ಯೆಶಾಯ 52:4 - ಕನ್ನಡ ಸಮಕಾಲಿಕ ಅನುವಾದ4 ಏಕೆಂದರೆ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: “ನನ್ನ ಜನರು ಪೂರ್ವದಲ್ಲಿ ಇಳುಕೊಳ್ಳುವುದಕ್ಕೆ ಈಜಿಪ್ಟಿಗೆ ಹೋದರು. ಅಸ್ಸೀರಿಯದವರು ಕಾರಣವಿಲ್ಲದೆ ಅವರಿಗೆ ಬಾಧೆಪಡಿಸಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಕರ್ತನಾದ ಯೆಹೋವನು ಹೀಗೆಂದುಕೊಳ್ಳುತ್ತಾನೆ, “ನನ್ನ ಜನರು ಮೊಟ್ಟಮೊದಲು ಐಗುಪ್ತದಲ್ಲಿ ಇಳಿದುಕೊಳ್ಳಬೇಕೆಂದು ಹೋಗಿ ಅಲ್ಲಿ ಸೆರೆಯಾದರು. ಅಶ್ಶೂರ್ಯರು ಕಾರಣವಿಲ್ಲದೆ ಅವರನ್ನು ಬಾಧೆಪಡಿಸಿದರು.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ದೇವರಾದ ಸರ್ವೇಶ್ವರ ಹೇಳಿಕೊಳ್ಳುವುದೇನೆಂದರೆ : “ಹಿಂದೆ ನನ್ನ ಜನರು ಈಜಿಪ್ಟಿನಲ್ಲೆ ಇಳಿದುಕೊಳ್ಳಲು ಹೋದರು. ಕೊನೆಗೆ ಅಸ್ಸೀರಿಯರು ಅವರನ್ನು ನಿಷ್ಕಾರಣವಾಗಿ ಹಿಂಸಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಕರ್ತನಾದ ಯೆಹೋವನು ಹೀಗಂದುಕೊಳ್ಳುತ್ತಾನೆ - ನನ್ನ ಜನರು ಮೊಟ್ಟಮೊದಲು ಐಗುಪ್ತದಲ್ಲಿ ಇಳಿದುಕೊಳ್ಳಬೇಕೆಂದು ಹೋಗಿ [ಅಲ್ಲಿ ಸೆರೆಯಾದರು]; ಅಶ್ಶೂರ್ಯರು ಹಕ್ಕಿಲ್ಲದೆ ಅವರನ್ನು ಬಾಧೆಪಡಿಸಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ: “ನನ್ನ ಜನರು ಮೊದಲು ಈಜಿಪ್ಟಿನಲ್ಲಿ ನೆಲೆಸಲು ಹೋಗಿ, ನಂತರ ಅಲ್ಲಿ ಅವರು ದಾಸರಾದರು. ಆ ಬಳಿಕ ಅಶ್ಶೂರವು ಅವರನ್ನು ಗುಲಾಮರನ್ನಾಗಿ ಮಾಡಿತು. ಅಧ್ಯಾಯವನ್ನು ನೋಡಿ |