Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 54:11 - ಕನ್ನಡ ಸಮಕಾಲಿಕ ಅನುವಾದ

11 ಸಂಕಟಕ್ಕೊಳಗಾದವಳೇ! ಬಿರುಗಾಳಿಯಿಂದ ಬಡಿಯಲಾಗಿ ಆದರಣೆ ಹೊಂದದವಳೇ, ನಾನು ನಿನ್ನ ಕಲ್ಲುಗಳನ್ನು ಸುಂದರವಾದ ಬಣ್ಣಗಳೊಂದಿಗೆ ಇಟ್ಟು, ನಿನ್ನ ಅಸ್ತಿವಾರವನ್ನು ನೀಲಮಣಿಗಳಿಂದ ಹಾಕಿ ಗಾರೆಯಿಂದ ಕಟ್ಟುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಕುಗ್ಗಿದವಳೇ, ಗಾಳಿಯ ಬಡಿತಕ್ಕೆ ಗುರಿಯಾದವಳೇ, ಯಾರೂ ಸಂತೈಸದವಳೇ, ಇಗೋ, ಇಂದ್ರನೀಲಮಣಿಗಳಿಂದ ನಿನಗೆ ಅಸ್ತಿವಾರವನ್ನು ಹಾಕಿ, ನಿನ್ನ ಕಲ್ಲುಗಳನ್ನು ನೀಲಾಂಜನದ ಗಾರೆಯಿಂದ ಕಟ್ಟುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 “ಶೋಷಣೆಗೆ, ಬಿರುಗಾಳಿಗೆ, ನಿರ್ಗತಿಗೆ ಗುರಿಯಾದವಳೇ, ನಿರ್ಮಿಸುವೆ ನಿನ್ನನು ವಜ್ರವೈಡೂರ್ಯಗಳಿಂದ ಅಸ್ತಿವಾರ ಹಾಕುವೆ ನಿನಗೆ ನೀಲಮಣಿಗಳಿಂದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಕುಗ್ಗಿದವಳೇ, ಗಾಳಿಯ ಬಡಿತಕ್ಕೆ ಗುರಿಯಾದವಳೇ, ಯಾರೂ ಸಂತೈಸದವಳೇ, ಇಗೋ, ಇಂದ್ರನೀಲಮಣಿಗಳಿಂದ ನಿನಗೆ ಅಸ್ತಿವಾರವನ್ನು ಹಾಕಿ ನಿನ್ನ ಕಲ್ಲುಗಳನ್ನು ನೀಲಾಂಜನದ ಗಾರೆಯಿಂದ ಕಟ್ಟುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 “ಬಡನಗರಿಯೇ, ನಿನ್ನ ವೈರಿಗಳು ನಿನಗೆ ವಿರೋಧವಾಗಿ ಬಿರುಗಾಳಿಯಂತೆ ಬಂದಾಗ ಯಾರೂ ನಿನ್ನನ್ನು ಸಂತೈಸಲಿಲ್ಲ. ಆದರೆ ನಾನು ಮತ್ತೆ ನಿನ್ನನ್ನು ನಿರ್ಮಿಸುವೆನು. ನಿನ್ನ ಗೋಡೆಗಳ ಕಲ್ಲುಗಳನ್ನು ಕಟ್ಟಲು ಸುಂದರವಾದ ಗಾರೆಯನ್ನು ಉಪಯೋಗಿಸುವೆನು. ನಾನು ಅಡಿಪಾಯ ಹಾಕುವಾಗ ಮಾಣಿಕ್ಯಗಳನ್ನು ಹಾಕುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 54:11
43 ತಿಳಿವುಗಳ ಹೋಲಿಕೆ  

ಚೀಯೋನು ಬೇಡವಾದದ್ದು, ಅದನ್ನು ನೋಡಿಕೊಳ್ಳುವವರು ಯಾರೂ ಇಲ್ಲ, ಎಂದು ಅವರು ನಿನ್ನ ವಿಷಯ ಹೇಳುವುದನ್ನು ನಾನು ಸಹಿಸಲಾರದೆ, ನಿನಗೆ ಕ್ಷೇಮವನ್ನುಂಟು ಮಾಡಿ, ನಿನ್ನ ಗಾಯಗಳನ್ನು ಸ್ವಸ್ಥ ಮಾಡುವೆನು,’ ಎಂಬುದಾಗಿ ಯೆಹೋವ ದೇವರು ಹೇಳುತ್ತಾರೆ.


ಅಲ್ಲಿದ್ದ ಶಿಷ್ಯರು ವಿಶ್ವಾಸದಲ್ಲಿ ಮುಂದುವರಿಯಲು, “ನಾವು ಅನೇಕ ಸಂಕಟಗಳಿಂದ ದೇವರ ರಾಜ್ಯದೊಳಗೆ ಸೇರಬೇಕು,” ಎಂದು ಹೇಳಿ ದೃಢಪಡಿಸಿದರು.


ಆದರೆ ನಾನು ನನ್ನ ಸಮಸ್ತ ಶಕ್ತಿಯಿಂದ ನನ್ನ ದೇವರ ಮನೆಯ ನಿಮಿತ್ತ, ಬಂಗಾರದ ಕೆಲಸಕ್ಕೋಸ್ಕರ ಬಂಗಾರವನ್ನೂ, ಬೆಳ್ಳಿಯ ಕೆಲಸಕ್ಕೋಸ್ಕರ ಬೆಳ್ಳಿಯನ್ನೂ, ಕಂಚಿನ ಕೆಲಸಕ್ಕೋಸ್ಕರ ಕಂಚನ್ನೂ, ಕಬ್ಬಿಣದ ಕೆಲಸಕ್ಕೋಸ್ಕರ ಕಬ್ಬಿಣವನ್ನೂ, ಮರದ ಕೆಲಸಕ್ಕೋಸ್ಕರ ಮರವನ್ನೂ, ಗೋಮೇಧಿಕ ರತ್ನಗಳನ್ನೂ; ಕೆತ್ತುವುದಕ್ಕೆ ರತ್ನ ವಿಚಿತ್ರವಾದಂಥ ಕಲ್ಲುಗಳನ್ನೂ; ಸಕಲ ಅಮೂಲ್ಯವಾದ ಕಲ್ಲುಗಳನ್ನೂ. ಅಮೃತ ಶಿಲೆಗಳನ್ನೂ ಬಹಳಷ್ಟು ಸಿದ್ಧಮಾಡಿದ್ದೇನೆ.


“ನನ್ನಲ್ಲಿ ನಿಮಗೆ ಸಮಾಧಾನ ಇರುವಂತೆ ಇವುಗಳನ್ನು ನಾನು ನಿಮ್ಮೊಂದಿಗೆ ಮಾತನಾಡಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟವಿರುವದು. ಆದರೆ ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ,” ಎಂದರು.


ಆಗ ನಾನು ನೋಡಲಾಗಿ, ಕೆರೂಬಿಗಳ ತಲೆಯ ಮೇಲಿದ್ದ ಆಕಾಶಮಂಡಲದಲ್ಲಿ ನೀಲಮಣಿಯಂತೆ ಸಿಂಹಾಸನದ ಆಕಾರದಂತಿರುವ ರೂಪವನ್ನು ಕಂಡೆನು. ಅದು ಅವುಗಳ ಮೇಲೆ ಕಾಣಿಸಿತು.


ನೀನು ತ್ಯಜಿಸಿದ ಮನನೊಂದಿರುವ ಯೌವನದ ಪತ್ನಿಯ ಹಾಗೆ ತಿರಸ್ಕಾರಹೊಂದಿರುವೆ. ಯೆಹೋವ ದೇವರು ನಿನ್ನನ್ನು ಕರೆದಿದ್ದಾನೆ, ಎಂದು ನಿನ್ನ ದೇವರು ಹೇಳುತ್ತಾರೆ.


ನೀನು ಹಿಂಸೆಗೊಳಗಾಗಿದ್ದೀ. ಕುಡಿದು ಅಮಲೇರಿದ್ದೀ. ಆದರೆ ದ್ರಾಕ್ಷಾರಸದಿಂದಲ್ಲ. ಆದ್ದರಿಂದ ಈಗ ಇದನ್ನು ಕೇಳು.


ಆದರೆ ಚೀಯೋನ್ ಎಂಬಾಕೆಯು, “ಯೆಹೋವ ದೇವರು ನನ್ನನ್ನು ತಳ್ಳಿಬಿಟ್ಟಿದ್ದಾನೆ. ನನ್ನ ಯೆಹೋವ ದೇವರು ನನ್ನನ್ನು ಮರೆತುಬಿಟ್ಟಿದ್ದಾನಲ್ಲಾ!” ಎಂದುಕೊಂಡಳು.


ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ಪರೀಕ್ಷಿತವಾಗಿಯೂ, ಅಮೂಲ್ಯವಾಗಿಯೂ ಇರುವ ಮೂಲೆಗಲ್ಲನ್ನು ಚೀಯೋನಿನಲ್ಲಿ ಸ್ಥಿರವಾದ ಅಸ್ತಿವಾರವನ್ನಾಗಿ ಇಡುತ್ತೇನೆ. ಭರವಸೆ ಇಡುವವನು ಆತುರಪಡನು.


ಜನಾಂಗಗಳ ದೂತರಿಗೆ ಯಾವ ಉತ್ತರವನ್ನು ಕೊಡಬೇಕು? “ಯೆಹೋವ ದೇವರು ಚೀಯೋನನ್ನು ಸ್ಥಾಪಿಸಿದ್ದಾರೆ. ಬಾಧೆಪಟ್ಟ ಅವರ ಜನರು ಅದನ್ನು ಆಶ್ರಯಿಸಿಕೊಳ್ಳುವರು.”


ನೀತಿವಂತನಿಗೆ ತೊಂದರೆಗಳು ಬಹಳವಾಗಿವೆ; ಆದರೆ ಅವೆಲ್ಲವುಗಳಿಂದ ಯೆಹೋವ ದೇವರು ಅವನನ್ನು ಬಿಡಿಸುತ್ತಾರೆ.


ಕ್ರಿಸ್ತ ಯೇಸು ಎಂಬ ಮುಖ್ಯ ಮೂಲೆಗಲ್ಲಿನೊಂದಿಗೆ ಅಪೊಸ್ತಲರು ಹಾಗೂ ಪ್ರವಾದಿಗಳೆಂಬ ಅಸ್ತಿವಾರದ ಮೇಲೆ ನೀವು ಕಟ್ಟಲಾಗಿದ್ದೀರಿ.


ಇದ್ದಕ್ಕಿದ್ದ ಹಾಗೆ, ಸರೋವರದಲ್ಲಿ ದೊಡ್ಡ ಬಿರುಗಾಳಿ ಎದ್ದ ಕಾರಣ ದೋಣಿಯು ಅಲೆಗಳಿಂದ ಮುಚ್ಚುತ್ತಿತ್ತು. ಆದರೆ ಯೇಸು ನಿದ್ರಿಸುತ್ತಿದ್ದರು.


ಅವುಗಳ ತಲೆಗಳ ಮೇಲಿರುವ ಗಗನ ಮಂಡಲದ ಮೇಲ್ಭಾಗದಲ್ಲಿ ನೀಲಮಣಿಯ ಹಾಗೆ ಇರುವ ಒಂದು ಸಿಂಹಾಸನವಿತ್ತು. ಅದರ ಮೇಲೆ ಮನುಷ್ಯನ ಹಾಗೆ ಕಾಣಿಸುವ ಒಂದು ರೂಪವೂ ಇತ್ತು.


ನಾನು ನರಳಾಡುವುದನ್ನು ಅವರು ಕೇಳಿದರೂ, ನನ್ನನ್ನು ಆದರಿಸಲು ಅಲ್ಲಿರಲಿಲ್ಲ. ನನ್ನ ಎಲ್ಲಾ ಶತ್ರುಗಳು ನನ್ನ ಕಷ್ಟದ ವಿಷಯವನ್ನು ಕೇಳಿದರು. ನೀವು ಹಾಗೆ ಮಾಡಿದಿರೆಂದು ಅವರು ಸಂತೋಷಪಟ್ಟರು. ನೀನು ತಿಳಿಸಿದ ಆ ದಿನವು ಬರಲು, ಅವರು ನನ್ನ ಹಾಗೆಯೇ ಆಗುವರು.


ಆದರೆ ನಾವು ಹಾದುಹೋಗುವಂತೆ, ನೀನು ನೆಲಕ್ಕೆ ಬೀಳು ಎಂದು ನಿನ್ನ ಪ್ರಾಣಕ್ಕೆ ಹೇಳಿ, ನಿನ್ನನ್ನು ಹಿಂಸಿಸಿದವನ ಕೈಯಲ್ಲಿ ಅದನ್ನು ನಾನು ಇಡುತ್ತೇನೆ ಮತ್ತು ನೀನು ಹಾದುಹೋದವರಿಗೆ ನಿನ್ನ ಶರೀರವನ್ನು ನೆಲದಂತೆಯೂ, ಬೀದಿಯಂತೆಯೂ ಮಾಡಿಕೊಂಡಿಯಲ್ಲಾ.”


ಅವನ ಕೈಗಳು ಗೋಮೇಧಿಕ ರತ್ನದ ಬಂಗಾರದ ಸಲಾಕೆಗಳಂತಿವೆ. ಅವನ ದೇಹ ಇಂದ್ರನೀಲಗಳಿಂದ ಹೊಳೆಯುವ ದಂತದ ಹಾಗೆ ಇದೆ.


ಅರಸನು ಆಜ್ಞಾಪಿಸಿದ್ದರಿಂದ ದೊಡ್ಡ ಕಲ್ಲುಗಳನ್ನೂ, ಬೆಲೆಯುಳ್ಳ ಕಲ್ಲುಗಳನ್ನೂ ದೇವಾಲಯ ಅಸ್ತಿವಾರವನ್ನು ಹಾಕಲು ಕೆತ್ತಿದ ಕಲ್ಲುಗಳನ್ನು ತಂದರು.


ಆ ದಿವಸದಲ್ಲಿ ನಾನು ಅವರ ಮೇಲೆ ಕೋಪಗೊಂಡು ಅವರನ್ನು ಬಿಟ್ಟುಬಿಟ್ಟು, ನನ್ನ ಮುಖವನ್ನು ಅವರಿಗೆ ಮರೆಮಾಡುವೆನು. ವಿರೋಧಿಗಳು ಅವರನ್ನು ನುಂಗಿಬಿಡುವರು. ಬಹಳ ಕೇಡುಗಳೂ, ಇಕ್ಕಟ್ಟುಗಳೂ ಅವರಿಗೆ ಸಂಭವಿಸುವುದು. ಆ ದಿವಸದಲ್ಲಿ ಅವರು, ‘ನಮ್ಮ ದೇವರು ನಮ್ಮ ಮಧ್ಯದಲ್ಲಿ ಇಲ್ಲದ ಕಾರಣ ನಮಗೆ ಕೇಡುಗಳು,’ ಎಂದು ಹೇಳುವರು.


ಅವರು ಇಸ್ರಾಯೇಲಿನ ದೇವರನ್ನು ನೋಡಿದರು. ಆತನ ಪಾದಗಳ ಕೆಳಗೆ ನೀಲ ವರ್ಣದ ಕಲ್ಲಿನ ಕೆಲಸಕ್ಕೆ ಸಮಾನವಾದದ್ದೂ, ಆಕಾಶದ ಹಾಗೆ ನಿರ್ಮಲವಾದದ್ದೂ ಇತ್ತು.


ಆಗ ಯೆಹೋವ ದೇವರು, “ಈಜಿಪ್ಟಿನಲ್ಲಿರುವ ನನ್ನ ಜನರ ವ್ಯಥೆಯನ್ನು ವಾಸ್ತವವಾಗಿಯೂ ಕಂಡಿದ್ದೇನೆ. ಬಿಟ್ಟೀ ಮಾಡಿಸುವವರ ವಿಷಯದಲ್ಲಿ ಅವರು ಇಟ್ಟ ಮೊರೆಯು ನನಗೆ ಕೇಳಿಸಿತು. ಅವರ ದುಃಖವನ್ನು ಬಲ್ಲೆನು.


ಆಗ ಯೆಹೋವ ದೇವರ ದೂತನು ಪೊದೆಯೊಳಗೆ ಉರಿಯುವ ಬೆಂಕಿಯಲ್ಲಿ ಅವನಿಗೆ ಕಾಣಿಸಿಕೊಂಡನು. ಮೋಶೆಯು ನೋಡಿದಾಗ, ಪೊದೆಯು ಬೆಂಕಿಯಿಂದ ಉರಿಯುತ್ತಿತ್ತು ಆದಾಗ್ಯೂ ಪೊದೆಯು ಸುಟ್ಟು ಹೋಗಲಿಲ್ಲ.


ಹೀಗೆ ಬಹಳ ದಿನಗಳಾದ ಮೇಲೆ ಈಜಿಪ್ಟಿನ ಅರಸನು ಸತ್ತನು. ಇಸ್ರಾಯೇಲರು ದಾಸತ್ವದ ಕಾರಣದಿಂದ ನರಳಾಡುತ್ತಾ ಮೊರೆಯಿಡುತ್ತಿದ್ದರು. ದಾಸತ್ವದ ನಿಮಿತ್ತವಾಗಿ ಅವರ ಕೂಗು ದೇವರ ಬಳಿಗೆ ಮುಟ್ಟಿತು.


ನಿನ್ನೊಳಗೆ ನಿವಾಸಿಗಳು ಬಿಟ್ಟುಬಿಟ್ಟ, ದ್ವೇಷಕ್ಕೀಡಾದ, ಯಾರೂ ಹಾದುಹೋಗದ ನಿನಗೆ ನಾನು ನಿತ್ಯ ಘನತೆಯನ್ನು ದಯಪಾಲಿಸಿ ನಿನ್ನನ್ನು ಎಲ್ಲಾ ಸಂತತಿಗಳಲ್ಲಿಯೂ ಉಲ್ಲಾಸವಾಗಿರುವಂತೆ ಮಾಡುವೆನು.


ಜ್ಞಾನವನ್ನು ಓಫಿರಿನ ಬಂಗಾರಕ್ಕೂ, ಅಮೂಲ್ಯವಾದ ಗೋಮೇಧಿಕಕ್ಕೂ, ಇಂದ್ರನೀಲಕ್ಕೂ ಬೆಲೆ ಕಟ್ಟಲಾಗದು.


ಕೋರೆಷನ ವಿಷಯವಾಗಿ ಹೀಗೆ ಹೇಳುವೆನು, ‘ನನ್ನ ಕುರುಬನು, ನನ್ನ ಇಷ್ಟವನ್ನೆಲ್ಲಾ ಪೂರೈಸುವವನು, ಯೆರೂಸಲೇಮಿಗೆ, “ನೀನು ಪುನಃ ನಿರ್ಮಾಣವಾಗುವೆ,” ದೇವಾಲಯಕ್ಕೆ, “ನಿನಗೆ ಅಸ್ತಿವಾರವು ಹಾಕಲಾಗುವುದು,” ಎಂದು ಅನ್ನುವವನೂ ನಾನೇ.’


ನಿನ್ನ ಕಿಟಕಿಗಳನ್ನು ಮಾಣಿಕ್ಯಗಳಿಂದ, ನಿನ್ನ ಬಾಗಿಲುಗಳನ್ನು ಪದ್ಮರಾಗಗಳಿಂದ ಮತ್ತು ನಿನ್ನ ಮೇರೆಗಳನ್ನು ಮನೋಹರವಾದ ರತ್ನಗಳಿಂದ ನಾನು ಮಾಡುವೆನು.


ನಿನ್ನ ಗೋಡೆಗಳು ಪುನಃ ಕಟ್ಟುವ ಆ ದಿವಸ ಬರುವುದು. ಮತ್ತು ನಿಮ್ಮ ಮಿತಿಗಳನ್ನು ಹೆಚ್ಚಿಸುವ ದಿನ ಬರುತ್ತದೆ.


ಆಲಯದ ಒಳಗಿನ ಮತ್ತು ಹೊರಗಿನ ನೆಲವನ್ನು ಬಂಗಾರ ತಗಡುಗಳಿಂದ ಹೊದಿಸಿದನು.


ಇದಲ್ಲದೆ ಸೌಂದರ್ಯದ ನಿಮಿತ್ತವಾಗಿ ಅಮೂಲ್ಯವಾದ ರತ್ನಗಳಿಂದ ಆ ಆಲಯವನ್ನು ಮುಚ್ಚಿದನು. ಅದರ ಬಂಗಾರವು ಪರ್ವಯಿಮ್ ದೇಶದ್ದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು