು ಅವರು ನಿನಗೆ ಕೇಳಿದಾಗ, ನೀನು ಹೇಳಬೇಕಾದದ್ದೇನೆಂದರೆ, ‘ಆ ಸುದ್ದಿಯ ನಿಮಿತ್ತವೇ ಅದು ಬರುವುದು. ಏಕೆಂದರೆ ಆಗ ಹೃದಯಗಳೆಲ್ಲಾ ಕರಗುವುವು. ಕೈಗಳೆಲ್ಲಾ ನಿತ್ರಾಣವಾಗುವುವು. ಪ್ರತಿಯೊಂದು ಆತ್ಮವು ಕುಂದುವದು. ಎಲ್ಲಾ ಮೊಣಕಾಲುಗಳು ನೀರಿನಂತೆ ತೇವವಾಗಿರುತ್ತವೆ. ಅದು ಬರುತ್ತದೆ, ಅದು ತರಲಾಗುತ್ತದೆ,’ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ‘ಏಕೆ ನರಳಾಡುತ್ತೀ?’ ಎಂದು ಅವರು ನಿನ್ನನ್ನು ಕೇಳಲು ನೀನು ಅವರಿಗೆ, ‘ಕೆಟ್ಟ ವಾರ್ತೆಯ ನಿಮಿತ್ತ ನರಳುತ್ತೇನೆ; ಇಗೋ, ವಿಪತ್ತು ಬಂತು; ಎಲ್ಲರ ಹೃದಯವು ಕರಗಿ ನೀರಾಗುವುದು; ಎಲ್ಲರ ಕೈ ಜೋಲು ಬೀಳುವುದು, ಎಲ್ಲರ ಮನಸ್ಸು ಕುಂದುವುದು, ಎಲ್ಲರ ಮೊಣಕಾಲು ನೀರಿನಂತೆ ಚಂಚಲವಾಗುವುದು; ಇಗೋ, ಬಂದಿತು, ಬಂದಾಯಿತು’ ಇದು ಕರ್ತನಾದ ಯೆಹೋವನ ನುಡಿ ಎಂದು ಉತ್ತರಕೊಡು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ‘ಏಕೆ ನರಳಾಡುತ್ತೀ?’ ಎಂದು ಅವರು ನಿನ್ನನ್ನು ಕೇಳುವರು. ಆಗ ನೀನು ಅವರಿಗೆ - ‘ದುರ್ವಾರ್ತೆಯ ನಿಮಿತ್ತ ನರಳುತ್ತಿದ್ದೇನೆ; ಇಗೋ, ವಿಪತ್ತು ಬಂದಿತು; ಎಲ್ಲರ ಹೃದಯವು ಕರಗಿ ನೀರಾಗುವುದು, ಎಲ್ಲರ ಕೈ ಜೋಲುಬೀಳುವುದು, ಎಲ್ಲರ ಮನಸ್ಸು ಕುಂದುವುದು, ಎಲ್ಲರ ಮೊಣಕಾಲು ನೀರಿನಂತೆ ಅದರುವುದು; ಇಗೋ, ಬಂದಿತು, ಬಂದಾಯಿತು! ಇದು ಸರ್ವೇಶ್ವರನಾದ ದೇವರ ನುಡಿ,’ ಎಂದು ಉತ್ತರಕೊಡು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಏಕೆ ನರಳಾಡುತ್ತೀ ಎಂದು ಅವರು ನಿನ್ನನ್ನು ಕೇಳಲು ನೀನು ಅವರಿಗೆ - ದುರ್ವಾರ್ತೆಯ ನಿವಿುತ್ತ ನರಳುತ್ತೇನೆ; ಇಗೋ, ವಿಪತ್ತು ಬಂತು; ಎಲ್ಲರ ಹೃದಯವು ಕರಗಿ ನೀರಾಗುವದು; ಎಲ್ಲರ ಕೈ ಜೋಲು ಬೀಳುವದು, ಎಲ್ಲರ ಮನಸ್ಸು ಕುಂದುವದು, ಎಲ್ಲರ ಮೊಣಕಾಲು ನೀರಿನಂತೆ ಚಂಚಲವಾಗುವದು; ಇಗೋ, ಬಂತು, ಆಯಿತು; ಇದು ಕರ್ತನಾದ ಯೆಹೋವನ ನುಡಿ ಎಂದು ಉತ್ತರಕೊಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಆಗ ಅವರು, ‘ನೀನು ದುಃಖದಿಂದ ಅಳುವದೇಕೆ?’ ಎಂದು ವಿಚಾರಿಸುವರು. ಆಗ ನೀನು ಹೀಗೆ ಹೇಳಬೇಕು: ‘ಭೀತಿಯನ್ನು ಉಂಟು ಮಾಡುವ ವಾರ್ತೆ ಬರುವದರಿಂದ ಎಲ್ಲರ ಹೃದಯಗಳು ಭಯದಿಂದ ಕರಗಿಹೋಗಿರುತ್ತವೆ; ಕೈಗಳು ಬಲಹೀನವಾಗುತ್ತವೆ. ಪ್ರತಿ ಮನುಷ್ಯನ ಆತ್ಮವು ಕೃಶವಾಗುವುದು. ಮೊಣಗಂಟುಗಳು ನೀರಿನಂತಿರುವವು.’ ನೋಡಿ, ಆ ಕೆಟ್ಟ ಸುದ್ದಿಯು ಬರುತ್ತಲಿದೆ. ಇವೆಲ್ಲಾ ನಡೆಯುವವು.” ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 21:7
37 ತಿಳಿವುಗಳ ಹೋಲಿಕೆ  

ಕೈಗಳೆಲ್ಲಾ ಜೋತಾಡುವುವು, ಎಲ್ಲಾ ಮೊಣಕಾಲುಗಳು ನೀರಿನ ಹಾಗೆ ಆಗುವುವು.


ಆದ್ದರಿಂದ, ಜೋತು ಬಿದ್ದ ಕೈಗಳನ್ನೂ ಬಲಹೀನವಾದ ಮೊಣಕಾಲುಗಳನ್ನೂ ಬಲಪಡಿಸಿರಿ.


ನಿನೆವೆ ಬರಿದಾಗಿದೆ, ಸುಲಿಗೆಯಾಗಿದೆ, ಹಾಳುಬಿದ್ದಿದೆ, ಹೃದಯಗಳು ಕರಗುತ್ತವೆ; ಮೊಣಕಾಲುಗಳು ಒಟ್ಟಾಗಿ ಬಡಿದುಕೊಳ್ಳುತ್ತವೆ. ಎಲ್ಲರ ಸೊಂಟಗಳಲ್ಲಿ ಸಂಕಟವಿದೆ; ಎಲ್ಲಾ ಮುಖಗಳು ಕಳೆಗುಂದುತ್ತವೆ.


ಕೇಡಿನ ಮೇಲೆ ಕೇಡು ಬರುವುದು, ಸುದ್ದಿಯ ಮೇಲೆ ಸುದ್ದಿ ಬರುವುದು, ಅವರು ಪ್ರವಾದಿಯಿಂದ ದರ್ಶನವನ್ನು ಹುಡುಕುವರು. ಆದರೆ ಯಾಜಕರಿಂದ ನಿಯಮ ಬೋಧನೆಯು ಅಡಗಿಹೋಗುವುದು, ಹಿರಿಯರಿಂದ ಸಮಾಲೋಚನೆಯು ಇಲ್ಲವಾಗುವುದು.


ಬಾಬಿಲೋನಿನ ಅರಸನು ಅವರ ಸುದ್ದಿಯನ್ನು ಕೇಳಿದ್ದಾನೆ; ಅವನ ಕೈಗಳು ನಿತ್ರಾಣವಾದವು; ಸಂಕಟವೂ, ಹೆರುವ ಸ್ತ್ರೀಯ ಹಾಗೆ ನೋವೂ ಅವನನ್ನು ಹಿಡಿದವು.


ಆದಕಾರಣ ಎಲ್ಲಾ ಕೈಗಳು ಜೋಲು ಬೀಳುವುವು ಮತ್ತು ಪ್ರತಿಯೊಬ್ಬನ ಹೃದಯವು ಕರಗುವುದು.


ಆಕಾಶದ ಶಕ್ತಿಗಳು ಕದಲುವುದರಿಂದ ಲೋಕಕ್ಕೆ ಏನು ಸಂಭವಿಸುವುದೋ ಎಂಬ ಭಯಭೀತಿಯಿಂದ, ಮಾನವರು ಮನಗುಂದಿಹೋಗುವರು.


ಆಗ ಜನರು, “ನೀನು ಮಾಡುವ ಆ ಸಂಗತಿಗಳಿಂದ ನಮಗೆ ಪ್ರಯೋಜನವೇನೆಂದು ತಿಳಿಸುವುದಿಲ್ಲವೇ? ಯಾಕೆ ಹೀಗೆ ವರ್ತಿಸುತ್ತಿದ್ದೀಯಾ?” ಎಂದು ಕೇಳಿದರು.


ಆಗ ನಾನು, “ಅಯ್ಯೋ, ಸಾರ್ವಭೌಮ ಯೆಹೋವ ದೇವರೇ, ‘ಅವನು ಸಾಮ್ಯಗಳನ್ನು ಹೇಳುವುದಿಲ್ಲವೇ?’ ಎಂದು ನನ್ನ ವಿಷಯದಲ್ಲಿ ಅವರು ಹೇಳುತ್ತಾರೆ,” ಎಂದೆನು.


ಇದಕ್ಕಾಗಿ ನಮ್ಮ ಹೃದಯವು ದುರ್ಬಲವಾಗಿದೆ. ಏಕೆಂದರೆ ಇವುಗಳಿಂದ ನಮ್ಮ ಕಣ್ಣುಗಳು ಮೊಬ್ಬಾಗಿವೆ.


ದಮಸ್ಕದ ವಿಷಯವಾಗಿ: “ಹಮಾತ್ ಮತ್ತು ಅರ್ಪಾದ್ ನಗರಗಳು ಆಶಾಭಂಗಗೊಂಡಿವೆ, ಅವು ಕೆಟ್ಟ ಸುದ್ದಿಯನ್ನು ಕೇಳಿ ಅಧೈರ್ಯಪಟ್ಟಿವೆ; ಸಮುದ್ರದಂತೆ ಕಳವಳಪಡುತ್ತದೆ; ಅದು ಸುಮ್ಮನಿರಲಾರದು.


ದುಃಖದ ನಿಮಿತ್ತ ನನ್ನನ್ನು ಆಧರಿಸಿ ಕೊಳ್ಳಲು ನಾನು ಮನಸ್ಸು ಮಾಡಿದಾಗ, ನನ್ನ ಹೃದಯವು ನನ್ನಲ್ಲಿ ಕುಂದಿಹೋಗಿದೆ.


ನೀವು ಬಲಹೀನವಾದ ಕೈಗಳನ್ನು ಬಲಪಡಿಸಿರಿ. ನಡುಗುವ ಮೊಣಕಾಲುಗಳನ್ನು ದೃಢಪಡಿಸಿರಿ.


ಅದು ಹಾದುಹೋಗುವಾಗೆಲ್ಲಾ ನಿಮ್ಮನ್ನು ಹಿಡಿಯುವುದು. ಏಕೆಂದರೆ ಅದು ಹೊತ್ತಾರೆಯಿಂದ ಹೊತ್ತಾರೆಗೆ, ಹಗಲು ರಾತ್ರಿಯೂ ಹಾದುಹೋಗುವುದು.” ಆಗ ದೇವರ ಈ ಸಂದೇಶವನ್ನು ಅರ್ಥಮಾಡಿಕೊಳ್ಳುವವರಿಗೆ ಭಯಭ್ರಾಂತಿ ಉಂಟಾಗುವುದು.


ಸಿರಿಯಾದವರು ಎಫ್ರಾಯೀಮ್ಯರೊಂದಿಗೆ ಜತೆಗೂಡಿದ್ದಾರೆಂದು ದಾವೀದನ ವಂಶದವರಿಗೆ ತಿಳಿದಾಗ, ಆಹಾಜನ ಮತ್ತು ಅವರ ಪ್ರಜೆಯ ಹೃದಯವು ಅರಣ್ಯದ ಮರಗಳು ಗಾಳಿಗೆ ಅಲುಗಾಡುವಂತೆ ನಡುಗಿದವು.


ಇಸ್ರಾಯೇಲಿನ ಯೆಹೋವ ದೇವರಾದ ನಾನು ಯೆರೂಸಲೇಮಿನ ಮೇಲೆಯೂ, ಯೆಹೂದದ ಮೇಲೆಯೂ ಕೇಡನ್ನು ಬರಮಾಡುವೆನು. ಅದನ್ನು ಕೇಳುವವನ ಎರಡು ಕಿವಿಗಳು ಕಿರಗುಟ್ಟುವುವು.


ಆಗ ಸಿಂಹ ಹೃದಯರಾದ ಪರಾಕ್ರಮಶಾಲಿಯ ಹೃದಯವು ಸಹ ಸಂಪೂರ್ಣ ಕರಗುವುದು. ಇದಲ್ಲದೆ ನಿನ್ನ ತಂದೆಯು ಶೂರನೆಂದೂ, ಅವನ ಸಂಗಡ ಇರುವವರು ಪರಾಕ್ರಮಶಾಲಿಗಳೆಂದೂ ಇಸ್ರಾಯೇಲರೆಲ್ಲರು ಬಲ್ಲರು.


ಇದಾದ ಮೇಲೆ ಯೆಹೋವ ದೇವರು ಇಸ್ರಾಯೇಲರು ದಾಟಿಹೋಗುವವರೆಗೆ ಅವರ ಮುಂದೆ ಯೊರ್ದನ್ ನದಿಯನ್ನು ಒಣಗಿ ಹೋಗುವಂತೆ ಮಾಡಿದ್ದನ್ನು ಯೊರ್ದನ್ ನದಿ ಪಶ್ಚಿಮದ ಆಚೆದಡದಲ್ಲಿ ವಾಸಿಸಿದ್ದ ಅಮೋರಿಯರ ಸಕಲ ಅರಸರು ಮತ್ತು ಸಮುದ್ರದ ಆಚೆಯಲ್ಲಿ ವಾಸಿಸಿದ್ದ ಕಾನಾನ್ಯರ ಸಕಲ ಅರಸರು ಕೇಳಿದಾಗ ಅವರ ಹೃದಯವು ಕುಂದಿಹೋಯಿತು. ಇಸ್ರಾಯೇಲರ ನಿಮಿತ್ತವಾಗಿ ಅವರಿಗೆ ಪ್ರಾಣಹೋದಂತೆ ಆಯಿತು.


ಇದಲ್ಲದೆ ಅಧಿಕಾರಿಗಳು ಮಾತನಾಡಿ, “ಯಾವನಾದರೂ ಯುದ್ಧಕ್ಕೆ ಭಯಪಟ್ಟು ಅಂಜಿಕೊಂಡರೆ, ಅಂಥವನು ಮನೆಗೆ ಹೋಗಲಿ. ಅವನನ್ನು ನೋಡಿ ಬೇರೆಯವರೂ ಹೆದರಿಕೊಳ್ಳುವ ಅವಕಾಶವಿದೆ,” ಎಂದು ಹೇಳಬೇಕು.


“ ‘ನಿಮ್ಮಲ್ಲಿ ಯಾರು ಉಳಿದು ಶತ್ರುಗಳ ದೇಶದಲ್ಲಿ ಇರುವರೋ, ಅವರ ಹೃದಯದಲ್ಲಿ ಭೀತಿಯನ್ನು ಹುಟ್ಟಿಸುವೆನು. ಬಡಿದಾಡುವ ಎಲೆಯ ಶಬ್ದವು ಅವರನ್ನು ಓಡಿಸುವುದು. ಖಡ್ಗಕ್ಕೆ ಓಡಿ ಹೋದ ಹಾಗೆ ಓಡಿಹೋಗುವರು.


ಆಗ ಎದೋಮಿನ ಪ್ರಭುಗಳು ದಿಗ್ಭ್ರಮೆಗೊಳ್ಳುವರು; ಕಂಪನವು ಮೋವಾಬಿನ ಬಲಿಷ್ಠರನ್ನು ಹಿಡಿಯುವುದು; ಕಾನಾನಿನ ನಿವಾಸಿಗಳೆಲ್ಲಾ ಕರಗಿ ಹೋಗುವರು.


ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ. ಆದ್ದರಿಂದ ನೀವು ಸ್ವಸ್ಥಚಿತ್ತರಾಗಿಯೂ ಜಾಗ್ರತರಾಗಿಯೂ ಪ್ರಾರ್ಥನೆಗೆ ಸಿದ್ಧವಾಗಿರಿ.


ಆಯಿ ಎಂಬ ಪಟ್ಟಣದವರು ಇವರಲ್ಲಿ ಹೆಚ್ಚು ಕಡಿಮೆ ಮೂವತ್ತಾರು ಮಂದಿಯನ್ನು ಕೊಂದುಹಾಕಿದರು. ಪಟ್ಟಣದ ಬಾಗಿಲಿನಿಂದ ಪ್ರಾರಂಭಿಸಿ ಶೆಬಾರಿಮಿನವರೆಗೂ ಅವರನ್ನು ಹಿಂದಟ್ಟಿ, ಅವರನ್ನು ಹೊಡೆದರು. ಆದ್ದರಿಂದ ಜನರ ಹೃದಯವು ಕರಗಿ ನೀರಿನಂತಾಯಿತು.


ಅವರು ನೀರಿನಂತೆ ಕರಗಿಹೋಗಲಿ. ಅವರು ತಮ್ಮ ಬಾಣಗಳನ್ನು ಗುರಿಯಿಡುವಾಗ ಡೊಂಕಾಗಿ ಹೋಗಲಿ.


“ಆದ್ದರಿಂದ ಮನುಷ್ಯಪುತ್ರನೇ, ನರಳಾಡು! ಮುರಿದ ಹೃದಯ ಮತ್ತು ಕಹಿ ದುಃಖದಿಂದ ಅವರ ಮುಂದೆ ನರಳಾಡು.


ಯೆಹೋವ ದೇವರ ವಾಕ್ಯವು ನನಗೆ ಬಂದಿತು,


ಅವರ ಹೃದಯವು ಕರಗುವ ಹಾಗೆಯೂ, ಅವರ ಎಲ್ಲಾ ಬಾಗಿಲುಗಳಲ್ಲಿ ಪತನವು ಹೆಚ್ಚಾಗುವ ಹಾಗೆಯೂ ಖಡ್ಗದ ಮೊನೆ ಇಟ್ಟಿದ್ದೇನೆ. ಆಹಾ, ಮಿಂಚಿನಂತೆ ಹೊಡೆಯಲು ಈ ಬಲೆ ಹೆಣೆಯಲಾಗಿದೆ ಅದನ್ನು ಕೊಲೆಮಾಡುವುದಕ್ಕೆ ಮಸೆಯಲಾಗಿದೆ.


ನಾನು ನಿನ್ನೊಳಗೆ ಕೆಲಸ ನಡೆಸುವ ದಿವಸಗಳಲ್ಲಿ ನಿನ್ನ ಹೃದಯವು ನಿಲ್ಲುವುದೋ? ನಿನ್ನ ಕೈಗಳು ಬಲವಾಗಿರುವುವೋ? ಯೆಹೋವ ದೇವರಾದ ನಾನೇ ಹೇಳಿದ್ದೇನೆ, ನಾನೇ ಅದನ್ನು ಮಾಡುವೆನು.


ಆಗ ಅರಸನ ಮುಖವು ಕಳೆಗುಂದಿತು. ಅವನು ತುಂಬಾ ಭಯಭೀತನಾದನು. ಅವನ ಸೊಂಟದ ಕೀಲುಗಳು ಸಡಿಲಗೊಂಡವು. ಮೊಣಕಾಲುಗಳು ಒಂದಕ್ಕೊಂದು ಬಡಿದುಕೊಂಡವು.


ಆಗ ಯೆರೆಮೀಯನು ಪ್ರಧಾನರೆಲ್ಲರಿಗೂ ಜನರೆಲ್ಲರಿಗೂ: “ನೀವು ಕೇಳಿದ ವಾಕ್ಯಗಳನ್ನೆಲ್ಲಾ ಈ ಆಲಯಕ್ಕೆ ವಿರೋಧವಾಗಿಯೂ, ಈ ಪಟ್ಟಣಕ್ಕೆ ವಿರೋಧವಾಗಿಯೂ ಪ್ರವಾದಿಸುವುದಕ್ಕೆ ಯೆಹೋವ ದೇವರು ನನ್ನನ್ನು ಕಳುಹಿಸಿದ್ದಾರೆ.


“ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಪರ್ವತಗಳಿಗೆ ಅಭಿಮುಖನಾಗಿ ನಿಂತು, ಅವುಗಳಿಗೆ ವಿರೋಧವಾಗಿ ಹೀಗೆ ಪ್ರವಾದಿಸು,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು