Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 65:19 - ಕನ್ನಡ ಸಮಕಾಲಿಕ ಅನುವಾದ

19 ಯೆರೂಸಲೇಮಿನಲ್ಲಿ ಉಲ್ಲಾಸಿಸಿ, ನನ್ನ ಜನರಲ್ಲಿ ಸಂತೋಷ ಪಡುವೆನು. ಅದರಲ್ಲಿ ಅಳುವ ಧ್ವನಿಯೂ, ಪ್ರಲಾಪದ ಧ್ವನಿಯೂ ಇನ್ನು ಕೇಳಿಬರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ನಾನೂ ಯೆರೂಸಲೇಮನ್ನು ದೃಷ್ಟಿಸುತ್ತಾ ಉಲ್ಲಾಸಿಸುವೆನು, ಅದರ ಜನರಲ್ಲಿ ಹರ್ಷಗೊಳ್ಳುವೆನು. ರೋದನ ಶಬ್ದವೂ, ಪ್ರಲಾಪಧ್ವನಿಯೂ ಅಲ್ಲಿ ಇನ್ನು ಕೇಳಿಸವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ನಾನು ಕೂಡ ಜೆರುಸಲೇಮನ್ನು ನೋಡಿ ಆನಂದಿಸುವೆನು, ಅದರ ಜನರನ್ನು ದೃಷ್ಟಿಸಿ ಹರ್ಷಗೊಳ್ಳುವೆನು. ಇನ್ನು ಅಲ್ಲಿ ಅಳುವಾಗಲಿ, ಆಕ್ರೋಶವಾಗಲಿ ಕೇಳಿಬರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ನಾನೂ ಯೆರೂಸಲೇಮನ್ನು ದೃಷ್ಟಿಸುತ್ತಾ ಉಲ್ಲಾಸಿಸುವೆನು, ಅದರ ಜನರನ್ನು ಈಕ್ಷಿಸುತ್ತಾ ಹರ್ಷಗೊಳ್ಳುವೆನು. ರೋದನಶಬ್ದವೂ ಪ್ರಲಾಪಧ್ವನಿಯೂ ಅಲ್ಲಿ ಇನ್ನು ಕೇಳಿಸವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 “ಆಗ ನಾನು ಜೆರುಸಲೇಮಿನ ವಿಷಯದಲ್ಲಿ ಸಂತೋಷದಿಂದಿರುವೆನು. ನನ್ನ ಜನರ ವಿಷಯದಲ್ಲಿಯೂ ಸಂತೋಷದಿಂದಿರುವೆನು. ಆ ಪಟ್ಟಣದಲ್ಲಿ ಮತ್ತೆಂದಿಗೂ ರೋಧನವಿರದು, ದುಃಖವಿರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 65:19
19 ತಿಳಿವುಗಳ ಹೋಲಿಕೆ  

‘ದೇವರು ಅವರ ಕಣ್ಣೀರನ್ನೆಲ್ಲಾ ಒರೆಸಿಬಿಡುವರು. ಇನ್ನು ಮರಣವಿರುವುದಿಲ್ಲ.’ ಇನ್ನು ದುಃಖವಾಗಲಿ, ಗೋಳಾಟವಾಗಲಿ, ನೋವಾಗಲಿ ಇರುವುದಿಲ್ಲ. ಮೊದಲಿದ್ದದ್ದೆಲ್ಲಾ ಇಲ್ಲದಂತಾಯಿತು!” ಎಂದು ಹೇಳಿತು.


ಏಕೆಂದರೆ, ಸಿಂಹಾಸನದ ಮಧ್ಯದಲ್ಲಿರುವ ಕುರಿಮರಿ ಆಗಿರುವವರು ಇವರನ್ನು ಮೇಯಿಸಿ; ‘ಜೀವಜಲದ ಒರತೆಗಳ ಬಳಿ ನಡೆಸುವರು.’ ‘ಮತ್ತು ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವರು,’” ಎಂದು ಹೇಳಿದನು.


ಹೌದು, ಅವರಿಗೆ ಒಳ್ಳೆಯದನ್ನು ಮಾಡುವುದಕ್ಕೆ ಅವರೊಂದಿಗೆ ಆನಂದಪಡುವೆನು. ನಿಜವಾಗಿ ನನ್ನ ಪೂರ್ಣಹೃದಯದಿಂದಲೂ, ನನ್ನ ಪೂರ್ಣಪ್ರಾಣದಿಂದಲೂ ಅವರನ್ನು ಈ ದೇಶದಲ್ಲಿ ನೆಡುತ್ತೇನೆ.


ಯೆಹೋವ ದೇವರು ವಿಮೋಚಿಸಿದವರು ಹಿಂದಿರುಗಿಕೊಂಡು ಶಾಶ್ವತ ಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು, ಉತ್ಸಾಹ ಧ್ವನಿಯೊಡನೆ ಚೀಯೋನಿಗೆ ಸೇರುವರು. ಅವರು ಹರ್ಷಾನಂದಗಳನ್ನು ಅನುಭವಿಸುವರು. ದುಃಖವೂ, ನಿಟ್ಟುಸಿರೂ ಓಡಿಹೋಗುವುವು.


ಅವರು ಮರಣವನ್ನು ಜಯದಲ್ಲಿ ನುಂಗಿಬಿಡುವರು. ಸಾರ್ವಭೌಮ ಯೆಹೋವ ದೇವರು ಎಲ್ಲಾ ಮುಖಗಳಲ್ಲಿರುವ ಕಣ್ಣೀರನ್ನೂ ಒರಸಿಬಿಡುವರು. ತಮ್ಮ ಜನರ ನಿಂದೆಯನ್ನೂ ಭೂಮಂಡಲದಿಂದಲೇ ತೆಗೆದುಹಾಕುವರು. ಯೆಹೋವ ದೇವರೇ ಇದನ್ನು ನುಡಿದಿದ್ದಾರೆ.


ನಿನ್ನ ದೇವರಾದ ಯೆಹೋವ ದೇವರು ನಿನ್ನೊಂದಿಗಿದ್ದಾರೆ. ನಿನ್ನನ್ನು ರಕ್ಷಿಸಲು ಶಕ್ತರಾಗಿದ್ದಾರೆ. ನಿನ್ನಲ್ಲಿ ಬಹಳವಾಗಿ ಹರ್ಷಾನಂದಗೊಳ್ಳುವರು. ತಮ್ಮ ಪ್ರೀತಿಯ ನಿಮಿತ್ತ ಅವರು ಇನ್ನು ಮುಂದೆ ನಿನ್ನನ್ನು ಖಂಡಿಸುವುದಿಲ್ಲ, ಆದರೆ ಆನಂದ ಸ್ವರದಿಂದ ನಿನ್ನ ಮೇಲೆ ಉಲ್ಲಾಸಿಸುವರು.”


ನಿನ್ನ ಸೂರ್ಯನು ಅಸ್ತಮಿಸುವುದಿಲ್ಲ. ನಿನ್ನ ಚಂದ್ರನು ಕಾಣದೆ ಹೋಗುವುದಿಲ್ಲ. ಏಕೆಂದರೆ ಯೆಹೋವ ದೇವರು ನಿನಗೆ ನಿತ್ಯವಾದ ಬೆಳಕಾಗಿರುವರು. ನೀನು ದುಃಖಿಸುವ ದಿನಗಳು ಸಮಾಪ್ತಿಯಾಗುವುದು.


ಆದಕಾರಣ ಯೆಹೋವ ದೇವರು ವಿಮೋಚಿಸಿದವರು, ಹಿಂದಿರುಗಿಕೊಂಡು ಶಾಶ್ವತ ಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು, ಉತ್ಸಾಹ ಧ್ವನಿಯೊಡನೆ ಚೀಯೋನಿಗೆ ಸೇರುವರು. ಅವರು ಹರ್ಷಾನಂದಗಳನ್ನು ಅನುಭವಿಸುವರು. ದುಃಖವೂ, ನಿಟ್ಟುಸಿರೂ ಓಡಿಹೋಗುವುವು.


ಅವರು ಬಂದು ಚೀಯೋನ್ ಶಿಖರದಲ್ಲಿ ಹಾಡುವರು; ಧಾನ್ಯ, ದ್ರಾಕ್ಷಾರಸ, ಎಣ್ಣೆ, ಕರು, ಕುರಿಮರಿ, ಅಂತು ಯೆಹೋವ ದೇವರು ಅನುಗ್ರಹಿಸುವ ಎಲ್ಲಾ ಮೇಲುಗಳನ್ನು ಅನುಭವಿಸಲು ಪ್ರವಾಹದಂತೆ ಬರುವರು. ಅವರ ಆತ್ಮವು ಹದವಾಗಿ ನೀರು ಹಾಯಿಸಿದ ತೋಟದಂತಿರುವುದು; ಅವರು ಇನ್ನು ಮುಂದೆ ದುಃಖಪಡುವುದಿಲ್ಲ.


ಯೆಹೋವ ದೇವರು ಚೀಯೋನನ್ನು ಸಂತೈಸೇ ಸಂತೈಸುವರು. ಅವರು ಅದರ ಹಾಳಾದ ಸ್ಥಳಗಳನ್ನು ಕರುಣೆಯಿಂದ ನೋಡುವರು. ಅದರ ಮರುಭೂಮಿಯನ್ನು ಏದೆನ್ ಹಾಗೆಯೂ, ಹಾಳು ಪ್ರದೇಶವನ್ನು ಯೆಹೋವ ದೇವರ ತೋಟದ ಹಾಗೆಯೂ ಮಾಡುವನು. ಅಲ್ಲಿ ಆನಂದವೂ, ಉಲ್ಲಾಸವೂ, ಉಪಕಾರ ಸ್ತುತಿಯೂ, ಇಂಪಾದ ಸ್ವರವೂ ಕಂಡು ಬರುವುವು.


ಚೀಯೋನಿನ ಪುತ್ರಿಯರೇ, ನೀವು ಹೊರಗೆ ಬನ್ನಿರಿ. ಅರಸನಾದ ಸೊಲೊಮೋನನನ್ನು ನೋಡಿರಿ. ಅವನ ಮದುವೆಯ ದಿನದಂದು, ಅವನ ಹೃದಯ ಸಂತೋಷಗೊಂಡ ದಿನದಲ್ಲಿ, ಅವನ ತಾಯಿ ಅವನಿಗೆ ತೊಡಿಸಿದ ಕಿರೀಟವನ್ನು ಅವನು ಧರಿಸಿರುವುದನ್ನು ಬಂದು ನೋಡಿರಿ.


ಅದು ಸಿಕ್ಕಿದ ಮೇಲೆ ಸಂತೋಷಪಡುತ್ತಾ ಅದನ್ನು ತನ್ನ ಹೆಗಲ ಮೇಲೆ ಎತ್ತಿಕೊಂಡು,


ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದರು:


ಏಕೆಂದರೆ, ಯೆರೂಸಲೇಮಿನಲ್ಲಿ ವಾಸಿಸುವ ಚೀಯೋನಿನ ಜನರೇ, ನೀವು ಇನ್ನು ಅಳಬೇಕಾಗಿಲ್ಲ. ನೀವು ಕೂಗಿ ದುಃಖಿಸಿದ ಶಬ್ದವನ್ನು ದೇವರು ಕೇಳಿ ನಿಮಗೆ ಕೃಪೆ ತೋರಿಸೇ ತೋರಿಸುವರು. ದೇವರು ನಿಮ್ಮ ಸ್ವರವನ್ನು ಕೇಳಿದ ಕೂಡಲೇ ಸದುತ್ತರವನ್ನು ದಯಪಾಲಿಸುವರು.


“ಚೀಯೋನ್ ಪುತ್ರಿಯೇ, ಹಾಡಿ ಹರ್ಷಿಸು. ಏಕೆಂದರೆ, ನಾನು ಬರುವೆನು ಮತ್ತು ನಾನು ನಿಮ್ಮ ಮಧ್ಯದಲ್ಲಿ ವಾಸಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.


ನಮ್ಮ ಎತ್ತುಗಳು ಪ್ರಯಾಸ ಪಡುವುದಕ್ಕೆ ಬಲವುಳ್ಳವುಗಳಾಗಲಿ; ವೈರಿಗಳು ಒಳಗೆ ನುಗ್ಗುವುದಾಗಲಿ, ನಮ್ಮವರನ್ನು ಸೆರೆ ಹಿಡಿಯುವುದಾಗಲಿ ಇರುವುದಿಲ್ಲ. ನಮ್ಮ ಬೀದಿಗಳಲ್ಲಿ ಗೋಳಾಟವು ಇಲ್ಲದಿರಲಿ.


ಅಲ್ಲದೆ ಇನ್ನು ಮೇಲೆ ನೀನು ಇತರ ಜನಾಂಗಗಳ ನಿಂದೆಯನ್ನು ಕೇಳಿಸಿಕೊಳ್ಳದಂತೆ ನಾನು ಮಾಡುವೆನು; ನೀನು ಇನ್ನು ಮೇಲೆ ಜನಾಂಗಗಳಿಂದ ಅವಮಾನ ಅನುಭವಿಸುವುದಿಲ್ಲ. ನೀನು ನಿನ್ನ ಜನಾಂಗವನ್ನು ಇನ್ನೆಂದಿಗೂ ಬೀಳಿಸುವುದಿಲ್ಲ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’ ”


ಯೆಹೋವ ದೇವರು ನಿನ್ನ ಶಿಕ್ಷೆಗಳನ್ನು ದೂರಮಾಡಿ ನಿನ್ನ ಶತ್ರುವನ್ನು ತೆಗೆದುಹಾಕಿದ್ದಾರೆ. ಇಸ್ರಾಯೇಲಿನ ಅರಸನಾದ ಯೆಹೋವ ದೇವರು ನಿನ್ನ ಮಧ್ಯದಲ್ಲಿ ಇದ್ದಾರೆ. ಇನ್ನು ಮೇಲೆ ನಿನಗೆ ಯಾವ ಕೇಡಿನ ಭಯವಿರುವುದಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು