ಯೆಶಾಯ 46:7 - ಕನ್ನಡ ಸಮಕಾಲಿಕ ಅನುವಾದ7 ಅವರು ಅದನ್ನು ತಮ್ಮ ಹೆಗಲಿನ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿ, ಪೀಠದ ಮೇಲೆ ಇಳಿಸಿ ನಿಲ್ಲಿಸುವರು. ಅದು ಅದರ ಸ್ಥಳದಿಂದ ಜರುಗದು. ಹೌದು, ಒಬ್ಬನು ಕೂಗಿಕೊಂಡರೂ ಅದು ಅವನಿಗೆ ಉತ್ತರ ಕೊಡಲಾರದು ಇಲ್ಲವೆ ಅವನನ್ನು ಕಷ್ಟದಿಂದ ರಕ್ಷಿಸಲಾರದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಅವರು ಅದನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿ, ಪೀಠದ ಮೇಲೆ ಇಳಿಸಿ ನಿಲ್ಲಿಸುವರು. ಅದು ಅಲ್ಲಿಂದ ಜರುಗದು. ಒಬ್ಬನು ಕೂಗಿಕೊಂಡರೂ ಅದು ಅವನಿಗೆ ಉತ್ತರಕೊಡಲಾರದು. ಇಲ್ಲವೆ ಅವನನ್ನು ಕಷ್ಟದಿಂದ ಬಿಡಿಸಲಾರದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ಅದನ್ನು ಮೆರವಣಿಗೆ ಮಾಡುತ್ತಾರೆ ಹೊತ್ತು ಹೆಗಲಮೇಲೆ ಪ್ರತಿಷ್ಠಾಪನೆ ಮಾಡುತ್ತಾರೆ ಇಟ್ಟು ಪೀಠದ ಮೇಲೆ. ಕೂಗಿಕೊಂಡರೂ ಜರುಗದದು ಅಲ್ಲಿಂದ ಉತ್ತರಿಸಿ ಬಿಡಿಸದು ಯಾರನ್ನು ಕಷ್ಟದಿಂದ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ಅದನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡಿ ಪೀಠದ ಮೇಲೆ ಇಳಿಸಿ ನಿಲ್ಲಿಸುವರು. ಅದು ಅಲ್ಲಿಂದ ಜರಗದು, ಒಬ್ಬನು ಕೂಗಿಕೊಂಡರೂ ಉತ್ತರಕೊಟ್ಟು ಕಷ್ಟದಿಂದ ಅವನನ್ನು ಬಿಡಿಸಲಾರದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್7 ಅವರು ಆ ವಿಗ್ರಹವನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ಹೊರುತ್ತಾರೆ. ಆ ಸುಳ್ಳುದೇವರುಗಳು ನಿಷ್ಪ್ರಯೋಜಕವಾಗಿವೆ. ಜನರೇ ಅವುಗಳನ್ನು ಹೊತ್ತುಕೊಳ್ಳಬೇಕು. ಜನರು ಅವುಗಳನ್ನು ನೆಲದ ಮೇಲೆ ಇಟ್ಟಾಗ ಅವು ಅಲ್ಲಾಡುವದಿಲ್ಲ. ತಮ್ಮ ಸ್ಥಳದಿಂದ ಆ ಸುಳ್ಳುದೇವರುಗಳು ಎದ್ದುಹೋಗುವದಿಲ್ಲ. ಜನರು ಅದರ ಮುಂದೆ ಕೂಗಿಕೊಂಡರೂ ಅವು ಕೇಳಿಸಿಕೊಳ್ಳುವದಿಲ್ಲ. ಆ ಸುಳ್ಳುದೇವರುಗಳು ಕೇವಲ ವಿಗ್ರಹಗಳಷ್ಟೇ. ಅವು ಜನರನ್ನು ಅವರ ಕಷ್ಟಗಳಿಂದ ಬಿಡಿಸಲಾರವು. ಅಧ್ಯಾಯವನ್ನು ನೋಡಿ |