Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 61:11 - ಕನ್ನಡ ಸಮಕಾಲಿಕ ಅನುವಾದ

11 ಏಕೆಂದರೆ ಭೂಮಿಯು ತನ್ನ ಮೊಳಕೆಯನ್ನು ಹೇಗೆ ಹೊರಡಿಸುವುದೋ, ತೋಟವು ತನ್ನಲ್ಲಿ ಬಿತ್ತಿದ್ದನ್ನು ಹೇಗೆ ಮೊಳೆಯಿಸುವುದೋ, ಹಾಗೆಯೇ ಸಾರ್ವಭೌಮ ಯೆಹೋವ ದೇವರು ನೀತಿಯನ್ನೂ, ಸ್ತೋತ್ರವನ್ನೂ ಎಲ್ಲಾ ಜನಾಂಗಗಳ ಮುಂದೆ ಮೊಳೆಯಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಭೂಮಿಯು ತನ್ನೊಳಗಿಂದ ಮೊಳಕೆಯನ್ನು ಹೊರಡಿಸುವಂತೆ, ತೋಟವು ತನ್ನಲ್ಲಿ ಬಿತ್ತಿದ್ದನ್ನು ಮೊಳೆಯಿಸುವ ಹಾಗೆ, ಕರ್ತನಾದ ಯೆಹೋವನು ಎಲ್ಲಾ ಜನಾಂಗಗಳ ಎದುರಿನಲ್ಲಿ ಧರ್ಮವನ್ನೂ ಮತ್ತು ಸ್ತೋತ್ರವನ್ನೂ ಮೊಳೆತು ಅಭಿವೃದ್ಧಿ ಹೊಂದುವಂತೆ ಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಬುವಿಯು ತನ್ನಿಂದ ಬೀಜವನು ಮೊಳೆಯಿಸುವಂತೆ ತೋಟವು ತನ್ನೊಳು ಸಸಿಯನು ಬೆಳೆಸುವಂತೆ ಸ್ವಾಮಿ ಸರ್ವೇಶ್ವರ, ಸಮಸ್ತ ರಾಷ್ಟ್ರಗಳ ಮುಂದೆ ವೃದ್ಧಿಗೊಳಿಸುವನು ಸದ್ಧರ್ಮವನೆ, ಸ್ತುತಿಸ್ತೋತ್ರವನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಭೂವಿುಯು ತನ್ನೊಳಗಿಂದ ಮೊಳಿಕೆಯನ್ನು ಹೊರಡಿಸುವಂತೆಯೂ ತೋಟವು ತನ್ನಲ್ಲಿ ಬಿತ್ತಿದ್ದನ್ನು ಮೊಳೆಯಿಸುವ ಹಾಗೂ ಕರ್ತನಾದ ಯೆಹೋವನು ಎಲ್ಲಾ ಜನಾಂಗಗಳ ಎದುರಿನಲ್ಲಿ ಧರ್ಮವನ್ನೂ ಸ್ತೋತ್ರವನ್ನೂ ಮೊಳೆಯಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಭೂಮಿಯು ಸಸಿಗಳನ್ನು ಬೆಳೆಸುತ್ತದೆ. ಜನರು ತೋಟದಲ್ಲಿ ಬೀಜ ಬಿತ್ತುವರು. ತೋಟವು ಬೀಜವನ್ನು ಬೆಳೆಸುತ್ತದೆ. ಅದೇ ರೀತಿಯಲ್ಲಿ ಯೆಹೋವನು ಎಲ್ಲಾ ಜನಾಂಗಗಳಲ್ಲಿ ನೀತಿಯನ್ನೂ ಸ್ತೋತ್ರವನ್ನೂ ಬೆಳೆಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 61:11
24 ತಿಳಿವುಗಳ ಹೋಲಿಕೆ  

ಯೆಹೋವ ದೇವರು ನಿನ್ನನ್ನು ನಿತ್ಯವೂ ನಡೆಸುತ್ತಾ, ಮಳೆಯಿಲ್ಲದ ಕಾಲದಲ್ಲಿ ನಿನ್ನ ಪ್ರಾಣವನ್ನು ತೃಪ್ತಿಗೊಳಿಸಿ, ನಿನ್ನ ಎಲುಬುಗಳನ್ನು ಬಲಪಡಿಸುವರು ಮತ್ತು ನೀನು ನೀರು ಹಾಕಿದ ತೋಟದ ಹಾಗೆಯೂ ಇರುವೆ. ಬತ್ತಿಹೋಗದ ಬುಗ್ಗೆಯಂತೆಯೂ ನೀವು ಇರುವಿರಿ


ಆದರೆ ಕತ್ತಲೆಯೊಳಗಿದ್ದ ನಿಮ್ಮನ್ನು ಕರೆದು ತಮ್ಮ ಆಶ್ಚರ್ಯಕರವಾದ ಬೆಳಕಿಗೆ ಸೇರಿಸಿದ ದೇವರನ್ನು ಕೊಂಡಾಡುವವರಾಗುವಂತೆ ನೀವು ಆಯ್ದುಕೊಂಡ ಜನರೂ ರಾಜತನದ ಯಾಜಕರೂ ಪರಿಶುದ್ಧ ಜನಾಂಗವೂ ದೇವರ ಜನರೂ ಆಗಿದ್ದೀರಿ.


ಯೆರೂಸಲೇಮನ್ನು ಸ್ಥಾಪಿಸಿ, ಲೋಕಪ್ರಸಿದ್ಧಿಗೆ ತರುವ ತನಕ ಆತನಿಗೂ ವಿಶ್ರಾಂತಿ ಕೊಡಬೇಡಿರಿ.


ಚೀಯೋನಿಗೋಸ್ಕರ ನಾನು ಮೌನವಾಗಿರುವುದಿಲ್ಲ! ಯೆರೂಸಲೇಮಿಗೋಸ್ಕರ ಅದರ ವಿಮೋಚನೆಯು ಪ್ರಕಾಶದಂತೆಯೂ, ಅದರ ರಕ್ಷಣೆಯು ಉರಿಯುವ ದೀವಿಟಿಗೆಯಂತೆಯೂ ಹೊರಡುವವರೆಗೆ ನಾನು ವಿಶ್ರಾಂತಿಯಿಂದ ಇರುವುದಿಲ್ಲ.


“ಆಕಾಶಗಳೇ, ಮೇಲಿನಿಂದ ಹನಿಯನ್ನು ಬೀಳಿಸಿರಿ. ಗಗನವು ನೀತಿಯನ್ನು ಸುರಿಸಲಿ. ಭೂಮಿಯು ತೆರೆದು ರಕ್ಷಣೆಯನ್ನು ತರಲಿ. ನೀತಿಯು ಅದರೊಟ್ಟಿಗೆ ಮೊಳೆಯಲಿ. ಇದನ್ನು ಸೃಷ್ಟಿಸಿದ ಯೆಹೋವ ದೇವರು ನಾನೇ!


ಉತ್ತರಗಾಳಿಯೇ, ಬೀಸು, ದಕ್ಷಿಣ ಗಾಳಿಯೇ ಬಾ ನನ್ನ ತೋಟದ ಮೇಲೆ ಬೀಸು. ಸುಗಂಧ ಸುವಾಸನೆ ಹರಡಲಿ. ನನ್ನ ಪ್ರಿಯನು ತನ್ನ ತೋಟಕ್ಕೆ ಬಂದು ಉತ್ತಮ ಫಲಗಳನ್ನು ರುಚಿಸಲಿ.


ಸತ್ಯವು ಭೂಮಿಯಿಂದ ಮೊಳೆಯುವುದು. ನೀತಿಯು ಆಕಾಶದಿಂದ ಕೆಳಗೆ ದೃಷ್ಟಿಸುವುದು.


ಆದರೆ ಒಳ್ಳೆಯ ಭೂಮಿಯಲ್ಲಿ ಬಿತ್ತಲಾಗಿರುವ ಬೀಜವಾಗಿರುವವರು, ವಾಕ್ಯವನ್ನು ಕೇಳಿ ಅದನ್ನು ಗ್ರಹಿಸಿಕೊಳ್ಳುತ್ತಾರೆ. ಇವರು ಫಲ ಫಲಿಸುವವರಾಗಿ ನೂರರಷ್ಟು ಅರವತ್ತರಷ್ಟು ಮತ್ತು ಮೂವತ್ತರಷ್ಟು ಫಲವನ್ನು ಕೊಡುತ್ತಾರೆ.”


ಆಗ ಯೇಸು ಅನೇಕ ವಿಷಯಗಳನ್ನು ಅವರಿಗೆ ಸಾಮ್ಯಗಳಲ್ಲಿ ಹೇಳಿದ್ದು: “ಒಬ್ಬ ರೈತನು ಬಿತ್ತುವುದಕ್ಕೆ ಹೊರಟನು;


ಬಲಾತ್ಕಾರವೂ, ನಿನ್ನ ದೇಶದೊಳಗೆ ಹಾಳಾದದ್ದೂ, ನಾಶವೂ, ನಿನ್ನ ಮೇರೆಗಳಲ್ಲಿ ಕೇಳಿಬರುವುದಿಲ್ಲ. ನಿನ್ನ ಗೋಡೆಗಳಿಗೆ ರಕ್ಷಣೆ ಎಂದೂ, ನಿನ್ನ ಬಾಗಿಲುಗಳಿಗೆ ಸ್ತೋತ್ರವೆಂದೂ ಹೆಸರಿಡುವೆ.


ಧಾನ್ಯದ ಸಮೃದ್ಧಿಯು ದೇಶದಲ್ಲಿ ಬೆಟ್ಟಗಳ ತುದಿಯವರೆಗೂ ಇರಲಿ; ಅದರ ಫಲವು ಲೆಬನೋನಿನ ಹಾಗೆ ಸಮೃದ್ಧಿಯಾಗಲಿ; ಪಟ್ಟಣದವರು ಭೂಮಿಯ ಸೊಪ್ಪಿನ ಹಾಗೆ ವೃದ್ಧಿ ಆಗಲಿ.


ಬೆಟ್ಟಗುಡ್ಡಗಳಿಂದ ಸಮೃದ್ಧಿಯೂ ನೀತಿಯ ಫಲವೂ ಜನರಿಗೆ ಬರಲಿ.


ಆದರೆ ಕೆಲವು ಬೀಜಗಳು ಒಳ್ಳೆಯ ಭೂಮಿಯಲ್ಲಿ ಬಿದ್ದು, ಒಂದು ನೂರರಷ್ಟು ಮತ್ತೆ ಕೆಲವು ಅರವತ್ತರಷ್ಟು ಇನ್ನು ಕೆಲವು ಮೂವತ್ತರಷ್ಟು ಫಲಕೊಟ್ಟವು.


ಆ ದಿನದಲ್ಲಿ ಯೆಹೋವ ದೇವರ ಕೊಂಬೆಯು ಸುಂದರವಾಗಿಯೂ, ಮಹಿಮೆಯುಳ್ಳದ್ದಾಗಿಯೂ ಇರುವುದು. ಭೂಮಿಯ ಫಲವು ಇಸ್ರಾಯೇಲರಲ್ಲಿ ಉಳಿದವರಿಗೆ ಅಭಿಮಾನವೂ, ರಮ್ಯವಾಗಿಯೂ ಇರುವುದು.


ನನ್ನಷ್ಟಕ್ಕೆ ನಾನೇ ಆಣೆಯನ್ನು ಇಟ್ಟಿದ್ದೇನೆ. ನೀತಿಯುಳ್ಳ ವಾಕ್ಯವು ನನ್ನ ಬಾಯಿಂದ ಹೊರಟಿದೆ. ಅದು ಹಿಂದಿರುಗದು. ಪ್ರತಿಯೊಬ್ಬರು ನನ್ನ ಮುಂದೆ ಮೊಣಕಾಲೂರುವರು. ಪ್ರತಿಯೊಂದು ನಾಲಿಗೆಯೂ ಪ್ರತಿಜ್ಞೆ ಮಾಡುವುದು.


ಯೆಹೋವ ದೇವರಲ್ಲಿ ಮಾತ್ರ ನೀತಿಯೂ ಬಲವೂ ಉಂಟೆಂದು ಮನುಷ್ಯರೂ ಸಹ ಅವರ ಬಳಿಗೆ ಬರುವರು.” ಆತನ ಮೇಲೆ ಉರಿಗೊಂಡವರೆಲ್ಲರೂ ನಾಚಿಕೆಗೆ ಈಡಾಗುವರು, ಎಂದು ಒಬ್ಬನು ನಿಶ್ಚಯವಾಗಿ ಹೇಳುತ್ತಾನೆ.


ನನ್ನ ನೀತಿಯನ್ನು ಹತ್ತಿರಕ್ಕೆ ಬರಮಾಡುವೆನು. ಅದು ಇನ್ನು ದೂರವಾಗಿರದು. ನನ್ನ ರಕ್ಷಣೆಯು ಇನ್ನು ತಡವಾಗದು, ನನ್ನ ಮಹಿಮೆಯಾಗಿರುವ ಇಸ್ರಾಯೇಲಿಗೋಸ್ಕರ ಚೀಯೋನಿನಲ್ಲಿ ರಕ್ಷಣೆಯನ್ನು ಉಂಟುಮಾಡುವೆನು.


ನೀನು ನನ್ನ ಆಜ್ಞೆಗಳಿಗೆ ಕಿವಿಗೊಟ್ಟಿದ್ದರೆ ಚೆನ್ನಾಗಿತ್ತು! ಆಗ ನಿನ್ನ ಸಮಾಧಾನವು ನದಿಯಂತೆಯೂ, ನಿನ್ನ ನೀತಿಯು ಸಮುದ್ರದ ಅಲೆಗಳಂತೆಯೂ ಇರುತ್ತಿದ್ದವು,


ನಿನ್ನ ಜನರೆಲ್ಲರೂ ನೀತಿವಂತರಾಗಿರುವರು. ದೇಶವನ್ನು ಸದಾಕಾಲಕ್ಕೆ ಸ್ವಾಧೀನಮಾಡಿಕೊಳ್ಳುವರು. ನಾನು ಮಹಿಮೆ ಹೊಂದುವುದಕ್ಕೋಸ್ಕರ ನಾನು ನೆಟ್ಟ ಕೊಂಬೆಯೂ, ನನ್ನ ಕೈ ಸೃಷ್ಟಿಯೂ ಆಗಿರುವರು.


ಅನಂತರ ದೇವರು, “ಭೂಮಿಯು ಹುಲ್ಲನ್ನೂ ಬೀಜಬಿಡುವ ಗಿಡಗಳನ್ನೂ ಅದರದರ ಜಾತಿಗನುಸಾರವಾಗಿ ಬೀಜವುಳ್ಳ ಹಣ್ಣಿನ ಮರಗಳನ್ನೂ ಉತ್ಪತ್ತಿ ಮಾಡಲಿ,” ಎಂದು ಹೇಳಿದರು. ಅದು ಹಾಗೆಯೇ ಆಯಿತು.


ಆಗ ಇತರ ಜನಾಂಗಗಳು ನಿನ್ನ ವಿಮೋಚನೆಯನ್ನೂ, ಅರಸರೆಲ್ಲರು ನಿನ್ನ ಮಹಿಮೆಯನ್ನೂ ನೋಡುವರು. ಯೆಹೋವ ದೇವರ ಬಾಯಿ ನೇಮಿಸುವ ಹೊಸ ಹೆಸರು ನಿನಗೆ ದೊರೆಯುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು