ಯೆಶಾಯ 48:21 - ಕನ್ನಡ ಸಮಕಾಲಿಕ ಅನುವಾದ21 ದೇವರು ಅವರನ್ನು ಮರುಭೂಮಿಯಲ್ಲಿ ನಡಿಸಿದಾಗ, ಅವರಿಗೆ ದಾಹವಾಗಲಿಲ್ಲ. ದೇವರು ಅವರಿಗಾಗಿ ನೀರನ್ನು ಬಂಡೆಯೊಳಗಿಂದ ಹರಿಸಿದರು. ದೇವರು ಬಂಡೆಯನ್ನು ಸೀಳಲು, ನೀರು ರಭಸದಿಂದ ಹೊರಗೆ ಬಂತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201921 ಆತನು ಅವರನ್ನು ಮರುಭೂಮಿಯಲ್ಲಿ ನಡೆಸಿದಾಗ ಅವರು ದಾಹಗೊಳ್ಳಲಿಲ್ಲ; ಅವರಿಗಾಗಿ ನೀರನ್ನು ಕಲ್ಲಿನೊಳಗಿಂದ ಹರಿಸಿದನು; ಆತನು ಬಂಡೆಯನ್ನು ಸೀಳಲು ಜಲಪಾತವಾಯಿತು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)21 ಆತ ಮರುಭೂಮಿಯಲ್ಲಿ ತನ್ನ ಜನರನ್ನು ನಡೆಸಿದಾಗ ಬಳಲಲಿಲ್ಲ ಅವರು ಬಾಯಾರಿಕೆಯಿಂದ; ಹರಿಸಿದನು ನೀರನ್ನು ಅವರಿಗಾಗಿ ಕಲ್ಲಿನೊಳಗಿಂದ ಜಲವಾಹಿನಿ ಹರಿಯಿತು ಆತ ಸೀಳಿದ ಬಂಡೆಯಿಂದ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)21 ಆತನು ಅವರನ್ನು ಮರುಭೂವಿುಯಲ್ಲಿ ನಡಿಸಿದಾಗ ಅವರು ದಾಹಗೊಳ್ಳಲಿಲ್ಲ; ಅವರಿಗಾಗಿ ನೀರನ್ನು ಕಲ್ಲಿನೊಳಗಿಂದ ಹರಿಸಿದನು; ಆತನು ಬಂಡೆಯನ್ನು ಸೀಳಲು ಜಲಪಾತವಾಯಿತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್21 ಯೆಹೋವನು ತನ್ನ ಜನರನ್ನು ಮರುಭೂಮಿಯಲ್ಲಿ ನಡೆಸಿಕೊಂಡು ಬಂದನು. ಜನರು ಬಾಯಾರಲಿಲ್ಲ; ಯಾಕೆಂದರೆ ಆತನು ಬಂಡೆಯಿಂದ ನೀರು ಹರಿಯುಂತೆ ಮಾಡಿದನು. ಆತನು ಬಂಡೆಯನ್ನು ಇಬ್ಭಾಗ ಮಾಡಿದಾಗ ನೀರು ಅದರೊಳಗಿಂದ ಹರಿಯಿತು. ಅಧ್ಯಾಯವನ್ನು ನೋಡಿ |