ಯೆಶಾಯ 63:3 - ಕನ್ನಡ ಸಮಕಾಲಿಕ ಅನುವಾದ3 “ದ್ರಾಕ್ಷಿಯನ್ನು ತೊಟ್ಟಿಯಲ್ಲಿ ನಾನೊಬ್ಬನೇ ತುಳಿದಿದ್ದೇನೆ. ಜನಾಂಗಗಳಲ್ಲಿ ಒಬ್ಬನಾದರೂ ನನ್ನ ಸಂಗಡ ಇರಲಿಲ್ಲ. ನನ್ನ ಕೋಪದಲ್ಲಿ ಅವರನ್ನು ತುಳಿದಿದ್ದೇನೆ, ನನ್ನ ಉರಿಯಲ್ಲಿ ಅವರನ್ನು ಜಜ್ಜಿದ್ದೇನೆ. ಆದ್ದರಿಂದ ಅವರ ರಕ್ತವು ನನ್ನ ಬಟ್ಟೆಗಳ ಮೇಲೆ ಸಿಡಿದು, ನನ್ನ ವಸ್ತ್ರಕ್ಕೆ ಮೆತ್ತಿಕೊಂಡಿದೆ; ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ನಾನೊಬ್ಬನೇ ದ್ರಾಕ್ಷಿಯನ್ನು ತೊಟ್ಟಿಯಲ್ಲಿ ತುಳಿದಿದ್ದೇನೆ, ಜನಾಂಗದವರಲ್ಲಿ ಯಾರೂ ನನ್ನೊಂದಿಗಿರಲಿಲ್ಲ. ನನ್ನ ಕೋಪದಿಂದ ಶತ್ರುಗಳನ್ನು ತುಳಿದೆನು, ರೋಷವೇರಿದವನಾಗಿ ಅವರನ್ನು ತುಳಿದುಹಾಕಿದೆನು; ಅವರ ಜೀವಸತ್ವ ನನ್ನ ವಸ್ತ್ರಗಳ ಮೇಲೆ ಸಿಡಿದಿದೆ, ನನ್ನ ಉಡುಪನ್ನೆಲ್ಲಾ ಮಲಿನ ಮಾಡಿಕೊಂಡೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)3 “ದ್ರಾಕ್ಷಿಹಣ್ಣನು ತುಳಿವಂತೆ ತುಳಿದಿದ್ದೇನೆ ರಾಷ್ಟ್ರಗಳನು ಒಬ್ಬಂಟಿಗನಾಗೇ ಯಾರು ಇರಲಿಲ್ಲ ನನಗೆ ಸಹಾಯಕ್ಕೆ. ಅವರನ್ನು ತುಳಿದೆ ಕೋಪದಿಂದ ರೋಷಾವೇಶದಿಂದ ಹೊಸಕಿದೆ ಕಾಲಿನಿಂದ. ಅವರ ರಕ್ತ ನನ್ನ ಬಟ್ಟೆಗಳ ಮೇಲೆ ಸಿಡಿದಿದೆ. ನನ್ನ ಉಡುಪಿಗೆಲ್ಲಾ ಆ ಬಿಸಿರಕ್ತ ಮೆತ್ತಿಕೊಂಡಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ನಾನೊಬ್ಬನಾಗಿಯೇ ದ್ರಾಕ್ಷೆಯನ್ನು ತೊಟ್ಟಿಯಲ್ಲಿ ತುಳಿದಿದ್ದೇನೆ, ಜನಾಂಗದವರಲ್ಲಿ ಯಾರೂ ನನ್ನೊಂದಿಗಿರಲಿಲ್ಲ. ನನ್ನ ಕೋಪದಿಂದ ಶತ್ರುಗಳನ್ನು ತುಳಿದೆನು, ರೋಷವೇರಿದವನಾಗಿ ಅವರನ್ನು ಕಾಲಿನಿಂದ ಹೊಸಗಿದೆನು; ಅವರ ಸಾರವು ನನ್ನ ವಸ್ತ್ರಗಳ ಮೇಲೆ ಸಿಡಿದಿದೆ, ನನ್ನ ಉಡುಪನ್ನೆಲ್ಲಾ ಮಾಸಿಕೊಂಡೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಅವನ ಉತ್ತರ: “ದ್ರಾಕ್ಷಿತೊಟ್ಟಿಯಲ್ಲಿ ನಾನೊಬ್ಬನೇ ತುಳಿದೆನು. ಯಾರೂ ನನಗೆ ಸಹಾಯ ಮಾಡಲಿಲ್ಲ. ನಾನು ಕೋಪಗೊಂಡು ದ್ರಾಕ್ಷಿಹಣ್ಣಿನ ಮೇಲೆ ತುಳಿದೆನು. ಅದರ ರಸ ನನ್ನ ಬಟ್ಟೆಯ ಮೇಲೆ ಹಾರಿತು. ಆದ್ದರಿಂದ ನನ್ನ ಬಟ್ಟೆಗಳು ಮಲಿನವಾದವು. ಅಧ್ಯಾಯವನ್ನು ನೋಡಿ |