Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 45:5 - ಕನ್ನಡ ಸಮಕಾಲಿಕ ಅನುವಾದ

5 ನಾನೇ ಯೆಹೋವ ದೇವರು, ಮತ್ತೊಬ್ಬನಿಲ್ಲ. ನನ್ನ ಹೊರತು ಯಾವ ದೇವರೂ ಇಲ್ಲ. ನೀನು ನನ್ನನ್ನು ಅರಿಯದವನಾಗಿದ್ದರೂ ನಿನ್ನನ್ನು ಬಲಪಡಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ನಾನೇ ಯೆಹೋವನು, ಇನ್ನು ಯಾರೂ ಇಲ್ಲ, ನನ್ನ ಹೊರತು ಯಾವ ದೇವರೂ ಇಲ್ಲ. ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ನಡುಕಟ್ಟುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಸರ್ವೇಶ್ವರ ನಾನಲ್ಲದೆ ಬೇರಾರು ಅಲ್ಲ ನನ್ನ ಹೊರತು ಯಾವ ದೇವರು ಇಲ್ಲ. ನೀನು ನನ್ನನ್ನು ಅರಿಯದವನಾಗಿರುವೆ ಆದರೂ ನಿನ್ನನ್ನು ಶಸ್ತ್ರಧಾರಿಯಾಗಿಸುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ನಾನೇ ಯೆಹೋವ, ಇನ್ನು ಯಾವನೂ ಅಲ್ಲ, ನಾನು ಹೊರತು ಯಾವ ದೇವರೂ ಇಲ್ಲ; ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ನಡುಕಟ್ಟುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಯೆಹೋವನೆಂಬ ನಾನೊಬ್ಬನೇ ದೇವರು. ನನ್ನ ಹೊರತು ಬೇರೆ ದೇವರುಗಳಿಲ್ಲ. ನೀನು ಬಟ್ಟೆಗಳನ್ನು ಧರಿಸಿಕೊಳ್ಳುವಂತೆ ಮಾಡಿದವನು ನಾನೇ. ಆದರೂ ನೀನು ನನ್ನನ್ನು ತಿಳಿದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 45:5
28 ತಿಳಿವುಗಳ ಹೋಲಿಕೆ  

ಪುರಾತನ ಸಂಗತಿಗಳನ್ನು ಜ್ಞಾಪಿಸಿಕೊಳ್ಳಿರಿ. ಏಕೆಂದರೆ ನಾನೇ ದೇವರು, ಮತ್ತೊಬ್ಬನಿಲ್ಲ. ನಾನೇ ದೇವರು, ನನಗೆ ಸರಿಸಮಾನನು ಇಲ್ಲ.


ಹೆದರಬೇಡ, ಇಲ್ಲವೆ ಭಯಪಡಬೇಡ! ನಾನು ಪೂರ್ವದಿಂದಲೂ ನಿಮಗೆ ಹೇಳಲಿಲ್ಲವೋ ಮತ್ತು ಅದನ್ನು ಪ್ರಕಟಿಸಲಿಲ್ಲವೋ? ಅಂತೂ ನೀವೇ ನನ್ನ ಸಾಕ್ಷಿಗಳು. ನಾನಲ್ಲದೆ ಇನ್ನೊಬ್ಬ ದೇವರು ಇದ್ದಾನೋ? ಇಲ್ಲ, ಇನ್ನು ಯಾವ ದೇವರೂ ಇಲ್ಲ, ಯಾರೂ ನನಗೆ ಗೊತ್ತಿಲ್ಲ.”


“ಇಸ್ರಾಯೇಲಿನ ಅರಸನೂ ವಿಮೋಚಕನೂ, ಸೇನಾಧೀಶ್ವರ ಯೆಹೋವ ದೇವರು ಇಂತೆನ್ನುತ್ತಾರೆ: ನಾನೇ ಮೊದಲನೆಯವನು, ನಾನೇ ಕಡೆಯವನು. ನನ್ನ ಹೊರತು ಬೇರೆ ಯಾವ ದೇವರೂ ಇಲ್ಲ.


ನಾನೇ ಇಸ್ರಾಯೇಲಿನ ಮಧ್ಯೆ ನೆಲೆಯಾಗಿ ಇರುವವನು. ನಾನೇ ನಿಮ್ಮ ಯೆಹೋವ ದೇವರು, ನಾನಲ್ಲದೆ ಬೇರೆ ದೇವರು ನಿಮಗಿಲ್ಲ. ನನ್ನ ಜನರು ಎಂದಿಗೂ ನಾಚಿಕೆಪಡರು.


“ನಾನು ಇರುವಾತನೇ ಆಗಿದ್ದೇನೆ! ನನ್ನ ಹಾಗೆ ಬೇರೆ ದೇವರು ಇಲ್ಲವೆಂದು ಈಗ ನೋಡಿರಿ. ನಾನೇ ಸಾಯಿಸುತ್ತೇನೆ, ಬದುಕಿಸುತ್ತೇನೆ, ಗಾಯಮಾಡುತ್ತೇನೆ, ನಾನೇ ಗುಣಪಡಿಸುತ್ತೇನೆ. ನನ್ನ ಕೈಯಿಂದ ತಪ್ಪಿಸುವವನು ಯಾರೂ ಇಲ್ಲ.


ಯೆಹೋವ ದೇವರಲ್ಲದೆ ಮತ್ತೊಬ್ಬರಿಲ್ಲ. ಅವರೇ ದೇವರೆಂದು ನೀವು ತಿಳಿದುಕೊಳ್ಳುವುದಕ್ಕಾಗಿ ಇದನ್ನೆಲ್ಲಾ ನಿಮಗೆ ಮಾತ್ರ ತೋರಿಸಲಾಗಿದೆ.


ಅಧಿಪತಿಗಳ ಮೇಲೆ ತಿರಸ್ಕಾರವನ್ನು ಹೊಯ್ಯುತ್ತಾರೆ; ಬಲಿಷ್ಠರ ಬಲವನ್ನು ಸಡಿಲಿಸುತ್ತಾರೆ.


ನೀವು ಯುದ್ಧಕ್ಕಾಗಿ ನನಗೆ ಬಲವನ್ನು ಆಯುಧವನ್ನಾಗಿ ನೀಡಿ, ನನ್ನ ಎದುರಾಳಿಗಳನ್ನು ನನಗೆ ಅಧೀನ ಮಾಡಿದ್ದೀರಿ.


ಹೀಗಿರುವುದರಿಂದ ಮೇಲಿನ ಆಕಾಶದಲ್ಲಿಯೂ, ಕೆಳಗಿನ ಭೂಮಿಯಲ್ಲಿಯೂ ಯೆಹೋವ ದೇವರೇ ದೇವರೆಂದೂ ಮತ್ತೊಬ್ಬರಿಲ್ಲವೆಂಬುದನ್ನೂ ನೀವು ಈಗ ಗ್ರಹಿಸಿಕೊಂಡು ಮನಸ್ಸಿಗೆ ತಂದುಕೊಳ್ಳಿರಿ.


ಬಲದಿಂದ ನನಗೆ ಆಯುಧವನ್ನು ಧರಿಸುವಂತೆ ಮಾಡಿ, ನನ್ನ ಮಾರ್ಗವನ್ನು ಸುರಕ್ಷಿತಗೊಳಿಸುವ ದೇವರು ಅವರೇ.


ಆದಿಯಲ್ಲಿ ವಾಕ್ಯವಿತ್ತು, ಆ ವಾಕ್ಯವು ದೇವರ ಬಳಿಯಲ್ಲಿತ್ತು, ಆ ವಾಕ್ಯವು ದೇವರಾಗಿತ್ತು.


“ಪಾರಸಿಯ ಅರಸ ಕೋರೆಷನು ಹೀಗೆ ಹೇಳುತ್ತಾನೆ: “ ‘ಪರಲೋಕದ ದೇವರಾದ ಯೆಹೋವ ದೇವರು ಭೂಲೋಕದ ರಾಜ್ಯಗಳನ್ನೆಲ್ಲಾ ನನಗೆ ಕೊಟ್ಟಿದ್ದಾರೆ ಮತ್ತು ಅವರು ಯೆಹೂದ ದೇಶದ ಯೆರೂಸಲೇಮಿನಲ್ಲಿ ತಮಗೆ ಆಲಯವನ್ನು ಕಟ್ಟಿಸಲು ನನಗೆ ಆಜ್ಞಾಪಿಸಿದ್ದಾರೆ.


ನಿನ್ನ ಅಂಗಿಯನ್ನು ಅವನಿಗೆ ತೊಡಿಸಿ, ನಿನ್ನ ನಡುಕಟ್ಟಿನಿಂದ ಅವನನ್ನು ಬಲಪಡಿಸಿ, ನಿನ್ನ ಅಧಿಕಾರವನ್ನು ಅವನಿಗೆ ಒಪ್ಪಿಸುವೆನು. ಅವನು ಯೆರೂಸಲೇಮಿನ ನಿವಾಸಿಗಳಿಗೂ, ಯೆಹೂದದ ಜನರಿಗೂ ತಂದೆಯಾಗಿರುವನು.


ದೇವರು ಅರಸರಿಂದ ಹಾಕಲಾದ ಬಂಧನಗಳನ್ನು ಬಿಚ್ಚಿ, ಅವರ ನಡುಗಳಿಗೆ ವಸ್ತ್ರವನ್ನು ಕಟ್ಟುತ್ತಾರೆ.


ಭೂಲೋಕದಲ್ಲೆಲ್ಲಾ ನನ್ನ ಹಾಗೆ ಯಾರೂ ಇಲ್ಲವೆಂದು ನೀನು ತಿಳಿದುಕೊಳ್ಳುವ ಹಾಗೆ, ಈ ಸಾರಿ ನಾನು ಎಲ್ಲಾ ಉಪದ್ರವಗಳನ್ನು ನಿನ್ನ ಮೇಲೆಯೂ ನಿನ್ನ ಸೇವಕರ ಮೇಲೆಯೂ ನಿನ್ನ ಜನರ ಮೇಲೆಯೂ ಬರಮಾಡುವೆನು.


ಏಕೆಂದರೆ ಯೆಹೋವ ದೇವರಲ್ಲದೆ ಬೇರೆ ದೇವರು ಯಾರು? ಮತ್ತು ನಮ್ಮ ದೇವರನ್ನು ಹೊರತುಪಡಿಸಿ ರಕ್ಷಕ ಯಾರು?


ಯೆಹೋವ ದೇವರು ಹೇಳುವುದೇನೆಂದರೆ, “ನೀವು ನನಗೆ ಸಾಕ್ಷಿಗಳಾಗಿದ್ದೀರಿ,” “ನಾನು ಇರುವಾತನೇ ಆಗಿದ್ದೇನೆಂದು, ನೀವು ತಿಳಿದು, ನಂಬಿ, ಗ್ರಹಿಸಿರಿ; ನಾನು ನಿನ್ನನ್ನು ಸೇವಕನನ್ನಾಗಿ ಆರಿಸಿಕೊಂಡಿದ್ದೇನೆ. ನನಗಿಂತ ಮುಂಚೆಯೂ, ನನ್ನ ಅನಂತರದಲ್ಲಿಯೂ ಯಾವ ದೇವರೂ ಇರುವುದಿಲ್ಲ.


“ಯೆಹೋವ ದೇವರು ತಾವೇ ಅಭಿಷೇಕಿಸಿದ ಕೋರೆಷನಿಗೆ ಹೇಳುವುದೇನೆಂದರೆ: ರಾಷ್ಟ್ರಗಳನ್ನು ನೀನು ತುಳಿದು, ರಾಜರ ನಡುಕಟ್ಟನ್ನು ಬಿಚ್ಚಿ, ಮುಚ್ಚಲಾಗದ ಹಾಗೆ ಬಾಗಿಲು ಹೆಬ್ಬಾಗಿಲುಗಳನ್ನು ತೆರೆಯಲು ನಾನು ನಿನ್ನ ಬಲಗೈಯನ್ನು ಹಿಡಿದು ನಡೆಸುವೆನು.


ಪೂರ್ವದಿಂದ ಪಶ್ಚಿಮದವರೆಗೆ ಇರುವವರೆಲ್ಲರೂ ನನ್ನ ಹೊರತು ಮತ್ತೊಬ್ಬನು ಇಲ್ಲ, ನಾನೇ ಯೆಹೋವ ದೇವರು ಮತ್ತೊಬ್ಬ ದೇವರು ಇಲ್ಲ ಎಂದು ನನ್ನನ್ನು ತಿಳಿದುಕೊಳ್ಳುವರು.


“ನಾನೇ ಇರುವವಳು, ನನ್ನ ಹೊರತು ಇನ್ನು ಯಾರೂ ಇಲ್ಲ. ‘ನಾನು ವಿಧವೆಯಾಗಿ ಕೂತುಕೊಳ್ಳುವುದಿಲ್ಲ. ಪುತ್ರ ಶೋಕವನ್ನು ಅನುಭವಿಸುವುದಿಲ್ಲ,’ ಎನ್ನುವವಳೇ, ಭೋಗಾಸಕ್ತಳೇ, ನೆಮ್ಮದಿಯಾಗಿ ನೆಲೆಗೊಂಡಿರುವವಳೇ, ಈಗ ಇದನ್ನು ಕೇಳು.


ಬಾಬಿಲೋನಿನ ಅರಸನ ತೋಳುಗಳನ್ನು ನಾನು ಬಲಪಡಿಸುವೆನು, ಅವನ ಕೈಯಲ್ಲಿ ನನ್ನ ಖಡ್ಗವನ್ನಿಡುವೆನು. ಫರೋಹನ ತೋಳುಗಳು ಬಿದ್ದು ಹೋಗುವುವು. ಇವನು ಅವನ ಮುಂದೆ ಗಾಯ ಹೊಂದಿದವನಂತೆ ನರಳಾಡುವನು.


ನನ್ನ ಕಾಲುಗಳನ್ನು ಜಿಂಕೆಗಳ ಕಾಲುಗಳಂತೆ ಚುರುಕು ಮಾಡಿ, ಅವರು ನನ್ನನ್ನು ಉನ್ನತ ಸ್ಥಳಗಳ ಮೇಲೆ ನಿಲ್ಲಿಸುತ್ತಾರೆ.


ನೀವು ದೊಡ್ಡವರೂ ಅದ್ಭುತಗಳನ್ನು ಮಾಡುವವರೂ ಆಗಿದ್ದೀರಿ. ನೀವೊಬ್ಬರೇ ದೇವರು.


ಹೀಗಿರುವುದರಿಂದ, ಈಗ ನಮ್ಮ ದೇವರಾದ ಯೆಹೋವ ದೇವರೇ, ‘ನೀವೊಬ್ಬರೇ ದೇವರಾದ ಯೆಹೋವ ದೇವರಾಗಿದ್ದೀರಿ,’ ಎಂದು ಭೂಮಿಯ ಸಮಸ್ತ ರಾಜ್ಯಗಳೂ ತಿಳಿಯುವ ಹಾಗೆ ನಮ್ಮನ್ನು ಅವನ ಕೈಯಿಂದ ತಪ್ಪಿಸಿ ರಕ್ಷಿಸಿರಿ,” ಎಂದು ಹಿಜ್ಕೀಯನು ಯೆಹೋವ ದೇವರಿಗೆ ಪ್ರಾರ್ಥಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು