Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 9:3 - ಕನ್ನಡ ಸಮಕಾಲಿಕ ಅನುವಾದ

3 ನೀವು ಜನಾಂಗವನ್ನು ವೃದ್ಧಿಗೊಳಿಸಿದ್ದೀರಿ ಮತ್ತು ಸಂತೋಷವನ್ನು ಹೆಚ್ಚಿಸಿದ್ದೀರಿ. ಸುಗ್ಗಿ ಕಾಲದ ಸಂತೋಷದಂತೆಯೂ, ಕೊಳ್ಳೆಯನ್ನು ಹಂಚಿಕೊಳ್ಳುವಾಗ ಉಲ್ಲಾಸಿಸುವ ಹಾಗೆಯೂ ನಿಮ್ಮ ಮುಂದೆ ಸಂತೋಷಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ನೀನು ಪ್ರಜೆಗಳನ್ನು ವೃದ್ಧಿಗೊಳಿಸಿದ್ದೀ. ಅವರಿಗೆ ಸಂತೋಷವನ್ನು ಹೆಚ್ಚಿಸಿದ್ದೀ. ಸುಗ್ಗಿ ಕಾಲದಲ್ಲಿ ಜನರು ಹರ್ಷಿಸುವ ಹಾಗೂ, ಕೊಳ್ಳೆಯನ್ನು ಹಂಚಿಕೊಳ್ಳುವವರು, ಹೆಚ್ಚಳಪಡುವವರು ನಿನ್ನ ಮುಂದೆ ಆನಂದಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ವೃದ್ಧಿಗೊಳಿಸಿರುವೆ ನೀನು ಆ ದೇಶವನು ಅಧಿಕರಿಸಿರುವೆ ಅದರ ತೋಷವನು ಸುಗ್ಗಿಕಾಲದಲಿ ಹಿಗ್ಗುವವರಂತೆ ಕೊಳ್ಳೆ ಹಂಚಿಕೊಳ್ಳುವವರಂತೆ ಹರ್ಷಿಸುವರವರು ನಿನ್ನ ಮುಂದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ನೀನು ಪ್ರಜೆಗಳನ್ನು ವೃದ್ಧಿಗೊಳಿಸಿದ್ದೀ, ಅವರಿಗೆ ಸಂತೋಷವನ್ನು ಹೆಚ್ಚಿಸಿದ್ದೀ; ಸುಗ್ಗಿಕಾಲದಲ್ಲಿ ಜನರು ಹರ್ಷಿಸುವ ಹಾಗೂ ಕೊಳ್ಳೆಯನ್ನು ಹಂಚಿಕೊಳ್ಳುವವರು ಹೆಚ್ಚಳಪಡುವ ಹಾಗೂ ನಿನ್ನ ಮುಂದೆ ಆನಂದಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ದೇವರೇ, ಆ ದೇಶವನ್ನು ನೀನು ಅಭಿವೃದ್ಧಿಪಡಿಸುವೆ. ನೀನು ಆ ಜನರನ್ನು ಸಂತೋಷಪಡಿಸುವೆ. ಅವರು ತಮ್ಮ ಸಂತಸವನ್ನು ವ್ಯಕ್ತಪಡಿಸುವರು. ಅದು ಸುಗ್ಗಿಕಾಲದಲ್ಲಿರುವ ಸಂತಸದಂತೆಯೂ ಯುದ್ಧದಲ್ಲಿ ಗಳಿಸಿದ ಕೊಳ್ಳೆಯ ಪಾಲು ದೊರೆತಾಗ ಉಂಟಾಗುವ ಸಂತಸದಂತೆಯೂ ಇರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 9:3
38 ತಿಳಿವುಗಳ ಹೋಲಿಕೆ  

ದೊಡ್ಡ ಕೊಳ್ಳೆಯನ್ನು ಕಂಡುಹಿಡಿದವರಂತೆ ನಾನು ನಿಮ್ಮ ವಾಗ್ದಾನದಲ್ಲಿ ಆನಂದಿಸುತ್ತೇನೆ.


ನೀವು ಕ್ರಿಸ್ತ ಯೇಸುವನ್ನು ನೋಡಲಿಲ್ಲವಾದರೂ ಅವರನ್ನು ಪ್ರೀತಿಸುತ್ತೀರಿ. ನೀವು ಈಗ ಅವರನ್ನು ಕಾಣದಿದ್ದರೂ ಅವರಲ್ಲಿ ನಂಬಿಕೆಯಿಟ್ಟು ವ್ಯಕ್ತಪಡಿಸಲಾಗದಂಥ ಪ್ರಭಾವವುಳ್ಳ ಸಂತೋಷದಿಂದ ಹರ್ಷಿಸುತ್ತೀರಿ.


ಜನಾಂಗವನ್ನು ಹೆಚ್ಚಿಸಿದ್ದೀರಿ. ಯೆಹೋವ ದೇವರೇ, ಜನಾಂಗವನ್ನು ಹೆಚ್ಚಿಸಿದ್ದೀರಿ. ನೀವು ಮಹಿಮೆ ಹೊಂದಿದ್ದೀರಿ. ನೀವು ದೇಶದ ಮೇರೆಗಳನ್ನೆಲ್ಲಾ ಭೂಮಿಯ ಕಟ್ಟಕಡೆಯವರೆಗೂ ವಿಸ್ತರಿಸಿದ್ದೀರಿ.


“ಯೆರೂಸಲೇಮಿನ ಸಂಗಡ ನೀವು ಸಂತೋಷಿಸಿರಿ. ಅವಳನ್ನು ಪ್ರೀತಿ ಮಾಡುವವರೆಲ್ಲಾ ಆಕೆಯೊಂದಿಗೆ ಉಲ್ಲಾಸಪಡಿರಿ. ಅವಳಿಗೋಸ್ಕರ ದುಃಖಿಸಿದವರೆಲ್ಲರೂ, ಆಕೆಯ ಸಂತೋಷಕ್ಕಾಗಿ ಆನಂದಪಡಿರಿ.


ಆದರೆ ನಾನು ಸೃಷ್ಟಿಸುವುದರ ವಿಷಯದಲ್ಲಿ ಸಂತೋಷಿಸಿ, ಎಂದೆಂದಿಗೂ ಉಲ್ಲಾಸಪಡಿರಿ. ಏಕೆಂದರೆ ಇಗೋ, ನಾನು ಯೆರೂಸಲೇಮಿನಲ್ಲಿ ಉಲ್ಲಾಸವನ್ನೂ, ನನ್ನ ಜನರಲ್ಲಿ ಸಂತೋಷವನ್ನೂ ಸೃಷ್ಟಿಸುತ್ತೇನೆ.


ಯೆಹೋವ ದೇವರು ವಿಮೋಚಿಸಿದವರು ಹಿಂದಿರುಗಿಕೊಂಡು ಶಾಶ್ವತ ಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು, ಉತ್ಸಾಹ ಧ್ವನಿಯೊಡನೆ ಚೀಯೋನಿಗೆ ಸೇರುವರು. ಅವರು ಹರ್ಷಾನಂದಗಳನ್ನು ಅನುಭವಿಸುವರು. ದುಃಖವೂ, ನಿಟ್ಟುಸಿರೂ ಓಡಿಹೋಗುವುವು.


ಇವನು ದಾವೀದನನ್ನು ಕರೆದುಕೊಂಡು ಅಲ್ಲಿಗೆ ಹೋದಾಗ, ಅವರು ಭೂಮಿಯ ಮೇಲೆ ಎಲ್ಲೆಲ್ಲಿಯೂ ಫಿಲಿಷ್ಟಿಯರ ದೇಶದಲ್ಲಿಯೂ, ಯೆಹೂದ ದೇಶದಲ್ಲಿಯೂ ವ್ಯಾಪಿಸಿಕೊಂಡು, ಸಮಸ್ತ ಕೊಳ್ಳೆ ತೆಗೆದುಕೊಂಡು ಬಂದುದರಿಂದ, ತಿಂದು ಕುಡಿದು ನಾಟ್ಯವಾಡಿಕೊಂಡಿದ್ದರು.


ಆದರೆ ಅವನಿಗಿಂತ ಬಲಿಷ್ಠನು ಅವನ ಮೇಲೆ ಬಂದು ಅವನನ್ನು ಜಯಿಸಿ, ಅವನು ಭರವಸೆಯಿಟ್ಟಿದ್ದ ಆಯುಧಗಳನ್ನು ಅವನಿಂದ ತೆಗೆದುಕೊಂಡು ತನ್ನ ಸುಲಿಗೆಯನ್ನೆಲ್ಲಾ ಹಂಚುವನು.


ಧಾನ್ಯವೂ ಹೊಸ ದ್ರಾಕ್ಷಾರಸವೂ ಸುಗ್ಗಿಕಾಲದಲ್ಲಿ ಸಮೃದ್ಧಿಯಾದಾಗ ಇರುವುದಕ್ಕಿಂತಲೂ ಅಧಿಕವಾದ ಆನಂದವನ್ನು ನೀವು ನನ್ನ ಹೃದಯದಲ್ಲಿ ಇಟ್ಟಿದ್ದೀರಿ.


ಯಾವಾಗಲೂ ಕರ್ತ ದೇವರಲ್ಲಿ ಆನಂದಿಸಿರಿ, ಆನಂದಪಡಿರಿ ಎಂದು ಮತ್ತೆ ಹೇಳುತ್ತೇನೆ.


ನಾನು ಅವರಿಗೆ ಸಿಳ್ಳುಹಾಕಿ, ಅವರನ್ನು ಕೂಡಿಸುವೆನು. ನಿಶ್ಚಯವಾಗಿ ಅವರನ್ನು ವಿಮೋಚಿಸಿದ್ದೇನೆ. ಅವರು ಹಿಂದಿನಂತೆ ಮುಂದೆಯೂ ಸಮೃದ್ಧಿಯಾಗಿರುವರು.


ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಆ ದಿವಸಗಳಲ್ಲಿ ಜನಾಂಗಗಳ ಸಮಸ್ತ ಭಾಷೆಯವರೊಳಗಿಂದ ಹತ್ತು ಮನುಷ್ಯರು ಯೆಹೂದ್ಯನಾಗಿರುವವನ ಸೆರಗನ್ನು ಹಿಡಿದು, ನಾವು ನಿಮ್ಮ ಸಂಗಡ ಬರುತ್ತೇವೆ, ಏಕೆಂದರೆ ನಿಮ್ಮ ಸಂಗಡ ದೇವರು ಇದ್ದಾರೆಂದು ಕೇಳಿದ್ದೇವೆ,” ಎಂದು ಹೇಳುವರು.


“ಆ ದಿವಸದಲ್ಲಿ ಅನೇಕ ಜನಾಂಗಗಳು ಯೆಹೋವ ದೇವರನ್ನು ಅಂಟಿಕೊಂಡು ನನ್ನ ಜನರಾಗುವರು, ನಾನು ನಿನ್ನ ಮಧ್ಯದಲ್ಲಿ ವಾಸಮಾಡುವೆನು. ಸರ್ವಶಕ್ತರಾದ ಯೆಹೋವ ದೇವರು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾರೆಂದು ತಿಳಿದುಕೊಳ್ಳುವೆ.


ಯಾಜಕರು ಹೆಚ್ಚಿದ ಹಾಗೆಲ್ಲಾ ಅವರು ನನಗೆ ವಿರೋಧವಾಗಿ ಪಾಪಮಾಡಿದ್ದಾರೆ. ಆದ್ದರಿಂದ ನಾನು ಅವರ ಮಾನವನ್ನು ಅವಮಾನವನ್ನಾಗಿ ಮಾರ್ಪಡಿಸುವೆನು.


ಏಕೆಂದರೆ ಯೆಹೋವ ದೇವರು ಹೀಗೆ ಹೇಳುತ್ತಾರೆ, “ಯಾಕೋಬನ ವಿಷಯ ಸಂತೋಷದಿಂದ ಹಾಡಿ, ಮೂಖ್ಯವಾದ ಜನಾಂಗಗಳೊಳಗೆ ಆರ್ಭಟಿಸಿರಿ. ಸಾರಿರಿ. ಸ್ತುತಿಸಿರಿ. ‘ಯೆಹೋವ ದೇವರೇ, ನಿನ್ನ ಜನರನ್ನೂ, ಇಸ್ರಾಯೇಲಿನ ಉಳಿದವರನ್ನೂ ರಕ್ಷಿಸು,’ ಎಂದು ಹೇಳಿರಿ.


ನಾನು ಯೆಹೋವ ದೇವರಲ್ಲಿ ಬಹಳವಾಗಿ ಸಂತೋಷಿಸುವೆನು. ನನ್ನ ಪ್ರಾಣವು ನನ್ನ ದೇವರಲ್ಲಿ ಉಲ್ಲಾಸಪಡುವುದು. ವರನು ಸೌಂದರ್ಯವಾಗಿ ತನ್ನನ್ನು ಶೃಂಗರಿಸುವ ಹಾಗೆಯೂ, ವಧುವು ಆಭರಣಗಳಿಂದ ತನ್ನನ್ನು ಅಲಂಕರಿಸುವ ಹಾಗೆಯೂ, ಅವನು ರಕ್ಷಣೆಯ ವಸ್ತ್ರಗಳನ್ನು ನನಗೆ ತೊಡಿಸಿದ್ದಾನೆ. ನೀತಿಯ ನಿಲುವಂಗಿಯನ್ನು ನನಗೆ ಧರಿಸುವಂತೆ ಮಾಡಿದ್ದಾನೆ.


ನಿಮ್ಮ ನಾಚಿಕೆಗೆ ಬದಲಾಗಿ ಮಾನವು ಎರಡರಷ್ಟಾಗುವುದು. ಅವಮಾನಕ್ಕೆ ಬದಲಾಗಿ ತಮ್ಮ ಪಾಲಿನಲ್ಲಿ ಹರ್ಷಿಸುವರು. ಆದ್ದರಿಂದ ತಮ್ಮ ದೇಶದಲ್ಲಿ ಎರಡರಷ್ಟು ಸ್ವಾಧೀನಮಾಡಿಕೊಳ್ಳುವರು. ನಿತ್ಯವಾದ ಸಂತೋಷವು ನಿಮಗೆ ಆಗುವುದು.


ಏಕೆಂದರೆ ನೀವು ಆನಂದದೊಡನೆ ಹೋಗುವಿರಿ, ಸಮಾಧಾನದಿಂದ ಬರುವಿರಿ. ಪರ್ವತಗಳು ಮತ್ತು ಗುಡ್ಡಗಳು ನಿಮ್ಮ ಮುಂದೆ ಹರ್ಷಧ್ವನಿಗೈಯುವವು. ಹೊಲದ ಮರಗಳೆಲ್ಲಾ ಚಪ್ಪಾಳೆ ಹೊಡೆಯುವುವು.


“ಬಂಜೆಯೇ ಹೆರದವಳೇ, ನೀನು ಹರ್ಷಧ್ವನಿಗೈ! ಪ್ರಸವವೇದನೆ ಪಡದವಳೇ, ಸ್ವರವೆತ್ತಿ ಹರ್ಷದಿಂದ ಕೂಗು! ಏಕೆಂದರೆ ಗಂಡನುಳ್ಳವಳಿಗಿಂತ ಗಂಡ ಬಿಟ್ಟವಳಿಗೆ ಮಕ್ಕಳು ಹೆಚ್ಚು,” ಎಂದು ಯೆಹೋವ ದೇವರು ಹೇಳುತ್ತಾರೆ.


ಅದು ಸಮೃದ್ಧಿಯಾಗಿ ಅರಳಿ, ಆನಂದ ಧ್ವನಿ ಎತ್ತಿ ಉಲ್ಲಾಸಿಸುವುದು. ಲೆಬನೋನಿನ ಘನತೆಯು ಮತ್ತು ಕರ್ಮೆಲ್, ಶಾರೋನಿನ ಗೌರವವು ಅದಕ್ಕೆ ಕೊಡಲಾಗುವುದು. ಅವರು ಯೆಹೋವ ದೇವರ ಮಹಿಮೆಯನ್ನು ಮತ್ತು ನಮ್ಮ ದೇವರ ಘನತೆಯನ್ನು ಕಾಣುವರು.


ಆ ದಿನದಲ್ಲಿ ಜನರು, “ಇಗೋ, ಇವರೇ ನಮ್ಮ ದೇವರು, ನಾವು ಇವರನ್ನೇ ನಂಬಿದ್ದೇವೆ. ಇವರೇ ನಮ್ಮನ್ನು ರಕ್ಷಿಸುವರು. ಇವರೇ ಯೆಹೋವ ದೇವರು, ನಾವು ಇವರನ್ನೇ ನಂಬಿದ್ದೇವೆ, ನಾವು ಇವರ ರಕ್ಷಣೆಯಲ್ಲಿ ಹರ್ಷಿಸಿ ಸಂತೋಷಪಡುವೆವು,” ಎಂದು ಹೇಳುವರು.


ಆ ದಿನದಲ್ಲಿ ನೀನು ಹೇಳುವುದೇನೆಂದರೆ: “ಯೆಹೋವ ದೇವರೇ, ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುವೆನು; ನೀವು ನನ್ನ ಮೇಲೆ ಕೋಪಗೊಂಡಿದ್ದರೂ, ಆ ನಿಮ್ಮ ಕೋಪವು ಪರಿಹಾರವಾಗಿ ನನ್ನನ್ನು ಸಂತೈಸುತ್ತೀರಲ್ಲವೆ?


ದೇವರು ಅವರನ್ನು ಆಶೀರ್ವದಿಸಿದ್ದರಿಂದ, ಅವರು ಬಹಳವಾಗಿ ಹೆಚ್ಚಿದರು; ದೇವರು ದನಗಳು ಕಡಿಮೆಯಾಗುವಂತೆ ಮಾಡಲಿಲ್ಲ.


ಇದಲ್ಲದೆ ಅವರ ಮಕ್ಕಳನ್ನು ಆಕಾಶದ ನಕ್ಷತ್ರಗಳ ಹಾಗೆ ಹೆಚ್ಚಿಸಿದಿರಿ. ಅವರು ಸ್ವಾಧೀನಮಾಡಿಕೊಳ್ಳುವರು ಎಂದು ನೀವು ಅವರ ಪಿತೃಗಳಿಗೆ ವಾಗ್ದಾನಮಾಡಿದ ದೇಶಕ್ಕೆ ಅವರನ್ನು ಬರಮಾಡಿದಿರಿ.


“ಅರಸರೇ ಕೇಳಿರಿ, ಪ್ರಭುಗಳೇ ಕೇಳಿರಿ, ಕಿವಿಗೊಡಿರಿ; ನಾನು, ನಾನೇ ಯೆಹೋವ ದೇವರಿಗೆ ಹಾಡುವೆನು. ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಸ್ತುತಿಗೀತೆ ಹಾಡುವೆನು.


ಇದರಿಂದ ಆ ಪಟ್ಟಣದಲ್ಲಿ ಮಹಾ ಸಂತೋಷವಾಯಿತು.


ದೇಶಗಳನ್ನು ಬೆಳೆಸುವುದೂ, ದಂಡಿಸುವುದೂ ದೇವರ ಕೈಯಲ್ಲಿದೆ; ದೇಶಗಳನ್ನು ವಿಸ್ತಾರಮಾಡುವುದೂ, ಚದರಿಸುವುದೂ ದೇವರ ಅಧಿಕಾರದಲ್ಲಿದೆ.


ಇಗೋ, ನನ್ನ ಸೇವಕರು ಹೃದಯದ ಆನಂದದಿಂದ ಹಾಡುವರು, ಆದರೆ ನೀವು ಹೃದಯದ ವ್ಯಸನದಿಂದ ಅಳುವಿರಿ ಮತ್ತು ಮುರಿದ ಆತ್ಮದಿಂದ ಗೋಳಾಡುವಿರಿ.


ಈಜಿಪ್ಟ್ ದೇಶದವರಿಗೆ ನೀವು ದಾಸರಾಗಿರದ ಹಾಗೆ ಅವರ ದೇಶದೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿ, ನಿಮ್ಮ ನೊಗದ ಕಟ್ಟುಗಳನ್ನು ಮುರಿದು, ನಿಮ್ಮನ್ನು ತಲೆಯೆತ್ತಿ ನಡೆಯುವಂತೆ ಮಾಡಿದ ನಿಮ್ಮ ದೇವರಾದ ಯೆಹೋವ ದೇವರು ನಾನೇ.


ಮುನ್ನೂರು ಜನರು ತುತೂರಿಗಳನ್ನು ಊದುವಾಗ, ಯೆಹೋವ ದೇವರು ಪಾಳೆಯದಲ್ಲಿ ಎಲ್ಲೆಲ್ಲಿಯೂ ಒಬ್ಬನ ಖಡ್ಗವನ್ನು ಒಬ್ಬನ ಮೇಲೆ ಬರಮಾಡಿದರು. ಪಾಳೆಯ ಚೆರೇರಿನಲ್ಲಿರುವ ಬೇತ್ ಷಿಟ್ಟದವರೆಗೂ, ಟಬ್ಬಾತಿನ ಬಳಿಯಲ್ಲಿರುವ ಆಬೇಲ್ ಮೆಹೋಲಾದ ಮೇರೆಯವರೆಗೂ ಓಡಿಹೋಯಿತು.


ಜೆಬಹನೂ, ಚಲ್ಮುನ್ನನೂ ಓಡಿ ಹೋದದ್ದರಿಂದ, ಅವನು ಮಿದ್ಯಾನ್ಯರ ಇಬ್ಬರು ಅರಸುಗಳಾದ ಜೆಬಹನನ್ನೂ, ಚೆಲ್ಮುನ್ನನನ್ನೂ ಹಿಂದಟ್ಟಿ ಹಿಡಿದು ಪಾಳೆಯನ್ನೆಲ್ಲಾ ಚದರಿಸಿಬಿಟ್ಟರು.


ಸೇನಾಧೀಶ್ವರ ಯೆಹೋವ ದೇವರು ಓರೇಬ್ ಬಂಡೆಯ ಬಳಿಯಲ್ಲಿ ಮಿದ್ಯಾನ್ಯರನ್ನು ಹತಮಾಡಿದಂತೆ, ಅವರು ಕೋಲನ್ನು ಸಮುದ್ರದ ಮೇಲೆ ಚಾಚಿ, ಈಜಿಪ್ಟಿನವರ ಮೇಲೆ ಎತ್ತಿದಂತೆ ಎತ್ತುವರು.


ಆಳುತ್ತಿದ್ದ ದುಷ್ಟರ ಕೋಲನ್ನೂ, ಅಧಿಪತಿಗಳ ದಂಡವನ್ನೂ ಯೆಹೋವ ದೇವರು ಮುರಿದುಬಿಟ್ಟರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು