ಯೆಶಾಯ 57:13 - ಕನ್ನಡ ಸಮಕಾಲಿಕ ಅನುವಾದ13 ನೀನು ಸಹಾಯಕ್ಕಾಗಿ ಕೂಗುವಾಗ ನಿನ್ನ ವಿಗ್ರಹಗಳು ನಿನ್ನನ್ನು ರಕ್ಷಿಸಲಿ. ಇವುಗಳನ್ನೆಲ್ಲಾ ಗಾಳಿಯು ಬಡಿದುಕೊಂಡು ಹೋಗುವುದು. ವ್ಯರ್ಥವಾದದ್ದು ಅವುಗಳನ್ನು ತೆಗೆದುಕೊಂಡು ಹೋಗುವುದು. ಆದರೆ ನನ್ನಲ್ಲಿ ಆಶ್ರಯಿಸುವವನು, ದೇಶವನ್ನು ವಶಮಾಡಿಕೊಂಡು, ನನ್ನ ಪರಿಶುದ್ಧ ಪರ್ವತವನ್ನು ಬಾಧ್ಯವಾಗಿ ಹೊಂದುವನು.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ನೀನು ಕೂಗಿಕೊಳ್ಳುವಾಗ ನೀನು ಕೂಡಿಹಾಕಿಕೊಂಡಿರುವ ವಿಗ್ರಹಗಳು ನಿನ್ನನ್ನುದ್ಧರಿಸಲಿ. ಆದರೆ ಇವುಗಳನ್ನೆಲ್ಲಾ ಗಾಳಿಯು ಬಡಿದುಕೊಂಡು ಹೋಗುವುದು, ಉಸಿರು ಅದನ್ನು ಒಯ್ಯುವುದು. ನನ್ನನ್ನು ಆಶ್ರಯಿಸುವವನೋ ದೇಶವನ್ನು ಅನುಭವಿಸಿ ನನ್ನ ಪರಿಶುದ್ಧ ಪರ್ವತವನ್ನು ಬಾಧ್ಯವಾಗಿ ಹೊಂದುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ಸಹಾಯಕ್ಕಾಗಿ ನೀನು ಕೂಗಿಕೊಳ್ಳುವಾಗ ನೀನು ಕೂಡಿಹಾಕಿಕೊಂಡಿರುವ ಈ ವಿಗ್ರಹಗಳೇ ನಿನಗೆ ರಕ್ಷಣೆ ನೀಡಲಿ. ಇವುಗಳನ್ನೆಲ್ಲ ಗಾಳಿ ಬಡಿದುಕೊಂಡು ಹೋಗುವುದು. ಕೇವಲ ಒಂದು ಉಸಿರು ಸಾಕು, ಇವುಗಳನ್ನು ಒಯ್ದುಬಿಡಲು. ಆದರೆ ನನ್ನನ್ನು ಆಶ್ರಯಿಸಿಕೊಂಡವನು ನಾಡಿಗೆ ಬಾಧ್ಯಸ್ಥನಾಗುವನು; ನನ್ನ ಪವಿತ್ರ ಪರ್ವತವನ್ನು ಸ್ವಾಧೀನಮಾಡಿಕೊಳ್ಳುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ನೀನು ಕೂಗಿಕೊಳ್ಳುವಾಗ ನೀನು ಕೂಡಿಹಾಕಿಕೊಂಡಿರುವ ಇವುಗಳೇ ನಿನ್ನನ್ನುದ್ಧರಿಸಲಿ. ಆದರೆ ಇವುಗಳನ್ನೆಲ್ಲಾ ಗಾಳಿಯು ಬಡಿದುಕೊಂಡು ಹೋಗುವದು, ಬರೀ ಉಸಿರಾದರೂ ಒಯ್ಯುವದು. ನನ್ನನ್ನು ಆಶ್ರಯಿಸುವವನೋ ದೇಶವನ್ನನುಭವಿಸಿ ನನ್ನ ಪರಿಶುದ್ಧಪರ್ವತವನ್ನು ಬಾಧ್ಯವಾಗಿ ಹೊಂದುವನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 ನಿಮಗೆ ಸಹಾಯದ ಅವಶ್ಯಕತೆ ಬಂದಾಗ ನೀವು ಆ ಸುಳ್ಳುದೇವರುಗಳನ್ನು ಕರೆಯುವಿರಿ. ಅವುಗಳನ್ನು ನಿಮ್ಮ ಸುತ್ತಲೂ ಸೇರಿಸಿಕೊಂಡಿರುವಿರಿ. ಆದರೆ ನಾನು ಹೇಳುವುದೇನೆಂದರೆ, ಗಾಳಿಯು ಅವುಗಳನ್ನು ಬಡಿದುಕೊಂಡು ಹೋಗುವುದು. ಅವುಗಳನ್ನೆಲ್ಲ ಉಸಿರಿನ ಗಾಳಿಯು ನಿಮ್ಮಿಂದ ದೂರಕ್ಕೆ ಕೊಂಡೊಯ್ಯುವುದು. ಆದರೆ ನನ್ನನ್ನು ಅವಲಂಬಿಸಿರುವವರು ಭೂಮಿಯನ್ನು ಪಡೆದುಕೊಳ್ಳುವರು. ನನ್ನ ಪವಿತ್ರ ಪರ್ವತವನ್ನು ಬಾಧ್ಯವಾಗಿ ಹೊಂದಿಕೊಳ್ಳುವರು.” ಅಧ್ಯಾಯವನ್ನು ನೋಡಿ |