Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 49:10 - ಕನ್ನಡ ಸಮಕಾಲಿಕ ಅನುವಾದ

10 ಅವರಿಗೆ ಹಸಿವೆಯಾಗಲಿ, ಬಾಯಾರಿಕೆಯಾಗಲಿ ಇರದು. ಝಳವೂ, ಬಿಸಿಲೂ ಬಡಿಯದು. ಏಕೆಂದರೆ ಅವರನ್ನು ಕರುಣಿಸುವ ದೇವರು ಅವರನ್ನು ನಡೆಸುತ್ತಾ, ನೀರುಕ್ಕುವ ಒರತೆಗಳ ಬಳಿಗೆ ತರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಅವರಿಗೆ ಹಸಿವೆ ಬಾಯಾರಿಕೆಗಳು ಆಗುವುದಿಲ್ಲ, ಝಳವೂ ಬಿಸಿಲೂ ಬಡಿಯುವುದಿಲ್ಲ. ಅವರನ್ನು ಕರುಣಿಸುವಾತನು ದಾರಿತೋರಿಸುತ್ತಾ ನೀರು ಸಿಕ್ಕುವ ಒರತೆಗಳ ಬಳಿಯಲ್ಲಿ ನಡೆಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಇರದು ಅವರಿಗೆ ಹಸಿವು ಬಾಯಾರಿಕೆ ಬಡಿಯವು ಅವರಿಗೆ ಬಿಸಿಲುಬೇಗೆ. ನಡೆಸುವೆನು ನೀರುಕ್ಕುವ ಚಿಲುಮೆಗಳ ಬಳಿಗೆ ಕರುಣಾಕರನು ದಾರಿತೋರಿಸುವನು ಅವರಿಗೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಅವರಿಗೆ ಹಸಿವೆ ಬಾಯಾರಿಕೆಗಳು ಆಗವು. ಝಳವೂ ಬಿಸಿಲೂ ಬಡಿಯವು; ಅವರನ್ನು ಕರುಣಿಸುವಾತನು ದಾರಿತೋರಿಸುತ್ತಾ ನೀರುಕ್ಕುವ ಒರತೆಗಳ ಬಳಿಯಲ್ಲಿ ನಡಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಜನರಿಗೆ ಹಸಿವೆಯಾಗದು, ಬಾಯಾರಿಕೆಯಾಗದು. ಸೂರ್ಯನ ಉರಿ ಬಿಸಿಲಾಗಲಿ ಗಾಳಿಯಾಗಲಿ ಅವರಿಗೆ ಹಾನಿಮಾಡದು. ಯಾಕೆಂದರೆ ದೇವರು ತಾನೇ ಅವರನ್ನು ಸಂತೈಸುವನು, ಅವರನ್ನು ಬುಗ್ಗೆಗಳ ಬಳಿಗೆ ನಡಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 49:10
28 ತಿಳಿವುಗಳ ಹೋಲಿಕೆ  

ನೀತಿಗೋಸ್ಕರ ಹಸಿದು ಬಾಯಾರುವವರು ಧನ್ಯರು, ಅವರು ತೃಪ್ತಿಹೊಂದುವರು.


ನಾನು ಅವುಗಳ ಮೇಲೆ ಒಬ್ಬ ಕುರುಬನನ್ನು ನೇಮಿಸುವೆನು; ಅವನು ಅವುಗಳನ್ನು ಮೇಯಿಸುತ್ತಾನೆ. ನನ್ನ ಸೇವಕನಾದ ದಾವೀದನೇ ಅವುಗಳನ್ನು ಮೇಯಿಸಿ ಅವುಗಳಿಗೆ ಕುರುಬನಾಗುತ್ತಾನೆ.


ಬಂಡೆಗಳ ಕೋಟೆಗಳು ಅವನಿಗೆ ಆಶ್ರಯವಾಗಿರುವುವು. ರೊಟ್ಟಿಯು ಅವನಿಗೆ ಒದಗುವುದು. ನೀರು ತಪ್ಪುವುದಿಲ್ಲ.


ಅವರು ಅಳುತ್ತಾ ಬರುವರು. ಬಿನ್ನಹಗಳ ಸಂಗಡ ಅವರನ್ನು ನಡೆಸುವೆನು. ಅವು ಎಡವದ ಸಮದಾರಿಯಲ್ಲಿ ನೀರಿನ ನದಿಗಳ ಬಳಿಯಲ್ಲಿ ನಡೆಯುವಂತೆ ಮಾಡುವೆನು. ಏಕೆಂದರೆ ನಾನು ಇಸ್ರಾಯೇಲಿಗೆ ತಂದೆಯಾಗಿದ್ದೇನೆ. ಎಫ್ರಾಯೀಮನು ನನ್ನ ಚೊಚ್ಚಲ ಮಗನೇ.


ಅವರು ತಮ್ಮ ಮಂದೆಯನ್ನು ಕುರುಬನಂತೆ ಮೇಯಿಸುವರು. ಕುರಿಮರಿಗಳನ್ನು ಕೂಡಿಸಿ, ಅವುಗಳನ್ನು ತಮ್ಮ ಎದೆಗಪ್ಪಿಕೊಳ್ಳುವರು, ಎಳೆಯ ಮರಿಗಳನ್ನು ಮೆಲ್ಲಗೆ ನಡಿಸುವರು.


ಒಣ ನೆಲವು ಸರೋವರವಾಗುವುದು, ಬೆಂಗಾಡು ಪ್ರದೇಶವು ನೀರಿನ ಬುಗ್ಗೆಯಾಗುವುದು. ನರಿಗಳು ವಾಸಿಸುವ ಪ್ರತಿಯೊಂದು ಮಲಗುವ ಸ್ಥಳದಲ್ಲಿ ಹುಲ್ಲು, ಜೊಂಡು, ಆಪು ಹುಲ್ಲುಗಳಿಂದ ತುಂಬಿರುವುದು.


ಆಗ ಮನುಷ್ಯನು ಗಾಳಿಗೋಸ್ಕರ ಅಡಗಿಕೊಳ್ಳುವಂತೆಯೂ, ಬಿರುಗಾಳಿಗೋಸ್ಕರ ಮರೆಮಾಡಿಕೊಳ್ಳುವಂತೆಯೂ, ಅರಣ್ಯದಲ್ಲಿಯ ನೀರಿನ ಕಾಲುವೆಗಳ ಹಾಗೂ, ಬಾಯಾರಿದ ನಾಡಿಗೆ ದೊಡ್ಡ ಬಂಡೆಯ ನೆರಳಿನ ಹಾಗೆಯೂ ಇರುವನು.


ನೀವು ದೀನರಿಗೆ ಕೋಟೆಯೂ, ಇಕ್ಕಟ್ಟಿನಲ್ಲಿ ದರಿದ್ರರಿಗೆ ರಕ್ಷಣಾ ದುರ್ಗವೂ, ಭೀಕರರ ಶ್ವಾಸವು ಬಿಸಿಲಿಗೆ ನೆರಳೂ, ಗೋಡೆಗೆ ಬಡಿದು ಬಿಡುವ ಬಿರುಗಾಳಿಯಂತಿರುವಾಗ ಬಿರುಗಾಳಿಗೋಸ್ಕರ ಆಶ್ರಯವೂ ಆಗಿದ್ದೀರಿ.


ಹಗಲಲ್ಲಿ ಬಿಸಿಲಿಗೆ ನೆರಳಾಗುವ ಹಾಗೂ, ಬಿರುಗಾಳಿಗೂ, ಮಳೆಗೂ ಆಶ್ರಯವನ್ನು ಕೊಡುವ ಮಂಟಪವಾಗಿ ಇರುವುದು.


ಪರ್ವತಗಳು ಸ್ಥಳವನ್ನು ಬಿಟ್ಟು ಹೋದರೂ, ಬೆಟ್ಟಗಳು ಕದಲಿ ಹೋದರೂ, ನನ್ನ ಕುಂದದ ಪ್ರೀತಿಯು ನಿನ್ನನ್ನು ಬಿಟ್ಟು ಹೋಗದು, ನನ್ನ ಸಮಾಧಾನದ ಒಡಂಬಡಿಕೆಯು ನಿನ್ನನ್ನು ಬಿಟ್ಟು ಕದಲದು,” ಎಂದು ನಿನ್ನನ್ನು ಕರುಣಿಸುವ ಯೆಹೋವ ದೇವರು ಹೇಳುತ್ತಾರೆ.


ಯೆಹೋವ ದೇವರು ಯಾಕೋಬ್ಯರನ್ನು ಕರುಣಿಸುವರು. ಇಸ್ರಾಯೇಲರನ್ನು ಪುನಃ ಆಯ್ದುಕೊಳ್ಳುವರು. ಅವರನ್ನು ಅವರ ಸ್ವಂತ ದೇಶದಲ್ಲಿ ಸೇರಿಸುವರು. ಪರದೇಶದವರು ಅವರೊಂದಿಗೆ ಕೂಡಿಬಂದು, ಯಾಕೋಬನ ಮನೆತನಕ್ಕೆ ಸೇರಿಕೊಳ್ಳುವರು.


ಯೇಸು ಅವರಿಗೆ, “ನಾನೇ ಜೀವದ ರೊಟ್ಟಿ. ನನ್ನ ಬಳಿಗೆ ಬರುವವರಿಗೆ ಎಂದಿಗೂ ಹಸಿವೆಯಾಗುವುದಿಲ್ಲ; ನನ್ನನ್ನು ನಂಬುವವರಿಗೆ ಎಂದಿಗೂ ದಾಹವಾಗುವುದಿಲ್ಲ.


ಆಗ ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯೂ ಹರ್ಷದಿಂದ ಹಾಡುವುದು. ಏಕೆಂದರೆ ಮರುಭೂಮಿಯಲ್ಲಿ ನೀರೂ, ಮರುಭೂಮಿಯಲ್ಲಿ ಒರತೆಗಳೂ ಒಡೆಯುವುವು.


ಬಡವರೂ ದರಿದ್ರರೂ ನೀರನ್ನು ಹುಡುಕಿ ಕಾಣದೇ, ಬಾಯಾರಿಕೆಯಿಂದ ನಾಲಿಗೆ ಒಣಗಿದಾಗ, ಯೆಹೋವನಾದ ನಾನೇ ಅವರಿಗೆ ಉತ್ತರಕೊಡುವೆನು. ಇಸ್ರಾಯೇಲ್ ದೇವರಾಗಿರುವ ನಾನು ಅವರನ್ನು ಕೈಬಿಡೆನು.


ಇಗೋ, ನಾನು ಒಂದು ಹೊಸ ಕಾರ್ಯವನ್ನು ಮಾಡುವೆನು. ಅದು ಈಗಲೇ ತಲೆದೋರುತ್ತಲಿದೆ. ಇದು ನಿಮಗೆ ಕಾಣುವುದಿಲ್ಲವೋ? ನಾನು ಅರಣ್ಯದಲ್ಲಿ ಮಾರ್ಗವನ್ನು ಏರ್ಪಡಿಸುವೆನು. ಮರುಭೂಮಿಯಲ್ಲಿ ನದಿಗಳನ್ನೂ ಉಂಟುಮಾಡುವೆನು.


ನಿನ್ನ ವಿಮೋಚಕನೂ, ಇಸ್ರಾಯೇಲಿನ ಪರಿಶುದ್ಧನೂ ಆಗಿರುವ ಯೆಹೋವ ದೇವರ ಮಾತಿದು, “ನಿನ್ನ ಉಪಯೋಗಕ್ಕಾಗಿ ನಿನಗೆ ಬೋಧಿಸುವವನೂ, ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಸುವವನೂ ಆದ ನಾನೇ ನಿನ್ನ ಯೆಹೋವ ದೇವರು ಆಗಿದ್ದೇನೆ.


ದೇವರು ಅವರನ್ನು ಮರುಭೂಮಿಯಲ್ಲಿ ನಡಿಸಿದಾಗ, ಅವರಿಗೆ ದಾಹವಾಗಲಿಲ್ಲ. ದೇವರು ಅವರಿಗಾಗಿ ನೀರನ್ನು ಬಂಡೆಯೊಳಗಿಂದ ಹರಿಸಿದರು. ದೇವರು ಬಂಡೆಯನ್ನು ಸೀಳಲು, ನೀರು ರಭಸದಿಂದ ಹೊರಗೆ ಬಂತು.


ಸೆರೆಯಲ್ಲಿ ಕುಗ್ಗಿರುವವನು ತಾನು ಸಾಯದಂತೆಯೂ, ತನಗೆ ಆಹಾರದ ಕೊರತೆ ಇರದಂತೆಯೂ, ತಾನು ಬಿಡುಗಡೆ ಹೊಂದುವಂತೆಯೂ ಆತುರಪಡುತ್ತಾನೆ.


ನೀವು ತ್ವರೆಯಾಗಿ ಹೋಗುವುದಿಲ್ಲ, ಓಡಿ ಹೋಗುವುದಿಲ್ಲ. ಏಕೆಂದರೆ ಯೆಹೋವ ದೇವರೇ ನಿಮ್ಮ ಮುಂದೆ ಹೋಗುವರು, ಇಸ್ರಾಯೇಲಿನ ದೇವರು ನಿಮ್ಮ ಹಿಂದೆ ಕಾವಲು ಕಾಯುವರು.


ನನಗೆ ಬೇಸರವಾದಾಗ ನನ್ನ ಮುಖವನ್ನು ನಿನಗೆ ಕ್ಷಣಮಾತ್ರವೇ ಮರೆಮಾಡಿಕೊಂಡೆನು. ಆದರೆ ಶಾಶ್ವತವಾದ ದಯೆಯಿಂದ ನಿನ್ನ ಮೇಲೆ ಕರುಣೆಯನ್ನು ಇಟ್ಟಿದ್ದೇನೆ, ಎಂದು ನಿನ್ನ ವಿಮೋಚಕನಾದ ಯೆಹೋವ ದೇವರು ಹೇಳುತ್ತಾರೆ.


ಯೆಹೋವ ದೇವರು ನಿನ್ನನ್ನು ನಿತ್ಯವೂ ನಡೆಸುತ್ತಾ, ಮಳೆಯಿಲ್ಲದ ಕಾಲದಲ್ಲಿ ನಿನ್ನ ಪ್ರಾಣವನ್ನು ತೃಪ್ತಿಗೊಳಿಸಿ, ನಿನ್ನ ಎಲುಬುಗಳನ್ನು ಬಲಪಡಿಸುವರು ಮತ್ತು ನೀನು ನೀರು ಹಾಕಿದ ತೋಟದ ಹಾಗೆಯೂ ಇರುವೆ. ಬತ್ತಿಹೋಗದ ಬುಗ್ಗೆಯಂತೆಯೂ ನೀವು ಇರುವಿರಿ


ಹೀಗಿರುವುದರಿಂದ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: “ನನ್ನ ಸೇವಕರು ತಿನ್ನುವರು. ಆದರೆ ನೀವು ಹಸಿದಿರುವಿರಿ. ನನ್ನ ಸೇವಕರು ಕುಡಿಯುವರು, ಆದರೆ ನೀವು ಬಾಯಾರಿ ಇರುವಿರಿ. ಇಗೋ, ನನ್ನ ಸೇವಕರು ಸಂತೋಷಪಡುವರು, ಆದರೆ ನೀವು ನಾಚಿಕೆ ಪಡುವಿರಿ.


ಸೂರ್ಯೋದಯವಾದಾಗ ದೇವರು ಉಗ್ರವಾದ ಪೂರ್ವ ಗಾಳಿಯನ್ನು ಸಿದ್ಧಮಾಡಿದರು. ಆಗ ಬಿಸಿಲು ಯೋನನ ತಲೆಯ ಮೇಲೆ ಬಡಿದದ್ದರಿಂದ, ಅವನು ಮೂರ್ಛೆ ಹೋಗಿ, ಮರಣವನ್ನು ಕೇಳಿಕೊಂಡು, “ನಾನು ಬದುಕುವುದಕ್ಕಿಂತ ಸಾಯುವುದು ಒಳ್ಳೆಯದು,” ಎಂದನು.


ನಿನ್ನ ಜನರನ್ನೂ ಏಕಾಂತವಾಗಿ ಅಡವಿಯಲ್ಲಿ ಕರ್ಮೆಲಿನ ನಡುವೆ ವಾಸವಾಗಿರುವ ನಿನ್ನ ಬಾಧ್ಯತೆಯ ಮಂದೆಯನ್ನೂ ನಿನ್ನ ಕೋಲಿನಿಂದ ಮೇಯಿಸು. ಅವರು ಪೂರ್ವದ ದಿವಸಗಳಲ್ಲಾದ ಹಾಗೆ ಬಾಷಾನಿನಲ್ಲಿಯೂ ಗಿಲ್ಯಾದಿನಲ್ಲಿಯೂ ಮೇಯಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು