Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 6:13 - ಕನ್ನಡ ಸಮಕಾಲಿಕ ಅನುವಾದ

13 ಆದರೆ ದೇಶದಲ್ಲಿ ಹತ್ತನೆಯ ಪಾಲು ಉಳಿದಿದ್ದರೂ, ಅದು ಕೂಡ ನಾಶವಾಗುವುದು. ಏಲಾ ಮರವನ್ನಾಗಲೀ, ಅಲ್ಲೋನ್ ಮರವನ್ನಾಗಲೀ ಕಡಿದ ಮೇಲೆ ಉಳಿಯುವುದು ಬುಡ ಮಾತ್ರ. ಅದೇ ರೀತಿಯಾಗಿ ಪವಿತ್ರ ಜನರು ದೇಶದಲ್ಲಿ ಬುಡವಾಗಿ ಉಳಿದಿರುವರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಆಗ ದೇಶದಲ್ಲಿ ಹತ್ತನೆಯ ಒಂದು ಭಾಗ ಉಳಿದಿದ್ದರೂ, ಅದೂ ಸಹ ನಾಶವಾಗುವುದು. ಏಲಾ ಮರವನ್ನಾಗಲೀ, ಅಲ್ಲೋನ್ ಮರವನ್ನಾಗಲೀ ಕಡಿದ ಮೇಲೆ, ಉಳಿಯುವುದು ಬುಡ ಮಾತ್ರ” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 “ನಾಡಿನ ಹತ್ತನೇ ಒಂದು ಭಾಗ ಉಳಿದಿದ್ದರೂ ಅದು ಕೂಡ ನಾಶವಾಗುವುದು. ಏಲಾ ಮರವನ್ನಾಗಲೀ ಅಲ್ಲೋನ್ ಮರವನ್ನಾಗಲೀ ಕಡಿದ ಮೇಲೆ ಉಳಿಯುವುದು ಬುಡ ಮಾತ್ರ” ಎಂದರು. ಹೀಗೆ ಉಳಿದ ಬುಡವು ಮುಂದೆ ದೇವಜನರಾಗಿ ಚಿಗುರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಆಗ ದೇಶದಲ್ಲಿ ಹತ್ತನೆಯ ಒಂದು ಭಾಗ ಉಳಿದಿದ್ದರೂ ಅದೂ ಕೂಡಾ ನಾಶವಾಗುವದು; ಏಲಾ ಅಲ್ಲೋನ್ ಮರಗಳನ್ನೂ ಕಡಿದ ಮೇಲೆ ಅವುಗಳ ಬುಡವು ನಿಲ್ಲುವ ಹಾಗೆ ದೇವಕುಲವು ಮೋಟುಬುಡವಾಗಿ ನಿಲ್ಲುವದು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಆದರೆ ದೇಶದಲ್ಲಿ ಹತ್ತನೆ ಒಂದು ಭಾಗದಷ್ಟು ಜನರು ಮಾತ್ರ ಉಳಿಯುವರು. ಇವರು ನಾಶವಾಗುವುದಿಲ್ಲ. ಯಾಕೆಂದರೆ ಇವರು ಯೆಹೋವನ ಬಳಿಗೆ ಹಿಂತಿರುಗಿ ಬಂದವರು. ಇವರು ಓಕ್ ಮರದಂತಿರುವರು. ಆ ಮರವು ಕಡಿಯಲ್ಪಟ್ಟರೂ ಅದರ ಬುಡವು ಹಾಗೆಯೇ ಉಳಿಯುವದು. ಈ ಕಾಂಡದ ಬುಡವು ಬಹು ವಿಶೇಷವಾದ ಬೀಜವಾಗಿರುವದು ಮತ್ತು ಅದು ಪುನಃ ಬೆಳೆಯುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 6:13
25 ತಿಳಿವುಗಳ ಹೋಲಿಕೆ  

ನೀನು ನನಗೆ ವಿಧೇಯನಾದದ್ದರಿಂದ, ನಿನ್ನ ಸಂತತಿಯ ಮೂಲಕ ಭೂಲೋಕದ ಎಲ್ಲಾ ಜನಾಂಗಗಳಿಗೂ ಆಶೀರ್ವಾದ ಉಂಟಾಗುವುದು,” ಎಂದರು.


ಇಸ್ರಾಯೇಲರು ತಮಗೂ, ತಮ್ಮ ಪುತ್ರರಿಗೂ ಅವರ ಪುತ್ರಿಯರನ್ನು ತೆಗೆದುಕೊಂಡರು. ಆದಕಾರಣ ಪರಿಶುದ್ಧ ಸಂತಾನದವರು ಈ ದೇಶದ ಜನರ ಸಂಗಡ ಬೆರೆತುಕೊಂಡಿದ್ದಾರೆ. ನಿಶ್ಚಯವಾಗಿ ಪ್ರಧಾನರು ಮತ್ತು ಅಧಿಕಾರಸ್ಥರು ಈ ಅಪನಂಬಿಗಸ್ತಿಕೆಗೆ ಮುಂದಾಳುಗಳಾದರು,” ಎಂದು ತಿಳಿಸಿದರು.


“ಕರ್ತನು ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಯಾರೂ ತಪ್ಪಿಹೋಗುವುದಿಲ್ಲ. ಆದರೆ ತಾನು ಆಯ್ಕೆಯಾದವರಿಗಾಗಿ ಆ ದಿನಗಳನ್ನು ಕಡಿಮೆ ಮಾಡಿದ್ದಾರೆ.


ನಿನ್ನನ್ನು ಸೃಷ್ಟಿಸಿದವನು ಒಬ್ಬನೇ ಅಲ್ಲವೇ? ನೀವು ದೇಹ ಮತ್ತು ಆತ್ಮದಲ್ಲಿ ಅವರಿಗೆ ಸೇರಿದವರು. ಮತ್ತು ಒಬ್ಬರೇ ದೇವರಾಗಿರುವ ದೇವರು ಏನು ಹುಡುಕುತ್ತಾರೆ? ದೈವಿಕ ಸಂತಾನ. ಆದ್ದರಿಂದ ನೀವು ಜಾಗರೂಕರಾಗಿರಿ ಮತ್ತು ನಿಮ್ಮ ಯೌವನದ ಹೆಂಡತಿಗೆ ವಿಶ್ವಾಸದ್ರೋಹ ಮಾಡಬೇಡಿ.


ಸೇನಾಧೀಶ್ವರ ಯೆಹೋವ ದೇವರು ನಮಗೆ ಮಿಕ್ಕಿದ್ದರಲ್ಲಿ ಸ್ವಲ್ಪವನ್ನಾದರೂ ಉಳಿಸದೆ ಹೋಗಿದ್ದರೆ, ನಾವು ಸೊದೋಮಿನಂತೆ ಆಗುತ್ತಿದ್ದೆವು, ಗೊಮೋರಕ್ಕೆ ಸಮಾನವಾಗಿಯೂ ಇರುತ್ತಿದ್ದೆವು.


ನಮ್ಮ ಪಿತೃಗಳು ಅವರಿಗೆ ಸೇರಿದವರು. ಕ್ರಿಸ್ತ ಯೇಸುವು ಮನುಷ್ಯರಾಗಿ ಹುಟ್ಟಿದ್ದು ಅವರ ವಂಶದಲ್ಲಿಯೇ; ಈ ಕ್ರಿಸ್ತ ಯೇಸುವೇ ಎಲ್ಲರ ಮೇಲಿರುವ ದೇವರೂ ಎಂದೆಂದಿಗೂ ಸ್ತುತಿಹೊಂದತಕ್ಕವರೂ ಆಗಿದ್ದಾರೆ! ಆಮೆನ್.


ಹೀಗಿರುವಲ್ಲಿ ಚೀಯೋನಿನಲ್ಲಿ ಉಳಿದವರು, ಯೆರೂಸಲೇಮಿನಲ್ಲಿ ಉಳಿದವರು ಹಾಗೂ ಯೆರೂಸಲೇಮಿನಲ್ಲಿ ವಾಸಿಸುವವರೆಂದೂ ದಾಖಲೆಗೊಂಡ ಪ್ರತಿಯೊಬ್ಬರೂ ಪವಿತ್ರರು ಎಂದು ಕರೆಯಲಾಗುವರು.


“ಆ ದಿನಗಳನ್ನು ಕಡಿಮೆ ಮಾಡದಿದ್ದರೆ, ಒಬ್ಬನೂ ಉಳಿಯುವಂತಿಲ್ಲ. ಆದರೆ ಆಯ್ಕೆಯಾದವರಿಗಾಗಿ ಆ ದಿನಗಳನ್ನು ಕಡಿಮೆ ಮಾಡಲಾಗುವುದು.


ಏಕೆಂದರೆ ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಪರಿಶುದ್ಧ ಜನರು. ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಭೂಮಿಯ ಮೇಲಿರುವ ಎಲ್ಲಾ ಜನರೊಳಗಿಂದ ತಮಗೆ ಸ್ವಂತ ಜನರಾಗಿರಲು ತಮ್ಮ ಆಸ್ತಿಯಾಗಿ ಆರಿಸಿಕೊಂಡಿದ್ದಾರೆ.


ಇಷಯನ ಬುಡದಿಂದ ಒಂದು ಚಿಗುರು ಒಡೆಯುವುದು ಮತ್ತು ಅದರ ಬೇರಿನಿಂದ ಕೊಂಬೆಯು ಫಲಕೊಡುವುದು.


“ ‘ಆದರೆ ನಾನು ಕೆಲವರನ್ನು ಉಳಿಸುತ್ತೇನೆ; ಹೇಗೆಂದರೆ, ನೀವು ದೇಶಗಳ ಮತ್ತು ಜನಾಂಗಗಳ ನಡುವೆ ಚದರಿಹೋದಾಗ ನಿಮ್ಮಲ್ಲಿ ಕೆಲವರು ಖಡ್ಗದಿಂದ ತಪ್ಪಿಸಿಕೊಳ್ಳುವಿರಿ.


ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಯುದ್ಧಕ್ಕೆ ಹೊರಟ ಸಾವಿರ ಮಂದಿ ಸೈನಿಕರಲ್ಲಿ, ಪಟ್ಟಣಕ್ಕೆ ಮರಳಿದವರು ನೂರೇ ಮಂದಿ. ರಣರಂಗಕ್ಕೆ ಹೊರಟ ನೂರು ಮಂದಿ ಯೋಧರಲ್ಲಿ, ಇಸ್ರಾಯೇಲಿಗೆ ಮರಳಿದವರು ಹತ್ತೇ ಮಂದಿ.”


ಯೆಹೋವ ದೇವರು ಹೀಗೆ ಹೇಳುತ್ತಾರೆ, ಸಮಸ್ತ ದೇಶದಲ್ಲಿ ಮೂರರಲ್ಲಿ ಎರಡು ಪಾಲು ಹತರಾಗಿ ನಾಶವಾಗುವರು. ಆದರೆ ಮೂರನೆಯ ಪಾಲು, ಅದರಲ್ಲಿ ಉಳಿಯುವರು.


ನೀವು ನಿಮ್ಮ ದೇವರಾದ ಯೆಹೋವ ದೇವರ ಮಾತನ್ನು ಕೇಳದೇ ಹೋದದ್ದರಿಂದ, ಆಕಾಶದ ನಕ್ಷತ್ರಗಳ ಹಾಗೆ ಅಸಂಖ್ಯಾತರಾಗಿರುವ ನೀವು ಸ್ವಲ್ಪ ಮಂದಿಯಾಗಿ ಉಳಿಯುವಿರಿ.


“ಈಗ ನಮ್ಮ ಯೆಹೋವ ದೇವರೇ, ಸ್ವಲ್ಪ ಹೊತ್ತು ನಮಗೆ ದಯೆತೋರಿ ನಮ್ಮ ದಾಸತ್ವದಿಂದ ನಮಗೆ ಬಿಡುಗಡೆ ಕೊಟ್ಟಿದ್ದೀರಿ. ನಮ್ಮ ಕಣ್ಣುಗಳನ್ನು ಬೆಳಗಿಸಿ, ತಮ್ಮ ಪರಿಶುದ್ಧ ಸ್ಥಾನದಲ್ಲಿ ನೆಲೆಗೊಳಿಸುವಂತೆ ಮಾಡಿದ್ದೀರಿ


ಅವರು ಅಸ್ಸೀರಿಯ ದೇಶವನ್ನು ಖಡ್ಗದಿಂದಲೂ ನಿಮ್ರೋದನ ದೇಶವನ್ನು ಹಿಡಿದ ಖಡ್ಗದಿಂದಲೂ ಆಳುವರು. ಅಸ್ಸೀರಿಯವು ನಮ್ಮ ದೇಶದಲ್ಲಿ ಬಂದು ನಮ್ಮ ಪ್ರದೇಶವನ್ನು ಮುತ್ತಿಗೆ ಹಾಕಿ ಪ್ರಾಂತಗಳಲ್ಲಿ ನಡೆಯುವಾಗ ಆತನು ನಮ್ಮನ್ನು ತಪ್ಪಿಸುವನು.


ಆದರೆ ನಿನ್ನ ಮಧ್ಯದಲ್ಲಿ ಸೌಮ್ಯರನ್ನೂ ದೀನರನ್ನೂ ಉಳಿಸುವೆನು. ಇವರು ಯೆಹೋವ ದೇವರ ಹೆಸರಿನಲ್ಲಿ ನಂಬಿಕೆ ಇಡುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು