Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 60:1 - ಕನ್ನಡ ಸಮಕಾಲಿಕ ಅನುವಾದ

1 ಏಳು, ಪ್ರಕಾಶಿಸು. ಏಕೆಂದರೆ ನಿನ್ನ ಮೇಲೆ ಬೆಳಕು ಬಂತು, ಯೆಹೋವ ದೇವರ ಮಹಿಮೆಯು ನಿನ್ನ ಮೇಲೆ ಉದಯವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಏಳು, ಪ್ರಕಾಶಿಸು, ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ನಿನಗೆ ಬೆಳಕು ಬಂದಿದೆ ಜೆರುಸಲೇಮೇ, ಏಳು, ಪ್ರಕಾಶಿಸು; ನಿನ್ನ ಮೇಲೆ ಉದಯಿಸಿದೆ ಸರ್ವೇಶ್ವರನ ತೇಜಸ್ಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಏಳು, ಪ್ರಕಾಶಿಸು, ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 “ಜೆರುಸಲೇಮೇ, ಏಳು, ಪ್ರಕಾಶಿಸು! ನಿನ್ನ ಪ್ರಕಾಶವೆಂಬಾತನು ಬರುತ್ತಾನೆ. ಯೆಹೋವನ ಮಹಿಮೆಯು ನಿನ್ನ ಮೇಲೆ ಪ್ರಕಾಶಿಸುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 60:1
32 ತಿಳಿವುಗಳ ಹೋಲಿಕೆ  

ಆದ್ದರಿಂದ ಹೀಗೆ ಹೇಳಲಾಗಿದೆ: “ನಿದ್ರೆ ಮಾಡುವವನೇ, ಎಚ್ಚರವಾಗು, ಸತ್ತವರಿಂದ ಎದ್ದೇಳು, ಕ್ರಿಸ್ತನು ನಿನ್ನ ಮೇಲೆ ಪ್ರಕಾಶಿಸುವನು.”


ನೀವು ಹಿಂದೊಮ್ಮೆ ಕತ್ತಲೆಯಾಗಿದ್ದಿರಿ. ಆದರೆ ಈಗ ನೀವು ಕರ್ತನಲ್ಲಿ ಬೆಳಕಾಗಿದ್ದೀರಿ. ಬೆಳಕಿನ ಮಕ್ಕಳಾಗಿ ಬಾಳಿರಿ.


ಯೇಸು ಪುನಃ ಜನರೊಂದಿಗೆ ಮಾತನಾಡುತ್ತಾ, “ನಾನೇ ಲೋಕದ ಬೆಳಕಾಗಿದ್ದೇನೆ. ನನ್ನನ್ನು ಹಿಂಬಾಲಿಸುವವರು ಎಂದಿಗೂ ಕತ್ತಲೆಯಲ್ಲಿ ನಡೆಯುವುದಿಲ್ಲ. ಅವರು ಜೀವದ ಬೆಳಕನ್ನು ಹೊಂದಿರುವರು,” ಎಂದು ಹೇಳಿದರು.


ಆಗ ನಿನ್ನ ಬೆಳಕು ಉದಯದಂತೆ ಪ್ರತ್ಯಕ್ಷವಾಗುವುದು. ನಿನ್ನ ಆರೋಗ್ಯ ತ್ವರಿತವಾಗಿ ಕಾಣಿಸಿಕೊಳ್ಳುತ್ತದೆ. ನಿನ್ನ ನೀತಿ ನಿನಗೆ ಮುಂಬಲವಾಗಿರುವುದು. ಯೆಹೋವ ದೇವರ ಮಹಿಮೆಯು ನಿನಗೆ ಹಿಂಬಲವಾಗಿರುವುದು.


ನನ್ನಲ್ಲಿ ನಂಬಿಕೆಯಿಡುವವರು ಕತ್ತಲೆಯಲ್ಲಿ ಉಳಿಯಬಾರದೆಂದು ನಾನು ಬೆಳಕಾಗಿ ಲೋಕಕ್ಕೆ ಬಂದಿದ್ದೇನೆ.


ಅದೇ ರೀತಿಯಲ್ಲಿ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ; ಹೀಗಾದರೆ ಜನರು ನಿಮ್ಮ ಸತ್ಕ್ರಿಯೆಗಳನ್ನು ಕಂಡು ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಮಹಿಮೆಪಡಿಸುವರು.


ಆದರೆ ನನ್ನ ನಾಮದಲ್ಲಿ ಭಯಭಕ್ತಿಯಿಟ್ಟಿರುವ ನಿಮಗೆ, ನೀತಿ ಸೂರ್ಯನು ತಮ್ಮ ಕಿರಣಗಳಿಂದ ಸ್ವಸ್ಥತೆಯನ್ನುಂಟು ಮಾಡುವವನಾಗಿ ಉದಯಿಸುವನು. ನೀವು ಹೊರಟು ಕೊಟ್ಟಿಗೆಯಿಂದ ಹೊರಬಂದ ಕರುಗಳ ಹಾಗೆ ಕುಣಿದಾಡುವಿರಿ.


ನಿಜ ಬೆಳಕು ಲೋಕಕ್ಕೆ ಬರುವುದಾಗಿತ್ತು. ಆ ಬೆಳಕೇ ಪ್ರತಿ ಮಾನವನಿಗೂ ಬೆಳಕನ್ನು ನೀಡುವುದಾಗಿತ್ತು.


ಇನ್ನು ರಾತ್ರಿ ಇರುವುದಿಲ್ಲ. ದೀಪದ ಬೆಳಕೂ ಸೂರ್ಯನ ಬೆಳಕೂ ಅವಶ್ಯವಿಲ್ಲ. ಕರ್ತದೇವರೇ ಅವರಿಗೆ ಬೆಳಕನ್ನು ಕೊಡುವರು. ಅವರು ಯುಗಯುಗಾಂತರಗಳಲ್ಲಿಯೂ ಆಳುವರು.


ನೀವು ಕ್ರಿಸ್ತ ಯೇಸುವಿನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ, ಧನ್ಯರು. ಏಕೆಂದರೆ, ಮಹಿಮೆಯ ಆತ್ಮರೂ, ದೇವರೂ ನಿಮ್ಮಲ್ಲಿ ವಾಸಿಸುತ್ತಾರೆ.


ಹೀಗೆ ನೀವು ನಿಂದಾರಹಿತರೂ ದೋಷವಿಲ್ಲದವರೂ, “ನಿಷ್ಕಳಂಕರಾದ ದೇವರ ಮಕ್ಕಳಾಗಿ, ವಕ್ರವಾದ ದುಷ್ಟ ಜನಾಂಗದ ಮಧ್ಯದಲ್ಲಿ,” ಜೀವವಾಕ್ಯವನ್ನು ಹಿಡಿದುಕೊಂಡು, ಲೋಕದಲ್ಲಿ ನಕ್ಷತ್ರಗಳಂತೆ ಹೊಳೆಯುವವರಾಗಿರುವಿರಿ.


ಪಟ್ಟಣವನ್ನು ಬೆಳಗಿಸಲು ಸೂರ್ಯನಾಗಲಿ, ಚಂದ್ರನಾಗಲಿ ಅವಶ್ಯವಿಲ್ಲ. ಏಕೆಂದರೆ ದೇವರ ಮಹಿಮೆಯೇ ಅದಕ್ಕೆ ಬೆಳಕಾಗಿತ್ತು. ಕುರಿಮರಿಯಾದಾತನೇ ಅದರ ದೀಪವು.


ಕತ್ತಲಲ್ಲಿ ವಾಸಿಸಿದ ಈ ಸ್ಥಳಗಳ ಜನರಿಗೆ ಮಹಾ ಬೆಳಕು ಕಾಣಿಸಿತು; ಮರಣ ಛಾಯೆಯ ಈ ಪ್ರದೇಶದಲ್ಲಿ ವಾಸಿಸುವವರಿಗೆ ಬೆಳಕು ಉದಯಿಸಿತು.”


ಕತ್ತಲೆಯಲ್ಲಿ ನಡೆಯುವ ಈ ಜನರಿಗೆ ಮಹಾ ಬೆಳಕು ಕಾಣಿಸಿತು, ಮರಣದ ನೆರಳಿನ ದೇಶದಲ್ಲಿ ವಾಸಿಸುವವರ ಮೇಲೆ ಬೆಳಕು ಉದಯಿಸಿತು.


ಆ ತೀರ್ಪು ಏನೆಂದರೆ: ಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕೃತ್ಯಗಳು ಕೆಟ್ಟವುಗಳಾಗಿರುವುದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಪ್ರೀತಿ ಮಾಡಿದರು.


ಅದು ಯೆಹೂದ್ಯರಲ್ಲದವರಿಗೆ ಪ್ರಕಟಣೆಯ ಬೆಳಕೂ, ನಿಮ್ಮ ಪ್ರಜೆಯಾದ ಇಸ್ರಾಯೇಲರ ಮಹಿಮೆಯೂ ಆಗಿದೆ.”


ಅದು ದೇವರ ಮಹಿಮೆಯಿಂದ ಕೂಡಿತ್ತು. ಪಟ್ಟಣದ ಪ್ರಕಾಶವು ಸೂರ್ಯಕಾಂತದಂತೆ ಅಮೂಲ್ಯ ರತ್ನದ ಪ್ರಕಾಶಕ್ಕೆ ಸಮಾನವಾಗಿತ್ತು. ಅದು ಸ್ವಚ್ಛವಾದ ಸ್ಪಟಿಕದಂತೆ ಕಾಣಿಸಿತು.


ದೇವರ ಪಟ್ಟಣವೇ, ನಿನ್ನ ವಿಷಯವಾದ ಮಹಿಮೆಯು ಏನೆಂದರೆ,


ಏಕೆಂದರೆ ಯೆಹೋವ ದೇವರು ಚೀಯೋನನ್ನು ಮರಳಿ ಕಟ್ಟುವರು; ಅವರು ತಮ್ಮ ಮಹಿಮೆಯಲ್ಲಿ ಕಾಣಿಸಿಕೊಳ್ಳುವರು.


ಯಾಕೋಬಿನ ಮನೆತನದವರೇ ಬನ್ನಿರಿ, ಯೆಹೋವ ದೇವರ ಬೆಳಕಿನಲ್ಲಿ ನಡೆಯೋಣ.


ಆಗ ಯೆಹೋವ ದೇವರು ಚೀಯೋನ್ ಪರ್ವತದ ಪ್ರತಿಯೊಂದು ನಿವಾಸದ ಮೇಲೂ, ಅದರ ಸಭೆಗಳ ಮೇಲೂ, ಹಗಲಿನಲ್ಲಿ ಹೊಗೆಯನ್ನೂ, ಮೇಘವನ್ನೂ, ಇರುಳಿನಲ್ಲಿ ಪ್ರಜ್ವಲಿಸುವ ಅಗ್ನಿಪ್ರಕಾಶವನ್ನು ಉಂಟುಮಾಡುವರು. ಏಕೆಂದರೆ ದೇವರ ಮಹಿಮೆ ಎಲ್ಲದರ ಮೇಲೆ ಚಪ್ಪರದಂತೆಯೂ ಆವರಿಸುವುದು.


ಆಮೇಲೆ ಸೇನಾಧೀಶ್ವರ ಯೆಹೋವ ದೇವರು ಚೀಯೋನ್ ಪರ್ವತದಲ್ಲಿಯೂ, ಯೆರೂಸಲೇಮಿನಲ್ಲಿಯೂ ಹಿರಿಯರ ಮುಂದೆ ಮಹಿಮೆಯಿಂದ ಆಳುವಾಗ, ಚಂದ್ರನಿಗೆ ಅವಮಾನವಾಗುವುದು, ಸೂರ್ಯನು ನಾಚಿಕೆ ಪಡುವನು.


ಆ ದಿನದಲ್ಲಿ ಸೇನಾಧೀಶ್ವರ ಯೆಹೋವ ದೇವರು ತನ್ನ ಜನರಲ್ಲಿ ಉಳಿದವರಿಗೆ ಮಹಿಮೆಯ ಕಿರೀಟವೂ ಮತ್ತು ಸುಂದರವಾದ ಮಕುಟವೂ ಆಗಿರುವರು.


ಅದು ಸಮೃದ್ಧಿಯಾಗಿ ಅರಳಿ, ಆನಂದ ಧ್ವನಿ ಎತ್ತಿ ಉಲ್ಲಾಸಿಸುವುದು. ಲೆಬನೋನಿನ ಘನತೆಯು ಮತ್ತು ಕರ್ಮೆಲ್, ಶಾರೋನಿನ ಗೌರವವು ಅದಕ್ಕೆ ಕೊಡಲಾಗುವುದು. ಅವರು ಯೆಹೋವ ದೇವರ ಮಹಿಮೆಯನ್ನು ಮತ್ತು ನಮ್ಮ ದೇವರ ಘನತೆಯನ್ನು ಕಾಣುವರು.


“ನೀನು ಕುರುಡರಿಗೆ ಕಣ್ಣುಗಳನ್ನು ತೆರೆದು, ಸೆರೆಯವರನ್ನು ಸೆರೆಯಿಂದಲೂ, ಕತ್ತಲೆಯಲ್ಲಿ ವಾಸಿಸುವವರನ್ನು ಕಾರಾಗೃಹದಿಂದಲೂ ಹೊರತರಬೇಕು,” ಎಂದು ಯೆಹೋವ ದೇವರಾಗಿರುವ ನಾನೇ ನಿನ್ನನ್ನು ನೀತಿಯಿಂದ ಕರೆದು, ನಿನ್ನ ಕೈಯನ್ನು ಹಿಡಿದು ಕಾಪಾಡಿ, ನಿನ್ನನ್ನು ಜನಗಳಿಗೆ ಒಡಂಬಡಿಕೆಯ ಆಧಾರವನ್ನಾಗಿಯೂ, ಇತರ ಜನಗಳಿಗೆ ಬೆಳಕನ್ನಾಗಿಯೂ ನೇಮಿಸಿದ್ದೇನೆ.


ಆಕೆಯ ಸಾಂತ್ವನ ಸ್ತನವನ್ನು ಕುಡಿದು ನೀವು ತೃಪ್ತಿಯಾಗಿರುವಿರಿ. ನೀವು ಕುಡಿಯುವಿರಿ ಮತ್ತು ಅದರ ಸಮೃದ್ಧಿಯು ನಿಮ್ಮ ಸಂತೋಷಕ್ಕೆ ಕಾರಣವಾಗಿದೆ.”


ಚೀಯೋನಿಗೋಸ್ಕರ ನಾನು ಮೌನವಾಗಿರುವುದಿಲ್ಲ! ಯೆರೂಸಲೇಮಿಗೋಸ್ಕರ ಅದರ ವಿಮೋಚನೆಯು ಪ್ರಕಾಶದಂತೆಯೂ, ಅದರ ರಕ್ಷಣೆಯು ಉರಿಯುವ ದೀವಿಟಿಗೆಯಂತೆಯೂ ಹೊರಡುವವರೆಗೆ ನಾನು ವಿಶ್ರಾಂತಿಯಿಂದ ಇರುವುದಿಲ್ಲ.


ಆಗ ಇತರ ಜನಾಂಗಗಳು ನಿನ್ನ ವಿಮೋಚನೆಯನ್ನೂ, ಅರಸರೆಲ್ಲರು ನಿನ್ನ ಮಹಿಮೆಯನ್ನೂ ನೋಡುವರು. ಯೆಹೋವ ದೇವರ ಬಾಯಿ ನೇಮಿಸುವ ಹೊಸ ಹೆಸರು ನಿನಗೆ ದೊರೆಯುವುದು.


ಆಗ ಯೆಹೋವ ದೇವರ ಮಹಿಮೆಯು ಪೂರ್ವದಿಕ್ಕಿಗೆ ಅಭಿಮುಖವಾಗಿದ್ದ ಬಾಗಿಲಿನ ಮಾರ್ಗವಾಗಿ ಆಲಯದೊಳಗೆ ಪ್ರವೇಶಿಸಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು