Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 44:25 - ಕನ್ನಡ ಸಮಕಾಲಿಕ ಅನುವಾದ

25 ಸುಳ್ಳುಗಾರರ ಗುರುತುಗಳನ್ನು ನಿರರ್ಥಕ ಮಾಡುವವನೂ ಮತ್ತು ಕಣಿ ಹೇಳುವವರನ್ನು ಹುಚ್ಚರನ್ನಾಗಿ ಮಾಡುವವನೂ ಜ್ಞಾನಿಗಳನ್ನು ಹಿಂದಕ್ಕೆ ತಳ್ಳಿ, ಅವರ ತಿಳುವಳಿಕೆಯನ್ನು ಬುದ್ಧಿಹೀನವಾಗ ಮಾಡುವವನೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ನಾನು ಕೊಚ್ಚಿಕೊಳ್ಳುವವರ ಶಕುನಗಳನ್ನು ನಿರರ್ಥಕಪಡಿಸಿ, ಕಣಿಹೇಳುವವರನ್ನು ಮರುಳುಗೊಳಿಸಿ, ಜ್ಞಾನಿಗಳನ್ನು ಹಿಂದಕ್ಕೆ ತಳ್ಳಿ ಅವರ ತಿಳಿವಳಿಕೆಯನ್ನು ಹುಚ್ಚುತನವಾಗ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಸುಳ್ಳುಶಕುನ ಹೇಳುವವರನು ನಿರರ್ಥಕಗೊಳಿಸುವವನು ನಾನೆ ಕಣಿ ಹೇಳುವವರನು ಮರುಳುಗೊಳಿಸುವವನು ನಾನೆ ವಿವೇಕಿಗಳೊಡನೆ ವಾದಿಸಿ ಅವರ ವಿವೇಕವೇ ಅವಿವೇಕವೆಂದು ತೋರಿಸಿದವನು ನಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ನಾನು ಕೊಚ್ಚಿಕೊಳ್ಳುವವರ ಶಕುನಗಳನ್ನು ನಿರರ್ಥಕಪಡಿಸಿ ಕಣಿಹೇಳುವವರನ್ನು ಮರುಳುಗೊಳಿಸಿ ಜ್ಞಾನಿಗಳನ್ನು ಹಿಂದಕ್ಕೆ ತಳ್ಳಿ ಅವರ ತಿಳುವಳಿಕೆಯನ್ನು ಹುಚ್ಚುತನವಾಗಮಾಡಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಸುಳ್ಳುಪ್ರವಾದಿಗಳು ಸುಳ್ಳನ್ನೇ ಹೇಳುತ್ತಾರೆ. ಅವರು ಹೇಳಿದ್ದೆಲ್ಲವೂ ಸುಳ್ಳು ಎಂದು ಯೆಹೋವನು ತೋರಿಸಿಕೊಡುತ್ತಾನೆ. ಮಂತ್ರಗಾರರನ್ನು ದೇವರು ಮೂರ್ಖರನ್ನಾಗಿ ಮಾಡುತ್ತಾನೆ. ಆತನು ಜ್ಞಾನಿಗಳನ್ನು ಗಲಿಬಿಲಿಗೊಳಿಸುತ್ತಾನೆ. ಅವರು ತಮಗೆ ಎಲ್ಲವೂ ಗೊತ್ತಿದೆ ಎಂದು ತಿಳಿದುಕೊಳ್ಳುತ್ತಾರೆ. ಆದರೆ ದೇವರು ಅವರನ್ನು ಮೂಢರನ್ನಾಗಿ ಮಾಡುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 44:25
30 ತಿಳಿವುಗಳ ಹೋಲಿಕೆ  

ಯೆಹೋವ ದೇವರು ಜನಾಂಗಗಳ ಆಲೋಚನೆಯನ್ನು ವ್ಯರ್ಥ ಮಾಡುವರು; ಜನರ ದುರುದ್ದೇಶಗಳನ್ನು ನಿಷ್ಪಲ ಮಾಡುತ್ತಾರೆ.


ಸುಳ್ಳು ಪ್ರವಾದಿಗಳ ವಿರೋಧವಾಗಿ ಖಡ್ಗ ಉಂಟು; ಅವರು ಮೂರ್ಖರಾಗುವರು; ಅದರ ಪರಾಕ್ರಮಶಾಲಿಗಳಿಗೆ ವಿರೋಧವಾಗಿ ಖಡ್ಗ ಉಂಟು; ಅವರು ಭಯಭ್ರಾಂತಿ ಪಡುವರು.


ಅಹೀತೋಫೆಲನು ಅಬ್ಷಾಲೋಮನ ಬಳಿಯಲ್ಲಿ ಒಳಸಂಚಿನವರ ಸಂಗಡ ಇದ್ದಾನೆಂದು ದಾವೀದನಿಗೆ ತಿಳಿಸಲಾಯಿತು. ಆಗ ದಾವೀದನು, “ಯೆಹೋವ ದೇವರೇ, ಅಹೀತೋಫೆಲನ ಆಲೋಚನೆಯನ್ನು ಹುಚ್ಚುತನವನ್ನಾಗಿ ಮಾಡಿಬಿಡು,” ಎಂದನು.


ಇದಲ್ಲದೆ ನಾನು ಅವಳ ಪ್ರಧಾನರನ್ನೂ, ಅವಳ ಜ್ಞಾನಿಗಳನ್ನೂ, ಅವಳ ಅಧಿಪತಿಗಳನ್ನೂ, ಅವಳ ಅಧಿಕಾರಿಗಳನ್ನೂ, ಅವಳ ಪರಾಕ್ರಮಶಾಲಿಗಳನ್ನೂ ಮತ್ತರಾಗಿ ಮಾಡುತ್ತೇನೆ. ಅವರು ನಿತ್ಯ ನಿದ್ರೆ ಮಾಡುವರು, ಎಚ್ಚರವಾಗುವುದಿಲ್ಲ,” ಎಂದು ಸೇನಾಧೀಶ್ವರ ಯೆಹೋವ ದೇವರು ಎಂಬ ಹೆಸರುಳ್ಳ ರಾಜಾಧಿರಾಜರು ಸಾರುತ್ತಾರೆ.


ಹೀಗಿರುವುದರಿಂದ, ನಾನು ಈ ಜನರ ಮಧ್ಯದಲ್ಲಿ ಅಧಿಕ ಆಶ್ಚರ್ಯವೂ ಅದ್ಭುತವೂ ಆದ ಕಾರ್ಯವನ್ನು ಇನ್ನೂ ಮಾಡುವೆನು. ಅವರ ಜ್ಞಾನಿಗಳ ಜ್ಞಾನವು ಅಳಿಯುವುದು. ಅವರ ವಿವೇಕಿಗಳ ವಿವೇಕವು ಅಡಗಿಕೊಳ್ಳುವುದು.”


ಆಗ ಮಂತ್ರಗಾರರು, ಜೋತಿಷ್ಯರು, ಪಂಡಿತರು, ಶಕುನಗಾರರು ಒಳಗೆ ಬಂದರು. ನಾನು ಕನಸನ್ನು ಅವರಿಗೆ ತಿಳಿಸಿದೆನು. ಆದರೆ ಅವರು ಅದರ ಅರ್ಥವನ್ನು ನನಗೆ ತಿಳಿಸಲಿಲ್ಲ.


ಅರಸನು ಅವರ ಹತ್ತಿರ ವಿಚಾರಿಸಿದಾಗ ಸಮಸ್ತ ಜ್ಞಾನ ವಿವೇಕಗಳ ವಿಷಯದಲ್ಲಿ ತನ್ನ ರಾಜ್ಯದಲ್ಲಿರುವ ಎಲ್ಲಾ ಮಂತ್ರಗಾರರಿಗಿಂತಲೂ, ಜೋತಿಷ್ಯರಿಗಿಂತಲೂ ಇವರೇ ಹತ್ತರಷ್ಟು ಉತ್ತಮರೆಂದು ಕಂಡನು.


ಎದೋಮ್ಯರನ್ನು ಕುರಿತದ್ದು: ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ. “ತೇಮಾನ್‌ನಲ್ಲಿ ಇನ್ನು ಮೇಲೆ ಜ್ಞಾನವಿರುವುದಿಲ್ಲವೋ? ವಿವೇಕಿಗಳಿಂದ ಆಲೋಚನೆಯು ನಾಶವಾಯಿತೋ? ಅವರ ಜ್ಞಾನವು ಕ್ಷೀಣಿಸಿದೆಯೇ?


ಆ ದಿವಸವೆಲ್ಲಾ ಯುದ್ಧವು ಬಹು ಘೋರವಾದದ್ದರಿಂದ ಇಸ್ರಾಯೇಲಿನ ಅರಸನಾದ ಅಹಾಬನು ಸಾಯಂಕಾಲದವರೆಗೂ ಅರಾಮ್ಯರಿಗೆ ಎದುರಾಗಿ ರಥದಲ್ಲಿಯೇ ಆತುಕೊಂಡು ನಿಂತಿದ್ದನು, ಸೂರ್ಯನು ಅಸ್ತಮಿಸಿದಾಗ ಅವನು ಮರಣಹೊಂದಿದನು.


ಸಮಸ್ತ ಪ್ರವಾದಿಗಳೂ ಹಾಗೆಯೇ ಪ್ರವಾದಿಸಿ, “ಗಿಲ್ಯಾದಿನ ರಾಮೋತಿಗೆ ಹೋಗಿ ಜಯ ಹೊಂದು. ಯೆಹೋವ ದೇವರು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವರು,” ಎಂದರು.


ಆದರೆ ಅಹೀತೋಫೆಲನು ತನ್ನ ಯೋಚನೆಯ ಪ್ರಕಾರ ನಡೆಯಲಿಲ್ಲವೆಂದು ನೋಡಿದಾಗ, ತನ್ನ ಕತ್ತೆಯ ಮೇಲೆ ತಡಿಯನ್ನು ಹಾಕಿ ಏರಿ, ತನ್ನ ಪಟ್ಟಣದಲ್ಲಿರುವ ತನ್ನ ಮನೆಗೆ ಹೋದನು. ಅವನು ಮನೆಯನ್ನು ಕ್ರಮಪಡಿಸಿ, ಉರುಲು ಹಾಕಿಕೊಂಡು ಸತ್ತನು. ಅವನ ಶವವನ್ನು ಅವನ ತಂದೆಯ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು.


ಆ ದಿವಸಗಳಲ್ಲಿ ಅಹೀತೋಫೆಲನು ತಿಳಿಸಿದ ಆಲೋಚನೆಯು ದೇವರನ್ನು ವಿಚಾರಿಸುವ ಹಾಗೆ ಇತ್ತು. ಅಹೀತೋಫೆಲನ ಆಲೋಚನೆಗಳನ್ನು ದಾವೀದನೂ, ಅಬ್ಷಾಲೋಮನೂ ಹಾಗೆಯೇ ಗೌರವಿಸುತ್ತಿದ್ದರು.


ಇದಲ್ಲದೆ ಮಂತ್ರಗಾರರು ಹುಣ್ಣಿನ ನಿಮಿತ್ತ ಮೋಶೆಯ ಮುಂದೆ ನಿಂತುಕೊಳ್ಳಲಾರದೆ ಹೋದರು. ಏಕೆಂದರೆ ಹುಣ್ಣುಗಳು ಮಂತ್ರಗಾರರ ಮೇಲೆಯೂ ಈಜಿಪ್ಟಿನವರ ಮೇಲೆಯೂ ಇದ್ದವು.


ಇಸ್ರಾಯೇಲಿನ ಅರಸನ ಶವವನ್ನು ಸಮಾರ್ಯಕ್ಕೆ ತಂದು ಅಲ್ಲಿ ಸಮಾಧಿಮಾಡಿದರು.


ದಂಡನೆಯ ದಿವಸಗಳು ಬಂದಿವೆ, ಮುಯ್ಯಿ ತೀರಿಸುವ ದಿವಸಗಳೂ ಸಮೀಪವಾಗಿವೆ. ಇಸ್ರಾಯೇಲು ಅದನ್ನು ತಿಳಿದುಕೊಳ್ಳಲಿ. ಏಕೆಂದರೆ ನಿನ್ನ ಪಾಪಗಳು ಬಹಳವಾಗಿರುವುದರಿಂದಲೂ, ದ್ವೇಷವು ಹೆಚ್ಚಾಗಿರುವುದರಿಂದಲೂ, “ಪ್ರವಾದಿ ಮೂರ್ಖನೂ, ಪ್ರೇರಿತ ಮನುಷ್ಯನು ಹುಚ್ಚನೂ,” ಎಂದು ಇಸ್ರಾಯೇಲು ಹೇಳಿಕೊಳ್ಳುತ್ತದೆ.


ಆಗ ದರ್ಶಿಗಳು ನಾಚಿಕೆಪಡುವರು, ಶಕುನಗಾರರು ಅವಮಾನಗೊಳ್ಳುವರು. ದೇವರಿಂದ ಉತ್ತರವಿಲ್ಲದ ಕಾರಣ, ಎಲ್ಲರೂ ತಮ್ಮ ತುಟಿಗಳನ್ನು ಮುಚ್ಚಿಕೊಳ್ಳುವರು.”


ನಿಶ್ಚಯವಾಗಿ ಯಾಕೋಬನಲ್ಲಿ ಕಣಿಕೇಳುವದು ಇಲ್ಲ. ಇಸ್ರಾಯೇಲರಲ್ಲಿ ಶಕುನನೋಡುವದು ಇಲ್ಲ. ‘ನೋಡಿರಿ, ದೇವರು ಎಂತಹ ಮಹತ್ಕಾರ್ಯವನ್ನು ಮಾಡಿದ್ದಾರೆ,’ ಎಂದು ಯಾಕೋಬನ ವಿಷಯವಾಗಿಯೂ, ಇಸ್ರಾಯೇಲಿನ ವಿಷಯವಾಗಿಯೂ ಹೇಳುವರು.


ಈಜಿಪ್ಟಿನವರ ಮನಸ್ಸು ಭಯಗೊಳ್ಳುವುದು ಅವರ ಆಲೋಚನೆಯನ್ನು ಭಂಗಪಡಿಸುವೆನು. ಅಲ್ಲಿಯವರು ವಿಗ್ರಹಗಳನ್ನೂ, ಮಾಟಗಾರರನ್ನೂ, ಯಕ್ಷಣಿಗಾರರನ್ನೂ, ಮಂತ್ರವಾದಿಗಳನ್ನೂ ಆಶ್ರಯಿಸುವರು.


ವಿಗ್ರಹಗಳು ವ್ಯರ್ಥವಾಗಿ ಮಾತನಾಡುವವು. ಶಕುನಗಾರರು ಸುಳ್ಳು ದರ್ಶನವನ್ನು ಕಾಣುವರು. ಮೋಸವಾದ ಕನಸುಗಳನ್ನು ತಿಳಿಸಿದ್ದಾರೆ. ವ್ಯರ್ಥವಾಗಿ ಆದರಿಸುತ್ತಾರೆ, ಆದ್ದರಿಂದ ಕುರಿಗಳಂತೆ ಚದರಿದ್ದಾರೆ, ಕುರುಬನಿಲ್ಲದೆ ಕಂಗೆಟ್ಟಿದ್ದಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು