ಯೆಶಾಯ 8:8 - ಕನ್ನಡ ಸಮಕಾಲಿಕ ಅನುವಾದ8 ಯೆಹೂದದಲ್ಲಿಯೂ ನುಗ್ಗಿ, ತುಂಬಿತುಳುಕಿ ಹಬ್ಬಿಕೊಂಡು ಕತ್ತಿನವರೆಗೂ ಏರುವುದು. ಇಮ್ಮಾನುಯೇಲನೇ, ಆ ಅರಸನ ರೆಕ್ಕೆಗಳು ಹರಡಿ ನಿನ್ನ ದೇಶದ ಅಗಲವನ್ನೆಲ್ಲಾ ಆವರಿಸಿಕೊಳ್ಳುವುವು.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಯೆಹೂದದಲ್ಲಿಯೂ ನುಗ್ಗಿ, ತುಂಬಿತುಳುಕಿ ಹಬ್ಬಿಕೊಂಡು ಕತ್ತಿನವರೆಗೂ ಏರುವುದು. ಇಮ್ಮಾನುವೇಲನೇ, ಆ ಅರಸನ ರೆಕ್ಕೆಗಳು ಹರಡಿ ನಿನ್ನ ದೇಶವನ್ನೆಲ್ಲಾ ಆವರಿಸಿಕೊಳ್ಳುವುದು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ಹದ್ದುಮೀರಿ ಜುದೇಯದೆಲ್ಲೆಡೆ ನುಗ್ಗಿ ಹಳ್ಳಕೊಳ್ಳಗಳನ್ನು ತುಂಬುವುದು. ಕುತ್ತಿಗೆಯ ತನಕ ಉಕ್ಕಿಬಂದು ದಿಣ್ಣೆದಿಬ್ಬಗಳನ್ನು ಮುಳುಗಿಸುವುದು. ದೇವರು ನಮ್ಮೊಡನೆ (ಇಮ್ಮಾನುವೇಲ್) ಇರುವರು. ಅವರ ಬಿಚ್ಚುರೆಕ್ಕೆಗಳು ನಾಡಿನ ಉದ್ದಗಲವನ್ನೂ ಆವರಿಸುವುವು, ಇಡೀ ನಾಡಿಗೆ ಆಶ್ರಯ ನೀಡುವುವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಅದು ತನ್ನ ಪಾತ್ರವನ್ನೆಲ್ಲಾ ಒಳಗೊಂಡು ದಡಗಳನ್ನೆಲ್ಲಾ ಮೀರಿ ಯೆಹೂದದಲ್ಲಿಯೂ ನುಗ್ಗಿ ತುಂಬಿತುಳುಕಿ ಹಬ್ಬಿಕೊಂಡು ಕತ್ತಿನವರೆಗೂ ಏರುವದು; ಇಮ್ಮಾನುವೇಲನೇ! ಆ ಅರಸನ ರೆಕ್ಕೆಗಳು ಹರಡಿ ನಿನ್ನ ದೇಶದ ಅಗಲದಲ್ಲೆಲ್ಲಾ ಮುತ್ತಿಬಿಡುವವು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಆ ನೀರು ಹೊಳೆಯಿಂದಾಚೆ ಬಂದು ಯೆಹೂದದ ಮೇಲೆ ಹರಿಯುವುದು. ಆ ನೀರು ಏರುತ್ತಾಬಂದು ಯೆಹೂದವನ್ನು ಕುತ್ತಿಗೆಯ ತನಕ ಮುಳುಗಿಸುವದು ಮಾತ್ರವಲ್ಲ ಅದನ್ನು ಸಂಪೂರ್ಣವಾಗಿ ಮುಳುಗಿಸಿಬಿಡುವದು. “ಇಮ್ಮಾನುವೇಲನೇ, ಈ ಜಲಪ್ರವಾಹವು ಎಲ್ಲಾ ಕಡೆಗಳಿಗೆ ಹಬ್ಬುತ್ತಾ ನಿಮ್ಮ ದೇಶವನ್ನು ಪೂರ್ತಿಯಾಗಿ ಮುಚ್ಚಿಬಿಡುವದು.” ಅಧ್ಯಾಯವನ್ನು ನೋಡಿ |