Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 45:3 - ಕನ್ನಡ ಸಮಕಾಲಿಕ ಅನುವಾದ

3 ನಿನ್ನನ್ನು ಹೆಸರು ಹಿಡಿದು ಕರೆಯುವ ಯೆಹೋವ ದೇವರು ನಾನೇ! ಇಸ್ರಾಯೇಲಿನ ದೇವರು ಎಂದು ನೀನು ತಿಳಿದುಕೊಳ್ಳುವ ಹಾಗೆ ಕತ್ತಲಲ್ಲಿ ಬಚ್ಚಿಟ್ಟಿರುವ ಬಂಡಾರವನ್ನೂ, ಗುಪ್ತಸ್ಥಳಗಳಲ್ಲಿ ಮರೆಮಾಡಿದ ನಿಧಿನಿಕ್ಷೇಪಗಳನ್ನೂ ನಿನಗೆ ಕೊಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ನಿನ್ನ ಹೆಸರು ಹಿಡಿದು ಕರೆಯುವ ಯೆಹೋವನು ನಾನೇ. ಇಸ್ರಾಯೇಲರ ದೇವರು ಎಂದು ನೀನು ತಿಳಿದುಕೊಳ್ಳುವ ಹಾಗೆ ಕತ್ತಲಲ್ಲಿ ಬಚ್ಚಿಟ್ಟಿರುವ ಆಸ್ತಿಯನ್ನೂ, ಗುಪ್ತಸ್ಥಳಗಳಲ್ಲಿ ಮರೆಮಾಡಿದ ನಿಧಿನಿಕ್ಷೇಪವನ್ನೂ ನಿನಗೆ ಕೊಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಹೆಸರು ಹಿಡಿದು ನಿನ್ನ ಕರೆಯುವ ಸರ್ವೇಶ್ವರ ನಾನು ಕೊಡುವೆ ನಾ ನಿನಗೆ ಕತ್ತಲಲಿ ಬಚ್ಚಿಟ್ಟ ಭಂಡಾರಗಳನು ಗುಪ್ತಸ್ಥಳಗಳಲ್ಲಿ ಮರೆಮಾಡಿರುವ ನಿಧಿನಿಕ್ಷೇಪಗಳನು. ಈ ಪರಿ ಅರಿತುಕೊಳ್ಳುವೆ ನೀನು ನಾನೇ ಇಸ್ರಯೇಲರ ದೇವರೆಂಬುದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ನಿನ್ನ ಹೆಸರುಹಿಡಿದು ಕರೆಯುವ ನಾನು ಯೆಹೋವನು, ಇಸ್ರಾಯೇಲ್ಯರ ದೇವರು ಎಂದು ನೀನು ತಿಳಿದುಕೊಳ್ಳುವ ಹಾಗೆ ಕತ್ತಲಲ್ಲಿ ಬಚ್ಚಿಟ್ಟಿರುವ ಆಸ್ತಿಪಾಸ್ತಿಯನ್ನೂ ಗುಪ್ತಸ್ಥಳಗಳಲ್ಲಿ ಮರೆಮಾಡಿದ ನಿಧಿನಿಕ್ಷೇಪವನ್ನೂ ನಿನಗೆ ಕೊಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಕತ್ತಲೆಯಲ್ಲಿ ಕೂಡಿಸಿಟ್ಟಿದ್ದ ಐಶ್ವರ್ಯವನ್ನೂ ಗುಪ್ತವಾಗಿಟ್ಟಿದ್ದ ನಿಕ್ಷೇಪವನ್ನೂ ನಾನು ನಿನಗೆ ಕೊಡುವೆನು. ನಾನೇ ಯೆಹೋವನೆಂದು ನೀನು ತಿಳಿಯುವಂತೆ ಇದನ್ನು ಮಾಡುವೆನು. ನಾನೇ ಇಸ್ರೇಲರ ದೇವರಾದ ಯೆಹೋವನು. ನಿನ್ನನ್ನು ಹೆಸರೆತ್ತಿ ಕರೆಯುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 45:3
15 ತಿಳಿವುಗಳ ಹೋಲಿಕೆ  

ನಾನೇ, ನಾನಾಗಿಯೇ ಮಾತನಾಡಿದ್ದೇನೆ. ನಾನೇ ಅವನನ್ನು ಕರೆದದ್ದು; ಅವನನ್ನು ನಾನೇ ಬರಮಾಡಿದ್ದೇನೆ. ಅವನ ಮಾರ್ಗವು ಯಶಸ್ವಿಯಾಗುವುದು.


ಈಗಲಾದರೋ ಯಾಕೋಬನ ವಂಶವೇ, ಇಸ್ರಾಯೇಲ್ ಸಂತಾನವೇ, ನಿನ್ನನ್ನು ಸೃಷ್ಟಿಸಿ, ರೂಪಿಸಿದ ಯೆಹೋವ ದೇವರು ಹೇಳುವುದೇನೆಂದರೆ: “ಹೆದರಬೇಡ, ಏಕೆಂದರೆ ನಾನು ನಿನ್ನನ್ನು ವಿಮೋಚಿಸಿದೆನಲ್ಲಾ, ನಿನ್ನ ಹೆಸರು ಹಿಡಿದು ಕರೆದೆನಲ್ಲಾ, ನೀನು ನನ್ನವನೇ.


“ಪಾರಸಿಯ ಅರಸ ಕೋರೆಷನು ಹೀಗೆ ಹೇಳುತ್ತಾನೆ: “ ‘ಪರಲೋಕದ ದೇವರಾದ ಯೆಹೋವ ದೇವರು ಭೂಲೋಕದ ರಾಜ್ಯಗಳನ್ನೆಲ್ಲಾ ನನಗೆ ಕೊಟ್ಟಿದ್ದಾರೆ ಮತ್ತು ಅವರು ಯೆಹೂದ ದೇಶದ ಯೆರೂಸಲೇಮಿನಲ್ಲಿ ತಮಗೆ ಆಲಯವನ್ನು ಕಟ್ಟಿಸಲು ನನಗೆ ಆಜ್ಞಾಪಿಸಿದ್ದಾರೆ.


ಮೋಶೆಯು ಯೆಹೋವ ದೇವರಿಗೆ, “ ‘ಈ ಜನರನ್ನು ನಡೆಸಿಕೊಂಡು ಹೋಗು,’ ಎಂದು ನನಗೆ ಹೇಳುತ್ತಿರುವಿರಿ. ಯಾರನ್ನು ನನ್ನ ಸಂಗಡ ಕಳುಹಿಸುವಿರಿ, ಎಂದು ನೀವು ನನಗೆ ತಿಳಿಸಲಿಲ್ಲ. ಆದರೂ ನೀವು ನನಗೆ, ‘ನಾನು ನಿನ್ನನ್ನು ನಿನ್ನ ಹೆಸರಿನ ಮೂಲಕ ತಿಳಿದಿದ್ದೇನೆ, ನನ್ನ ದೃಷ್ಟಿಯಲ್ಲಿ ನಿನಗೆ ಕೃಪೆ ದೊರೆಯಿತು,’ ಎಂದೂ ಹೇಳಿದ್ದೀರಲ್ಲಾ.


ಅದಕ್ಕೆ ಯೆಹೋವ ದೇವರು ಮೋಶೆಗೆ, “ನೀನು ಆಡಿದ ಈ ಮಾತಿನಂತೆಯೇ ನಾನು ಇದನ್ನು ಮಾಡುತ್ತೇನೆ. ಏಕೆಂದರೆ ನನ್ನ ದೃಷ್ಟಿಯಲ್ಲಿ ನಿನಗೆ ದಯೆ ದೊರಕಿತು. ನಾನು ನಿನ್ನನ್ನು ನಿನ್ನ ಹೆಸರಿನಿಂದ ತಿಳಿದಿದ್ದೇನೆ,” ಎಂದರು.


ಅದರ ಕುದುರೆಗಳಿಗೆ ವಿರೋಧವಾಗಿಯೂ, ಅವರ ರಥಗಳಿಗೆ ವಿರೋಧವಾಗಿಯೂ, ಅವರೊಳಗಿರುವ ಎಲ್ಲಾ ಸಕಲ ಜನರಿಗೆ ವಿರೋಧವಾಗಿಯೂ ಖಡ್ಗ ಉಂಟು; ಅವರ ಹೆಂಗಸರಂತೆ ಅಶಕ್ತರಾಗುವರು; ಅದರ ಬೊಕ್ಕಸಗಳಿಗೆ ವಿರೋಧವಾಗಿ ಖಡ್ಗ ಉಂಟು; ಅವು ಕೊಳ್ಳೆಯಾಗುವುವು.


ಬಾಬಿಲೋನ್ ಆಕಾಶಕ್ಕೆ ಏರಿದರೂ, ಅದರ ಬಲದ ಉನ್ನತಸ್ಥಾನವನ್ನು ಭದ್ರಮಾಡಿದರೂ, ಸೂರೆಮಾಡುವವರು ನನ್ನಿಂದ ಅವಳಿಗೆ ವಿರೋಧವಾಗಿ ಬರುವರು,” ಎಂದು ಯೆಹೋವ ದೇವರು ಹೇಳುತ್ತಾರೆ.


ದ್ವೀಪಗಳೇ, ನನ್ನ ಮಾತನ್ನು ಕೇಳಿರಿ. ದೂರದ ರಾಷ್ಟ್ರಗಳೇ, ಕಿವಿಗೊಡಿರಿ! ನನ್ನ ಜನನದ ಮುಂಚೆಯೇ ಯೆಹೋವ ದೇವರು ನನ್ನನ್ನು ಕರೆದರು. ತಾಯಿಯ ಉದರದಲ್ಲಿದ್ದಾಗಲೇ ನನಗೆ ಹೆಸರಿಟ್ಟರು.


ಆದರೆ ಆ ಎಂಬತ್ತು ಮಂದಿಯಲ್ಲಿ ಹತ್ತು ಜನರು ಇಷ್ಮಾಯೇಲನಿಗೆ, “ನಮ್ಮನ್ನು ಕೊಂದು ಹಾಕಬೇಡ. ಏಕೆಂದರೆ ನಮಗೆ ಹೊಲದಲ್ಲಿ ಗೋಧಿ, ಜವೆಗೋಧಿ, ಎಣ್ಣೆ, ಜೇನು ಇವುಗಳನ್ನು ಬಚ್ಚಿಟ್ಟಿದ್ದೇವೆ” ಎಂದು ಬಿನ್ನವಿಸಿದರು. ಆದ್ದರಿಂದ ಅವನು ಹಿಂದೆಗೆದು ಅವರನ್ನು, ಅವರ ಸಹೋದರರ ಮಧ್ಯದಲ್ಲಿ ಕೊಂದುಹಾಕಲಿಲ್ಲ.


ನೀವು ದೇವರುಗಳೆಂದು ತಿಳಿದುಕೊಳ್ಳುವಂತೆ ಮುಂದೆ ಬರುವವುಗಳನ್ನು ನಮಗೆ ತಿಳಿಸಿರಿ. ಹೌದು, ನಾವು ಗಾಬರಿಯಿಂದ ಭಯಪಡುವ ಹಾಗೆ ಒಳ್ಳೆಯದನ್ನಾಗಲಿ, ಕೆಟ್ಟದ್ದನ್ನಾಗಲಿ ಮಾಡಿರಿ.


ಕಟ್ಟಕಡೆಯ ಮೇರೆಯಿಂದ ಅದಕ್ಕೆ ವಿರೋಧವಾಗಿ ಬನ್ನಿ. ಅದರ ಕಣಜಗಳನ್ನು ತೆರೆಯಿರಿ. ಅದನ್ನು ದಿಬ್ಬಗಳಂತೆ ತುಳಿಯಿರಿ. ಸಂಪೂರ್ಣವಾಗಿ ನಾಶಮಾಡಿರಿ. ಅದಕ್ಕೆ ಒಂದೂ ಉಳಿಯದಿರಲಿ.


ಅನೇಕ ನೀರುಗಳ ಬಳಿಯಲ್ಲಿ ವಾಸವಾಗಿರುವವಳೇ, ಬಹಳ ದ್ರವ್ಯಗಳುಳ್ಳವಳೇ, ನಿನ್ನ ಅಂತ್ಯವೂ, ನಿನ್ನ ನಾಶನದ ಕಾಲವು ಬಂತು.


ಈಗ ಇಸ್ರಾಯೇಲಿನ ದೇವರಾದ ಯೆಹೋವ ದೇವರೇ, ನಿಮ್ಮ ಸೇವಕನಾದ ದಾವೀದನಿಗೆ ಹೇಳಿದ ವಾಕ್ಯವು ನೆರವೇರಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು