Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 11:1 - ಕನ್ನಡ ಸಮಕಾಲಿಕ ಅನುವಾದ

1 ಆಮೇಲೆ ದೇವರಾತ್ಮರು ಪೂರ್ವದಿಕ್ಕಿಗೆ ಅಭಿಮುಖವಾಗಿರುವ ಯೆಹೋವ ದೇವರ ಆಲಯದ ಪೂರ್ವದಿಕ್ಕಿನ ಬಾಗಿಲಿಗೆ, ನನ್ನನ್ನು ಎತ್ತಿಕೊಂಡು ಹೋದರು. ಪ್ರವೇಶದ್ವಾರದಲ್ಲಿ ಇಪ್ಪತ್ತೈದು ಮಂದಿ ಮನುಷ್ಯರು ಇದ್ದರು. ಅವರೊಳಗೆ ನಾನು ಜನರ ಪ್ರಧಾನರಾದ ಅಜ್ಜೂರನ ಮಗ ಯಾಜನ್ಯನನ್ನೂ, ಬೆನಾಯನ ಮಗ ಪೆಲಟೀಯನನ್ನೂ ನೋಡಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಆ ಮೇಲೆ ದೇವರಾತ್ಮವು ನನ್ನನ್ನು ಎತ್ತಿ ಪೂರ್ವದಿಕ್ಕಿಗೆ ಅಭಿಮುಖವಾಗಿರುವ ಯೆಹೋವನ ಆಲಯದ ಮೂಡಣ ಬಾಗಿಲಿಗೆ ತಂದುಬಿಟ್ಟಿತು; ಇಗೋ, ಬಾಗಿಲ ಮುಂದೆ ಇಪ್ಪತ್ತೈದು ಜನರು ನಿಂತಿದ್ದರು; ಅವರ ಮಧ್ಯದಲ್ಲಿ ಅಜ್ಜೂರನ ಮಗನಾದ ಯಾಜನ್ಯ, ಬೆನಾಯನ ಮಗನಾದ ಪೆಲತ್ಯ ಎಂಬ ಜನನಾಯಕರನ್ನು ನಾನು ನೋಡಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಆಮೇಲೆ ದೇವರಾತ್ಮ ನನ್ನನ್ನು ಎತ್ತಿ ಪೂರ್ವದಿಕ್ಕಿಗೆ ಅಭಿಮುಖವಾಗಿರುವ ಸರ್ವೇಶ್ವರನ ಆಲಯದ ಮೂಡಣ ಬಾಗಿಲಿಗೆ ತಂದುಬಿಟ್ಟಿತು. ಇಗೋ, ಬಾಗಿಲ ಮುಂದೆ ಇಪ್ಪತ್ತೈದು ಜನರು ನಿಂತಿದ್ದರು. ಅವರ ಮಧ್ಯೆ ಅಜ್ಜೂರನ ಮಗ ಯಾಜನ್ಯ, ಬೆನಾಯನ ಮಗ ಪೆಲತ್ಯ ಎಂಬ ಜನನಾಯಕರನ್ನು ನಾನು ನೋಡಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಆಮೇಲೆ ದೇವರಾತ್ಮವು ನನ್ನನ್ನು ಎತ್ತಿ ಪೂರ್ವದಿಕ್ಕಿಗೆ ಅಭಿಮುಖವಾಗಿರುವ ಯೆಹೋವನ ಆಲಯದ ಮೂಡಣ ಬಾಗಿಲಿಗೆ ತಂದುಬಿಟ್ಟಿತು; ಇಗೋ, ಬಾಗಿಲ ಮುಂದೆ ಇಪ್ಪತ್ತೈದು ಜನರು ನಿಂತಿದ್ದರು; ನಾನು ಅವರ ಮಧ್ಯದಲ್ಲಿ ಅಜ್ಜೂರನ ಮಗನಾದ ಯಾಜನ್ಯ, ಬೆನಾಯನ ಮಗನಾದ ಪೆಲತ್ಯ ಎಂಬ ಜನದೊಡೆಯರನ್ನು ನೋಡಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಆಗ ಆತ್ಮವು ನನ್ನನ್ನು ಯೆಹೋವನಾಲಯದ ಪೂರ್ವದ ಬಾಗಿಲಿಗೆ ಕೊಂಡೊಯ್ಯಿತು. ಬಾಗಿಲಿನ ಪ್ರವೇಶ ಸ್ಥಳದಲ್ಲಿ ನಾನು ಇಪ್ಪತ್ತೈದು ಮಂದಿ ಜನರನ್ನು ನೋಡಿದೆನು. ಅವರಲ್ಲಿ ಅಜ್ಜೂರನ ಮಗನಾದ ಯಾಜನ್ಯನನ್ನು, ಬೆನಾಯನ ಮಗನಾದ ಪೆಲತ್ಯನನ್ನು ನಾನು ನೋಡಿದೆನು. ಅವರಿಬ್ಬರು ಜನರಿಗೆ ನಾಯಕರಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 11:1
23 ತಿಳಿವುಗಳ ಹೋಲಿಕೆ  

ಅನಂತರ ದೇವರಾತ್ಮರು, ದೇವರ ಆತ್ಮರಿಂದಾದ ದರ್ಶನದಲ್ಲಿ ನನ್ನನ್ನು ಬಾಬಿಲೋನಿಯರ ದೇಶಕ್ಕೆ ಸೆರೆಯವರ ಬಳಿಗೆ ಎತ್ತಿಕೊಂಡು ಹೋದರು. ಆಗ ನಾನು ನೋಡಿದ ದರ್ಶನವು ನನ್ನಿಂದ ಮೇಲೆ ಹೋಯಿತು.


ನಾನು ಪ್ರವಾದಿಸುತ್ತಿರುವಾಗ, ಬೆನಾಯನ ಮಗನಾದ ಪೆಲಟೀಯನು ಸತ್ತನು. ಆಗ ನಾನು ಮುಖ ಕೆಳಗಾಗಿ ಬಿದ್ದು, ಗಟ್ಟಿಯಾಗಿ ಕೂಗಿ, “ಸಾರ್ವಭೌಮ ಯೆಹೋವ ದೇವರೇ, ನೀವು ಇಸ್ರಾಯೇಲಿನಲ್ಲಿ ಉಳಿದವರನ್ನು ಪೂರ್ಣವಾಗಿ ಮುಗಿಸಿಬಿಡುತ್ತೀರೋ?” ಎಂದು ಹೇಳಿದನು.


ಆಗ ಅವನು ನನ್ನನ್ನು ಯೆಹೋವ ದೇವರ ಆಲಯದ ಒಳಗಿನ ಅಂಗಳಕ್ಕೆ ಕರೆದುಕೊಂಡು ಬಂದನು. ಇಗೋ, ಯೆಹೋವ ದೇವರ ಮಂದಿರದ ಬಾಗಿಲಲ್ಲಿ ದ್ವಾರಾಂಗಳಕ್ಕೂ, ಬಲಿಪೀಠಕ್ಕೂ ಮಧ್ಯದಲ್ಲಿ ಸುಮಾರು ಇಪ್ಪತ್ತೈದು ಮಂದಿಯು ಯೆಹೋವ ದೇವರ ಮಂದಿರಕ್ಕೆ ಬೆನ್ನುಹಾಕಿ, ಪೂರ್ವದಿಕ್ಕಿನ ಕಡೆಗೆ ತಮ್ಮ ಮುಖಗಳನ್ನಿಟ್ಟು, ಸೂರ್ಯನಮಸ್ಕಾರ ಮಾಡುತ್ತಿದ್ದರು.


ಕೈಯ ಹಾಗಿರುವ ಹಸ್ತವನ್ನು ಚಾಚಿ, ನನ್ನ ತಲೆಯ ಕೂದಲಿನಿಂದ ನನ್ನನ್ನು ಹಿಡಿದನು. ಆಗ ದೇವರಾತ್ಮರು ದೇವದರ್ಶನದಲ್ಲಿ ಯೆರೂಸಲೇಮಿನ ಉತ್ತರದ ಕಡೆಗೆ ಎದುರಾಗಿರುವ ಒಳ ಅಂಗಳದ ಕಡೆಗೆ, ರೋಷಗೊಳಿಸುವ ವಿಗ್ರಹವು ಇದ್ದಲ್ಲಿಗೆ ನನ್ನನ್ನು ಎತ್ತಿಕೊಂಡು ಹೋದರು.


ಹೀಗೆ ದೇವರಾತ್ಮರು ನನ್ನನ್ನು ಎತ್ತಿಕೊಂಡು ಹೋದರು. ನಾನು ಕಹಿತನ ಮತ್ತು ಕೋಪದ ಆತ್ಮದಿಂದ ಮುನ್ನಡೆದೆನು. ಆದರೆ ಯೆಹೋವ ದೇವರ ಕೈ ನನ್ನ ಮೇಲೆ ಬಲವಾಗಿತ್ತು.


ಆಮೇಲೆ ದೇವರಾತ್ಮರು ನನ್ನನ್ನು ಎತ್ತಿಕೊಂಡು ಹೋದರು. ಮಹಿಮೆಯಿಂದ ಕೂಡಿದ ಯೆಹೋವ ದೇವರ ಮಹಿಮೆಯು ಅವರ ವಾಸಸ್ಥಾನದಲ್ಲಿ ಸ್ತೋತ್ರವಾಗಲಿ ಎಂಬ ಮಹಾಶಬ್ದವು ನನ್ನ ಹಿಂದೆ ಕೇಳಿಸಿತು.


ನಾನು ಕರ್ತ ಯೇಸುವಿನ ದಿನದಲ್ಲಿ ಆತ್ಮಭರಿತನಾಗಿರಲು ನನ್ನ ಹಿಂದೆ ತುತೂರಿಯ ಶಬ್ದದಂತಿರುವ ಮಹಾಧ್ವನಿಯನ್ನು ಕೇಳಿದೆನು.


ಅವರು ನೀರಿನಿಂದ ಹೊರಗೆ ಬಂದಾಗ, ತಕ್ಷಣವೇ ಕರ್ತದೇವರ ಆತ್ಮರು ಫಿಲಿಪ್ಪನನ್ನು ತೆಗೆದುಕೊಂಡು ಹೋದರು. ಆಮೇಲೆ ಕಂಚುಕಿಯು ಫಿಲಿಪ್ಪನನ್ನು ಪುನಃ ಕಾಣಲಿಲ್ಲ. ಕಂಚುಕಿಯು ಸಂತೋಷಪಡುತ್ತಾ ತನ್ನ ಮಾರ್ಗದಲ್ಲಿ ಹೊರಟುಹೋದನು.


ಯೆಹೂದದ ನಾಯಕರು ಮೇರೆಗಳನ್ನು ಸರಿಸುವವರ ಹಾಗೆ ಇದ್ದರು. ಅವರ ಮೇಲೆ, ನೀರಿನ ಪ್ರವಾಹದಂತೆ ನನ್ನ ಕೋಪವನ್ನು ಸುರಿಸುವೆನು.


ಆಮೇಲೆ, ಆ ಮನುಷ್ಯನು ನನ್ನನ್ನು ದೇವಾಲಯಕ್ಕೆ ಕರೆತಂದು ಕಂಬಗಳನ್ನು ಎರಡೂ ಕಡೆಯಲ್ಲಿ ಸುಮಾರು 3.2 ಮೀಟರ್ ಎಂದು ಅಳೆದನು. ಇದೇ ಆ ಗುಡಾರದ ಉದ್ದಗಲವಾಗಿತ್ತು.


ಯೆಹೋವ ದೇವರ ಕೈ ನನ್ನ ಮೇಲೆ ಇತ್ತು; ಅದು ಆತನ ಆತ್ಮದ ಮೂಲಕ ನನ್ನನ್ನು ಹೊರಗೆ ತಂದು ಪೂರ್ತಿಯಾಗಿ ಎಲುಬುಗಳು ತುಂಬಿರುವ ಕಣಿವೆಯಲ್ಲಿ ಇಳಿಸಿತು.


ಅಲ್ಲಿಯ ಪ್ರಧಾನರು ಸುಲಿಗೆಗಾಗಿ ರಕ್ತ ಸುರಿಸಿ, ಪ್ರಾಣಗಳನ್ನು ನುಂಗುವ ಹಾಗೆ ಬೇಟೆಯ ತೋಳಗಳಂತಿದ್ದಾರೆ.


ನಾನು ನೋಡುವಾಗಲೇ ಕೆರೂಬಿಯರು ತಮ್ಮ ರೆಕ್ಕೆಗಳನ್ನು ಎತ್ತಿಕೊಂಡು, ಭೂಮಿಯನ್ನು ಬಿಟ್ಟು ಮೇಲಕ್ಕೇರಿ ಹೋದರು. ಅವು ಹೊರಟಾಗ, ಚಕ್ರಗಳೂ ಅದರ ಸಂಗಡ ಇದ್ದವು. ಅವರು ಯೆಹೋವ ದೇವರ ಆಲಯದ ಪೂರ್ವದಿಕ್ಕಿನ ಬಾಗಿಲಿನ ದ್ವಾರದ ಬಳಿಯಲ್ಲಿ ನಿಂತಿದ್ದರು. ಇಸ್ರಾಯೇಲಿನ ದೇವರ ಮಹಿಮೆಯು ಅವರ ಮೇಲೆ ಇತ್ತು.


ನಿನ್ನ ಪ್ರಭುಗಳು ಎದುರುಬೀಳುವವರೂ, ಕಳ್ಳರ ಜೊತೆಗಾರರೂ ಆಗಿದ್ದಾರೆ. ಪ್ರತಿಯೊಬ್ಬನೂ ಲಂಚ ಪ್ರಿಯನೂ, ಬಹುಮಾನಗಳನ್ನು ಅಪೇಕ್ಷಿಸುವವನೂ ಆಗಿದ್ದಾನೆ. ಅವರು ಅನಾಥರಿಗೆ ನ್ಯಾಯತೀರಿಸರು, ಇಲ್ಲವೆ ವಿಧವೆಯರ ವ್ಯಾಜ್ಯವು ಅವರ ಬಳಿಗೆ ಬರುವುದಿಲ್ಲ.


ಸೊದೋಮಿನ ಅಧಿಪತಿಗಳೇ, ನೀವು ಯೆಹೋವ ದೇವರ ಮಾತನ್ನು ಕೇಳಿರಿ. ಗೊಮೋರದ ಪ್ರಜೆಗಳೇ! ನಮ್ಮ ದೇವರ ನಿಯಮಕ್ಕೆ ಕಿವಿಗೊಡಿರಿ.


ಆದರೆ ಬಾಬಿಲೋನಿನ ಅರಸನು ಗೆದಲ್ಯನನ್ನು ರಾಜ್ಯಪಾಲನಾಗಿ ಮಾಡಿದ್ದಾನೆಂಬ ಸುದ್ದಿಯನ್ನು ಕೇಳಿದ ಮೇಲೆ, ಉಳಿದಿದ್ದ ಯೆಹೂದ ಸೇನಾಧಿಪತಿಗಳೂ ಅವರ ಜನರೂ, ನೆತನ್ಯನ ಮಗ ಇಷ್ಮಾಯೇಲನೂ, ಕಾರೇಹನ ಮಗ ಯೋಹಾನಾನ್, ನೆಟೋಫದವನಾದ ತನ್ಹುಮೆತನ ಮಗ ಸೆರಾಯ್, ಮಾಕಾತ್ಯರಲ್ಲಿ ಒಬ್ಬನ ಮಗ ಯಾಜನ್ಯ, ಇವರೆಲ್ಲರೂ ತಮ್ಮ ಜನರಸಹಿತವಾಗಿ ಮಿಚ್ಪದಲ್ಲಿದ್ದ ಗೆದಲ್ಯನ ಬಳಿಗೆ ಬಂದರು.


ಇದಲ್ಲದೆ ಅವರು ಅವನಿಗೆ, “ಇಗೋ, ನಿನ್ನ ಸೇವಕರ ಸಂಗಡ ಐವತ್ತು ಮಂದಿ ಬಲಿಷ್ಠರಾದವರಿದ್ದಾರೆ. ಅವರು ಹೋಗಿ ನಿನ್ನ ಯಜಮಾನನನ್ನು ಹುಡುಕಲು ಅಪ್ಪಣೆ ಆಗಲಿ. ಒಂದು ವೇಳೆ ಯೆಹೋವ ದೇವರ ಆತ್ಮರು ಅವನನ್ನು ಎತ್ತಿಕೊಂಡು ಹೋಗಿ ಬೆಟ್ಟದ ಮೇಲಾದರೂ, ತಗ್ಗಿನಲ್ಲಾದರೂ ಇಟ್ಟಿರಬಹುದು,” ಎಂದರು. ಅದಕ್ಕೆ ಅವನು, “ಕಳುಹಿಸಬೇಡಿರಿ,” ಎಂದನು.


ನಾನು ನಿನ್ನನ್ನು ಬಿಟ್ಟು ಹೋಗುವಾಗ, ಯೆಹೋವ ದೇವರ ಆತ್ಮರು ನಾನರಿಯದ ಸ್ಥಳಕ್ಕೆ ನಿನ್ನನ್ನು ಒಯ್ಯುವರು. ನಾನು ಬಂದು ಅಹಾಬನಿಗೆ ತಿಳಿಸಿದಾಗ, ಅವನು ನಿನ್ನನ್ನು ಕಾಣದೆ ಹೋದರೆ ನನ್ನನ್ನು ಕೊಂದುಹಾಕುವನು. ಆದರೆ ನಿನ್ನ ಸೇವಕನಾದ ನಾನು ನನ್ನ ಚಿಕ್ಕಂದಿನಿಂದ ಯೆಹೋವ ದೇವರನ್ನು ಆರಾಧಿಸುತ್ತೇನೆ.


ಅವುಗಳ ಮುಖಗಳ ರೂಪವು ನಾನು ಕೆಬಾರ್ ನದಿಯ ಬಳಿಯಲ್ಲಿ ನೋಡಿದ ಆ ಮುಖಗಳ ಹಾಗೆ ಇತ್ತು. ಅವರಲ್ಲಿ ಪ್ರತಿಯೊಬ್ಬರೂ ನೇರವಾಗಿ ಹೋಗುತ್ತಿದ್ದರು.


ಆಮೇಲೆ ಅವನು ಪೂರ್ವದಿಕ್ಕಿಗೆ ಅಭಿಮುಖವಾಗಿರುವ ಬಾಗಿಲಿಗೆ ಬಂದು, ಅದರ ಮೆಟ್ಟಲುಗಳನ್ನು ಹತ್ತಿ ಆ ಬಾಗಿಲಿನ ಹೊಸ್ತಿಲನ್ನು ಅಳೆದನು, ಅದು ಒಂದೇ ಕೋಲು ಅಗಲವಾಗಿತ್ತು. ಅಗಲವಾದ ಹೊಸ್ತಿಲಿನ ಬಾಗಿಲೂ ಅಲ್ಲಿ ಇತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು