Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 4:5 - ಕನ್ನಡ ಸಮಕಾಲಿಕ ಅನುವಾದ

5 ಆಗ ಯೆಹೋವ ದೇವರು ಚೀಯೋನ್ ಪರ್ವತದ ಪ್ರತಿಯೊಂದು ನಿವಾಸದ ಮೇಲೂ, ಅದರ ಸಭೆಗಳ ಮೇಲೂ, ಹಗಲಿನಲ್ಲಿ ಹೊಗೆಯನ್ನೂ, ಮೇಘವನ್ನೂ, ಇರುಳಿನಲ್ಲಿ ಪ್ರಜ್ವಲಿಸುವ ಅಗ್ನಿಪ್ರಕಾಶವನ್ನು ಉಂಟುಮಾಡುವರು. ಏಕೆಂದರೆ ದೇವರ ಮಹಿಮೆ ಎಲ್ಲದರ ಮೇಲೆ ಚಪ್ಪರದಂತೆಯೂ ಆವರಿಸುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಆಮೇಲೆ ಯೆಹೋವನು ಚೀಯೋನ್ ಪರ್ವತದ ಪ್ರತಿಯೊಂದು ವಾಸಿಸುವ ಸ್ಥಳದ ಮೇಲೆಯೂ, ಅಲ್ಲಿ ನಡೆಯುವ ಸಭೆಗಳ ಮೇಲೆಯೂ, ಹಗಲಲ್ಲಿ ಹೊಗೆಯನ್ನೂ, ಮೇಘವನ್ನೂ, ಇರುಳಲ್ಲಿ ಪ್ರಜ್ವಲಿಸುವ ಅಗ್ನಿಯ ಪ್ರಕಾಶವನ್ನೂ ಉಂಟುಮಾಡುವನು. ಈ ಮಹಿಮೆಯು ಎಲ್ಲಾ ಕಡೆಯು ಆವರಿಸಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಸಿಯೋನ್ ಪರ್ವತದ ಮೇಲೆಲ್ಲ, ಅಲ್ಲಿನ ಸಭಾಕೂಟಗಳ ಮೇಲೆಲ್ಲ ಹಗಲಲ್ಲಿ ಧೂಮಮೇಘವನ್ನು, ರಾತ್ರಿಯಲ್ಲಿ ಪ್ರಜ್ವಲಿಸುವ ಅಗ್ನಿಪ್ರಕಾಶವನ್ನು ಉಂಟುಮಾಡುವರು. ದೇವರ ಮಹಿಮೆ ಛತ್ರಿಯಂತೆಯೂ ಚಪ್ಪರದಂತೆಯೂ ಎಲ್ಲರನ್ನು ಆವರಿಸುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಚೀಯೋನ್ ಪರ್ವತದ ಸಂಪೂರ್ಣ ಮಂದಿರದ ಮೇಲೆಯೂ ಅಲ್ಲಿನ ಕೂಟಗಳ ಮೇಲೆಯೂ ಹಗಲಲ್ಲಿ ಧೂಮಮೇಘವನ್ನು, ಇರುಳಲ್ಲಿ ಪ್ರಜ್ವಲಿಸುವ ಅಗ್ನಿಯ ಪ್ರಕಾಶವನ್ನು, ಉಂಟು ಮಾಡುವನು. [ಈ] ಪ್ರಭಾವದ ಮೇಲೆಲ್ಲಾ ಆವರಣವಿರುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಆ ಸಮಯದಲ್ಲಿ ತಾನು ತನ್ನ ಜನರೊಂದಿಗೆ ಇರುವುದಾಗಿ ಹೀಗೆ ಯೆಹೋವನು ರುಜುವಾತುಪಡಿಸುವನು. ಹಗಲಲ್ಲಿ ಆತನು ಧೂಮಮೇಘವನ್ನೂ ಇರುಳಲ್ಲಿ ಪ್ರಜ್ವಲಿಸುವ ಅಗ್ನಿಯ ಪ್ರಕಾಶವನ್ನೂ ಉಂಟುಮಾಡುವನು. ಈ ಗುರುತುಗಳು ಚೀಯೋನ್ ಪರ್ವತದ ಮೇಲಿರುವ ಪ್ರತಿಯೊಂದು ಜನರ ಸಭೆಯ ಮೇಲೆ ಆಕಾಶದಲ್ಲಿ ಕಾಣುವುದು. ಪ್ರತಿಯೊಬ್ಬನ ಮೇಲೆಯೂ ಕಾಪಾಡಿಕೊಳ್ಳುವುದಕ್ಕಾಗಿ ಹೊದಿಕೆ ಇರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 4:5
25 ತಿಳಿವುಗಳ ಹೋಲಿಕೆ  

ಇದಲ್ಲದೆ ಹಗಲಿನಲ್ಲಿ ಮೇಘಸ್ತಂಭದಿಂದಲೂ, ಅವರು ನಡೆಯಬೇಕಾದ ಮಾರ್ಗದಲ್ಲಿ ಅವರಿಗೆ ಬೆಳಕಾಗುವ ಹಾಗೆ ರಾತ್ರಿಯಲ್ಲಿ ಅಗ್ನಿ ಸ್ತಂಭದಿಂದಲೂ ಅವರನ್ನು ನಡೆಸಿದಿರಿ.


ದೇವರು ಹಗಲಿನಲ್ಲಿ ಮೇಘದಿಂದಲೂ ರಾತ್ರಿಯೆಲ್ಲಾ ಬೆಂಕಿಯ ಬೆಳಕಿನಿಂದ ಅವರನ್ನು ನಡೆಸಿದರು.


ಏಳು, ಪ್ರಕಾಶಿಸು. ಏಕೆಂದರೆ ನಿನ್ನ ಮೇಲೆ ಬೆಳಕು ಬಂತು, ಯೆಹೋವ ದೇವರ ಮಹಿಮೆಯು ನಿನ್ನ ಮೇಲೆ ಉದಯವಾಯಿತು.


ನನ್ನ ನೀತಿಯನ್ನು ಹತ್ತಿರಕ್ಕೆ ಬರಮಾಡುವೆನು. ಅದು ಇನ್ನು ದೂರವಾಗಿರದು. ನನ್ನ ರಕ್ಷಣೆಯು ಇನ್ನು ತಡವಾಗದು, ನನ್ನ ಮಹಿಮೆಯಾಗಿರುವ ಇಸ್ರಾಯೇಲಿಗೋಸ್ಕರ ಚೀಯೋನಿನಲ್ಲಿ ರಕ್ಷಣೆಯನ್ನು ಉಂಟುಮಾಡುವೆನು.


ನಮ್ಮ ಹಬ್ಬಗಳು ನಡೆಯುವ ಚೀಯೋನ್ ಪಟ್ಟಣವನ್ನು ದೃಷ್ಟಿಸಿರಿ. ಯೆರೂಸಲೇಮು ನೆಮ್ಮದಿಯ ನಿವಾಸವಾಗಿಯೂ, ಗೂಟಕೀಳದ ಹಗ್ಗಹರಿಯದ ಒಂದೇ ಕಡೆ ಇರುವ ಗುಡಾರವಾಗಿಯೂ ಇರುವುದನ್ನು ನೀವು ಕಣ್ಣಾರೆ ಕಾಣುವಿರಿ.


ನಿಶ್ಚಯವಾಗಿ ಮಹಿಮೆಯು ನಮ್ಮ ದೇಶದಲ್ಲಿ ವಾಸವಾಗಿರುವ ಹಾಗೆ, ದೇವರಿಗೆ ಭಯಪಡುವವರಿಗೆ ದೇವರ ರಕ್ಷಣೆಯು ಸಮೀಪವಾಗಿದೆ.


ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಅನುಸರಿಸುವ ಹಾಗೆ ಅವರಿಗೆ ಬೋಧಿಸಿರಿ. ಇಗೋ, ಲೋಕಾಂತ್ಯದವರೆಗೂ ಎಲ್ಲಾ ದಿವಸ ನಾನು ನಿಮ್ಮ ಸಂಗಡ ಇರುತ್ತೇನೆ,” ಎಂದರು.


ಅವರು ಪರಿಶುದ್ಧರ ಸಭೆಯಲ್ಲಿ ಭಯಭಕ್ತಿಗೆ ಪಾತ್ರರಾದ ದೇವರು. ತಮ್ಮ ಎಲ್ಲಾ ಪರಿವಾರದವರಿಗಿಂತ ಅವರು ಅತಿಶಯವಾದವರು.


ಬೆಳಗಿನ ಜಾವದಲ್ಲಿ ಯೆಹೋವ ದೇವರು ಅಗ್ನಿ ಮೇಘಗಳ ಸ್ತಂಭದೊಳಗಿಂದ ಈಜಿಪ್ಟಿನ ದಂಡಿನ ಮೇಲೆ ದೃಷ್ಟಿಯಿಟ್ಟು, ಈಜಿಪ್ಟಿನ ದಂಡನ್ನು ಗಾಬರಿಗೊಳಿಸಿದರು.


“ಈ ಪಟ್ಟಣವನ್ನು ನನಗೋಸ್ಕರವೂ ನನ್ನ ಸೇವಕನಾದ ದಾವೀದನಿಗೋಸ್ಕರವೂ ಕಾಪಾಡಿ ಅದನ್ನು ರಕ್ಷಿಸುವೆನು.”


ಆಗ ನನ್ನ ಜನರು ಸಮಾಧಾನದ ನಿವಾಸಗಳಲ್ಲಿಯೂ, ಭದ್ರವಾದ ಸ್ಥಳಗಳಲ್ಲಿಯೂ, ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.


ಯೆಹೋವ ದೇವರನ್ನು ಸ್ತುತಿಸಿರಿ. ನಾನು ಯೆಹೋವ ದೇವರನ್ನು ಪೂರ್ಣಹೃದಯದಿಂದ ಯಥಾರ್ಥರ ಕೂಟದಲ್ಲಿಯೂ, ಸಭೆಯಲ್ಲಿಯೂ ಕೊಂಡಾಡುವೆನು.


“ಇದಲ್ಲದೆ ನೀನು ಗುಡಾರದ ಮೇಲೆ ಹೊದಿಸುವುದಕ್ಕಾಗಿ ಮೇಕೆಯ ಕೂದಲಿನಿಂದ ಹನ್ನೊಂದು ಪರದೆಗಳನ್ನು ಮಾಡಬೇಕು.


“ಗುಡಾರವನ್ನು ಹತ್ತು ಪರದೆಗಳಿಂದ ಮಾಡಿ, ನಯವಾಗಿ ಹೊಸೆದ ನಾರಿನಿಂದಲೂ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ಕೌಶಲ್ಯದ ಕೆಲಸದಿಂದಲೂ ಮಾಡಿದ ಕೆರೂಬಿಗಳುಳ್ಳವುಗಳಾಗಿಯೂ ಇರಬೇಕು.


ಏಕೆಂದರೆ ಇಬ್ಬರಾಗಲಿ ಮೂವರಾಗಲಿ ನನ್ನ ಹೆಸರಿನಲ್ಲಿ ಎಲ್ಲಿ ಸೇರಿ ಬರುತ್ತಾರೋ ಅವರ ಮಧ್ಯದಲ್ಲಿ ನಾನು ಇದ್ದೇನೆ,” ಎಂದರು.


ಇದಲ್ಲದೆ ಯೆಹೋವ ದೇವರ ಮಹಿಮೆಯು ಸೀನಾಯಿ ಬೆಟ್ಟದ ಮೇಲೆ ನೆಲೆಯಾಗಿದ್ದುದರಿಂದ ಮೇಘವು ಅದನ್ನು ಆರು ದಿನಗಳವರೆಗೆ ಮುಚ್ಚಿಕೊಂಡಿತು. ಏಳನೆಯ ದಿನದಲ್ಲಿ ಆತನು ಮೇಘದೊಳಗಿಂದ ಮೋಶೆಯನ್ನು ಕರೆದರು.


ದೇವರು ಇಸ್ರಾಯೇಲರ ನೆರಳಿಗೋಸ್ಕರ ಮೇಘವನ್ನೂ, ರಾತ್ರಿಯಲ್ಲಿ ಬೆಳಕಿಗೋಸ್ಕರ ಬೆಂಕಿಯನ್ನೂ ಏರ್ಪಡಿಸಿದರು.


ಇಗೋ, ಕತ್ತಲೆ ಭೂಮಿಯನ್ನೂ, ಗಾಢಾಂಧಕಾರವು ಜನರನ್ನೂ ಮುಚ್ಚುವುದು. ಆದರೆ ನಿನ್ನ ಮೇಲೆ ಯೆಹೋವ ದೇವರು ಉದಯಿಸುವರು. ಆತನ ಮಹಿಮೆಯು ನಿನ್ನ ಮೇಲೆ ಕಾಣಬರುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು