Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 49:4 - ಕನ್ನಡ ಸಮಕಾಲಿಕ ಅನುವಾದ

4 ಅದಕ್ಕೆ ನಾನು, “ನಾನು ಪಡುವ ಪ್ರಯಾಸವು ವ್ಯರ್ಥ. ನನ್ನ ಶಕ್ತಿಯೆಲ್ಲ ಶೂನ್ಯವಾಯಿತು, ನನ್ನ ಸಾಮರ್ಥ್ಯವೆಲ್ಲ ವ್ಯರ್ಥವಾಯಿತು,” ಎಂದು ಹೇಳಿದೆನು. ಆದರೂ ನಿಶ್ಚಯವಾಗಿ ನನ್ನ ನ್ಯಾಯವು ಯೆಹೋವ ದೇವರ ಬಳಿಯಲ್ಲಿಯೂ, ನನ್ನ ಪ್ರತಿಫಲವು ನನ್ನ ದೇವರಲ್ಲಿಯೂ ಉಂಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಅದಕ್ಕೆ ನಾನು, “ನಾನು ಪಡುವ ಪ್ರಯಾಸವು ವ್ಯರ್ಥ, ನನ್ನ ಶಕ್ತಿಯನ್ನೆಲ್ಲಾ ಉಪಯೋಗಮಾಡಿದ್ದು ಹಾಳೇ, ಬರಿ ಗಾಳಿಯೇ. ಆದರೂ ನನ್ನ ನ್ಯಾಯವು ಯೆಹೋವನಲ್ಲಿದೆ. ನನಗೆ ಲಾಭವು ನನ್ನ ದೇವರಿಂದಲೇ ಆಗುವುದು” ಎಂದು ಅಂದುಕೊಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಇಂತೆಂದುಕೊಂಡೆ ನಾನಾಗ : ವ್ಯರ್ಥವಾಯಿತು ನನ್ನ ಸಾಮರ್ಥ್ಯವೆಲ್ಲ ಶೂನ್ಯವಾಗಿ ಹೋಯಿತು ನನ್ನ ಶಕ್ತಿಯೆಲ್ಲ ನನಗೆ ದೊರಕುವುದು ನ್ಯಾಯ ಸರ್ವೇಶ್ವರನ ಕೈಯಲ್ಲೇ, ನನಗೆ ಬರುವುದು ಬಹುಮಾನ ಆ ದೇವರಿಂದಲೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಅದಕ್ಕೆ ನಾನು - ನನ್ನ ಪ್ರಯಾಸವು ವ್ಯರ್ಥ, ನನ್ನ ಶಕ್ತಿಯನ್ನೆಲ್ಲಾ ವ್ರಯಮಾಡಿದ್ದು ಹಾಳೇ, ಬರಿ ಗಾಳಿಯೇ; ಆದರೂ ನನ್ನ ನ್ಯಾಯವು ಯೆಹೋವನಲ್ಲಿದೆ, ನನಗೆ ಲಾಭವು ನನ್ನ ದೇವರಿಂದಲೇ ಆಗುವದು ಅಂದುಕೊಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಆಗ ನಾನು “ನಾನು ಕಷ್ಟಪಟ್ಟು ಮಾಡಿದ ಕಾರ್ಯಗಳೆಲ್ಲವೂ ನಿಷ್ಪ್ರಯೋಜನವಾದವು. ನಾನು ನನ್ನನ್ನೇ ಸವೆಯಿಸಿದೆನು. ಆದರೆ ಪ್ರಯೋಜನವಾದದ್ದನ್ನು ನಾನು ಮಾಡಲಿಲ್ಲ. ನಾನು ನನ್ನ ಶಕ್ತಿಯನ್ನೆಲ್ಲಾ ಉಪಯೋಗಿಸಿದರೂ ಏನೂ ಮಾಡಲಾಗಲಿಲ್ಲ. ಆದ್ದರಿಂದ ನನಗೆ ಮಾಡಬೇಕಾದುದನ್ನು ಯೆಹೋವನೇ ತೀರ್ಮಾನಿಸಲಿ. ನನಗೆ ದೊರಕಬೇಕಾದ ಬಹುಮಾನವನ್ನು ದೇವರೇ ತೀರ್ಮಾನಿಸಲಿ” ಎಂದು ಹೇಳಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 49:4
28 ತಿಳಿವುಗಳ ಹೋಲಿಕೆ  

ಭಯಭ್ರಾಂತ ಹೃದಯವುಳ್ಳವರಿಗೆ ಬಲಗೊಳ್ಳಿರಿ, ಹೆದರಬೇಡಿರಿ. ಇಗೋ, ನಿಮ್ಮ ದೇವರು ಮುಯ್ಯಿ ತೀರಿಸುವುದಕ್ಕೂ, ದೇವರು ಪ್ರತಿಫಲವನ್ನು ಕೊಡುವುದಕ್ಕೂ ತಾವೇ ಬಂದು ನಿಮ್ಮನ್ನು ರಕ್ಷಿಸುವರು, ಎಂದು ಅವರಿಗೆ ಹೇಳಿರಿ.


ನಾವು ನಿಮ್ಮ ಮಧ್ಯದಲ್ಲಿ ಪ್ರಯಾಸಪಟ್ಟದ್ದು ವ್ಯರ್ಥವಾಯಿತೇನೋ ಎಂದು ನಿಮ್ಮ ವಿಷಯದಲ್ಲಿ ನಾನು ಭಯಪಡುತ್ತೇನೆ.


ನಾನಂತೂ ನನಗಿರುವುದೆಲ್ಲವನ್ನೂ ನಿಮ್ಮ ಆತ್ಮಗಳಿಗೋಸ್ಕರ ಬಹು ಸಂತೋಷದಿಂದ ವೆಚ್ಚಮಾಡುತ್ತೇನೆ. ನನ್ನನ್ನು ಕೂಡ ನಿಮಗೋಸ್ಕರ ವೆಚ್ಚಮಾಡಲು ಸಿದ್ಧನಾಗಿದ್ದೇನೆ. ನಾನು ನಿಮ್ಮನ್ನು ಹೆಚ್ಚಾಗಿ ಪ್ರೀತಿಸಿದರೆ, ನೀವು ನನ್ನನ್ನು ಕಡಿಮೆಯಾಗಿ ಪ್ರೀತಿಸುವಿರೋ?


ರಕ್ಷಣಾ ಮಾರ್ಗದಲ್ಲಿರುವವರಿಗೂ ನಾಶದ ಮಾರ್ಗದಲ್ಲಿರುವವರಿಗೂ ನಾವು ದೇವರಿಗೆ ಕ್ರಿಸ್ತ ಯೇಸುವಿನ ಪರಿಮಳವಾಗಿದ್ದೇವೆ.


“ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸಿದವರನ್ನು ಕಲ್ಲೆಸೆಯುವವಳೇ, ಕೋಳಿಯು ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಾನು ನಿನ್ನ ಮಕ್ಕಳನ್ನು ಕೂಡಿಸುವುದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು. ಆದರೆ ನಿನಗೆ ಮನಸ್ಸಿಲ್ಲದೆ ಹೋಯಿತು.


ಆಗ ಯೇಸು, “ವಿಶ್ವಾಸವಿಲ್ಲದ ಮೂರ್ಖ ಸಂತತಿಯೇ, ಇನ್ನೂ ಎಷ್ಟು ಕಾಲ ನಾನು ನಿಮ್ಮೊಂದಿಗಿರಲಿ? ಎಷ್ಟು ಕಾಲ ನಾನು ನಿಮ್ಮನ್ನು ಸಹಿಸಲಿ? ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ,” ಎಂದು ಹೇಳಿದರು.


ಆದರೆ ನೀನು ದುಷ್ಟನನ್ನು ಎಚ್ಚರಿಸಿದರೂ ಅವನು ತನ್ನ ದುಷ್ಟತನವನ್ನೂ, ದುರ್ಮಾರ್ಗವನ್ನೂ ಬಿಟ್ಟು ತಿರುಗಿಕೊಳ್ಳದೆ ಹೋದರೆ, ಅವನು ತನ್ನ ಪಾಪಗಳಿಂದಲೇ ಸಾಯುವನು. ಆದರೆ ನೀನು ನಿನ್ನ ಪ್ರಾಣವನ್ನು ಉಳಿಸಿಕೊಳ್ಳುವೆ.


ಅವರು ವ್ಯರ್ಥವಾಗಿ ದುಡಿಯರು. ಕಷ್ಟವನ್ನು ಎದುರುಗೊಳ್ಳುವುದಿಲ್ಲ. ಏಕೆಂದರೆ ಅವರು ಯೆಹೋವ ದೇವರ ಆಶೀರ್ವಾದ ಹೊಂದಿದವರ ಸಂತಾನವಾಗಿದ್ದಾರೆ. ಅವರ ಸಂಗಡ ಅವರ ಸಂತತಿಯು ಸಹ ಆಶೀರ್ವಾದ ಹೊಂದುವುದು.


ಇಗೋ, ಯೆಹೋವ ದೇವರು ಭೂಮಿಯ ಅಂತ್ಯದವರೆಗೆ ಹೀಗೆ ಘೋಷಣೆ ಮಾಡಿದ್ದಾರೆ: “ಚೀಯೋನಿನ ಪುತ್ರಿ ಇಗೋ, ‘ನಿನ್ನ ರಕ್ಷಣೆಯು ಬರುತ್ತದೆ. ಆತನ ಬಹುಮಾನವು ಆತನ ಸಂಗಡ, ಆತನ ಪ್ರತಿಫಲವು ಆತನ ಮುಂದೆಯೂ ಇದೆ ಎಂದು ಹೇಳಿರಿ.’ ”


ಇಗೋ, ಸಾರ್ವಭೌಮ ಯೆಹೋವ ದೇವರು ಬಲದೊಂದಿಗೆ ಬರುವರು. ಅವರ ತೋಳು ತಮಗೋಸ್ಕರ ಆಳುವುದು. ಅವರ ಬಹುಮಾನವು ಅವರ ಸಂಗಡ ಅವರ ಪ್ರತಿಫಲವು ಅವರ ಮುಂದೆಯೂ ಇದೆ.


ನಮ್ಮಲ್ಲಿ ನಂಬಿಕೆಯನ್ನು ಹುಟ್ಟಿಸುವವರೂ ಅದನ್ನು ಪರಿಪೂರ್ಣಗೊಳಿಸುವವರೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು, ನಮ್ಮ ಮುಂದೆ ಇಟ್ಟಿರುವ ಓಟವನ್ನು ಸಹನೆಯಿಂದ ಓಡೋಣ. ಯೇಸು ತಮ್ಮ ಮುಂದೆ ಇಟ್ಟಿದ್ದ ಸಂತೋಷಕ್ಕಾಗಿ ಶಿಲುಬೆಯನ್ನು ಸಹಿಸಿಕೊಂಡು ಅವಮಾನವನ್ನು ಅಲಕ್ಷ್ಯಮಾಡಿ, ಈಗ ದೇವರ ಸಿಂಹಾಸನದ ಬಲಗಡೆಯಲ್ಲಿ ಆಸೀನರಾಗಿದ್ದಾರೆ.


ಆದರೆ ಇಸ್ರಾಯೇಲರ ಕುರಿತಾಗಿ, “ನನಗೆ ಅವಿಧೇಯರೂ ಎದುರುಮಾತಾಡುವವರೂ ಆಗಿರುವ ಜನರಿಗೆ, ದಿನವೆಲ್ಲಾ ನಾನು ಕೈಚಾಚಿ ಕರೆದೆನು,” ಎಂದು ಹೇಳುತ್ತಾನೆ.


ಅವರು ತಮ್ಮ ಸ್ವಜನರ ಬಳಿಗೆ ಬಂದರು. ಆದರೆ ಸ್ವಜನರೇ ಅವರನ್ನು ಸ್ವೀಕರಿಸಲಿಲ್ಲ.


ಶ್ರಮೆಗಳನ್ನು ಅನುಭವಿಸಿದ ಮೇಲೆ ಕ್ರಿಸ್ತನು ಮಹಿಮೆಯಲ್ಲಿ ಪ್ರವೇಶಿಸುವುದು ಅಗತ್ಯವಾಗಿತ್ತಲ್ಲವೇ?” ಎಂದು ಹೇಳಿ,


ಒಳ್ಳೆಯದಲ್ಲದ ಮಾರ್ಗದಲ್ಲಿ ತಮ್ಮ ಆಲೋಚನೆಗಳ ಪ್ರಕಾರ ನಡೆದುಕೊಂಡು ತಿರುಗಿಬೀಳುವ ಜನರಿಗೆ ದಿನವೆಲ್ಲಾ ನಾನು ಕೈಚಾಚಿ ಕರೆದೆನು.


ಆಗ ನಿಮ್ಮ ಶಕ್ತಿಯು ವ್ಯರ್ಥವಾಗಿ ಮುಗಿದುಹೋಗುವುದು. ಏಕೆಂದರೆ ನಿಮ್ಮ ಭೂಮಿಯು ತನ್ನ ಬೆಳೆಯನ್ನು ಕೊಡದೆ ಇರುವುದು ಭೂಮಿಯ ಮರಗಳು ತಮ್ಮ ಫಲಗಳನ್ನು ಕೊಡುವುದಿಲ್ಲ.


ನೀವು ಜೀವವಾಕ್ಯವನ್ನು ಹಿಡಿದವರಾಗಿದ್ದರೆ, ಹೀಗೆ ನಾನು ಓಡಿದ ಓಟವೂ ಪ್ರಯಾಸವೂ ವ್ಯರ್ಥವಾಗಲಿಲ್ಲವೆಂದು ತಿಳಿದು ಕ್ರಿಸ್ತನ ಪುನರಾಗಮನ ದಿನದಲ್ಲಿ ಅಭಿಮಾನ ಪಡುವೆನು.


ಅನೇಕರು ಅಧಿಕಾರಿಯ ದಯೆಯನ್ನು ಹುಡುಕುತ್ತಾರೆ. ಆದರೆ ಯೆಹೋವ ದೇವರಿಂದಲೇ ಪ್ರತಿಯೊಬ್ಬರಿಗೂ ನ್ಯಾಯ ದೊರಕುತ್ತದೆ.


ಯೆಹೋವ ದೇವರೇ, ನೀವೇ ನನ್ನ ದೇವರು. ನೀವು ಸತ್ಯ ಪ್ರಾಮಾಣಿಕತೆಗಳನ್ನು ಆಲೋಚಿಸಿ, ಅನುಸರಿಸಿ ಆದಿಸಂಕಲ್ಪಗಳನ್ನು ನೆರವೇರಿಸುತ್ತಾ, ಅದ್ಭುತಕಾರ್ಯಗಳನ್ನು ನಡೆಸಿದ ಕಾರಣ ನಿಮ್ಮನ್ನು ಉನ್ನತಪಡಿಸಿ, ನಿಮ್ಮ ನಾಮವನ್ನು ಕೊಂಡಾಡುವೆನು.


ನನ್ನ ಮಾರ್ಗವು ಯೆಹೋವ ದೇವರಿಗೆ ಮರೆಯಾಗಿದೆ. ನನ್ನ ನ್ಯಾಯವು ನನ್ನ ದೇವರಿಂದ ದಾಟಿಹೋಯಿತಲ್ಲಾ! ಎಂದು ಯಾಕೋಬೇ ಏಕೆ ಹೇಳುತ್ತೀ? ಇಸ್ರಾಯೇಲೇ ಏಕೆ ಮಾತನಾಡುತ್ತೀ?


“ದುಷ್ಟರಿಗೆ ಸಮಾಧಾನವೇ ಇಲ್ಲ,” ಎಂದು ನನ್ನ ದೇವರು ಹೇಳುತ್ತಾರೆ.


ಅವರ ಕ್ರಿಯೆಗಳ ಪ್ರಕಾರವೇ ಸರಿಯಾಗಿ ಸಲ್ಲಿಸುವನು. ತನ್ನ ವೈರಿಗಳಿಗೆ ಉರಿಯನ್ನೂ, ತನ್ನ ಶತ್ರುಗಳಿಗೆ ಪ್ರತಿಫಲವನ್ನೂ, ದ್ವೀಪಗಳಿಗೆ ಪ್ರತಿಫಲವನ್ನೂ ಸಲ್ಲಿಸುವನು.


ನಾನು ಯೆಹೋವ ದೇವರಲ್ಲಿ ಬಹಳವಾಗಿ ಸಂತೋಷಿಸುವೆನು. ನನ್ನ ಪ್ರಾಣವು ನನ್ನ ದೇವರಲ್ಲಿ ಉಲ್ಲಾಸಪಡುವುದು. ವರನು ಸೌಂದರ್ಯವಾಗಿ ತನ್ನನ್ನು ಶೃಂಗರಿಸುವ ಹಾಗೆಯೂ, ವಧುವು ಆಭರಣಗಳಿಂದ ತನ್ನನ್ನು ಅಲಂಕರಿಸುವ ಹಾಗೆಯೂ, ಅವನು ರಕ್ಷಣೆಯ ವಸ್ತ್ರಗಳನ್ನು ನನಗೆ ತೊಡಿಸಿದ್ದಾನೆ. ನೀತಿಯ ನಿಲುವಂಗಿಯನ್ನು ನನಗೆ ಧರಿಸುವಂತೆ ಮಾಡಿದ್ದಾನೆ.


ಅದಕ್ಕೆ ಅವನು, “ಸರ್ವಶಕ್ತ ದೇವರಾದ ಯೆಹೋವ ದೇವರೇ, ಇಸ್ರಾಯೇಲರಿಗೋಸ್ಕರ ನಾನು ಬಹು ರೋಷವುಳ್ಳವನಾಗಿದ್ದೇನೆ. ಏಕೆಂದರೆ ಇಸ್ರಾಯೇಲರು ನಿಮ್ಮ ಒಡಂಬಡಿಕೆಯನ್ನು ಬಿಟ್ಟು, ನಿಮ್ಮ ಬಲಿಪೀಠಗಳನ್ನು ಕೆಡವಿ, ನಿಮ್ಮ ಪ್ರವಾದಿಗಳನ್ನು ಖಡ್ಗದಿಂದ ಕೊಂದುಹಾಕಿದ್ದಾರೆ. ನಾನೊಬ್ಬನೇ ಉಳಿದಿದ್ದೇನೆ. ಆದರೆ ಅವರು ನನ್ನ ಪ್ರಾಣವನ್ನೂ ತೆಗೆಯಲು ಹುಡುಕುತ್ತಿದ್ದಾರೆ,” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು