Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 45:16 - ಕನ್ನಡ ಸಮಕಾಲಿಕ ಅನುವಾದ

16 ಅವರೆಲ್ಲರೂ ನಾಚಿಕೆಪಟ್ಟು ನಿಂದಿತರಾಗುವರು. ವಿಗ್ರಹಗಳನ್ನು ಮಾಡುವವರು ಒಟ್ಟಾಗಿ ಗಲಿಬಿಲಿಗೆ ಒಳಗಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ವಿಗ್ರಹಗಳನ್ನು ಕೆತ್ತುವವರೆಲ್ಲರೂ ನಾಚಿಕೆಗೀಡಾಗಿ ಮಾನಭಂಗಪಡುವರು. ಹೌದು, ಒಟ್ಟಿಗೆ ಅವಮಾನದಲ್ಲಿ ಮುಳುಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಮೂರ್ತಿಗಳನು ಮಾಡುವವರೆಲ್ಲರು ಈಡಾಗುವರು ನಾಚಿಕೆಗೆ ಮಾನಭಂಗಪಟ್ಟು ಒಟ್ಟಿಗೆ ಮುಳುಗುವರವರು ಅವಮಾನದೊಳಗೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಮೂರ್ತಿಗಳನ್ನುಂಟುಮಾಡುವವರೆಲ್ಲರೂ ನಾಚಿಕೆಗೀಡಾಗಿ ಮಾನಭಂಗಪಡುವರು, ಹೌದು, ಒಟ್ಟಿಗೆ ಅವಮಾನದಲ್ಲಿ ಮುಣುಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಎಷ್ಟೋ ಜನರು ಸುಳ್ಳುದೇವರುಗಳನ್ನು ರೂಪಿಸಿಕೊಂಡು ನಿರಾಶರಾಗುವರು. ಅವರೆಲ್ಲರೂ ನಾಚಿಕೆಗೆ ಗುರಿಯಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 45:16
9 ತಿಳಿವುಗಳ ಹೋಲಿಕೆ  

ಅವನೂ, ಅವನ ಸಂಗಡಿಗರೂ ನಾಚಿಕೆಗೆ ಒಳಗಾಗುವರು ಮತ್ತು ಆ ಕೆತ್ತನೆಯ ಕೆಲಸದವರು ಮನುಷ್ಯ ಮಾತ್ರದವರೇ. ಅವರೆಲ್ಲರೂ ಒಟ್ಟುಗೂಡಿ ನಿಂತುಕೊಳ್ಳಲಿ. ಅವರು ಭಯಪಟ್ಟು, ಒಟ್ಟಿಗೆ ಲಜ್ಜೆಪಡುವರು.


ವಿಗ್ರಹಗಳನ್ನು ಕೆತ್ತುವವರು ನಿರರ್ಥಕರು. ಅವರ ಇಷ್ಟ ಬೊಂಬೆಗಳು ಏತಕ್ಕೂ ಬಾರವು. ಅವುಗಳಲ್ಲಿ ವಿಶ್ವಾಸವಿಡುವವರು ಕುರುಡರು, ತಿಳುವಳಿಕೆ ಇಲ್ಲದವರು. ಅಂಥವರು ನಾಚಿಕೆಗೆ ಗುರಿಯಾಗುವರು.


ಕೆತ್ತಿದ ವಿಗ್ರಹಗಳಲ್ಲಿ ಭರವಸವಿಟ್ಟು, ‘ನೀವೇ ನಮ್ಮ ದೇವರುಗಳು,’ ಎಂದು ಹೇಳುವವರು ಹಿಂದೆ ಬಿದ್ದು, ನಾಚಿಕೆಗೆ ಈಡಾಗುವರು.


“ಜನಾಂಗಗಳಲ್ಲಿ ತಪ್ಪಿಸಿಕೊಂಡವರಾದ ನೀವು ಒಟ್ಟಾಗಿ ಕೂಡಿಕೊಂಡು ಸಮೀಪಕ್ಕೆ ಬನ್ನಿರಿ. ಮರದಿಂದ ಕೆತ್ತಿದ ತಮ್ಮ ವಿಗ್ರಹವನ್ನು ಹೊತ್ತುಕೊಂಡು, ರಕ್ಷಿಸಲಾರದ ಆ ದೇವರಿಗೆ ಬಿನ್ನವಿಸುವವರು ಏನೂ ತಿಳಿಯದವರಾಗಿದ್ದಾರೆ.


ಮರುಭೂಮಿಯಲ್ಲಿ ದೇವದಾರು, ಜಾಲೀಮರ, ಸುಗಂಧ, ಓಲಿವ್ ಮರಗಳನ್ನು ನಾನು ನೆಡುವೆನು. ಮರುಭೂಮಿಯಲ್ಲಿ ತುರಾಯಿ, ತಪಸಿ, ತಿಲಕ ವೃಕ್ಷಗಳನ್ನು ಒಟ್ಟಿಗೆ ಬೆಳೆಯಿಸುವೆನು.


ವಿಗ್ರಹಗಳನ್ನು ಪೂಜಿಸಿ, ವಿಗ್ರಹಗಳಲ್ಲಿ ಹೆಮ್ಮೆ ಪಡುವವರೆಲ್ಲರು ನಾಚಿಕೆಪಡಲಿ; ಎಲ್ಲಾ ದೇವರುಗಳೇ, ಯೆಹೋವ ದೇವರನ್ನು ಆರಾಧಿಸಿರಿ!


ಆಗ ಇಸ್ರಾಯೇಲಿನ ಮನೆಯವರು ತಾವು ನಂಬಿಕೊಂಡಿದ್ದ ಬೇತೇಲಿನ ವಿಷಯ ಹೇಗೆ ನಾಚಿಕೆಪಟ್ಟರೋ, ಹಾಗೆಯೇ ಮೋವಾಬು ಕೆಮೋಷನ ವಿಷಯ ನಾಚಿಕೆಪಡುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು