ಯೆಹೆಜ್ಕೇಲನು 17:6 - ಕನ್ನಡ ಸಮಕಾಲಿಕ ಅನುವಾದ6 ಅದು ಮೊಳೆತು ತಗ್ಗಾದ ಪ್ರಮಾಣದಲ್ಲಿ ಹಬ್ಬುವ ದ್ರಾಕ್ಷಿಗಿಡವಾಯಿತು. ಅದರ ರೆಂಬೆಗಳು ಅವನ ಕಡೆಗೆ ತಿರುಗಿಕೊಂಡವು. ಅದರ ಬೇರುಗಳು ಅದರ ಕೆಳಗಿದ್ದವು. ಹೀಗೆ ಅದು ದ್ರಾಕ್ಷಿಗಿಡವಾಯಿತು. ಕೊಂಬೆಗಳು ಹುಟ್ಟಿಕೊಂಡು ಬಳ್ಳಿಗಳು ಹಬ್ಬಿದವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20196 ಅದು ಮೊಳೆತು ದ್ರಾಕ್ಷಾಲತೆಯಾಗಿ ತುಂಬಾ ಹರಡಿಕೊಂಡು ತನ್ನ ರೆಂಬೆಗಳನ್ನು ಆ ಹದ್ದಿನ ಕಡೆಗೆ ಚಾಚಿ ಅದರ ಕೆಳಗೆ ತನ್ನ ಬೇರುಗಳನ್ನು ಬಿಟ್ಟಿತು; ಅದು ಲತೆಯಾಗಿ ಬೆಳೆದು, ರೆಂಬೆಗಳನ್ನು ಹರಡಿಸಿ, ಚಿಗುರುಗಳನ್ನು ಹೊರಡಿಸಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)6 ಅದು ಗುಜ್ಜಾಗಿ ಬೆಳೆದು ದ್ರಾಕ್ಷಾಲತೆಯಾಗಿ ವಿಶಾಲವಾಗಿ ಹರಡಿಕೊಂಡು, ತನ್ನ ರೆಂಬೆಗಳನ್ನು ಆ ಹದ್ದಿನ ಕಡೆಗೆ ಚಾಚಿ, ಅದರ ಕೆಳಗೂ ಬೇರು ಬಿಟ್ಟಿತು; ಅದು ಲತೆಯಾಗಿ ಬೆಳೆದು, ರೆಂಬೆಗಳನ್ನು ಹರಡಿಸಿ, ಚಿಗುರುಗಳನ್ನು ಹೊರಡಿಸಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)6 ಅದು ಗುಜ್ಜಾಗಿ ಬೆಳೆದು ದ್ರಾಕ್ಷಾಲತೆಯಾಗಿ ತುಂಬಾ ಹರಡಿಕೊಂಡು ತನ್ನ ರೆಂಬೆಗಳನ್ನು ಆ ಹದ್ದಿನ ಕಡೆಗೆ ಚಾಚಿ ಅದರ ಕೆಳಗೆ ತನ್ನ ಬೇರುಗಳನ್ನು ಬಿಟ್ಟಿತು; ಅದು ಲತೆಯಾಗಿ ರೆಂಬೆಗಳನ್ನು ಹರಡಿಸಿ ಚಿಗುರುಗಳನ್ನು ಹೊರಡಿಸಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್6 ಆ ಬೀಜವು ಚಿಗುರಿ, ಚಿಕ್ಕ ಜಾತಿಯ ದ್ರಾಕ್ಷಾಲತೆಯಂತೆ ನೆಲದ ಮೇಲೆ ಹಬ್ಬಿಕೊಂಡು, ತನ್ನ ಕೊಂಬೆಗಳನ್ನು ಗರುಡದ ಕಡೆಗೆ ಚಾಚಿಕೊಂಡು ತನ್ನ ಬೇರುಗಳನ್ನು ಬಿಟ್ಟಿತು: ಅಂತೆಯೇ ಅದು ಲತೆಯಾಗಿ ಕೊಂಬೆಗಳನ್ನು ಬೆಳೆಸಿ, ಎಲೆಗಳನ್ನು ಹೊರಡಿಸಿತು. ಅಧ್ಯಾಯವನ್ನು ನೋಡಿ |