Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 43:25 - ಕನ್ನಡ ಸಮಕಾಲಿಕ ಅನುವಾದ

25 “ನಾನಾಗಿ ನಾನೇ, ನನಗೋಸ್ಕರ ನಿನ್ನ ದ್ರೋಹಗಳನ್ನು ಅಳಿಸಿಬಿಡುತ್ತೇನೆ. ನಿನ್ನ ಪಾಪಗಳನ್ನು ನನ್ನ ನೆನಪಿನಲ್ಲಿಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ನಾನಾಗಿ ನಾನೇ ನನಗೋಸ್ಕರ ನಿನ್ನ ದ್ರೋಹಗಳನ್ನು ಅಳಿಸಿ ಬಿಡುತ್ತೇನೆ. ನಿನ್ನ ಪಾಪಗಳನ್ನು ನನ್ನ ನೆನಪಿನಲ್ಲಿಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಆದರೂ ನಾನೇ ನಾನಾಗಿ ಅಳಿಸಿಬಿಡುವೆ ನಿನ್ನ ದ್ರೋಹಗಳನು, ನನ್ನ ನೆನಪಿನಿಂದ ತೆಗೆದುಹಾಕುವೆ ನಿನ್ನ ಪಾಪಗಳನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ನಾನಾಗಿ ನಾನೇ ನನಗೋಸ್ಕರ ನಿನ್ನ ದ್ರೋಹಗಳನ್ನು ಅಳಿಸಿ ಬಿಡುತ್ತೇನೆ, ನಿನ್ನ ಪಾಪಗಳನ್ನು ನನ್ನ ನೆನಪಿನಲ್ಲಿಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 “ನಿಮ್ಮ ಪಾಪಗಳನ್ನೆಲ್ಲಾ ಅಳಿಸಿ ಹಾಕುವಾತನು ನಾನೇ. ನಾನು ಇದನ್ನು ನನಗೋಸ್ಕರವಾಗಿ ಮಾಡುತ್ತೇನೆ. ನಾನು ನಿಮ್ಮ ಪಾಪಗಳನ್ನು ಜ್ಞಾಪಿಸಿಕೊಳ್ಳುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 43:25
37 ತಿಳಿವುಗಳ ಹೋಲಿಕೆ  

ನಾನು ಅವರ ದುಷ್ಕೃತ್ಯಗಳನ್ನು ಕ್ಷಮಿಸುವೆನು ಮತ್ತು ಅವರ ಪಾಪಗಳನ್ನು ಇನ್ನೆಂದಿಗೂ ನನ್ನ ನೆನಪಿಗೆ ತಂದುಕೊಳ್ಳುವುದಿಲ್ಲ, ಎಂದು ಕರ್ತದೇವರು ನುಡಿಯುತ್ತಾರೆ.”


ತರುವಾಯ ಅವರು, “ನಾನು ಅವರ ಪಾಪಗಳನ್ನೂ ಅಧರ್ಮಗಳನ್ನೂ ಇನ್ನೆಂದಿಗೂ ನನ್ನ ನೆನಪಿಗೆ ತಂದುಕೊಳ್ಳುವುದಿಲ್ಲ!” ಎಂದು ಹೇಳುತ್ತಾರೆ.


ಇದಲ್ಲದೆ ಪ್ರತಿಯೊಬ್ಬನು ತನ್ನ ನೆರೆಯವನಿಗೂ ತನ್ನ ಸಹೋದರನಿಗೂ, ‘ಯೆಹೋವ ದೇವರನ್ನು ಅರಿತುಕೊಳ್ಳಿರಿ,’ ಎಂದು ಬೋಧಿಸಬೇಕಾಗಿಲ್ಲ. ಏಕೆಂದರೆ ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರೂ ನನ್ನನ್ನು ಅರಿತುಕೊಳ್ಳುವರು. ನಾನು ಅವರ ದುಷ್ಕೃತ್ಯಗಳನ್ನು ಕ್ಷಮಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. “ಅವರ ಪಾಪಗಳನ್ನು ಇನ್ನೆಂದಿಗೂ ನನ್ನ ನೆನಪಿಗೆ ತಂದುಕೊಳ್ಳುವುದಿಲ್ಲ.”


“ಈಗ ಬನ್ನಿರಿ, ನಾವು ಒಟ್ಟಾಗಿ ವಾದಿಸೋಣ,” ಎಂದು ಯೆಹೋವ ದೇವರು ಹೇಳುತ್ತಾರೆ. “ನಿಮ್ಮ ಪಾಪಗಳು ಕಡುಕೆಂಪಾಗಿದ್ದರೂ ಹಿಮದಂತೆ ಬೆಳ್ಳಗಾಗುವುವು. ರಕ್ತದಂತೆ ಕಡುಕೆಂಪಾಗಿದ್ದರೂ ಉಣ್ಣೆಯಂತೆ ಆಗುವುವು.


ನಾನು ನಿನ್ನ ದ್ರೋಹಗಳನ್ನು ಮೋಡದಂತೆ ಅಳಿಸಿಬಿಟ್ಟಿದ್ದೇನೆ. ನಿನ್ನ ಪಾಪಗಳನ್ನು ಮುಂಜಾನೆಯ ಮಂಜಿನಂತೆ ಹಾರಿಸಿದ್ದೇನೆ. ನನ್ನ ಕಡೆಗೆ ತಿರುಗಿಕೋ. ಏಕೆಂದರೆ ನಾನು ನಿನ್ನನ್ನು ವಿಮೋಚಿಸಿದ್ದೇನೆ.”


ಯೆಹೋವ ದೇವರೇ, ನನ್ನ ಯೌವನದ ಪಾಪಗಳನ್ನೂ, ನನ್ನ ತಿರುಗಿ ಬೀಳುವಿಕೆಗಳನ್ನೂ ಜ್ಞಾಪಕ ಮಾಡಿಕೊಳ್ಳಬೇಡಿರಿ. ನೀವು ಒಳ್ಳೆಯವರಾಗಿರುವುದರಿಂದ ನಿಮ್ಮ ಪ್ರೀತಿಯ ಪ್ರಕಾರ ನನ್ನನ್ನು ಜ್ಞಾಪಕಮಾಡಿಕೊಳ್ಳಿರಿ.


ಆ ಬಹು ವ್ಯಥೆಯು ನನ್ನ ಸಮಾಧಾನಕ್ಕಾಗಿಯೇ ಆಯಿತು. ಆದರೆ ನನ್ನ ಆತ್ಮವನ್ನು ನಾಶದಿಂದ ಬಿಡುಗಡೆ ಮಾಡಿದ್ದು ನಿಮ್ಮ ಪ್ರೀತಿಯೇ. ನನ್ನ ಪಾಪಗಳನ್ನೆಲ್ಲಾ ನಿನ್ನ ಬೆನ್ನಿನ ಹಿಂದೆ ಹಾಕಿಬಿಟ್ಟಿದ್ದೀ.


ಆದ್ದರಿಂದ ನಿಮ್ಮ ಪಾಪಗಳು ತೊಳೆದುಹೋಗುವಂತೆ ಪಶ್ಚಾತ್ತಾಪಪಟ್ಟು, ದೇವರ ಕಡೆಗೆ ತಿರುಗಿಕೊಳ್ಳಿರಿ. ಆಗ ನಿಮ್ಮ ಪಾಪಗಳು ಪರಿಹಾರವಾಗಿ ಕರ್ತ ದೇವರಿಂದ ವಿಶ್ರಾಂತಿಯ ಕಾಲಗಳು ನಿಮಗೆ ಒದಗಿ ಬರುವವು.


ಅಪರಾಧವು ಹೆಚ್ಚುವಂತೆ ನಿಯಮವು ಪ್ರವೇಶಿಸಿತು. ಆದರೆ ಪಾಪವು ಹೆಚ್ಚಾದಾಗ, ಕೃಪೆಯು ಇನ್ನೂ ಹೆಚ್ಚಾಯಿತು.


“ಈತನು ಏಕೆ ಹೀಗೆ ಮಾತನಾಡುತ್ತಾನೆ? ಈತನು ದೇವದೂಷಣೆ ಮಾಡುತ್ತಿದ್ದಾನೆ! ದೇವರೊಬ್ಬನೇ ಹೊರತು ಪಾಪಗಳನ್ನು ಕ್ಷಮಿಸುವವರು ಯಾರು?” ಎಂದು ತಮ್ಮೊಳಗೇ ಆಲೋಚಿಸಿಕೊಳ್ಳುತ್ತಿದ್ದರು.


ನಾನೇ, ನಾನೇ, ಯೆಹೋವ ದೇವರು ಆಗಿದ್ದೇನೆ. ನನ್ನ ಹೊರತು ಯಾವ ರಕ್ಷಕನೂ ಇಲ್ಲ.


ನನ್ನ ಅನ್ಯಾಯವು ಬಹು ಘೋರವಾಗಿದ್ದರೂ ನಿಮ್ಮ ಹೆಸರಿನ ನಿಮಿತ್ತ ಯೆಹೋವ ದೇವರೇ ನನ್ನನ್ನು ಮನ್ನಿಸಿರಿ.


ನನ್ನ ಪಾಪಗಳಿಗೆ ನಿಮ್ಮ ಮುಖವನ್ನು ಮರೆಮಾಡಿಕೊಳ್ಳಿರಿ; ನನ್ನ ಅಧರ್ಮಗಳನ್ನೆಲ್ಲಾ ಅಳಿಸಿಬಿಡಿರಿ.


ಯೆಹೋವ ದೇವರು ಹೇಳುತ್ತಾರೆ, “ಆ ದಿವಸಗಳಲ್ಲಿಯೂ, ಆ ಕಾಲದಲ್ಲಿಯೂ ಇಸ್ರಾಯೇಲಿನ ಅಕ್ರಮವನ್ನು ಹುಡುಕಿದರೂ, ಅಲ್ಲಿ ಏನೂ ಇರದು; ಯೆಹೂದದ ಪಾಪಗಳನ್ನು ಹುಡುಕಿದರೂ ಅವು ಸಿಕ್ಕುವುದಿಲ್ಲ. ಏಕೆಂದರೆ ನಾನು ಉಳಿಸುವವರನ್ನು ಮನ್ನಿಸುತ್ತೇನೆ.


“ಆದ್ದರಿಂದ ನೀನು ಇಸ್ರಾಯೇಲರ ಮನೆತನದವರಿಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ; ಇಸ್ರಾಯೇಲಿನ ಮನೆತನದವರೇ, ನಾನು ಇದನ್ನು ನಿಮಗಾಗಿ ಮಾಡುತ್ತಿಲ್ಲ. ಆದರೆ ನೀವು ಇತರ ಜನಾಂಗಗಳ ನಡುವೆ ಅಪವಿತ್ರಪಡಿಸಿದ ನನ್ನ ಪರಿಶುದ್ಧ ನಾಮಕ್ಕಾಗಿ ಮಾಡುತ್ತೇನೆ.


ಆದರೆ ನಾನು ಅವರನ್ನು ಯಾರ ಕಣ್ಣುಗಳ ಮುಂದೆ ಬರಮಾಡಿದೆನೋ, ಆ ಜನಾಂಗಗಳ ದೃಷ್ಟಿಯಲ್ಲಿ ಅಪವಿತ್ರವಾಗದ ಹಾಗೆ ನನ್ನ ಹೆಸರಿಗಾಗಿಯೇ ಕೆಲಸ ಮಾಡಿದೆನು.


ಆದರೆ ಅವರು ಯಾರ ಮಧ್ಯದಲ್ಲಿದ್ದರೋ, ನಾನು ಯಾರ ಮುಂದೆ ಅವರನ್ನು ಈಜಿಪ್ಟ್ ದೇಶದಿಂದ ಹೊರಗೆ ತಂದು ನನ್ನನ್ನು ತಿಳಿಯಪಡಿಸಿದೆನೋ ಆ ಜನಾಂಗಗಳ ಕಣ್ಣುಗಳ ಮುಂದೆ ನನ್ನ ಹೆಸರು ಅಪವಿತ್ರವಾಗದ ಹಾಗೆ ನನ್ನ ಹೆಸರಿಗೋಸ್ಕರವೇ ಈ ಕೆಲಸವನ್ನು ಮಾಡಿದೆನು.


“ಈ ಪಟ್ಟಣವನ್ನು ನನಗೋಸ್ಕರವೂ ನನ್ನ ಸೇವಕನಾದ ದಾವೀದನಿಗೋಸ್ಕರವೂ ಕಾಪಾಡಿ ಅದನ್ನು ರಕ್ಷಿಸುವೆನು.”


ಇದು ನಿಮಗಾಗಿ ಮಾಡಲಿಲ್ಲವೆಂದು ನಿಮಗೆ ತಿಳಿದಿರಲಿ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ಇಸ್ರಾಯೇಲಿನ ಮನೆತನದವರೇ, ನಿಮ್ಮ ದುರ್ಮಾರ್ಗಗಳಿಗೆ ನಾಚಿಕೆಪಟ್ಟು ಲಜ್ಜೆಹೊಂದಿರಿ.


ಆದರೂ ನಾನು ನನ್ನ ಕೈಯನ್ನು ಹಿಂತೆಗೆದು, ನಾನು ಅವರನ್ನು ಯಾರ ಕಣ್ಣುಗಳ ಮುಂದೆ ಹೊರಗೆ ಬರಮಾಡಿದೆನೋ, ಆ ಜನಾಂಗಗಳ ದೃಷ್ಟಿಯಲ್ಲಿ ನನ್ನ ಹೆಸರು ಅಪವಿತ್ರವಾಗದ ಹಾಗೆ, ನನ್ನ ಹೆಸರಿಗೋಸ್ಕರವೇ ಕೆಲಸ ಮಾಡಿದೆನು.


ತಮ್ಮ ಕೃಪಾ ಮಹಿಮೆಯ ಸ್ತುತಿಗಾಗಿಯೇ ಇವುಗಳನ್ನು ದೇವರು ತಾವು ಪ್ರೀತಿಸುವ ಕ್ರಿಸ್ತನಲ್ಲಿ ನಮಗೆ ಉಚಿತವಾಗಿ ದಯಪಾಲಿಸಿದ್ದಾರೆ.


ದೇವರು ಆ ಕೃಪೆಯನ್ನು ನಮ್ಮಲ್ಲಿ ಸಮೃದ್ಧಿಯಾಗಿ ಸುರಿಸಿದ್ದಾರೆ. ಎಲ್ಲಾ ಜ್ಞಾನ ವಿವೇಕಗಳೊಂದಿಗೆ


ಆಗ ಫರಿಸಾಯರೂ ನಿಯಮ ಬೋಧಕರೂ, “ದೇವದೂಷಣೆಯನ್ನು ಮಾಡುವುದಕ್ಕೆ ಈತನು ಯಾರು? ದೇವರೊಬ್ಬನೇ ಹೊರತು ಪಾಪಗಳನ್ನು ಕ್ಷಮಿಸುವವರು ಯಾರು?” ಎಂದು ತಮ್ಮಲ್ಲಿ ಮಾತನಾಡಲಾರಂಭಿಸಿದರು.


ಇದಲ್ಲದೆ ನೀವು ನಿಮ್ಮ ಸೇವಕನ ಮತ್ತು ನಿಮ್ಮ ಜನರಾದ ಇಸ್ರಾಯೇಲರ ವಿಜ್ಞಾಪನೆಯನ್ನೂ ಕೇಳಿರಿ. ಅವರು ಈ ಸ್ಥಳದ ಕಡೆಗೆ ಪ್ರಾರ್ಥಿಸುವಾಗ, ನೀವು ವಾಸಮಾಡುವ ಸ್ಥಳವಾದ ಪರಲೋಕದಿಂದ ಕೇಳಿ, ಕ್ಷಮೆಯನ್ನು ದಯಪಾಲಿಸಿರಿ.


ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ, ಅವರು ನಮ್ಮ ಅತಿಕ್ರಮಗಳನ್ನು ನಮ್ಮಿಂದ ಅಷ್ಟು ದೂರ ಮಾಡಿದ್ದಾರೆ.


ನನಗಾಗಿಯೇ, ನನಗೋಸ್ಕರವೇ ಇದನ್ನು ಮಾಡುವೆನು. ಏಕೆಂದರೆ ನನ್ನ ಹೆಸರು ಹೇಗೆ ಅಪವಿತ್ರವಾಗುವುದು? ನನ್ನ ಮಹಿಮೆಯನ್ನು ನಾನು ಮತ್ತೊಬ್ಬನಿಗೆ ಸಲ್ಲಗೊಡಿಸೆನು.


ದುಷ್ಟನು ತನ್ನ ದುರ್ಮಾರ್ಗವನ್ನೂ, ಅನೀತಿವಂತನು ತನ್ನ ಆಲೋಚನೆಗಳನ್ನೂ ತೊರೆದುಬಿಟ್ಟು, ಯೆಹೋವ ದೇವರ ಕಡೆಗೆ ಹಿಂದಿರುಗಲಿ. ಅವರು ಅವರ ಮೇಲೆ ಕರುಣೆ ಇಡುವರು. ನಮ್ಮ ದೇವರ ಬಳಿಗೂ ಹಿಂದಿರುಗಲಿ. ಏಕೆಂದರೆ ಅವರು ಹೇರಳವಾಗಿ ಕ್ಷಮಿಸುವರು.


ಯೆಹೋವ ದೇವರೇ, ಅತ್ಯಧಿಕವಾಗಿ ಬೇಸರಗೊಳ್ಳಬೇಡ. ಎಂದೆಂದಿಗೂ ಪಾಪವನ್ನು ಜ್ಞಾಪಕ ಮಾಡಬೇಡ. ನೋಡಿರಿ, ನಾವು ಬೇಡುತ್ತೇವೆ, ದೃಷ್ಟಿ ಇಡಿರಿ. ನಾವೆಲ್ಲರೂ ನಿನ್ನ ಜನರೇ.


ಅವನು ಮಾಡಿದ ಪಾಪಗಳಲ್ಲಿ ಒಂದಾದರೂ ಅವನ ಲೆಕ್ಕಕ್ಕೆ ಸೇರಿಸಲಾಗುವುದಿಲ್ಲ. ಅವನು ಮಾಡಿದ ನೀತಿಯಿಂದಲೇ ಅವನು ಬದುಕುವನು.


ಅವನು ಮಾಡಿದ ಪಾಪಗಳಲ್ಲಿ ಒಂದಾದರೂ ಅವನ ಲೆಕ್ಕಕ್ಕೆ ಸೇರಿಸಲಾಗುವುದಿಲ್ಲ. ಅವನು ನ್ಯಾಯವನ್ನೂ ನೀತಿಯನ್ನೂ ಮಾಡಿದ್ದರಿಂದ ನಿಶ್ಚಯವಾಗಿ ಬದುಕುವನು.


ನನ್ನ ಅತಿಕ್ರಮಗಳನ್ನು ನಾನೇ ತಿಳಿದಿದ್ದೇನೆ, ನನ್ನ ಪಾಪವು ಯಾವಾಗಲೂ ನನ್ನ ಕಣ್ಮುಂದೆಯೇ ಇದೆ.


ನಿಮಗೇ ನಿಮಗೊಬ್ಬರಿಗೆ ಮಾತ್ರ ವಿರೋಧವಾಗಿ ನಾನು ಪಾಪಮಾಡಿ, ನಿಮ್ಮ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವುದ್ದನ್ನೇ ಮಾಡಿದ್ದೇನೆ. ಹೀಗೆ ನೀವು ನ್ಯಾಯತೀರಿಸುವಾಗ ನೀತಿವಂತರಾಗಿಯೂ ನೀವು ತೀರ್ಪು ನಿರ್ಣಯಿಸುವಾಗ ನ್ಯಾಯವಂತರಾಗಿಯೂ ಇರುವಿರಿ.


ದೇವರು ನಿಮ್ಮ ಪಾಪಗಳನ್ನೆಲ್ಲಾ ಕ್ಷಮಿಸುತ್ತಾರೆ. ನಿಮ್ಮ ರೋಗಗಳನ್ನೆಲ್ಲಾ ವಾಸಿಮಾಡುತ್ತಾರೆ.


ಆದರೆ ಈಗ ಯೆಹೋವ ದೇವರೇ, ನಮ್ಮ ತಂದೆಯು ನೀನೇ, ನಾವು ಮಣ್ಣು. ನೀನು ನಮ್ಮ ಕುಂಬಾರನು. ನಾವೆಲ್ಲರೂ ನಿನ್ನ ಕೈಕೆಲಸಗಳು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು