Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 43:26 - ಕನ್ನಡ ಸಮಕಾಲಿಕ ಅನುವಾದ

26 ನನಗೆ ಜ್ಞಾಪಕಪಡಿಸು, ನಾವಿಬ್ಬರೂ ವಾದಿಸುವಾ, ನೀನು ನೀತಿವಂತನೆಂದು ತೋರಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ನನಗೆ ನನ್ನ ಪಾಪಗಳನ್ನು ಜ್ಞಾಪಕಪಡಿಸು, ನಾವಿಬ್ಬರೂ ನಿನ್ನ ಅಪಾರಾಧ ಕುರಿತು ವಾದಿಸುವ, ನಿನ್ನ ಸದ್ಧರ್ಮವು ಗೊತ್ತಾಗುವಂತೆ ನಿನ್ನ ನ್ಯಾಯವನ್ನು ತೋರ್ಪಡಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಮಂಡಿಸು ನನ್ನ ವಿರುದ್ಧ ನಿನ್ನ ಆಪಾದನೆಯನ್ನು; ಒಟ್ಟಿಗೆ ವಾದಿಸೋಣ ಮಂಡಿಸು ನಿನ್ನ ನ್ಯಾಯವನ್ನು; ನೀನು ನಿರ್ದೋಷಿಯೆಂದು ರುಜುಪಡಿಸು ನೋಡೋಣ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ನನಗೆ ಜ್ಞಾಪಕಪಡಿಸು, ನಾವಿಬ್ಬರೂ ವಾದಿಸುವ; ನಿನ್ನ ಸದ್ಧರ್ಮವು ಗೊತ್ತಾಗುವಂತೆ ನಿನ್ನ ನ್ಯಾಯವನ್ನು ತೋರ್ಪಡಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಆದರೆ ನೀನು ನನ್ನನ್ನು ಜ್ಞಾಪಿಸಿಕೊಳ್ಳಬೇಕು. ನಾವು ಒಟ್ಟಾಗಿ ಸೇರಿ ಯಾವದು ಸರಿ ಎಂದು ನಿರ್ಧರಿಸಬೇಕು. ನೀನು ಮಾಡಿದ್ದು ಸರಿಯಾಗಿದ್ದರೆ ರುಜುವಾತು ಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 43:26
19 ತಿಳಿವುಗಳ ಹೋಲಿಕೆ  

“ಈಗ ಬನ್ನಿರಿ, ನಾವು ಒಟ್ಟಾಗಿ ವಾದಿಸೋಣ,” ಎಂದು ಯೆಹೋವ ದೇವರು ಹೇಳುತ್ತಾರೆ. “ನಿಮ್ಮ ಪಾಪಗಳು ಕಡುಕೆಂಪಾಗಿದ್ದರೂ ಹಿಮದಂತೆ ಬೆಳ್ಳಗಾಗುವುವು. ರಕ್ತದಂತೆ ಕಡುಕೆಂಪಾಗಿದ್ದರೂ ಉಣ್ಣೆಯಂತೆ ಆಗುವುವು.


ಎಲ್ಲಾ ಜನಾಂಗಗಳು ಒಟ್ಟಿಗೆ ಕೂಡಿಕೊಳ್ಳಲಿ. ಎಲ್ಲಾ ಜನರೂ ಸೇರಿಕೊಳ್ಳಲಿ. ಅವರ ದೇವರುಗಳಲ್ಲಿ ಭವಿಷ್ಯವನ್ನು ನುಡಿಯಬಲ್ಲವರು ಯಾರು? ಗತಿಸಿದ ಸಂಗತಿಗಳನ್ನು ಮುಂತಿಳಿಸುವವರು ಯಾರು? ನಾವು ನೀತಿವಂತರೆಂದು ಸ್ಥಾಪಿಸುವುದಕ್ಕೆ ಸಾಕ್ಷಿಗಳನ್ನು ಕರೆತರಲಿ. ಆ ಸಾಕ್ಷಿಗಳು ಇದನ್ನು ಕೇಳಿ, ನಿಜವೆಂದು ಹೇಳಲಿ.


ದೇವರು ತಾವೇ ಆರಿಸಿಕೊಂಡವರ ಮೇಲೆ ದೋಷಾರೋಪಣೆ ಮಾಡುವವರಾರು? ದೇವರೇ ನೀತಿವಂತರೆಂದು ನಿರ್ಣಯ ಮಾಡುವವರಾಗಿರುತ್ತಾರೆ.


ನನ್ನ ಪ್ರಾರ್ಥನೆ ನಿಮ್ಮ ಮುಂದೆ ಧೂಪವಾಗಿರಲಿ, ನಾನು ನಿಮ್ಮ ಕಡೆ ಕೈ ಎತ್ತುವುದು ಸಾಯಂಕಾಲದ ಬಲಿಯಂತೆ ನಿಮಗೆ ಸಮರ್ಪಕವಾಗಿರಲಿ.


ಅವರು ದೇವರಿಂದ ಬರುವ ನೀತಿಯನ್ನು ತಿಳಿಯದವರಾಗಿ ತಮ್ಮದೇ ಆದ ನೀತಿಯನ್ನು ಸ್ಥಾಪಿಸಲು ಪ್ರಯತ್ನಪಟ್ಟದ್ದರಿಂದ ಅವರು ತಮ್ಮನ್ನು ದೇವರ ನೀತಿಗೆ ಒಳಪಡಿಸಲಿಲ್ಲ.


ದ್ವೀಪಗಳೇ, ನನ್ನ ಮುಂದೆ ಮೌನದಿಂದಿರಿ. ರಾಷ್ಟ್ರಗಳು ತಮ್ಮ ಬಲವನ್ನು ನವೀಕರಿಸಲಿ! ಅವರು ನನ್ನ ಸಮೀಪಕ್ಕೆ ಬಂದು ಮಾತನಾಡಲಿ. ನ್ಯಾಯಸ್ಥಾನಕ್ಕೆ ಸಮೀಪಕ್ಕೆ ಒಟ್ಟಾಗಿ ಬರೋಣ.


ನನಗೆ ನೀತಿ ನಿರ್ಣಯಿಸುವಾತನು ಸಮೀಪದಲ್ಲಿಯೇ ಇದ್ದಾನೆ, ನನ್ನೊಂದಿಗೆ ವ್ಯಾಜ್ಯವಾಡುವವರು ಯಾರು? ನಾವು ಪರಸ್ಪರ ಎದುರಿಸೋಣ! ನನ್ನ ಎದುರಾಳಿ ಯಾರು? ಅವನು ನನ್ನ ಸಮೀಪಕ್ಕೆ ಬರಲಿ.


ಒಬ್ಬ ಮನುಷ್ಯನು ತನ್ನ ಮಿತ್ರನಿಗೋಸ್ಕರ ಬೇಡಿಕೊಳ್ಳುವಂತೆ, ಅವರು ಸಹ ಮನುಷ್ಯನಿಗಾಗಿ ದೇವರ ಮುಂದೆ ವಾದಿಸುತ್ತಿದ್ದಾರೆ.


‘ನಿನಗೆ ಖಂಡಿತವಾಗಿ ಒಳ್ಳೆಯದನ್ನು ಮಾಡುವೆನು ಮತ್ತು ನಿನ್ನ ಸಂತತಿಯನ್ನು ಎಣಿಸುವುದಕ್ಕಾಗದ ಸಮುದ್ರದ ಮರಳಿನ ಹಾಗೆ ಮಾಡುವೆನು,’ ಎಂದು ನನಗೆ ಹೇಳಿದ್ದೀರಲ್ಲಾ?” ಎಂದನು.


“ದೇವರಿಗೆ ಮೊದಲು ಕೊಟ್ಟು, ಅವರಿಂದ ಪ್ರತಿಫಲವನ್ನು ಪಡೆಯುವವರು ಯಾರು?”


ಯೇಸು ಅವರಿಗೆ, “ನೀವು ಮನುಷ್ಯರ ಮುಂದೆ ನೀತಿಕರಿಸಿಕೊಳ್ಳುವವರು, ಆದರೆ ದೇವರು ನಿಮ್ಮ ಹೃದಯಗಳನ್ನು ತಿಳಿದಿದ್ದಾರೆ. ಮನುಷ್ಯರಲ್ಲಿ ಶ್ರೇಷ್ಠವೆಂದು ಎಣಿಸಿಕೊಳ್ಳುವಂಥದ್ದು ದೇವರ ದೃಷ್ಟಿಯಲ್ಲಿ ಅದು ಅಸಹ್ಯವಾಗಿದೆ.


“ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಇನ್ನೊಂದು ವಿಷಯದಲ್ಲಿ, ಇಸ್ರಾಯೇಲರ ಮತ್ತೊಂದು ಕೋರಿಕೆಯನ್ನು ಆಲಿಸಿ ನೆರವೇರಿಸುವೆನು. ನಾನು ಅವರನ್ನು ಮನುಷ್ಯರಲ್ಲಿ ಮಂದೆಯಂತೆ ಹೆಚ್ಚಿಸುವೆನು.


ಆದರೆ ಅವನು ತಾನೇ ನೀತಿವಂತನೆಂದು ತೋರಿಸುವುದಕ್ಕೆ, ಅಪೇಕ್ಷೆಯುಳ್ಳವನಾಗಿ ಯೇಸುವಿಗೆ, “ನನ್ನ ನೆರೆಯವನು ಯಾರು?” ಎಂದು ಕೇಳಿದನು.


ದೇವರೇ, ಏಳು; ನಿಮ್ಮ ನ್ಯಾಯವನ್ನು ವಾದಿಸಿರಿ. ದಿನವೆಲ್ಲಾ ಮೂರ್ಖನು ನಿಮ್ಮನ್ನು ಹೇಗೆ ನಿಂದಿಸುತ್ತಾನೆಂದು ಜ್ಞಾಪಕಮಾಡಿಕೊಳ್ಳಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು