Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 17:12 - ಕನ್ನಡ ಸಮಕಾಲಿಕ ಅನುವಾದ

12 “ ‘ಇದರ ಅಭಿಪ್ರಾಯ ನಿಮಗೆ ತಿಳಿಯುವುದಿಲ್ಲವೋ?’ ಎಂದು ತಿರುಗಿಬೀಳುವ ಮನೆಯವರಿಗೆ ಹೇಳು ಮತ್ತು ಅವರಿಗೆ, ‘ಇಗೋ, ಬಾಬಿಲೋನಿನ ಅರಸನು ಯೆರೂಸಲೇಮಿಗೆ ಬಂದು ಅದರ ಅರಸನನ್ನೂ, ಅದರ ಪ್ರಧಾನರನ್ನೂ ಕರೆದುಕೊಂಡು ತನ್ನ ಬಳಿಗೆ ಒಯ್ದಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 “ದ್ರೋಹಿ ವಂಶದವರಾದ ಈ ಜನರಿಗೆ ಹೀಗೆ ಹೇಳು, ಇದರ ಅಭಿಪ್ರಾಯವು ನಿಮಗೆ ಗೊತ್ತಿಲ್ಲವೋ? ಇಗೋ, ಬಾಬೆಲಿನ ಅರಸನು ಯೆರೂಸಲೇಮಿಗೆ ಬಂದು ಅಲ್ಲಿನ ಅರಸನನ್ನೂ ಮತ್ತು ಪ್ರಧಾನರನ್ನೂ ಹಿಡಿದು ಬಾಬಿಲೋನಿಗೆ ತೆಗೆದುಕೊಂಡು ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 “ದ್ರೋಹಿವಂಶದ ಈ ಜನರಿಗೆ ಹೀಗೆ ಹೇಳು - ಇದರ ಅರ್ಥ ನಿಮಗೆ ತಿಳಿಯಲಿ; ಇಗೋ, ಬಾಬಿಲೋನಿನ ಅರಸನು ಜೆರುಸಲೇಮಿಗೆ ಬಂದು ಅಲ್ಲಿನ ಅರಸನನ್ನೂ ಪ್ರಧಾನರನ್ನೂ ಹಿಡಿದು ಬಾಬಿಲೋನಿಗೆ ತೆಗೆದುಕೊಂಡು ಹೋದ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ದ್ರೋಹಿವಂಶದವರಾದ ಈ ಜನರಿಗೆ ಹೀಗೆ ಹೇಳು - ಇದರ ಅಭಿಪ್ರಾಯವು ನಿಮಗೆ ಗೊತ್ತಿಲ್ಲವೋ? ಇಗೋ, ಬಾಬೆಲಿನ ಅರಸನು ಯೆರೂಸಲೇವಿುಗೆ ಬಂದು ಅಲ್ಲಿನ ಅರಸನನ್ನೂ ಪ್ರಧಾನರನ್ನೂ ಹಿಡಿದು ಬಾಬೆಲಿಗೆ ಒಯ್ದುಕೊಂಡು ಹೋದನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 “ದಂಗೆಕೋರರಿಗೆ ಇದನ್ನು ಹೇಳು: ಈ ಸಂಗತಿಗಳ ಅರ್ಥವು ನಿಮಗೆ ಗೊತ್ತಿಲ್ಲವೇ? ಅವರಿಗೆ ಹೇಳು: ಮೊದಲಿನ ಗರುಡ ಪಕ್ಷಿ ಬಾಬಿಲೋನ್ ರಾಜನಾದ ನೆಬೂಕದ್ನೆಚ್ಚರನು. ಅವನು ಜೆರುಸಲೇಮಿಗೆ ಬಂದು ಅದರ ರಾಜನನ್ನೂ ಅದರ ಹಿರಿಯರನ್ನೂ ಬಂಧಿಸಿ, ಅವರನ್ನು ತನ್ನ ರಾಜ್ಯವಾದ ಬಾಬಿಲೋನಿಗೆ ಕೊಂಡೊಯ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 17:12
30 ತಿಳಿವುಗಳ ಹೋಲಿಕೆ  

ಆಗ ಜನರು, “ನೀನು ಮಾಡುವ ಆ ಸಂಗತಿಗಳಿಂದ ನಮಗೆ ಪ್ರಯೋಜನವೇನೆಂದು ತಿಳಿಸುವುದಿಲ್ಲವೇ? ಯಾಕೆ ಹೀಗೆ ವರ್ತಿಸುತ್ತಿದ್ದೀಯಾ?” ಎಂದು ಕೇಳಿದರು.


ಅವರಿಗೆ ಹೇಳತಕ್ಕದ್ದೇನೆಂದರೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಶಕ್ತಿಶಾಲಿ ರೆಕ್ಕೆಗಳೂ ಉದ್ದವಾದ ರೆಕ್ಕೆಗಳೂ ಉಳ್ಳಂಥ ಮತ್ತು ವಿಧವಿಧವಾದ ಬಣ್ಣಬಣ್ಣದ ಪುಕ್ಕಗಳಿಂದ ತುಂಬಿದಂಥ ಒಂದು ದೊಡ್ಡ ಹದ್ದು ಲೆಬನೋನಿಗೆ ಬಂದು, ದೇವದಾರಿನ ಮರದ ಕೊಂಬೆಯನ್ನು ಹಿಡಿದು,


ತಿಂಗಳಿನ ಐದನೆಯ ದಿನದಲ್ಲಿ ಅರಸನಾದ ಯೆಹೋಯಾಕೀನನ ಸೆರೆಯ ಐದನೆಯ ವರ್ಷದಲ್ಲಿ,


ಫಿಲಿಪ್ಪನು ರಥದ ಹತ್ತಿರಕ್ಕೆ ಓಡಿದನು. ಆ ಮನುಷ್ಯನು ಪ್ರವಾದಿ ಯೆಶಾಯನ ಗ್ರಂಥ ಓದುತ್ತಿರುವುದನ್ನು ಕೇಳಿಸಿಕೊಂಡು, “ನೀವು ಓದುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ?” ಎಂದು ಫಿಲಿಪ್ಪನು ಪ್ರಶ್ನಿಸಿದನು.


ಆದರೆ ಶಿಷ್ಯರು ಈ ಮಾತನ್ನು ತಿಳಿದುಕೊಳ್ಳಲಿಲ್ಲ. ಅವರು ಗ್ರಹಿಸಲಾರದಂತೆ ಅದು ಅವರಿಗೆ ಮರೆಯಾಗಿತ್ತು, ಆ ಮಾತನ್ನು ಕುರಿತು ಯೇಸುವನ್ನು ಕೇಳುವುದಕ್ಕೆ ಅವರು ಭಯಪಟ್ಟರು.


ಅನಂತರ ಯೇಸು ಅವರಿಗೆ, “ನಿಮಗೆ ಈ ಸಾಮ್ಯ ಅರ್ಥವಾಗಲಿಲ್ಲವೇ? ಹಾಗಾದರೆ ನೀವು ಬೇರೆ ಸಾಮ್ಯಗಳನ್ನು ಹೇಗೆ ಅರ್ಥಮಾಡಿಕೊಳ್ಳುವಿರಿ?


ನಾನು ರೊಟ್ಟಿಯ ವಿಷಯದಲ್ಲಿ ಅಲ್ಲ, ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಎಚ್ಚರವಾಗಿರಬೇಕೆಂದು ಹೇಳಿದ್ದನ್ನು ನೀವು ಗ್ರಹಿಸದೆ ಇರುವುದು ಹೇಗೆ?” ಎಂದು ಕೇಳಿದರು.


ಯೇಸು ಶಿಷ್ಯರಿಗೆ, “ಇವುಗಳನ್ನೆಲ್ಲಾ ನೀವು ಗ್ರಹಿಸಿದ್ದೀರಾ?” ಎಂದು ಕೇಳಿದರು. ಅದಕ್ಕೆ, ಅವರು ಯೇಸುವಿಗೆ, “ಹೌದು,” ಎಂದು ಹೇಳಿದರು.


ನಾನು ನಿನ್ನ ಹಣೆಯನ್ನು ಅತ್ಯಂತ ಕಠಿಣವಾದ ಕಲ್ಲಿನಂತೆಯೂ ವಜ್ರದಂತೆಯೂ ಮಾಡುವೆನು. ಅವರು ತಿರುಗಿಬೀಳುವ ಜನರಾದರೂ ನೀನು ಅವರಿಗೆ ಭಯಪಡಬೇಡ ಅಥವಾ ಗಾಬರಿಯಾಗಬೇಡ,” ಎಂದರು.


ಆದರೆ ಮನುಷ್ಯಪುತ್ರನೇ, ನೀನಾದರೋ ನಾನು ಹೇಳುವುದನ್ನು ಕೇಳು: ಆ ತಿರುಗಿಬೀಳುವ ಜನರ ಹಾಗೆ ನೀನೂ ತಿರುಗಿಬೀಳಬೇಡ. ನಿನ್ನ ಬಾಯನ್ನು ತೆರೆದು ನಾನು ನಿನಗೆ ಕೊಡುವುದನ್ನು ತಿನ್ನು,” ಎಂದರು.


ಬಾಬಿಲೋನಿನವರು ನಿನ್ನಿಂದ ಹುಟ್ಟುವಂಥ, ನಿನ್ನ ಮಕ್ಕಳಲ್ಲಿ ಕೆಲವರನ್ನು ತೆಗೆದುಕೊಂಡು ಹೋಗುವರು, ಅವರು ಬಾಬಿಲೋನಿನ ರಾಜನ ಅರಮನೆಯಲ್ಲಿ ಕಂಚುಕಿಗಳಾಗಿರುವರು,” ಎಂದನು.


ಆಕಾಶಗಳೇ, ಕೇಳಿರಿ. ಭೂಮಿಯೇ, ಕಿವಿಗೊಡು. ಏಕೆಂದರೆ ಯೆಹೋವ ದೇವರು ಮಾತನಾಡುತ್ತಿದ್ದಾರೆ: “ನಾನು ಸಾಕಿ ಸಲಹಿದ ಮಕ್ಕಳೇ ನನಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ.


ಅವನು ಇಸ್ರಾಯೇಲರಿಗೆ, “ನಿಮ್ಮ ಮಕ್ಕಳು, ‘ಈ ಕಲ್ಲುಗಳು ಏನು?’ ಎಂದು ಮುಂದಿನ ಕಾಲದಲ್ಲಿ ತಮ್ಮ ತಂದೆಗಳನ್ನು ಕೇಳುವಾಗ,


ಏಕೆಂದರೆ ಇದು ನಿಮ್ಮ ಮಧ್ಯದಲ್ಲಿ ಗುರುತಾಗಿರಬೇಕು. ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು, ‘ಈ ಕಲ್ಲುಗಳೇನು?’ ಎಂದು ಕೇಳುವಾಗ,


ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು, “ನಮ್ಮ ದೇವರಾದ ಯೆಹೋವ ದೇವರು ಆಜ್ಞಾಪಿಸಿದ ಈ ಷರತ್ತುಗಳ, ತೀರ್ಪುಗಳ ಹಾಗು ನಿಯಮಗಳ ಅರ್ಥ ಏನು?” ಎಂದು ನಿಮ್ಮನ್ನು ಕೇಳುವರು.


ನಿಮ್ಮ ಮಕ್ಕಳು, ‘ಈ ಆಚರಣೆಯ ಅರ್ಥವೇನು?’ ಎಂದು ಕೇಳಿದಾಗ,


ಇದಲ್ಲದೆ ಶೂರ, ಯುದ್ಧಭಟ, ನ್ಯಾಯಾಧಿಪತಿ, ಪ್ರವಾದಿ, ಶಕುನದವನು, ಹಿರಿಯನು,


ಯೋಷೀಯನ ಮಗ ಚಿದ್ಕೀಯನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನಿಂದ ಯೆಹೂದ ದೇಶದ ಅರಸನನ್ನಾಗಿ ಮಾಡಿದನು. ಅವನು ಯೆಹೋಯಾಕೀಮನ ಮಗ ಕೊನ್ಯನಿಗೆ ಬದಲಾಗಿ, ಅರಸನಾಗಿ ಆಳಿದನು.


ಯೆಹೋವ ದೇವರ ಕೋಪದಿಂದ ಯೆರೂಸಲೇಮಿನ ಮತ್ತು ಯೆಹೂದದ ಮೇಲೆ ಇವೆಲ್ಲ ಉಂಟಾದವು. ಹೀಗೆ ಯೆಹೋವ ದೇವರು ಅವರನ್ನು ತಮ್ಮ ಸಮ್ಮುಖದಿಂದ ತಳ್ಳಿಬಿಟ್ಟರು. ಚಿದ್ಕೀಯನು ಬಾಬಿಲೋನಿನ ಅರಸನಿಗೆ ವಿರೋಧವಾಗಿ ತಿರುಗಿಬಿದ್ದನು.


ಯೆಹೋವ ದೇವರ ವಾಕ್ಯವು ನನಗೆ ಬಂದಿತು,


“ ‘ಇದರ ಅರ್ಥವೇನೆಂದು ನೀನು ನಮಗೆ ಹೇಳುವುದಿಲ್ಲವೋ?’ ಎಂದು ನಿನ್ನ ದೇಶದ ಜನರು ನಿನ್ನನ್ನು ಪ್ರಶ್ನಿಸುವಾಗ,


ಯೆಹೋವ ದೇವರ ಕೋಪದಿಂದ ಯೆರೂಸಲೇಮಿನ ಮತ್ತು ಯೆಹೂದದ ಮೇಲೆ ಇವೆಲ್ಲ ಉಂಟಾದವು. ಹೀಗೆ ಯೆಹೋವ ದೇವರು ಅವರನ್ನು ತಮ್ಮ ಸಮ್ಮುಖದಿಂದ ತಳ್ಳಿಬಿಟ್ಟರು. ಅನಂತರ ಚಿದ್ಕೀಯನು ಬಾಬಿಲೋನಿನ ಅರಸನಿಗೆ ವಿರೋಧವಾಗಿ ತಿರುಗಿಬಿದ್ದನು.


“ಯೆಹೂದದ ಅರಸನಾದ ಚಿದ್ಕೀಯನನ್ನೂ, ಅವನ ಪ್ರಧಾನರನ್ನೂ ಅವರ ಶತ್ರುಗಳ ಕೈಯಲ್ಲಿಯೂ, ಅವರ ಪ್ರಾಣವನ್ನು ಹುಡುಕುವವರ ಕೈಯಲ್ಲಿಯೂ, ನಿಮ್ಮನ್ನು ಬಿಟ್ಟುಹೋಗಿರುವ ಬಾಬಿಲೋನಿನ ಅರಸನ ಸೈನ್ಯದ ಕೈಯಲ್ಲಿಯೂ ಒಪ್ಪಿಸುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು