ಯೆಶಾಯ 40:14 - ಕನ್ನಡ ಸಮಕಾಲಿಕ ಅನುವಾದ14 ತನಗೆ ಜ್ಞಾನ ದೊರೆಯಲು ಯೆಹೋವ ದೇವರು ಯಾರ ವಿಚಾರ ತೆಗೆದುಕೊಂಡನು. ಆತನಿಗೆ ಸರಿಯಾದ ಮಾರ್ಗವನ್ನು ಕಲಿಸಿದವನು ಯಾರು? ಆತನಿಗೆ ಜ್ಞಾನವನ್ನು ಕಲಿಸಿದವನಾರು ಇಲ್ಲವೆ ತಿಳುವಳಿಕೆಯ ಮಾರ್ಗವನ್ನು ಆತನಿಗೆ ತೋರಿಸಿದವನಾರು? ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ಆತನು ಯಾರ ಆಲೋಚನೆಯನ್ನು ಕೇಳಿದನು? ಯಾರು ಆತನಿಗೆ ಬುದ್ಧಿಕಲಿಸಿ ಆತನನ್ನು ನ್ಯಾಯಮಾರ್ಗದಲ್ಲಿ ನಡೆಯಿಸಿದನು? ಯಾರು ಆತನಿಗೆ ಜ್ಞಾನವನ್ನು ಬೋಧಿಸಿ ವಿವೇಕ ಮಾರ್ಗವನ್ನು ತೋರಿಸಿದವನು? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ಜ್ಞಾನೋದಯ ನೀಡಿದವನಾರು ಆತನಿಗೆ? ನ್ಯಾಯಮಾರ್ಗ ತೋರಿಸಿದವನಾರು ಆತನಿಗೆ? ಬುದ್ಧಿ ಕಲಿಸಿದವನಾರು ಆತನಿಗೆ? ಏನೇ ಮಾರ್ಗವನ್ನು ಸೂಚಿಸಿದವನಾರು ಆತನಿಗೆ? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ಆತನು ಯಾವನ ಆಲೋಚನೆಯನ್ನು ಕೇಳಿದನು? ಯಾವನು ಆತನಿಗೆ ಬುದ್ಧಿಕಲಿಸಿ ಆತನನ್ನು ನ್ಯಾಯಮಾರ್ಗದಲ್ಲಿ ನಡೆಯಿಸಿದನು? ಯಾವನು ಆತನಿಗೆ ಜ್ಞಾನವನ್ನು ಬೋಧಿಸಿ ವಿವೇಕಮಾರ್ಗವನ್ನು ತೋರಿಸಿದನು? ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್14 ಯೆಹೋವನು ಯಾರಿಂದಾದರೂ ಸಹಾಯ ಕೇಳಿದನೋ? ಯಾರಾದರೂ ಆತನಿಗೆ ನ್ಯಾಯನೀತಿಯನ್ನು ಕಲಿಸಿದರೋ? ಯಾರಾದರೂ ಆತನಿಗೆ ಜ್ಞಾನವನ್ನು ತಿಳಿಸಿಕೊಟ್ಟರೋ? ಯಾವನಾದರೂ ಯೆಹೋವನಿಗೆ ತಿಳುವಳಿಕೆಯನ್ನು ಹೇಳಿಕೊಟ್ಟನೋ? ಅಧ್ಯಾಯವನ್ನು ನೋಡಿ |