Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 64:8 - ಕನ್ನಡ ಸಮಕಾಲಿಕ ಅನುವಾದ

8 ಆದರೆ ಈಗ ಯೆಹೋವ ದೇವರೇ, ನಮ್ಮ ತಂದೆಯು ನೀನೇ, ನಾವು ಮಣ್ಣು. ನೀನು ನಮ್ಮ ಕುಂಬಾರನು. ನಾವೆಲ್ಲರೂ ನಿನ್ನ ಕೈಕೆಲಸಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಈಗಲಾದರೋ ಯೆಹೋವನೇ, ನೀನು ನಮ್ಮ ತಂದೆಯಾಗಿದ್ದಿ; ನೀನು ಕುಂಬಾರನು, ನಾವು ಜೇಡಿಮಣ್ಣು, ನಾವೆಲ್ಲರೂ ನಿನ್ನ ಕೈಕೆಲಸವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಆದರೂ ಸ್ವಾಮಿ ಸರ್ವೇಶ್ವರಾ, ನೀವು ನಮ್ಮ ತಂದೇ. ನಾವು ಜೇಡಿಮಣ್ಣು, ನೀವೇ ಕುಂಬಾರ; ನಾವೆಲ್ಲರು ನಿಮ್ಮ ಕೈಯ ಕೃತಿಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಈಗಲಾದರೋ ಯೆಹೋವನೇ, ನೀನು ನಮ್ಮ ತಂದೆಯಾಗಿದ್ದೀ; ನಾವು ಜೇಡಿಮಣ್ಣು, ನೀನು ಕುಂಬಾರ, ನಾವೆಲ್ಲರೂ ನಿನ್ನ ಕೈಕೆಲಸವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಯೆಹೋವನೇ, ನೀನು ನಮ್ಮ ತಂದೆಯಾಗಿರುವೆ. ನಾವು ಜೇಡಿಮಣ್ಣಿನಂತಿದ್ದೇವೆ. ನೀನಾದರೋ ಕುಂಬಾರನಾಗಿರುವೆ. ನಿನ್ನ ಕೈಗಳು ನಮ್ಮನ್ನು ನಿರ್ಮಿಸಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 64:8
33 ತಿಳಿವುಗಳ ಹೋಲಿಕೆ  

ನಾವು ಕ್ರಿಸ್ತ ಯೇಸುವಿನಲ್ಲಿ ಸತ್ಕ್ರಿಯೆಗಳನ್ನು ಮಾಡುವುದಕ್ಕಾಗಿಯೇ ಸೃಷ್ಟಿಸಲಾದ ದೇವರ ಕಲಾಕೃತಿಯಾಗಿದ್ದೇವೆ. ಸತ್ಕ್ರಿಯೆಗಳನ್ನು ಮಾಡುತ್ತಾ ಬಾಳಬೇಕೆಂದು ದೇವರು ನಮ್ಮನ್ನು ಮುಂಚಿತವಾಗಿ ನೇಮಿಸಿದ್ದಾರೆ.


ನಿಮ್ಮ ಕೈಗಳು ನನ್ನನ್ನು ನಿರ್ಮಿಸಿ ರೂಪಿಸಿದವು; ನಿಮ್ಮ ಆಜ್ಞೆಗಳನ್ನು ಕಲಿತುಕೊಳ್ಳಲು ನನಗೆ ಅರಿವನ್ನು ನೀಡಿರಿ.


ಯೆಹೋವ ದೇವರು ನನ್ನ ನ್ಯಾಯವನ್ನು ಸಿದ್ಧಿಗೆ ತರುತ್ತಾರೆ; ಯೆಹೋವ ದೇವರೇ, ನಿಮ್ಮ ಪ್ರೀತಿಯು ಎಂದೆಂದಿಗೂ ಇರುವುದು; ನಿಮ್ಮ ಕೈಕೆಲಸಗಳನ್ನು ನೆರವೇರಿಸಿರಿ.


ಯೆಹೋವ ದೇವರೇ ದೇವರೆಂದು ತಿಳುಕೊಳ್ಳಿರಿ; ಅವರೇ ನಮ್ಮನ್ನು ಉಂಟುಮಾಡಿದ್ದಾರೆ; ನಾವು ಅವರ ಜನರೂ, ಅವರು ಮೇಯಿಸುವ ಕುರಿ ಮಂದೆಯೂ ಆಗಿದ್ದೇವೆ.


ಅಬ್ರಹಾಮನು ನಮ್ಮನ್ನು ತಿಳಿಯದಿದ್ದರೂ, ಇಸ್ರಾಯೇಲನು ನಮ್ಮನ್ನು ಗುರುತಿಸದಿದ್ದರೂ ಯೆಹೋವ ದೇವರಾದ ನೀವೇ ನಮ್ಮ ತಂದೆಯೂ, ನಮ್ಮ ವಿಮೋಚಕರೂ ಆಗಿದ್ದೀರಿ. ನಿಮ್ಮ ಹೆಸರು ಸದಾಕಾಲವೂ ಇದೆ


ಖಂಡಿತವಾಗಿಯೂ ನೀವು ತಲೆಕೆಳಗೆ ಮಾಡುವ ಸಂಗತಿಗಳು, ಕುಂಬಾರನು ಜೇಡಿಮಣ್ಣಿನಂತೆ ಪರಿಗಣಿಸಲಾಗುವುದು! ಉಂಟುಮಾಡಿದವನಿಗೆ ಉಂಟುಮಾಡಿದ್ದು, “ನೀನು ನನ್ನನ್ನು ಉಂಟುಮಾಡಲಿಲ್ಲ,” ಎಂತಲೂ, ಮಡಕೆ ಕುಂಬಾರನಿಗೆ, “ನಿನಗೆ ಏನೂ ಗೊತ್ತಿಲ್ಲ,” ಎಂತಲೂ ಹೇಳಬಹುದೇ?


“ತನ್ನನ್ನು ರೂಪಿಸಿದವನ ಸಂಗಡ ವಾದಮಾಡುವವನಿಗೆ ಕಷ್ಟ! ಅವನು ಸಹ ಮಣ್ಣುಮಡಕೆಗಳಲ್ಲಿ ಒಂದು ಮಡಕೆ ಅಲ್ಲವೇ? ಮಣ್ಣು ಕುಂಬಾರನಿಗೆ, ‘ನೀನು ಏನು ಮಾಡುತ್ತೀ?’ ಎಂದೂ, ‘ನಾನು ನಿನ್ನ ಕೈ ಕೆಲಸವು ಅಲ್ಲ,’ ಎಂದೂ ಆ ಮಡಕೆ ಹೇಳುವುದುಂಟೇ?


“ನಿನ್ನನ್ನು ಗರ್ಭದಿಂದ ರೂಪಿಸಿದವರೂ ನಿನ್ನ ವಿಮೋಚಕರೂ ಆದ ಯೆಹೋವ ದೇವರು ಇಂತೆನ್ನುತ್ತಾರೆ: “ಎಲ್ಲವನ್ನು ಉಂಟುಮಾಡಿದ ಯೆಹೋವ ದೇವರು ನಾನೇ. ನಾನೊಬ್ಬನೇ ಆಕಾಶವನ್ನು ವಿಸ್ತರಿಸಿ, ಭೂಮಿಯನ್ನು ನಾನೇ ವಿಶಾಲವಾಗಿ ಹರಡಿದವನಾಗಿದ್ದೇನೆ.


ನನ್ನ ಹೆಸರಿನಿಂದ ಕರೆಯಲಾದ ಪ್ರತಿಯೊಬ್ಬನನ್ನೂ ಬರಮಾಡುವೆನು. ಏಕೆಂದರೆ ಅವರನ್ನು ನನ್ನ ಮಹಿಮೆಗಾಗಿ ಸೃಷ್ಟಿಸಿದ್ದೇನೆ. ನಾನು ಅವರನ್ನು ನಿರ್ಮಿಸಿದ್ದೇನೆ. ಹೌದು, ನಾನು ಅವರನ್ನು ಉಂಟುಮಾಡಿದ್ದೇನೆ.”


“ಯಾಕೋಬೇ, ಇಸ್ರಾಯೇಲೇ! ಈ ವಿಷಯಗಳನ್ನು ಜ್ಞಾಪಕದಲ್ಲಿಟ್ಟುಕೋ, ನೀನು ನನ್ನ ಸೇವಕನಾಗಿದ್ದೀ. ನಾನು ನಿನ್ನನ್ನು ನಿರ್ಮಿಸಿದೆನು. ನೀನು ನನ್ನ ಸೇವಕನು. ಇಸ್ರಾಯೇಲೇ, ನಾನು ನಿನ್ನನ್ನು ಮರೆತುಬಿಡೆನು.


ಯೆಹೋವ ದೇವರಿಗೆ ಪ್ರತಿಯಾಗಿ ಹೀಗೆ ವರ್ತಿಸುವುದು ಸರಿಯೋ? ಜ್ಞಾನವಿಲ್ಲದ ಬುದ್ಧಿಹೀನ ಜನರೇ, ದೇವರು ನಿಮ್ಮನ್ನು ಸೃಷ್ಟಿಸಿದ ತಂದೆಯಲ್ಲವೋ? ನಿಮ್ಮನ್ನು ಸೃಷ್ಟಿಸಿ ಸ್ಥಿರಪಡಿಸಿದ್ದು ದೇವರಲ್ಲವೋ?


ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿಟ್ಟಿರುವ ನಂಬಿಕೆಯ ಮೂಲಕ ದೇವರ ಮಕ್ಕಳಾಗಿದ್ದೀರಿ.


ಆದರೆ ನೀವು ಕ್ರಿಸ್ತನವರಾಗಿದ್ದರೆ, ಅಬ್ರಹಾಮನ ಸಂತತಿಯವರಾಗಿದ್ದೀರಿ ಮಾತ್ರವಲ್ಲದೆ ವಾಗ್ದಾನಕ್ಕನುಸಾರವಾಗಿ ವಾರಸುದಾರರೂ ಆಗಿದ್ದೀರಿ.


ಆಗ ನೀನು ಫರೋಹನಿಗೆ, ‘ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಸ್ರಾಯೇಲ ನನ್ನ ಮಗನು, ನನ್ನ ಜೇಷ್ಠಪುತ್ರನು.


ನೀವು ನಿಮ್ಮ ತಂದೆಯ ಕ್ರಿಯೆಗಳನ್ನು ಮಾಡುತ್ತೀರಿ,” ಎಂದರು. ಅದಕ್ಕವರು, “ನಾವು ಅನೈತಿಕತೆಯಿಂದ ಹುಟ್ಟಿದವರಲ್ಲ. ನಮಗೆ ದೇವರೇ ತಂದೆ,” ಎಂದು ಪ್ರತಿಭಟಿಸಿದರು.


ದೇವರೇ, ನಿಮ್ಮ ಕೈಕೃತಿಯಾಗಿರುವ ನನ್ನನ್ನು ಜಜ್ಜುವುದೂ ನಿಮಗೆ ಮೆಚ್ಚಿಕೆಯೋ? ನೀವು ನನ್ನನ್ನು ಅಲಕ್ಷ್ಯ ಮಾಡುವಿರೋ? ನೀವು ದುಷ್ಟರ ಯೋಜನೆಯನ್ನು ಮೆಚ್ಚುವಿರೋ?


ಏಕೆಂದರೆ ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ಆ ಮಗನನ್ನು ನಮಗಾಗಿ ಕೊಡಲಾಗಿದೆ. ಆಡಳಿತವು ಅವರ ಬಾಹುವಿನ ಮೇಲಿರುವುದು, ಅದ್ಭುತವಾದವರು ಸಮಾಲೋಚಕರು, ಪರಾಕ್ರಮಿಯಾದ ದೇವರು, ನಿತ್ಯರಾದ ತಂದೆ, ಸಮಾಧಾನದ ಪ್ರಭು, ಎಂಬುದು ಅವರ ಹೆಸರಾಗಿರುವುದು.


ನನ್ನ ಪ್ರಜೆಯಾದ ಈಜಿಪ್ಟಿಗೂ, ನನ್ನ ಕೈಕೆಲಸವಾದ ಅಸ್ಸೀರಿಯಕ್ಕೂ ಮತ್ತು ನನ್ನ ಸೊತ್ತಾದ ಇಸ್ರಾಯೇಲಿಗೂ, “ನಿಮಗೆ ಆಶೀರ್ವಾದ,” ಎಂದು ಸೇನಾಧೀಶ್ವರ ಯೆಹೋವ ದೇವರು ಅವುಗಳನ್ನು ಆಶೀರ್ವಾದ ಮಾಡುವರು.


“ಇಸ್ರಾಯೇಲಿನ ಪರಿಶುದ್ಧನೂ, ಅದನ್ನು ರೂಪಿಸಿದವನೂ ಆಗಿರುವ ಯೆಹೋವ ದೇವರು, ಮುಂದೆ ಸಂಭವಿಸುವ ನನ್ನ ಮಕ್ಕಳ ವಿಷಯವಾಗಿಯೂ, ನನ್ನ ಕೈಕೆಲಸದ ವಿಷಯವಾಗಿಯೂ ನೀವು ನನಗೆ ಆಜ್ಞಾಪಿಸುವುದೇನು?


ನಿನ್ನ ಜನರೆಲ್ಲರೂ ನೀತಿವಂತರಾಗಿರುವರು. ದೇಶವನ್ನು ಸದಾಕಾಲಕ್ಕೆ ಸ್ವಾಧೀನಮಾಡಿಕೊಳ್ಳುವರು. ನಾನು ಮಹಿಮೆ ಹೊಂದುವುದಕ್ಕೋಸ್ಕರ ನಾನು ನೆಟ್ಟ ಕೊಂಬೆಯೂ, ನನ್ನ ಕೈ ಸೃಷ್ಟಿಯೂ ಆಗಿರುವರು.


ಅವರು ಅಳುತ್ತಾ ಬರುವರು. ಬಿನ್ನಹಗಳ ಸಂಗಡ ಅವರನ್ನು ನಡೆಸುವೆನು. ಅವು ಎಡವದ ಸಮದಾರಿಯಲ್ಲಿ ನೀರಿನ ನದಿಗಳ ಬಳಿಯಲ್ಲಿ ನಡೆಯುವಂತೆ ಮಾಡುವೆನು. ಏಕೆಂದರೆ ನಾನು ಇಸ್ರಾಯೇಲಿಗೆ ತಂದೆಯಾಗಿದ್ದೇನೆ. ಎಫ್ರಾಯೀಮನು ನನ್ನ ಚೊಚ್ಚಲ ಮಗನೇ.


“ಆದರೂ ಇಸ್ರಾಯೇಲ್ ಜನರು ಅಳೆಯುವುದಕ್ಕೂ ಎಣಿಸುವುದಕ್ಕೂ ಅಸಾಧ್ಯವಾದ ಕಡಲತೀರದ ಮರಳಿನಂತಾಗುವರು. ದೇವರು ಯಾವ ಸ್ಥಳದಲ್ಲಿ ಅವರನ್ನು, ‘ನೀವು ನನ್ನ ಜನರಲ್ಲ’ ಎಂದಿದ್ದಾರೋ ಆ ಸ್ಥಳದಲ್ಲಿಯೇ, ‘ನೀವು ಜೀವಸ್ವರೂಪಿಯಾದ ದೇವರ ಮಕ್ಕಳು’ ಎನಿಸಿಕೊಳ್ಳುವ ದಿನ ಬರುವುದು.


ನಮ್ಮೆಲ್ಲರಿಗೆ ಒಬ್ಬನೇ ತಂದೆಯಲ್ಲವೋ? ನಮ್ಮನ್ನು ಒಬ್ಬರೇ ದೇವರು ಸೃಷ್ಟಿಸಿದರಲ್ಲವೋ? ಏಕೆ ಪ್ರತಿಯೊಬ್ಬನು ತನ್ನ ಸಹೋದರನಿಗೆ ವಿರೋಧವಾಗಿ ವಂಚನೆಯಾಗಿ ನಡೆದು, ನಮ್ಮ ತಂದೆಗಳ ಒಡಂಬಡಿಕೆಯನ್ನು ಮುರಿಯುವುದೇಕೆ?


‘ಕೇಡಿನ ನಿಮಿತ್ತವೂ ಬೆಟ್ಟಗಳಲ್ಲಿ ಅವರನ್ನು ಸಾಯಿಸಿ, ಭೂಮಿಯ ಮೇಲಿನಿಂದ ಅವರನ್ನು ಅಳಿಸಿಬಿಡುವುದಕ್ಕೂ, ದೇವರು ಅವರನ್ನು ಹೊರಗೆ ಬರಮಾಡಿದ್ದಾರೆ,’ ಎಂದು ಈಜಿಪ್ಟಿನವರು ಏಕೆ ಹೇಳಬೇಕು? ತಾವು ಕೋಪಾಗ್ನಿಯನ್ನು ಬಿಟ್ಟು ತಿರುಗಿಕೊಳ್ಳಿ. ನಿಮ್ಮ ಜನರಿಗೆ ವಿರೋಧವಾದ ಈ ಕೇಡಿನ ವಿಷಯದಲ್ಲಿ ತಮ್ಮ ಮನಸ್ಸನ್ನು ಬದಲಾಯಿಸಿರಿ.


ಆದರೂ ನೀವು ನಿಮ್ಮ ದೊಡ್ಡ ಶಕ್ತಿಯಿಂದಲೂ, ನಿಮ್ಮ ಚಾಚಿದ ಕೈಯಿಂದಲೂ ಹೊರಗೆ ಬರಮಾಡಿದ ನಿಮ್ಮ ಜನವೂ ನಿಮ್ಮ ಸೊತ್ತೂ ಇವರೇ,” ಎಂದು ಹೇಳಿದೆನು.


ದೇವರೇ, ಸದಾಕಾಲಕ್ಕೆ ನಮ್ಮನ್ನು ತಳ್ಳಿಬಿಟ್ಟದ್ದೇಕೆ? ನಿಮ್ಮ ಮೇವಿನ ಕುರಿಮಂದೆಯ ವಿಷಯವಾಗಿ ಬೇಸರಗೊಳ್ಳುವುದು ಏಕೆ?


ಬನ್ನಿರಿ, ಆರಾಧಿಸೋಣ; ನಮ್ಮನ್ನು ಸೃಷ್ಟಿಸಿದ ಯೆಹೋವ ದೇವರ ಮುಂದೆ ಮೊಣಕಾಲು ಊರೋಣ.


“ನಾನಾಗಿ ನಾನೇ, ನನಗೋಸ್ಕರ ನಿನ್ನ ದ್ರೋಹಗಳನ್ನು ಅಳಿಸಿಬಿಡುತ್ತೇನೆ. ನಿನ್ನ ಪಾಪಗಳನ್ನು ನನ್ನ ನೆನಪಿನಲ್ಲಿಡೆನು.


ನಾನು ಎಂದೆಂದಿಗೂ ವ್ಯಾಜ್ಯವಾಡುವುದಿಲ್ಲ. ಯಾವಾಗಲೂ ಕೋಪಿಸಿಕೊಳ್ಳೆನು. ಏಕೆಂದರೆ ಆತ್ಮವೂ, ನಾನು ಉಂಟುಮಾಡಿದ ಜೀವವೂ ನನ್ನಿಂದ ಕುಂದಿ ಹೋದಾವು.


ಆತನು ನಿಶ್ಚಯವಾಗಿ, “ಅವರು ನನ್ನ ಜನರೇ, ಸುಳ್ಳಾಡದ ಮಕ್ಕಳೇ!” ಎಂದು ಹೇಳಿದನು. ಆದ್ದರಿಂದ ಅವರಿಗೆ ರಕ್ಷಕನಾಗಿದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು