ಯೆಶಾಯ 30:32 - ಕನ್ನಡ ಸಮಕಾಲಿಕ ಅನುವಾದ32 ಯೆಹೋವ ದೇವರು ಅದರ ಮೇಲೆ ತರುವಂಥ ನೇಮಿಸಿದ ದಂಡವು ಹಾದು ಹೋಗುವಲ್ಲೆಲ್ಲಾ ಅದು ದಮ್ಮಡಿ, ಕಿನ್ನರಿಗಳ ಸಂಗಡ ಇರುವುದು. ಆತನು ಅವರೊಂದಿಗೆ ಯುದ್ಧಗಳಲ್ಲಿ ಹೋರಾಡುತ್ತಾ ಕೈಬೀಸಿ ಯುದ್ಧಮಾಡುವನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201932 ಮತ್ತು ಯೆಹೋವನು ಸಂಕಲ್ಪಿಸಿದ ದಂಡದ ಪ್ರತಿಯೊಂದು ಪೆಟ್ಟು, ದಮ್ಮಡಿ, ಕಿನ್ನರಿಗಳ ನಾದದೊಡನೆ ಅವರ ಮೇಲೆ ಬೀಳುವುದು. ಆತನು ಅವರೊಂದಿಗೆ ಹೋರಾಡುತ್ತಾ ಯುದ್ಧಮಾಡುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)32 ಸರ್ವೇಶ್ವರ ಸ್ವಾಮಿ ವಿಧಿಸುವ ಪ್ರತಿಯೊಂದು ಪೆಟ್ಟು ತಾಳ ತಮ್ಮಟೆಯಂತೆ ಅವರ ಮೇಲೆ ಬೀಳುವುದು. ಸರ್ವೇಶ್ವರ ತಾವೇ ಅವರ ವಿರುದ್ಧವಾಗಿ ಕೈಬೀಸಿ ಯುದ್ಧಮಾಡುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)32 ಮತ್ತು ಯೆಹೋವನು ಸಂಕಲ್ಪಿಸಿದ ದಂಡದ ಪ್ರತಿಯೊಂದು ಪೆಟ್ಟೂ ದಮ್ಮಡಿ ಕಿನ್ನರಿಗಳ ನಾದದೊಡನೆ ಅವರ ಮೇಲೆ ಬೀಳುವದು. ಆತನು ಅವರೊಂದಿಗೆ ಹೋರಾಡುತ್ತಾ ಕೈಬೀಸಿ ಯುದ್ಧಮಾಡುವನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್32 ಅಶ್ಶೂರವನ್ನು ಆತನು ಹೊಡೆಯುವಾಗ ಹಾರ್ಪ್‌ವಾದ್ಯಗಳನ್ನು ಮತ್ತು ದಮ್ಮಡಿಗಳನ್ನು ಬಾರಿಸಿದಂತಾಗುವದು. ಯೆಹೋವನು ಅಶ್ಶೂರವನ್ನು ತನ್ನ ಮಹಾಶಕ್ತಿಯಿಂದ ಸೋಲಿಸುವನು. ಅಧ್ಯಾಯವನ್ನು ನೋಡಿ |
ಯೆಹೋವ ದೇವರು ನನಗೆ ಹೀಗೆ ಹೇಳಿದ್ದಾನೆ: ಸಿಂಹವು, ಪ್ರಾಯದ ಸಿಂಹವು ಬೇಟೆಯ ಮೇಲೆ ಬಿದ್ದು ಗುರುಗುಟ್ಟುತ್ತಿರುವಾಗ, ಕಾವಲುಗಾರನ ಕೂಗನ್ನು ಕೇಳಿ, ಕುರುಬರ ಗುಂಪು ಅದಕ್ಕೆ ವಿರುದ್ಧವಾಗಿ ಕೂಡಿ ಬಂದರೂ, ಹೇಗೆ ಅವರ ಶಬ್ದಕ್ಕೆ ಭಯಪಡದೆ ಇಲ್ಲವೆ ಅವರ ಗದ್ದಲಕ್ಕೆ ಕುಂದಿಹೋಗದೆ ಇರುವುದೋ, ಹಾಗೆಯೇ ಸೇನಾಧೀಶ್ವರ ಯೆಹೋವ ದೇವರು ಚೀಯೋನ್ ಪರ್ವತಕ್ಕೋಸ್ಕರವೂ, ಅದರ ಗುಡ್ಡಕ್ಕೋಸ್ಕರವೂ ಯುದ್ಧಮಾಡಲು ಇಳಿದು ಬರುವರು.