Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 1:4 - ಕನ್ನಡ ಸಮಕಾಲಿಕ ಅನುವಾದ

4 ನಾನು ಕಂಡ ದರ್ಶನ ಹೀಗಿತ್ತು: ಇಗೋ, ಉತ್ತರ ದಿಕ್ಕಿನಿಂದ ಬಿರುಗಾಳಿ ಬೀಸಿತು. ಎಡೆಬಿಡದೆ ಝಗಝಗಿಸುವ ಜ್ವಾಲೆಯಿಂದ ಕೂಡಿದ ಮಹಾ ಮೇಘವೊಂದು ಕಾಣಿಸಿತು. ಅದರ ಸುತ್ತಲೂ ಮಿಂಚು ಹೊಳೆಯಿತು. ಅದರ ನಡುವೆ ಜ್ವಾಲೆಯ ಮಧ್ಯೆ ಹೊಳೆಯುವ ಲೋಹ ಬೆಳಗಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಆಗ ನಾನು ನೋಡಲಾಗಿ; ಇಗೋ, ಉತ್ತರ ದಿಕ್ಕಿನಿಂದ ಬಿರುಗಾಳಿಯು ಬೀಸಿತು, ಎಡೆಬಿಡದೆ ಝಗಝಗಿಸುವ ಜ್ವಾಲೆಯುಳ್ಳ ಮಹಾಮೇಘವು ಕಾಣಿಸಿತು. ಅದರ ಸುತ್ತಲೂ ಮಿಂಚು ಹೊಳೆಯಿತು, ಅದರ ನಡುವೆ, ಆ ಜ್ವಾಲೆಯ ಮಧ್ಯೆ, ಸುವರ್ಣದಂಥ ಕಾಂತಿಯು ಉಂಟಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ನಾನು ಕಂಡ ದರ್ಶನ ಹೀಗಿತ್ತು: ಇಗೋ, ಉತ್ತರ ದಿಕ್ಕಿನಿಂದ ಬಿರುಗಾಳಿ ಬೀಸಿತು. ಎಡೆಬಿಡದೆ ಝಗಝಗಿಸುವ ಜ್ವಾಲೆಯಿಂದ ಕೂಡಿದ ಮಹಾ ಮೇಘವೊಂದು ಕಾಣಿಸಿತು. ಅದರ ಸುತ್ತಲೂ ಮಿಂಚು ಹೊಳೆಯಿತು. ಅದರ ನಡುವೆ, ಆ ಜ್ವಾಲೆಯ ಮಧ್ಯೆ, ಸುವರ್ಣದಂಥ ಕಾಂತಿ ಬೆಳಗಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಇಗೋ, ನಾನು ನೋಡಿದೆನು; ಬಡಗಲಿಂದ ಬಿರುಗಾಳಿಯು ಬೀಸಿತು, ಎಡೆಬಿಡದೆ ಝಗಝಗಿಸುವ ಜ್ವಾಲೆಯುಳ್ಳ ಮಹಾಮೇಘವು ಕಾಣಿಸಿತು. ಅದರ ಸುತ್ತಲು ವಿುಂಚು ಹೊಳೆಯಿತು, ಅದರ ನಡುವೆ, ಆ ಜ್ವಾಲೆಯ ಮಧ್ಯೆ, ಸುವರ್ಣಕಾಂತಿಯಂಥ ಕಾಂತಿಯು ಉಂಟಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಉತ್ತರ ದಿಕ್ಕಿನಿಂದ ಒಂದು ದೊಡ್ಡ ಬಿರುಗಾಳಿ ಬರುವದನ್ನು ಯೆಹೆಜ್ಕೇಲನಾದ ನಾನು ನೋಡಿದೆನು. ಬಿರುಗಾಳಿಯೊಡನೆ ಕೂಡಿದ ಒಂದು ದೊಡ್ಡ ಮೋಡವು ಅಲ್ಲಿತ್ತು. ಅದರಿಂದ ಬೆಂಕಿಯು ಪ್ರಜ್ವಲಿಸುತ್ತಿತ್ತು. ಮೋಡದ ಸುತ್ತಲೂ ಬೆಳಕಿತ್ತು. ಬೆಂಕಿಯ ಮಧ್ಯದಲ್ಲಿ ಕಾದಲೋಹದಂತೆ ಹೊಳೆಯುತ್ತಿದ್ದ ಏನನ್ನೊ ಕಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 1:4
35 ತಿಳಿವುಗಳ ಹೋಲಿಕೆ  

ಸೊಂಟದ ಹಾಗೆ ತೋರುವ ಆತನ ಮಧ್ಯಭಾಗದಿಂದ ಮೇಲ್ಗಡೆ ಲೋಹವು ಥಳಥಳಿಸುತ್ತದೋ, ಬೆಂಕಿಯು ಆ ರೂಪದೊಳಗೆಲ್ಲಾ ಪ್ರಜ್ವಲಿಸುತ್ತದೋ ಎಂಬಂತಿರುವ ಅದ್ಭುತ ಕಾಂತಿಯನ್ನು ನಾನು ಕಂಡೆನು.


ಇಗೋ, ನಾನು ನೋಡುತ್ತಿದ್ದಂತೆ ಬೆಂಕಿ ಉರಿಯುತ್ತದೋ ಎಂಬಂತೆ ಮನುಷ್ಯಾಕೃತಿಯೊಂದು ಕಾಣಿಸಿತು. ಸೊಂಟದ ಕೆಳಗಿನ ರೂಪವು ಬೆಂಕಿಯಂತಿತ್ತು ಮತ್ತು ಅವನ ಸೊಂಟದ ಮೇಲಿನ ಭಾಗವು ಹೊಳೆಯುವ ಲೋಹದಂತೆ ಪ್ರಕಾಶಮಾನವಾಗಿತ್ತು.


ಇಗೋ, ಯೆಹೋವ ದೇವರ ಬಿರುಗಾಳಿಯು ಉಗ್ರವಾಗಿ ಹೊರಟಿದೆ. ಅಘೋರವಾದ ಆ ಬಿರುಗಾಳಿಯು ದುಷ್ಟರ ತಲೆಯ ಮೇಲೆ ಕಠಿಣವಾಗಿ ಬೀಳುವುದು


ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ಜನಾಂಗದಿಂದ ಜನಾಂಗಕ್ಕೆ ಕೇಡು ಹೊರಡುವುದು. ಭೂಮಿಯ ಮೇರೆಗಳಿಂದ ಮಹಾ ಬಿರುಗಾಳಿ ಏಳುವುದು.”


ಸಮುದ್ರತೀರದ ಮರುಭೂಮಿಯ ವಿಷಯವಾದ ಪ್ರವಾದನೆ: ದಕ್ಷಿಣ ಸೀಮೆಯಲ್ಲಿ ಬೀಸುವ ಬಿರುಗಾಳಿ ದಾಟಿ ಹೋಗುವಂತೆ ಆಕ್ರಮಣಕಾರರು ಮರುಭೂಮಿ ಕಡೆಯಿಂದ ಭಯಂಕರವಾದ ದೇಶದಿಂದ ಬರುತ್ತಾರೆ.


ಅವರ ಪಾದಗಳು ಕುಲುಮೆಯಲ್ಲಿ ಹೊಳೆಯುವ ತಾಮ್ರದಂತೆಯೂ ಅವರ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು.


ಏಕೆಂದರೆ ನಮ್ಮ, “ದೇವರು ದಹಿಸುವ ಅಗ್ನಿಯಾಗಿದ್ದಾರೆ.”


ಇಗೋ, ನಾನು ಕಳುಹಿಸಿ ಉತ್ತರ ದಿಕ್ಕಿನ ಗೋತ್ರಗಳೆಲ್ಲವನ್ನೂ, ನನ್ನ ಸೇವಕನಾದ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನನ್ನೂ ತೆಗೆದುಕೊಂಡು, ಈ ದೇಶಕ್ಕೆ ವಿರೋಧವಾಗಿಯೂ, ಅವರ ನಿವಾಸಿಗಳಿಗೆ ವಿರೋಧವಾಗಿಯೂ ಸುತ್ತಲಿರುವ ಈ ಎಲ್ಲಾ ಜನಾಂಗಗಳಿಗೆ ವಿರೋಧವಾಗಿಯೂ ತರಿಸಿ, ಅವರನ್ನು ಸಂಪೂರ್ಣ ನಾಶಮಾಡಿ ಅವರನ್ನು ಭಯಕ್ಕೂ, ಪರಿಹಾಸ್ಯಕ್ಕೂ ಗುರಿಮಾಡಿ ನಿತ್ಯ ನಾಶಮಾಡುವೆನು.


“ಓ ಬೆನ್ಯಾಮೀನನ ಮಕ್ಕಳೇ! ನಿಮ್ಮ ಸುರಕ್ಷತೆಗಾಗಿ ಯೆರೂಸಲೇಮಿನಿಂದ ಓಡಿಹೋಗಿರಿ, ತೆಕೋವದಲ್ಲಿ ತುತೂರಿ ಊದಿರಿ; ಬೇತ್ ಹಕ್ಕೆರೆಮಿನಲ್ಲಿ ಧ್ವಜವನ್ನೆತ್ತಿರಿ. ಏಕೆಂದರೆ ಕೇಡೂ ದೊಡ್ಡ ನಾಶವೂ ಉತ್ತರದ ಕಡೆಯಿಂದ ತೋರುತ್ತವೆ.


ಚೀಯೋನಿನ ಕಡೆಗೆ ಧ್ವಜವನ್ನೆತ್ತಿರಿ; ವಿಳಂಬವಿಲ್ಲದೆ ಸುರಕ್ಷತೆಗಾಗಿ ಓಡಿಹೋಗಿರಿ. ಏಕೆಂದರೆ ನಾನು ಉತ್ತರದಿಂದ ಕೇಡನ್ನೂ, ದೊಡ್ಡ ನಾಶವನ್ನೂ ತರುತ್ತೇನೆ.”


ಈಜಿಪ್ಟಿನವರ ವಿಷಯವಾದ ಪ್ರವಾದನೆ: ಇಗೋ, ಯೆಹೋವ ದೇವರು ವೇಗವುಳ್ಳ ಮೇಘವನ್ನು ಹತ್ತಿಕೊಂಡು ಈಜಿಪ್ಟಿಗೆ ಬರುತ್ತಾರೆ. ಅವರು ಸಮ್ಮುಖರಾದಾಗ ಈಜಿಪ್ಟಿನ ವಿಗ್ರಹಗಳು ನಡುಗುವುವು. ಈಜಿಪ್ಟಿನವರ ಹೃದಯಗಳು ಅದರ ಮಧ್ಯೆ ಭಯದಿಂದ ಕರಗುವುವು.


ನಮ್ಮ ದೇವರು ಬರುತ್ತಾರೆ, ಎಷ್ಟು ಮಾತ್ರವೂ ಮೌನವಾಗಿರುವುದಿಲ್ಲ. ಬೆಂಕಿಯು ಅವರ ಮುಂದೆ ಪ್ರಜ್ವಲಿಸುವುದು; ಅವರ ಸುತ್ತಲೂ ದೊಡ್ಡ ಬಿರುಗಾಳಿಯು ಬೀಸುವುದು.


ತುತೂರಿ ಊದುವವರೂ, ಸಂಗೀತಗಾರರೂ ಯೆಹೋವ ದೇವರನ್ನು ಕೊಂಡಾಡುತ್ತಾ, ಹೊಗಳುತ್ತಾ ಧ್ವನಿ ಎತ್ತಿ ಸ್ತೋತ್ರ ಮಾಡುವಂತೆ ತುತೂರಿಗಳೂ, ತಾಳಗಳೂ ಮೊದಲಾದ ಗೀತ ವಾದ್ಯಗಳಿಂದ ಕೀರ್ತಿಸಿದರು: “ಯೆಹೋವ ದೇವರು ಒಳ್ಳೆಯವರು, ಅವರ ಕೃಪೆಯು ಯುಗಯುಗಕ್ಕೆ ಇರುವುದು,” ಎಂದು ಯೆಹೋವ ದೇವರನ್ನು ಹೊಗಳುತ್ತಿದ್ದ ಹಾಗೆ, ಯೆಹೋವ ದೇವರ ಆಲಯವು ಮೇಘದಿಂದ ತುಂಬಿತು.


ಆಗ ಯೆಹೋವ ದೇವರು, “ನೀನು ಹೊರಗೆ ಬಂದು ಬೆಟ್ಟದ ಮೇಲೆ ನನ್ನ ಮುಂದೆ ನಿಲ್ಲು. ಏಕೆಂದರೆ ನಾನು ನಿನ್ನ ಮುಂದೆ ಹಾದು ಹೋಗುತ್ತಿದ್ದೇನೆ,” ಎಂದನು. ಯೆಹೋವ ದೇವರ ಮುಂದೆ ಬೆಟ್ಟಗಳನ್ನು ಭೇದಿಸಿ, ಗುಡ್ಡಗಳನ್ನು ಒಡೆಯುವಂಥ ಮಹಾಬಲವಾದ ಗಾಳಿ, ಆ ಗಾಳಿಯಲ್ಲಿ ಯೆಹೋವ ದೇವರು ಇರಲಿಲ್ಲ. ಗಾಳಿಯ ತರುವಾಯ ಭೂಕಂಪವು, ಆ ಭೂಕಂಪದಲ್ಲಿ ಯೆಹೋವ ದೇವರು ಇರಲಿಲ್ಲ.


ಆದ್ದರಿಂದ ಸುಣ್ಣ ಹಚ್ಚುತ್ತಿರುವವನಿಗೆ ಅದು ಬೀಳುವುದೆಂದು ಹೇಳು. ಅಲ್ಲಿ ವಿಪರೀತ ಮಳೆ ಬರುವುದು ಮತ್ತು ದೊಡ್ಡ ಕಲ್ಮಳೆಯು ಬೀಳುವುದು. ಬಿರುಗಾಳಿಯು ಅದನ್ನು ಸೀಳಿಬಿಡುವುದು.


“ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಅದನ್ನು ನನ್ನ ರೋಷದಲ್ಲಿ ಬಿರುಗಾಳಿಯಿಂದ ಸೀಳಿಬಿಡುವೆನು. ಅದನ್ನು ನಾಶಪಡಿಸುವ ಹಾಗೆ ನನ್ನ ಕೋಪದಿಂದ ವಿಪರೀತ ಮಳೆಯೂ, ನನ್ನ ಉರಿಯಿಂದ ಕಲ್ಮಳೆಯ ಕಲ್ಲುಗಳು ಸುರಿಯುವುವು.


ನಾನು ಕಂಡ ದರ್ಶನವು, ಅವನು ಪಟ್ಟಣವನ್ನು ನಾಶಮಾಡಲು ಬಂದಾಗ ನಾನು ನೋಡಿದ ದೃಷ್ಟಿಯಂತೆ ಮತ್ತು ನಾನು ಕೆಬಾರ್ ನದಿಯ ಬಳಿಯಲ್ಲಿ ನೋಡಿದ ದರ್ಶನಗಳಂತೆ ಮತ್ತು ಆಗ ನಾನು ಬೋರಲು ಬಿದ್ದೆನು.


ಕಪ್ಪು ಕುದುರೆಗಳ ರಥ, ಉತ್ತರ ದೇಶಕ್ಕೆ ಹೊರಟಿತು. ಬಿಳಿ ಕುದುರೆಗಳು ಪಶ್ಚಿಮಕ್ಕೆ ಹಿಂದೆ ಹೋಯಿತು. ಮಚ್ಚೆ ಮಚ್ಚೆಯ ಕುದುರೆಯ ರಥ ದಕ್ಷಿಣಕ್ಕೆ ಹೊರಟಿತು.”


ಸಿಡಿಲಿನ ಆರ್ಭಟದೊಂದಿಗೆ ಕಠಿಣವಾದ ಆಲಿಕಲ್ಲಿನ ಮಳೆಯೂ ಸುರಿಯಿತು. ಈಜಿಪ್ಟ್ ಒಂದು ರಾಷ್ಟ್ರವಾದಂದಿನಿಂದ ಅಂಥ ಘೋರವಾದ ಆಲಿಕಲ್ಲಿನ ಮಳೆಯೂ ಆ ದೇಶದಲ್ಲಿ ಆಗಿರಲಿಲ್ಲ.


ಅವರು ನಡೆಯುತ್ತಾ ಬಂದು ಮಾತನಾಡಿಕೊಂಡಿರುವಾಗ, ಬೆಂಕಿಯ ರಥವೂ ಬೆಂಕಿಯ ಕುದುರೆಗಳೂ ಅವರಿಬ್ಬರನ್ನೂ ಬೇರೆಯಾಗಿ ಮಾಡಿದವು. ಎಲೀಯನು ಬಿರುಗಾಳಿಯಲ್ಲಿ ಆಕಾಶಕ್ಕೆ ಏರಿಹೋದನು.


ಆಗ ಯೆಹೋವ ದೇವರು ಬಿರುಗಾಳಿಯೊಳಗಿಂದ ಯೋಬನಿಗೆ ಹೀಗೆಂದು ಉತ್ತರಕೊಟ್ಟರು:


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು