Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 44:7 - ಕನ್ನಡ ಸಮಕಾಲಿಕ ಅನುವಾದ

7 ನಾನು ಪುರಾತನ ಕಾಲದವರನ್ನು ಸೃಷ್ಟಿಸಿದಂದಿನಿಂದ ನನ್ನ ಹಾಗೆ ಕರೆದು, ತಿಳಿಸಿ, ಅದನ್ನು ಸರಿಯಾಗಿ ನನಗೋಸ್ಕರ ಸಿದ್ಧಮಾಡಿದವನು ಯಾರು? ಮುಂದೆ ಬರಬೇಕಾದದ್ದನ್ನು ಅವರು ನನಗೆ ತಿಳಿಸಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ನಾನು ಪುರಾತನ ಕಾಲದವರನ್ನು ಸೃಷ್ಟಿಸಿದಂದಿನಿಂದ ನನ್ನ ಹಾಗೆ ಯಾರು ಪ್ರಕಟಿಸಿಕೊಂಡಿದ್ದಾರೆ? ಅಂಥವರಿದ್ದರೆ ನನ್ನೆದುರಿಗೆ ಹೇಳಿ ಸ್ಥಾಪಿಸಲಿ. ಇಲ್ಲವೆ ಮುಂದಿನವುಗಳನ್ನು ಈಗ ತಿಳಿಸಲಿ, ಭವಿಷ್ಯತ್ತುಗಳನ್ನು ಹೇಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ನನಗೆ ಸಮಾನರು ಯಾರು? ರುಜುಪಡಿಸಲಿ, ನನ್ನ ಎದುರಿಗೆ ಬಂದು ವಾದಿಸಿ ಸ್ಥಿರಪಡಿಸಲಿ. ನರ ಸೃಷ್ಟಿಯಾದಂದಿನಿಂದ ನಡೆದುದೆಲ್ಲವನು ತಿಳಿಸಲಿ ಮುಂದಿನವುಗಳನು, ಭವಿಷ್ಯತ್ತುಗಳನು, ಈಗ ಊಹಿಸಿ ಹೇಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ನಾನು ಪುರಾತನದವರನ್ನು ಸೃಷ್ಟಿಸಿದಂದಿನಿಂದ ನನ್ನ ಹಾಗೆ ಯಾರು ಪ್ರಕಟಿಸಿಕೊಂಡಿದ್ದಾರೆ? ಅಂಥವರಿದ್ದರೆ ನನ್ನೆದುರಿಗೆ ಹೇಳಿ ಸ್ಥಾಪಿಸಲಿ; ಇಲ್ಲವೆ ಮುಂದಿನವುಗಳನ್ನು ಈಗ ತಿಳಿಸಲಿ, ಭವಿಷ್ಯತ್ತುಗಳನ್ನು ಹೇಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ನನ್ನಂತಹ ಬೇರೆ ದೇವರುಗಳಿಲ್ಲ. ಬೇರೆ ದೇವರುಗಳು ಇದ್ದರೆ ಅವು ಈಗ ಮಾತನಾಡಲಿ. ಆ ದೇವರುಗಳು ಬಂದು ತಾವು ನನ್ನಂತಿರುವುದಾಗಿ ರುಜುವಾತು ಮಾಡಲಿ. ಎಂದೆಂದಿಗೂ ಇರುವ ಈ ಜನರನ್ನು ನಾನು ಸೃಷ್ಟಿಸಿದಂದಿನಿಂದ ಏನಾಯಿತೆಂಬುದನ್ನು ನನಗೆ ತಿಳಿಸಬೇಕು. ಆ ದೇವರು ಮುಂದೆ ಸಂಭವಿಸಲಿಕ್ಕಿರುವ ವಿಷಯಗಳನ್ನು ತಿಳಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 44:7
13 ತಿಳಿವುಗಳ ಹೋಲಿಕೆ  

ಆತನು ನೀತಿವಂತನೆಂದು ನಾನು ತಿಳಿಯುವಂತೆ ಮತ್ತು ಹೇಳುವಂತೆ, ಆದಿಯಲ್ಲಿ ಯಾರು ಅದನ್ನು ತಿಳಿಸಿದ್ದಾರೆ? ಹೌದು, ಯಾರೂ ತೋರಿಸುವವನಿಲ್ಲ, ತಿಳಿಸುವವನು ಒಬ್ಬನೂ ಇಲ್ಲ. ನಿಮ್ಮ ಮಾತುಗಳು ಯಾರ ಕಿವಿಗೂ ಬೀಳುವುದಿಲ್ಲ.


“ವಿಗ್ರಹಗಳೇ, ಮುಂದೆ ಏನಾಗಲಿದೆ ಎಂದು ನಮಗೆ ಹೇಳಿ. ಹಿಂದಿನವುಗಳನ್ನು ನಾವು ಮನಸ್ಸಿಗೆ ತಂದುಕೊಂಡು, ಅವುಗಳ ಪರಿಣಾಮವನ್ನು ಇಲ್ಲವೆ ಮುಂದಿನವುಗಳನ್ನು ತಿಳಿಸಿದರೆ ಗ್ರಹಿಸುವೆವು.


ನೀವು ಏನು ಸಾರಬೇಕೋ ಅದನ್ನು ಈಗ ತನ್ನಿರಿ ಹೌದು, ಒಟ್ಟಿಗೆ ಅವರು ಆಲೋಚಿಸಲಿ ಈ ಸಂಗತಿಗಳನ್ನು ಪುರಾತನ ಕಾಲದಿಂದಲೂ ಪ್ರಕಟಿಸಿದವರು ಯಾರು? ಪ್ರಾರಂಭದಿಂದ ಇದನ್ನು ತಿಳಿಸಿದವರು ಯಾರು? ಯೆಹೋವನಾದ ನಾನೇ ಅಲ್ಲವೇ? ನನ್ನ ಹೊರತು ಬೇರೆ ದೇವರು ಇಲ್ಲ. ನನ್ನ ಹೊರತಾಗಿ ನೀತಿಯುಳ್ಳ ದೇವರೂ, ರಕ್ಷಕನೂ ಇಲ್ಲವೇ ಇಲ್ಲ.


ದೇವರು ಒಬ್ಬ ಮನುಷ್ಯನಿಂದ ಎಲ್ಲಾ ದೇಶಗಳನ್ನು ಸೃಷ್ಟಿಸಿ, ಜನರು ಇಡೀ ಭೂಲೋಕವನ್ನು ತುಂಬಿಕೊಳ್ಳುವಂತೆ ಮಾಡಿದರು; ಅವರವರು ಇರತಕ್ಕ ಕಾಲಾವಧಿಯನ್ನೂ ವಾಸಿಸಲು ನಿರ್ದಿಷ್ಟ ಸ್ಥಳಗಳನ್ನೂ ನೇಮಿಸಿದ್ದಾರೆ.


ನಿಮ್ಮಲ್ಲಿ ಅನ್ಯದೇವರು ಇಲ್ಲದಿರುವಾಗಲೇ, ನಾನೇ ರಕ್ಷಣೆಯನ್ನು ಪ್ರಕಟಿಸಿ, ತೋರಿಸಿದ್ದೇನೆ. ಆದ್ದರಿಂದ ನೀವು ನನ್ನ ಸಾಕ್ಷಿಗಳು,” “ನಾನೇ ದೇವರು ಎಂದು ಯೆಹೋವ ದೇವರು ನುಡಿಯುತ್ತಾರೆ.


ಎಲ್ಲಾ ಜನಾಂಗಗಳು ಒಟ್ಟಿಗೆ ಕೂಡಿಕೊಳ್ಳಲಿ. ಎಲ್ಲಾ ಜನರೂ ಸೇರಿಕೊಳ್ಳಲಿ. ಅವರ ದೇವರುಗಳಲ್ಲಿ ಭವಿಷ್ಯವನ್ನು ನುಡಿಯಬಲ್ಲವರು ಯಾರು? ಗತಿಸಿದ ಸಂಗತಿಗಳನ್ನು ಮುಂತಿಳಿಸುವವರು ಯಾರು? ನಾವು ನೀತಿವಂತರೆಂದು ಸ್ಥಾಪಿಸುವುದಕ್ಕೆ ಸಾಕ್ಷಿಗಳನ್ನು ಕರೆತರಲಿ. ಆ ಸಾಕ್ಷಿಗಳು ಇದನ್ನು ಕೇಳಿ, ನಿಜವೆಂದು ಹೇಳಲಿ.


ಇದನ್ನೆಲ್ಲಾ ನಡೆಯಿಸಿ ನೆರವೇರಿಸಿದವನೂ ಆದಿಯಿಂದ ತಲತಲಾಂತರಗಳನ್ನು ಬರಮಾಡಿದವನು ಯಾರು? ಯೆಹೋವ ಎಂಬ ನಾನೇ ಮೊದಲನೆಯವನು, ಅಂತ್ಯಕಾಲದಲ್ಲಿ ಸಂಗಡಿಗನು ಆಗಿರುವಾತನೇ ನಾನು.


ಮಹೋನ್ನತ ದೇವರು ಜನಾಂಗಗಳಿಗೆ ಸ್ಥಳವನ್ನು ಕೊಡುವಾಗಲೂ, ಅವರು ಮಾನವರನ್ನು ವಿಂಗಡಿಸುವಾಗಲೂ, ಇಸ್ರಾಯೇಲರ ಲೆಕ್ಕದ ಪ್ರಕಾರ ಜನರ ಮೇರೆಗಳನ್ನು ಗುರುತಿಸಿಕೊಂಡರು.


ನೀವು ದೇವರುಗಳೆಂದು ತಿಳಿದುಕೊಳ್ಳುವಂತೆ ಮುಂದೆ ಬರುವವುಗಳನ್ನು ನಮಗೆ ತಿಳಿಸಿರಿ. ಹೌದು, ನಾವು ಗಾಬರಿಯಿಂದ ಭಯಪಡುವ ಹಾಗೆ ಒಳ್ಳೆಯದನ್ನಾಗಲಿ, ಕೆಟ್ಟದ್ದನ್ನಾಗಲಿ ಮಾಡಿರಿ.


ನಿನ್ನ ಜ್ಞಾನಿಗಳು ಎಲ್ಲಿ? ನಿನಗೆ ಅವರು ಹೇಳಲಿ. ಸೇನಾಧೀಶ್ವರ ಯೆಹೋವ ದೇವರು ಈಜಿಪ್ಟಿನವರ ವಿರೋಧವಾಗಿ ಉದ್ದೇಶಿಸಿದ್ದನ್ನು ಅವರು ತಿಳಿದುಕೊಳ್ಳಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು