Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 13:19 - ಕನ್ನಡ ಸಮಕಾಲಿಕ ಅನುವಾದ

19 ಸುಳ್ಳಿಗೆ ಕಿವಿಗೊಡುವ ನನ್ನ ಜನರಿಗೆ ಸುಳ್ಳು ಹೇಳಿ, ಸಾಯದಿರುವವರನ್ನು ಸಾಯಿಸಿ, ಸಾಯುವವರನ್ನು ಬದುಕಿಸಿ, ಒಂದು ಹಿಡಿ ಜವೆಗೋಧಿಗೂ, ತುಂಡು ರೊಟ್ಟಿಗೂ ನನ್ನನ್ನು ನನ್ನ ಜನರೊಳಗೆ ಅಪವಿತ್ರಗೊಳಿಸುವಿರೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ನೀವು ಜವೆಗೋದಿಯ ಹಿಡಿಗಳನ್ನೂ, ರೊಟ್ಟಿಯ ಚೂರುಗಳನ್ನೂ ಆಶಿಸಿ ಸುಳ್ಳು ಮಾತಿಗೆ ಕಿವಿಗೊಡುವ ನನ್ನ ಜನರಿಗೆ ಸುಳ್ಳು ಹೇಳುವುದರಿಂದ ಜೀವಿಸತಕ್ಕವರನ್ನು ಸಾಯಿಸಿ, ಸಾಯತಕ್ಕವರನ್ನು ಉಳಿಸಿ, ನನ್ನ ಜನರ ನಡುವೆ ನನ್ನ ಘನತೆಗೆ ಕುಂದುತಂದಿದ್ದೀರಿ.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ನೀವು ಹಿಡಿಯುವಷ್ಟೆ ಜವೆಗೋಧಿಗೆ, ಚೂರುಪಾರು ರೊಟ್ಟಿಗೆ ಆಸೆಪಟ್ಟು, ಸುಳ್ಳುಮಾತಿಗೆ ಕಿವಿಗೊಡುವ ನನ್ನ ಜನರಿಗೆ ಸುಳ್ಳು ಹೇಳಿ, ಜೀವಿಸತಕ್ಕವರನ್ನು ಸಾಯಿಸಿ, ಸಾಯತಕ್ಕವರನ್ನು ಉಳಿಸಿ, ನನ್ನ ಜನರ ನಡುವೆ ನನ್ನ ಘನತೆಗೆ ಕುಂದುತಂದಿದ್ದೀರಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ನೀವು ಜವೆಗೋದಿಯ ಹಿಡಿಗಳನ್ನೂ ರೊಟ್ಟಿಯ ಚೂರುಗಳನ್ನೂ ಆಶಿಸಿ ಸುಳ್ಳುಮಾತಿಗೆ ಕಿವಿಗೊಡುವ ನನ್ನ ಜನರಿಗೆ ಸುಳ್ಳು ಹೇಳುವದರಿಂದ ಸಾಯದಿರತಕ್ಕವರನ್ನು ಸಾಯಿಸಿ ಸಾಯತಕ್ಕವರನ್ನು ಉಳಿಸಿ ನನ್ನ ಜನರ ನಡುವೆ ನನ್ನ ಘನತೆಗೆ ಕುಂದು ತಂದಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಜನರೆದುರಿನಲ್ಲಿ ನನಗೆ ನೀವು ಮಹತ್ವವನ್ನು ಕೊಡುವದಿಲ್ಲ. ಸ್ವಲ್ಪ ಬಾರ್ಲಿಗಾಗಿಯೂ ಕೆಲವು ತುಂಡು ರೊಟ್ಟಿಗಾಗಿಯೂ ನೀವು ನನಗೆ ವಿರುದ್ಧವಾಗಿ ವರ್ತಿಸುತ್ತೀರಿ. ನನ್ನ ಜನರಿಗೆ ನೀವು ಸುಳ್ಳನ್ನು ಆಡುತ್ತೀರಿ. ಅವರಿಗೆ ಸುಳ್ಳೆಂದರೆ ಬಹಳ ಪ್ರೀತಿ. ನೀವು ಸಾಯತಕ್ಕಲ್ಲದವರನ್ನು ಸಾವಿಗೀಡು ಮಾಡುತ್ತೀರಿ. ಬದುಕತಕ್ಕಲ್ಲದವರನ್ನು ಜೀವಂತವಾಗಿಡುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 13:19
23 ತಿಳಿವುಗಳ ಹೋಲಿಕೆ  

ಯೆಹೋವ ದೇವರು ಹೇಳುವುದೇನೆಂದರೆ, “ನನ್ನ ಜನರನ್ನು ಸನ್ಮಾರ್ಗದಿಂದ ತಪ್ಪಿಸುವ ಪ್ರವಾದಿಗಳಿಗೆ ತಿನ್ನಲು ಕೊಟ್ಟರೆ ‘ಸಮಾಧಾನವಾಗಲಿ’ ಎನ್ನುವರು. ಆದರೆ ಅವರಿಗೆ ತಿನ್ನಲು ಏನೂ ಕೊಡದವನ ವಿರೋಧವಾಗಿ ಯುದ್ಧಕ್ಕೂ ಅವರು ಸಿದ್ಧರಾಗುವರು.


ಪಕ್ಷಪಾತವು ಸರಿಯಲ್ಲ; ತುತ್ತು ರೊಟ್ಟಿಗಾಗಿ ಒಬ್ಬನು ದ್ರೋಹ ಮಾಡುವನು.


ಅದರ ಯಾಜಕರು ನನ್ನ ವಿಧಿಗಳನ್ನು ಭಂಗಪಡಿಸಿದ್ದಾರೆ. ನನ್ನ ಪರಿಶುದ್ಧ ವಸ್ತುಗಳನ್ನು ಅಪವಿತ್ರಪಡಿಸಿದ್ದಾರೆ. ಅವರು ಪರಿಶುದ್ಧವಾದದ್ದಕ್ಕೂ, ಅಪವಿತ್ರವಾದದ್ದಕ್ಕೂ ಬೇಧವೆಣಿಸಲಿಲ್ಲ. ಶುದ್ಧ, ಅಶುದ್ಧಗಳ ವ್ಯತ್ಯಾಸವಿಲ್ಲ ಎಂದು ಬೋಧಿಸಿದರು. ನನ್ನ ಸಬ್ಬತ್ ದಿನಗಳಿಗೆ ತಮ್ಮ ಕಣ್ಣುಗಳನ್ನು ಮರೆಮಾಡಿದ್ದಾರೆ. ಆದ್ದರಿಂದ ನಾನು ಅವರಲ್ಲಿ ಅಪಕೀರ್ತಿಗೆ ಗುರಿಯಾಗಿದ್ದೇನೆ.


“ ‘ನಿಮ್ಮ ವಿಷಯವಾಗಿ, ಓ ಇಸ್ರಾಯೇಲಿನ ಮನೆತನದವರೇ, ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಹೋಗಿರಿ, ನಿಮ್ಮ ನಿಮ್ಮ ವಿಗ್ರಹಗಳನ್ನು ಸೇವಿಸಿರಿ. ಆದರೆ ನಂತರ ನೀವು ಖಂಡಿತವಾಗಿಯೂ ನನ್ನ ಮಾತನ್ನು ಕೇಳುತ್ತೀರಿ ಮತ್ತು ನಿಮ್ಮ ದಾನಗಳಿಂದಲೂ, ನಿಮ್ಮ ವಿಗ್ರಹಗಳಿಂದಲೂ ಇನ್ನು ಮೇಲೆ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಪಡಿಸಬೇಡಿರಿ.


ಆದರೂ ನನ್ನನ್ನು ಅಸಹ್ಯಿಸುವವರಿಗೆ, ಅವರು, ‘ನಿಮಗೆ ಸಮಾಧಾನವಾಗುವುದು, ಎಂದು ಯೆಹೋವ ದೇವರು ಹೇಳಿದ್ದಾರೆ,’ ಎಂದು ಹೇಳುತ್ತಲೇ ಇದ್ದಾರೆ. ತಮ್ಮ ಹೃದಯದ ಹಟದ ಪ್ರಕಾರ ನಡೆದುಕೊಳ್ಳುವವರೆಲ್ಲರಿಗೆ ‘ನಿಮ್ಮ ಮೇಲೆ ಕೇಡು ಬರುವುದಿಲ್ಲ,’ ಎನ್ನುತ್ತಾರೆ.


ಯೆರೂಸಲೇಮಿನ ಪ್ರವಾದಿಗಳಲ್ಲಿ ಭಯಂಕರವಾದದ್ದನ್ನು ನೋಡಿದ್ದೇನೆ. ಅವರು ವ್ಯಭಿಚಾರ ಮಾಡಿ, ಸುಳ್ಳಿನಲ್ಲಿ ನಡೆದುಕೊಂಡದ್ದಲ್ಲದೆ, ದುಷ್ಟರು ತಮ್ಮ ದುಷ್ಟತ್ವವನ್ನು ಬಿಟ್ಟು ತಿರುಗದ ಹಾಗೆ ಅವರ ಕೈಗಳನ್ನು ಬಲಪಡಿಸುತ್ತಾರೆ. ಅವರೆಲ್ಲರೂ ನನಗೆ ಸೊದೋಮಿನ ಹಾಗೆಯೂ, ಅದರ ನಿವಾಸಿಗಳು ಗೊಮೋರದ ಹಾಗೆಯೂ ಇದ್ದಾರೆ.”


ಅಂಥಾ ಜನರು ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನ ಸೇವೆ ಮಾಡುವವರಾಗಿರದೆ ತಮ್ಮ ಹೊಟ್ಟೆಯ ಸೇವೆ ಮಾಡುವವರಾಗಿರುತ್ತಾರೆ. ನಯವಾದ ಮತ್ತು ಮುಖಸ್ತುತಿಯ ಮಾತುಗಳಿಂದ ನಿಷ್ಕಪಟಿಗಳ ಹೃದಯಗಳನ್ನು ಮೋಸಗೊಳಿಸುತ್ತಾರೆ.


ಅದರ ಮುಖ್ಯಸ್ಥರು ಲಂಚಕ್ಕೆ ನ್ಯಾಯತೀರಿಸುತ್ತಾರೆ. ಅದರ ಯಾಜಕರು ಸಂಬಳಕ್ಕೆ ಬೋಧಿಸುತ್ತಾರೆ. ಅದರ ಪ್ರವಾದಿಗಳು ಹಣಕ್ಕೆ ಶಕುನ ಹೇಳುತ್ತಾರೆ. ಆದರೂ ಯೆಹೋವ ದೇವರ ಮೇಲೆ ಆತುಕೊಂಡು, “ಯೆಹೋವ ದೇವರು ನಮ್ಮ ಮಧ್ಯದಲ್ಲಿ ಇಲ್ಲವೋ? ನಮ್ಮ ಮೇಲೆ ಕೇಡು ಬರುವುದಿಲ್ಲ,” ಎನ್ನುತ್ತಾರೆ.


ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ. ಬಲಾತ್ಕಾರದಿಂದಲ್ಲ, ಆದರೆ ದೇವರ ಪ್ರಕಾರ ಇಷ್ಟಪೂರ್ವಕವಾಗಿಯೂ ನೀಚ ದ್ರವ್ಯಾಶೆಯಿಂದಲ್ಲ, ಸಿದ್ಧಮನಸ್ಸಿನಿಂದಲೂ ಮೇಲ್ವಿಚಾರಣೆ ಮಾಡಿರಿ.


ಆ ಬಲಹೀನನು ನಿನ್ನ ತಿಳುವಳಿಕೆಯಿಂದ ನಾಶವಾಗುತ್ತಾನೆ. ಆ ಸಹೋದರನಿಗಾಗಿಯೂ ಕ್ರಿಸ್ತ ಯೇಸುವು ತಮ್ಮ ಪ್ರಾಣವನ್ನು ಕೊಟ್ಟರಲ್ಲವೇ?


ನೀವು ಆಹಾರದಿಂದ ನಿಮ್ಮ ಸಹೋದರರನ್ನು ದುಃಖ ಪಡಿಸುವುದಾದರೆ ನೀವು ಪ್ರೀತಿಯಿಂದ ನಡೆದುಕೊಳ್ಳುವುದಿಲ್ಲ. ನೀವು ತಿನ್ನುವುದರ ಮೂಲಕ ಕ್ರಿಸ್ತನು ಯಾವನಿಗೋಸ್ಕರವಾಗಿ ಸತ್ತರೋ ಅಂಥವರನ್ನು ನಾಶಮಾಡಬೇಡಿರಿ.


“ನನ್ನ ಬಲಿಪೀಠದ ಮೇಲೆ ವ್ಯರ್ಥವಾಗಿ ಬೆಂಕಿ ಹಚ್ಚುವುದಕ್ಕಿಂತ, ಬಾಗಿಲು ಮುಚ್ಚುವುದು ಒಳ್ಳೆಯದು. ನಿಮ್ಮಲ್ಲಿ ನನಗೆ ಇಷ್ಟವಿಲ್ಲ ಮತ್ತು ನಿಮ್ಮ ಕೈಯಿಂದ ನಾನು ಕಾಣಿಕೆಯನ್ನು ಅಂಗೀಕರಿಸುವುದಿಲ್ಲ.


ಏಕೆಂದರೆ ನಾನು ಯಾವನನ್ನು ದುಃಖಪಡಿಸಲಿಲ್ಲವೋ, ಆ ನೀತಿವಂತರ ಹೃದಯಕ್ಕೆ ನೀವು ಸುಳ್ಳಾಡಿ ದುಃಖಪಡಿಸಿದ್ದೀರಿ; ದುಷ್ಟನು ತನ್ನ ದುರ್ಮಾರ್ಗವನ್ನು ಬಿಟ್ಟು, ಪ್ರಾಣವನ್ನು ಉಳಿಸಿಕೊಳ್ಳದಂತೆ ನೀವು ಅವರನ್ನು ಪ್ರೋತ್ಸಾಹಿಸಿದ್ದೀರಿ.


ಮಗನೇ, ನೀನು ಬುದ್ಧಿವಾದಕ್ಕೆ ಲಕ್ಷ್ಯಕೊಡದಿದ್ದರೆ, ಪರಿಜ್ಞಾನದ ಮಾತುಗಳಿಂದ ದಾರಿತಪ್ಪುವೆ.


ಆಗ ಸೌಲನು ತನ್ನ ಸೇವಕನಿಗೆ, “ನಾವು ಆ ಮನುಷ್ಯನ ಬಳಿಗೆ ಹೋದರೆ, ಏನು ತೆಗೆದುಕೊಂಡು ಹೋಗೋಣ? ನಮ್ಮ ಚೀಲಗಳಲ್ಲಿ ಇರುವ ರೊಟ್ಟಿ ಮುಗಿದು ಹೋಯಿತು. ದೇವರ ಮನುಷ್ಯನ ಬಳಿಗೆ ತೆಗೆದುಕೊಂಡು ಹೋಗಲು ತಕ್ಕ ಕಾಣಿಕೆ ಇಲ್ಲ. ನಮ್ಮ ಬಳಿಯಲ್ಲಿ ಏನಿದೆ?” ಎಂದನು.


ಹೌದು, ಎಂದಿಗೂ ಸಾಕೆನ್ನದ ಹೊಟ್ಟೆಬಾಕ ನಾಯಿಗಳು ಮತ್ತು ಅವರು ಗ್ರಹಿಕೆ ಇಲ್ಲದ ಕುರುಬರು, ಅವರೆಲ್ಲರೂ ತಮ್ಮ ತಮ್ಮ ಸ್ವಂತ ಮಾರ್ಗಕ್ಕೂ, ಪ್ರತಿಯೊಬ್ಬನೂ ತನ್ನ ಲಾಭ ಸಿಕ್ಕುವ ಕಡೆಗೂ ತಿರುಗಿಕೊಳ್ಳುವನು.


“ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನೀವು ಜನರ ಪ್ರಾಣಗಳನ್ನು ಪಕ್ಷಿಗಳನ್ನೋ ಎಂಬಂತೆ ಬೇಟೆಯಾಡುವುದಕ್ಕೆ ಸಾಧನವಾದ ನಿಮ್ಮ ತಾಯಿತಿಗಳಿಗೆ ವಿರೋಧವಾಗಿದ್ದೇನೆ. ಅವುಗಳನ್ನು ನಿಮ್ಮ ತೋಳುಗಳಿಂದ ಹರಿದುಬಿಡುವೆನು. ನೀವು ಬೇಟೆಯಾಡುವಂತೆ ಬೇಟೆಯಾಡಿದ ಪ್ರಾಣಗಳನ್ನು ಬಿಡಿಸುತ್ತೇನೆ.


ಬೇಟೆಯನ್ನು ಸುಲಿದುಕೊಳ್ಳುವ ಗರ್ಜಿಸುವ ಸಿಂಹದ ಹಾಗೆ ಅದರ ಮಧ್ಯದಲ್ಲಿ ಅವಳ ಪ್ರವಾದಿಗಳ ಒಳಸಂಚು ಉಂಟು; ಪ್ರಾಣಗಳನ್ನು ತಿಂದುಬಿಟ್ಟಿದ್ದಾರೆ, ಸಂಪತ್ತನ್ನೂ, ಅಮೂಲ್ಯವಾದ ವಸ್ತುವನ್ನೂ ದೋಚಿಕೊಂಡಿದ್ದಾರೆ, ಅವರು ಅದರ ಮಧ್ಯದಲ್ಲಿ ಬಹಳ ಜನರನ್ನು ವಿಧವೆಯರನ್ನಾಗಿ ಮಾಡಿದ್ದಾರೆ.


ದುಷ್ಟರನ್ನು ನೀತಿವಂತರೆಂದು ನಿರ್ಣಯಿಸುವವನು, ನೀತಿವಂತರನ್ನು ಖಂಡಿಸುವವನೂ ಇವರಿಬ್ಬರೂ ಯೆಹೋವ ದೇವರಿಗೆ ಅಸಹ್ಯ.


ಕೇಡಿಗೆ ಮೇಲೆಂದೂ, ಮೇಲಿಗೆ ಕೇಡೆಂದೂ ಕರೆದು, ಕತ್ತಲೆಯನ್ನು ಬೆಳಕೆಂದೂ, ಬೆಳಕನ್ನು ಕತ್ತಲೆಯೆಂದೂ; ಕಹಿಯನ್ನು ಸಿಹಿ ಎಂದೂ, ಸಿಹಿಯನ್ನು ಕಹಿ ಎಂದೂ ಎಣಿಸುವವರಿಗೆ ಕಷ್ಟ!


ಅಲ್ಲಿಯ ಪ್ರಧಾನರು ಸುಲಿಗೆಗಾಗಿ ರಕ್ತ ಸುರಿಸಿ, ಪ್ರಾಣಗಳನ್ನು ನುಂಗುವ ಹಾಗೆ ಬೇಟೆಯ ತೋಳಗಳಂತಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು