Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಹೆಜ್ಕೇಲನು 1:23 - ಕನ್ನಡ ಸಮಕಾಲಿಕ ಅನುವಾದ

23 ಆ ಗಗನ ಮಂಡಲದ ಕೆಳಗೆ ಆ ಜೀವಿಗಳ ರೆಕ್ಕೆಗಳು ಒಂದರ ಕಡೆಗೆ ಒಂದರಂತೆ ಚಾಚಿದವು. ಇದಲ್ಲದೆ ಒಂದೊಂದು ಜೀವಿಗೆ ದೇಹವನ್ನು ಮುಚ್ಚಿಕೊಳ್ಳುವ ಎರಡೆರಡು ರೆಕ್ಕೆಗಳಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಅದರ ಕೆಳಗೆ ಜೀವಿಗಳ ರೆಕ್ಕೆಗಳು ನೇರವಾಗಿ ಚಾಚಲ್ಪಟ್ಟು ಒಂದಕ್ಕೊಂದು ತಗಲುತ್ತಿದ್ದವು; ಇದಲ್ಲದೆ ಒಂದೊಂದು ಜೀವಿಗೆ ದೇಹವನ್ನು ಮುಚ್ಚಿಕೊಳ್ಳುವ ಎರಡೆರಡು ರೆಕ್ಕೆಗಳಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಅದರ ಕೆಳಗೆ ಆ ಜೀವಿಗಳ ರೆಕ್ಕೆಗಳು ಮಟ್ಟಸವಾಗಿ ಚಾಚಲ್ಪಟ್ಟು ಒಂದಕ್ಕೊಂದು ತಗಲುತ್ತಿದ್ದವು; ಇದಲ್ಲದೆ ಒಂದೊಂದು ಜೀವಿಗೆ ದೇಹವನ್ನು ಮುಚ್ಚಿಕೊಳ್ಳುವ ಎರಡೆರಡು ರೆಕ್ಕೆಗಳಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಅದರ ಕೆಳಗೆ ಜೀವಿಗಳ ರೆಕ್ಕೆಗಳು ಮಟ್ಟಸವಾಗಿ ಚಾಚಲ್ಪಟ್ಟು ಒಂದಕ್ಕೊಂದು ತಗಲುತ್ತಿದ್ದವು; ಇದಲ್ಲದೆ ಒಂದೊಂದು ಜೀವಿಗೆ ದೇಹವನ್ನು ಮುಚ್ಚಿಕೊಳ್ಳುವ ಎರಡೆರಡು ರೆಕ್ಕೆಗಳಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಈ ಬೋಗುಣಿಯಡಿಯಲ್ಲಿ ಒಂದೊಂದು ಜೀವಿಯು ತನ್ನ ಎರಡು ರೆಕ್ಕೆಗಳನ್ನು ಚಾಚಿಕೊಂಡು ಮತ್ತೊಂದು ಜೀವಿಯನ್ನು ತಾಕುತ್ತಿತ್ತು. ಒಂದೊಂದು ಜೀವಿಯ ಮತ್ತೆರಡು ರೆಕ್ಕೆಗಳು ಅದರ ದೇಹವನ್ನು ಆವರಿಸಿಕೊಂಡಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಹೆಜ್ಕೇಲನು 1:23
6 ತಿಳಿವುಗಳ ಹೋಲಿಕೆ  

ಅದೇ ರೀತಿಯಾಗಿ, ನಿಮಗೆ ಆಜ್ಞಾಪಿಸಿದವುಗಳನ್ನೆಲ್ಲಾ ನೀವು ಮಾಡಿದ ಮೇಲೆ, ‘ನಾವು ಅಯೋಗ್ಯರಾದ ಆಳುಗಳಷ್ಟೇ, ನಾವು ಮಾಡಬೇಕಾದ ಕರ್ತವ್ಯವನ್ನೇ ಮಾಡಿದ್ದೇವೆ ಎಂದು ನೀವು ಹೇಳಿರಿ,’ ” ಎಂದು ಹೇಳಿದರು.


ಅವು ಚಲಿಸುವಾಗ, ನಾನು ಅವುಗಳ ರೆಕ್ಕೆಗಳ ಶಬ್ದವನ್ನು ಕೇಳಿದೆನು. ಅದು ಜಲಪ್ರವಾಹದ ಶಬ್ದದಂತೆಯೂ, ಸರ್ವಶಕ್ತರ ಧ್ವನಿಯ ಹಾಗೆಯೂ, ಸೈನ್ಯದ ಶಬ್ದದ ಹಾಗೆಯೂ ಇತ್ತು. ಅವು ನಿಲ್ಲುವಾಗ ಅವುಗಳ ರೆಕ್ಕೆಗಳನ್ನು ಕೆಳಗೆ ಇಳಿಸುತ್ತಿದ್ದವು.


ಅವರು ಪರಿಶುದ್ಧರ ಸಭೆಯಲ್ಲಿ ಭಯಭಕ್ತಿಗೆ ಪಾತ್ರರಾದ ದೇವರು. ತಮ್ಮ ಎಲ್ಲಾ ಪರಿವಾರದವರಿಗಿಂತ ಅವರು ಅತಿಶಯವಾದವರು.


ತಮ್ಮ ಸೇವಕರಲ್ಲಿ ದೇವರು ನಂಬದೆ, ತಮ್ಮ ದೂತರಲ್ಲಿಯೇ ತಪ್ಪು ಕಂಡಿರಲು,


ಪ್ರತಿಯೊಂದಕ್ಕೂ ನಾಲ್ಕು ಮುಖಗಳು ಮತ್ತು ನಾಲ್ಕು ರೆಕ್ಕೆಗಳು ಇದ್ದವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು