Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 14:9 - ಕನ್ನಡ ಸಮಕಾಲಿಕ ಅನುವಾದ

9 “ ‘ಪ್ರವಾದಿಯು ಮೋಸಹೋಗಿ ವಾಕ್ಯವನ್ನು ಹೇಳಿದರೆ, ಯೆಹೋವ ದೇವರಾದ ನಾನೇ ಆ ಪ್ರವಾದಿಯನ್ನು ಮೋಸಗೊಳಿಸಿರುತ್ತೇನೆ. ನಾನು ನನ್ನ ಕೈಯನ್ನು ಅವನ ವಿರುದ್ಧವಾಗಿ ಚಾಚಿ, ನನ್ನ ಜನರಾದ ಇಸ್ರಾಯೇಲರ ಮಧ್ಯದೊಳಗಿಂದ ಅವನನ್ನು ನಾಶಪಡಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 “ಒಬ್ಬ ಪ್ರವಾದಿಯು ಮರುಳುಗೊಂಡು ದೈವೋಕ್ತಿಯನ್ನು ನುಡಿದರೆ, ಆ ಪ್ರವಾದಿಯನ್ನು ಮರುಳುಗೊಳಿಸಿದವನು ಯೆಹೋವನಾದ ನಾನೇ; ನಾನು ಅವನ ಮೇಲೆ ಕೈಯೆತ್ತಿ ಇಸ್ರಾಯೇಲರಾದ ನನ್ನ ಜನರೊಳಗಿಂದ ಅವನನ್ನು ಕಿತ್ತು ನಿರ್ನಾಮಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 “ಒಬ್ಬ ಪ್ರವಾದಿ ಮರುಳುಗೊಂಡು ದೈವೋಕ್ತಿಯೊಂದನ್ನು ನುಡಿದರೆ, ಆ ಪ್ರವಾದಿಯನ್ನು ಮರುಳುಗೊಳಿಸಿದವನು ಸರ್ವೇಶ್ವರನಾದ ನಾನೇ. ನಾನು ಅವನ ಮೇಲೆ ಕೈಯೆತ್ತಿ ಇಸ್ರಯೇಲರಾದ ನನ್ನ ಜನರಿಂದ ತೆಗೆದುಹಾಕಿ ಅವನನ್ನು ನಿರ್ನಾಮ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಒಬ್ಬ ಪ್ರವಾದಿಯು ಮರುಳುಗೊಂಡು ದೈವೋಕ್ತಿಯನ್ನು ನುಡಿದರೆ ಆ ಪ್ರವಾದಿಯನ್ನು ಮರುಳುಗೊಳಿಸಿದವನು ಯೆಹೋವನಾದ ನಾನೇ; ನಾನು ಅವನ ಮೇಲೆ ಕೈಯೆತ್ತಿ ಇಸ್ರಾಯೇಲ್ಯರಾದ ನನ್ನ ಜನರೊಳಗಿಂದ ಅವನನ್ನು ಕಿತ್ತು ನಿರ್ನಾಮಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಆದರೆ ಒಬ್ಬ ಪ್ರವಾದಿಯು ಅವನಿಗೆ ತನ್ನದೇ ಆದ ಉತ್ತರವನ್ನು ಕೊಡುವಷ್ಟು ಮೂರ್ಖನಾಗಿದ್ದರೆ, ಆಗ ನಾನು, ಅವನು ಎಂಥಾ ಮೂರ್ಖನಾಗಿದ್ದಾನೆಂದು ತೋರಿಸುವೆನು. ಅವನ ಮೇಲೆ ನನ್ನ ಸಾಮರ್ಥ್ಯವನ್ನು ಪ್ರಯೋಗಿಸುವೆನು. ಅವನನ್ನು ನಾಶಮಾಡಿ ನನ್ನ ಜನರ ಮಧ್ಯದಿಂದ ಅವನನ್ನು ತೆಗೆದುಬಿಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 14:9
24 ತಿಳಿವುಗಳ ಹೋಲಿಕೆ  

ನಾನೇ ಯೆಹೋವ ದೇವರು ಎಂದು ಅವರು ತಿಳಿದುಕೊಳ್ಳುವಂತೆ ನಾನು ಅವರಿಗೆ ಅಹಿತವಾದ ನಿಯಮಗಳನ್ನೂ, ಅವರು ಬದುಕಬಾರದ ನ್ಯಾಯಗಳನ್ನೂ ಕೊಟ್ಟೆನು.


ಆಗ ನಾನು ಹೇಳಿದ್ದೇನೆಂದರೆ, “ಹಾ, ಸಾರ್ವಭೌಮ ಯೆಹೋವ ದೇವರೇ, ನಿಶ್ಚಯವಾಗಿ ನೀವು ಈ ಜನರಿಗೂ, ಯೆರೂಸಲೇಮಿಗೂ, ‘ನಿಮಗೆ ಸಮಾಧಾನವಾಗುವುದು,’ ಎಂದು ಹೇಳಿ, ಬಹಳ ಮೋಸ ಮಾಡಿದಿರಿ. ಖಡ್ಗವು ಅವರ ಕುತ್ತಿಗೆಗೆ ಬಂದಿದೆ” ಎಂದೆನು.


ಆದ್ದರಿಂದ ನಾನು ನನ್ನ ಕೈಯನ್ನು ನಿನ್ನ ಮೇಲೆ ಚಾಚಿ ನಿನ್ನ ಭೂಪ್ರದೇಶವನ್ನು ಕಡಿಮೆ ಮಾಡಿದೆ; ನಿನ್ನ ದುರ್ಮಾರ್ಗಕ್ಕೆ ನಾಚಿಕೆಪಟ್ಟು, ನಿನ್ನ ಕೆಟ್ಟ ನಡತೆಗೆ ಅಸಹ್ಯಪಡುವವರಾದ ಫಿಲಿಷ್ಟಿಯರ ಪುತ್ರಿಯರ ಚಿತ್ತಕ್ಕೆ ನಿನ್ನನ್ನು ಒಪ್ಪಿಸಿಬಿಟ್ಟೆ.


ಆದ್ದರಿಂದ ಯೆಹೋವ ದೇವರು ತಾನು ಕಳುಹಿಸದೆ, ತನ್ನ ಹೆಸರಿನಲ್ಲಿ ಪ್ರವಾದಿಸುವಂಥ ಮತ್ತು, ‘ಈ ದೇಶದಲ್ಲಿ ಖಡ್ಗವೂ ಬರವೂ ಇರುವುದಿಲ್ಲ,’ ಎಂದು ಹೇಳುವಂಥ ಪ್ರವಾದಿಗಳನ್ನು ಕುರಿತು, ಖಡ್ಗದಿಂದಲೂ ಕ್ಷಾಮದಿಂದಲೂ ಆ ಪ್ರವಾದಿಗಳು ತಾವೇ ನಿರ್ಮೂಲವಾಗುತ್ತಾರೆ.


ಅದಕ್ಕೆ ತಕ್ಕಂತೆ ನಾನು ಇವರಿಗೋಸ್ಕರ ಕುತಂತ್ರಗಳನ್ನು ಆರಿಸಿಕೊಂಡು, ಇವರು ಅಂಜುತ್ತಿದ್ದ ವಿಪತ್ತುಗಳನ್ನು ಬರಮಾಡುವೆನು. ಏಕೆಂದರೆ ನಾನು ಕೂಗಿದಾಗ, ಯಾರು ಉತ್ತರ ಕೊಡಲಿಲ್ಲ. ನಾನು ಹೇಳಿದಾಗ, ಇವರು ಕೇಳಲಿಲ್ಲ. ನನ್ನ ಚಿತ್ತಕ್ಕೆ ವಿರುದ್ಧವಾದದ್ದನ್ನು ನಡೆಸಿ, ನನಗೆ ಇಷ್ಟವಲ್ಲದ್ದನ್ನು ಆರಿಸಿಕೊಂಡರು.”


ಅಬ್ರಹಾಮನು ನಮ್ಮನ್ನು ತಿಳಿಯದಿದ್ದರೂ, ಇಸ್ರಾಯೇಲನು ನಮ್ಮನ್ನು ಗುರುತಿಸದಿದ್ದರೂ ಯೆಹೋವ ದೇವರಾದ ನೀವೇ ನಮ್ಮ ತಂದೆಯೂ, ನಮ್ಮ ವಿಮೋಚಕರೂ ಆಗಿದ್ದೀರಿ. ನಿಮ್ಮ ಹೆಸರು ಸದಾಕಾಲವೂ ಇದೆ


ನಾನಿಲ್ಲದೆ ಕೈದಿಗಳ ಕೆಳಗೆ ಮುದುರಿಕೊಂಡು, ಹತರಾಗಿರುವವರ ಕೆಳಗೆ ಬಿದ್ದಿರುವುದೇ ಇವರ ಗತಿ. ಏಕೆಂದರೆ, ಇಷ್ಟೆಲ್ಲಾ ಆದರೂ ಅವರ ಕೋಪವು ತೀರದೆ, ಅವರ ಕೈ ಇನ್ನೂ ಚಾಚಿಯೇ ಇದೆ.


ಹೀಗೆ ಮನಸ್ಸೆಯು ಎಫ್ರಾಯೀಮನ್ನು ಮತ್ತು ಎಫ್ರಾಯೀಮು ಮನಸ್ಸೆಯನ್ನು ಹಾನಿ ಮಾಡುತ್ತಿವೆ. ಅವರು ಒಟ್ಟಾಗಿ ಸೇರಿ ಯೆಹೂದಕ್ಕೆ ವಿರೋಧವಾಗಿರುವರು. ಇಷ್ಟೆಲ್ಲಾ ಆದರೂ ಅವರ ಕೋಪವು ತೀರದೆ, ಅವರ ಕೈ ಇನ್ನೂ ಚಾಚಿಯೇ ಇದೆ.


ಹೀಗಿರಲು ಕರ್ತದೇವರು ಅವರ ಯೌವನಸ್ಥರಲ್ಲಿ ಆನಂದಿಸುವುದಿಲ್ಲ. ಅವರ ಅನಾಥರನ್ನೂ, ವಿಧವೆಯರನ್ನೂ ಕರುಣಿಸುವುದಿಲ್ಲ. ಏಕೆಂದರೆ, ಪ್ರತಿಯೊಬ್ಬನು ಕಪಟಿಯೂ, ಕೇಡು ಮಾಡುವವನೂ ಆಗಿದ್ದಾನೆ. ಎಲ್ಲರ ಬಾಯಿಯೂ ಮೂರ್ಖತನದ ಮಾತುಗಳನ್ನು ಆಡುತ್ತದೆ. ಆದ್ದರಿಂದ ಇಷ್ಟೆಲ್ಲಾ ಆದರೂ ದೇವರ ಕೋಪವು ತೀರದೆ, ಅವರ ಕೈ ಇನ್ನೂ ಚಾಚಿಯೇ ಇದೆ.


ಅವನ ಶತ್ರುಗಳಾದ ಪೂರ್ವದಿಂದ ಅರಾಮ್ಯರನ್ನು ಮುಂದೆಯೂ, ಪಶ್ಚಿಮದಿಂದ ಫಿಲಿಷ್ಟಿಯರನ್ನು ಹಿಂದೆಯೂ ಒಟ್ಟುಗೂಡಿಸುವರು. ಅವರು ಇಸ್ರಾಯೇಲನ್ನು ತೆರೆದ ಬಾಯಿಂದ ನುಂಗಿಬಿಡುವರು. ಏಕೆಂದರೆ, ಇಷ್ಟೆಲ್ಲಾ ಆದರೂ ದೇವರ ಕೋಪವು ತೀರದೆ, ಅವರ ಕೈ ಇನ್ನೂ ಚಾಚಿಯೇ ಇದೆ.


ಆದಕಾರಣ ಯೆಹೋವ ದೇವರು ಕೋಪಗೊಂಡು ಜನರಿಗೆ ವಿರೋಧವಾಗಿ ಉರಿಗೊಂಡು ಅವರ ಮೇಲೆ ತಮ್ಮ ಕೈಚಾಚಿ, ಅವರನ್ನು ಹೊಡೆದಿದ್ದಾರೆ, ಬೆಟ್ಟಗುಡ್ಡಗಳು ಕಂಪಿಸಿದವು. ಅವರ ಹೆಣಗಳು ಹರಿದು ಬೀದಿಗಳ ಮಧ್ಯದಲ್ಲಿ ಬಿದ್ದಿರುವುವು. ಇಷ್ಟೆಲ್ಲಾ ಆದರೂ ದೇವರ ಕೋಪವು ತೀರದೆ, ಅವರ ಕೈ ಇನ್ನೂ ಚಾಚಿಯೇ ಇರುವುದು.


ಬಲವೂ, ಜ್ಞಾನವೂ ದೇವರಲ್ಲಿವೆ; ವಂಚಕ ಹಾಗು ವಂಚಿತ ದೇವರಿಗೆ ಒಳಪಟ್ಟವರು.


“ಆದ್ದರಿಂದ ಇಗೋ, ಯೆಹೋವ ದೇವರು ಈ ನಿನ್ನ ಪ್ರವಾದಿಗಳ ಬಾಯಿಯಲ್ಲಿ ಸುಳ್ಳನ್ನಾಡುವ ಆತ್ಮವನ್ನು ಇಟ್ಟಿದ್ದಾರೆ. ಇದಲ್ಲದೆ ಯೆಹೋವ ದೇವರು ನಿನ್ನನ್ನು ಕುರಿತು ಕೇಡನ್ನು ಹೇಳಿದ್ದಾರೆ,” ಎಂದನು.


ಅವರು ನನ್ನ ಜನರ ಗಾಯವನ್ನು ಹಗುರವಾಗಿ ಸ್ವಸ್ಥಮಾಡಿದ್ದಾರೆ. ಸಮಾಧಾನವಿಲ್ಲದಿರುವಾಗ, ‘ಸಮಾಧಾನ, ಸಮಾಧಾನ,’ ಎಂದು ಹೇಳುತ್ತಾರೆ.


ಅಸಹ್ಯವಾದದ್ದನ್ನು ಮಾಡಿದ ಮೇಲೆ ಅವರು ನಾಚಿಕೆಪಟ್ಟರೋ? ಇಲ್ಲ, ಸ್ವಲ್ಪವಾದರೂ ನಾಚಿಕೆ ಪಡಲಿಲ್ಲ. ಲಜ್ಜೆಯನ್ನೇ ಅರಿಯರು. ಆದ್ದರಿಂದ ಬೀಳುವವರೊಳಗೆ ಅವರು ಬೀಳುವರು. ನಾನು ಅವರನ್ನು ದಂಡಿಸುವ ಕಾಲದಲ್ಲಿ, ಅವರು ಕೆಳಗೆ ಬೀಳುವರು,” ಎಂದು ಯೆಹೋವ ದೇವರು ಹೇಳುತ್ತಾರೆ.


ಅವರು ತಮ್ಮ ಅಕ್ರಮದ ದಂಡನೆಯನ್ನು ಹೊರುವರು. ವಿಚಾರಿಸುವವನ ದಂಡನೆಯು ಹೇಗೆಯೋ ಹಾಗೆಯೇ, ಪ್ರವಾದಿಗೆ ದಂಡನೆಯೂ ಇರುವುದು.


ದಂಡನೆಯ ದಿವಸಗಳು ಬಂದಿವೆ, ಮುಯ್ಯಿ ತೀರಿಸುವ ದಿವಸಗಳೂ ಸಮೀಪವಾಗಿವೆ. ಇಸ್ರಾಯೇಲು ಅದನ್ನು ತಿಳಿದುಕೊಳ್ಳಲಿ. ಏಕೆಂದರೆ ನಿನ್ನ ಪಾಪಗಳು ಬಹಳವಾಗಿರುವುದರಿಂದಲೂ, ದ್ವೇಷವು ಹೆಚ್ಚಾಗಿರುವುದರಿಂದಲೂ, “ಪ್ರವಾದಿ ಮೂರ್ಖನೂ, ಪ್ರೇರಿತ ಮನುಷ್ಯನು ಹುಚ್ಚನೂ,” ಎಂದು ಇಸ್ರಾಯೇಲು ಹೇಳಿಕೊಳ್ಳುತ್ತದೆ.


ಯಾವನಾದರೂ ಇನ್ನು ಪ್ರವಾದಿಸಿದರೆ, ಅವನ ಹೆತ್ತವರಾದ ತಂದೆತಾಯಿಗಳು ಅವನಿಗೆ, ‘ನೀನು ಬದುಕಬಾರದು, ಏಕೆಂದರೆ ಯೆಹೋವ ದೇವರ ಹೆಸರಿನಲ್ಲಿ ಸುಳ್ಳು ಹೇಳುತ್ತೀ,’ ಎಂದು ಹೇಳುವರು. ಅವನು ಪ್ರವಾದಿಸುವಾಗ ಅವನ ತಂದೆತಾಯಿಗಳು ಅವನನ್ನು ಇರಿದುಬಿಡುವರು.


ಸುಳ್ಳಾದದ್ದನ್ನು ದರ್ಶಿಸಿ, ಸುಳ್ಳು ಕಣಿ ಹೇಳುವ ಪ್ರವಾದಿಗಳಿಗೆ ವಿರುದ್ಧವಾಗಿ ನನ್ನ ಹಸ್ತವಿರುವುದು. ಅವರು ನನ್ನ ಜನರ ಸಭೆಯಲ್ಲಿ ಇರುವುದೂ ಇಲ್ಲ, ಇಸ್ರಾಯೇಲನ ಮನೆತನದವರ ಪಟ್ಟಿಯಲ್ಲಿ ಬರೆಯಲಾಗುವುದೂ ಇಲ್ಲ. ಇಸ್ರಾಯೇಲಿನ ದೇಶದಲ್ಲಿ ಪ್ರವೇಶಿಸುವುದೂ ಇಲ್ಲ. ಆಗ ನಾನೇ ಸಾರ್ವಭೌಮ ಯೆಹೋವ ದೇವರೆಂದು ನೀವು ತಿಳಿದುಕೊಳ್ಳುವಿರಿ.


ತಮ್ಮ ವಿಗ್ರಹಗಳಿಗಾಗಿ ನನ್ನನ್ನು ತೊರೆದ ಇಸ್ರಾಯೇಲ್ ಜನರ ಹೃದಯಗಳನ್ನು ಪುನಃ ವಶಪಡಿಸಿಕೊಳ್ಳಲು ನಾನು ಇದನ್ನು ಮಾಡುತ್ತೇನೆ.’


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು