Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 3:8 - ಕನ್ನಡ ಸಮಕಾಲಿಕ ಅನುವಾದ

8 ಏಕೆಂದರೆ ಯೆರೂಸಲೇಮು ಹಾಳಾಗಿದೆ, ಯೆಹೂದವು ಬಿದ್ದುಹೋಗಿದೆ. ಅವರ ನಡೆನುಡಿಗಳು ಯೆಹೋವ ದೇವರಿಗೆ ವಿರುದ್ಧವಾಗಿ ದೇವರ ಪ್ರಭಾವದ ದೃಷ್ಟಿಯನ್ನು ಕೆರಳಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಏಕೆಂದರೆ ಯೆರೂಸಲೇಮ್ ಹಾಳಾಯಿತು. ಯೆಹೂದವು ಬಿದ್ದುಹೋಯಿತು. ಅವರ ನಡೆನುಡಿಗಳು ಯೆಹೋವನಿಗೆ ವಿರುದ್ಧವಾಗಿ ಆತನ ಪ್ರಭಾವದ ದೃಷ್ಟಿಯನ್ನು ಕೆರಳಿಸುತ್ತದಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಜೆರುಸಲೇಮ್ ನಗರ ಹಾಳಾಯಿತು. ಜುದೇಯ ನಾಡು ಬಿದ್ದುಹೋಯಿತು. ಜನರ ನಡೆನುಡಿಗಳೆಲ್ಲ ಸ್ವಾಮಿಗೆ ವಿರುದ್ಧವಾದವು. ಸ್ವಾಮಿಯ ಮಹಿಮಾ ಸಾನ್ನಿಧ್ಯಕ್ಕೆ ಪ್ರತೀಕೂಲವಾದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಯೆರೂಸಲೇಮು ಹಾಳಾಯಿತು, ಯೆಹೂದದವರು ಬಿದ್ದುಹೋದರು! ಅವರ ನಡೆನುಡಿಗಳು ಯೆಹೋವನಿಗೆ ವಿರುದ್ಧವಾಗಿ ಆತನ ಪ್ರಭಾವದ ದೃಷ್ಟಿಯನ್ನು ಪ್ರತಿಭಟಿಸುತ್ತವಲ್ಲವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಜೆರುಸಲೇಮ್ ಮುಗ್ಗರಿಸಿಬಿದ್ದು ಕೆಟ್ಟಕಾರ್ಯಗಳನ್ನು ಮಾಡಿದ್ದರಿಂದ ಹೀಗಾಗುವದು. ಯೆಹೂದವು ಪಾಪದಲ್ಲಿ ಬಿದ್ದು ದೇವರನ್ನು ಹಿಂಬಾಲಿಸುವುದನ್ನು ನಿಲ್ಲಿಸಿಯದೆ. ಅವರಾಡುವ ಮಾತುಗಳು, ಮಾಡುವ ಕ್ರಿಯೆಗಳು ಯೆಹೋವನಿಗೆ ವಿರುದ್ಧವಾಗಿವೆ. ಯೆಹೋವನ ಮಹಿಮಾಶಕ್ತಿಯಿಂದ ಕೂಡಿದ ಕಣ್ಣುಗಳು ಇವೆಲ್ಲವನ್ನು ನೋಡುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 3:8
35 ತಿಳಿವುಗಳ ಹೋಲಿಕೆ  

ನಾವು ಹೀಗೆ ದೇವರನ್ನು ಅಸೂಯೆಗೆಬ್ಬಿಸಬಹುದೇ? ನಾವು ದೇವರಿಗಿಂತಲೂ ಬಲಿಷ್ಠರಾಗಿದ್ದೇವೆಯೋ?


ಅವರು ಮಹೋನ್ನತನಾದಾತನ ಕಡೆಗೆ ತಿರುಗಿಕೊಳ್ಳುವುದಿಲ್ಲ. ಅವರು ಮೋಸದ ಬಿಲ್ಲಿನ ಹಾಗೆ ಇದ್ದಾರೆ. ಅವರ ನಾಯಕರು ನಾಲಿಗೆಯ ಹುಚ್ಚು ಕೂಗಾಟದಿಂದ, ಖಡ್ಗದಿಂದ ಬೀಳುವರು. ಇದೇ ಈಜಿಪ್ಟ್ ದೇಶದಲ್ಲಿ ಅವರಿಗಿರುವ ನಿಂದೆಯಾಗಿದೆ.


ಎಲ್ಲರಿಗೆ ನ್ಯಾಯತೀರಿಸುವುದಕ್ಕೆ ಬರುವರು. ಮಾತ್ರವಲ್ಲದೆ ಅವರಲ್ಲಿ ಭಕ್ತಿಹೀನರೆಲ್ಲರು ಮಾಡಿದ ದುಷ್ಕೃತ್ಯಗಳನ್ನು ಮತ್ತು ಪಾಪಿಷ್ಠರು ತಮಗೆ ವಿರೋಧವಾಗಿ ಆಡಿದ ಎಲ್ಲಾ ದೂಷಣೆಗಳ ವಿಷಯವಾಗಿ ಅವರನ್ನು ಖಂಡಿಸಲು ಬರುವರು,” ಎಂಬುದಾಗಿ ಪ್ರವಾದಿಸಿದನು.


ನೀನು ಕೆಟ್ಟದ್ದನ್ನು ನೋಡದ ಹಾಗೆ ಶುದ್ಧ ಕಣ್ಣುಗಳುಳ್ಳವರು. ನೀವು ಅನ್ಯಾಯವನ್ನು ದೃಷ್ಟಿಸಲಾರಿರಿ, ವಂಚಿಸುವವರನ್ನು ಏಕೆ ಸಹಿಸಿಕೊಳ್ಳುತ್ತೀರಿ? ದುಷ್ಟನು ತನಗಿಂತ ನೀತಿವಂತನನ್ನು ನುಂಗಿ ಬಿಡುವ ವೇಳೆಯಲ್ಲಿ ಏಕೆ ಸುಮ್ಮನಿರುತ್ತೀರಿ?


ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನನ್ನು ಹೊಲದ ಹಾಗೆ ಉಳಲಾಗುವುದು. ಯೆರೂಸಲೇಮು ಹಾಳುದಿಬ್ಬಗಳಾಗುವುದು. ಆಲಯದ ಬೆಟ್ಟವೂ ಕಾಡುಗುಡ್ಡಗಳಂತಾಗುವುದು.


ಆಗ ಅವರು ನನಗೆ, “ಇಸ್ರಾಯೇಲಿನ ಮತ್ತು ಯೆಹೂದ ಮನೆತನದವರ ಅಕ್ರಮವು ಅತಿ ದೊಡ್ಡದಾಗಿದೆ. ದೇಶವು ರಕ್ತದಿಂದ ತುಂಬಿದೆ, ಪಟ್ಟಣವು ಅಧರ್ಮದಿಂದ ತುಂಬಿದೆ. ‘ಯೆಹೋವ ದೇವರು ದೇಶವನ್ನು ತೊರೆದುಬಿಟ್ಟಿದ್ದಾರೆ, ಯೆಹೋವ ದೇವರು ನೋಡುವುದಿಲ್ಲ,’ ಎಂದು ಅವರು ಹೇಳುತ್ತಾರೆ.


ಆಗ ದೇವರು ನನಗೆ, “ಮನುಷ್ಯಪುತ್ರನೇ, ಇಸ್ರಾಯೇಲ್ ವಂಶದ ಹಿರಿಯರೆಲ್ಲರು ನಾನಾ ರೂಪಗಳಿಂದ ಚಿತ್ರಿತವಾದ ತಮ್ಮ ತಮ್ಮ ಕೊಠಡಿಗಳೊಳಗೆ, ಕತ್ತಲೆಯಲ್ಲಿ ನಡೆಸುವ ಕೆಲಸವನ್ನು ನೋಡಿದೆಯಾ? ‘ಯೆಹೋವ ದೇವರು ನಾಡನ್ನು ತೊರೆದುಬಿಟ್ಟಿದ್ದಾರೆ,’ ಎಂದು ಮಾತಾಡಿಕೊಳ್ಳುತ್ತಾರಷ್ಟೆ,” ಎಂಬುದಾಗಿ ಹೇಳಿದರು.


“ಮೊರೇಷೆತಿನವನಾದ ಮೀಕಾಯನು ಯೆಹೂದದ ಅರಸನಾದ ಹಿಜ್ಕೀಯನ ದಿನಗಳಲ್ಲಿ ಪ್ರವಾದಿಸಿ, ಯೆಹೂದದ ಜನರಿಗೆಲ್ಲಾ ಹೇಳಿದ್ದೇನೆಂದರೆ: ‘ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಚೀಯೋನನ್ನು ಹೊಲದ ಹಾಗೆ ಉಳಲಾಗುವುದು; ಯೆರೂಸಲೇಮು ಹಾಳುದಿಬ್ಬಗಳಾಗುವುದು; ಆಲಯದ ಬೆಟ್ಟವೂ ಕಾಡುಗುಡ್ಡಗಳಂತಾಗುವುದು.’


ಆಗ ನಾನು ಈ ಆಲಯವನ್ನು ಶೀಲೋವಿನ ಗತಿಗೆ ಇಳಿಸುವೆನು. ಈ ನಗರವು ವಿಶ್ವದ ಜನರಿಗೆಲ್ಲಾ ಶಾಪಗ್ರಸ್ತ ನಗರವಾಗುವಂತೆ ಮಾಡುವೆನು.’ ”


ಯಾರನ್ನು ಹಾಸ್ಯಮಾಡುತ್ತೀರಿ? ಯಾರ ವಿಷಯವಾಗಿ ನೀವು ಬಾಯಿ ಅಗಲಿಸಿ, ನಾಲಿಗೆಯನ್ನು ಚಾಚುತ್ತೀರಿ?


ಹೀಗಿರಲು ಕರ್ತದೇವರು ಅವರ ಯೌವನಸ್ಥರಲ್ಲಿ ಆನಂದಿಸುವುದಿಲ್ಲ. ಅವರ ಅನಾಥರನ್ನೂ, ವಿಧವೆಯರನ್ನೂ ಕರುಣಿಸುವುದಿಲ್ಲ. ಏಕೆಂದರೆ, ಪ್ರತಿಯೊಬ್ಬನು ಕಪಟಿಯೂ, ಕೇಡು ಮಾಡುವವನೂ ಆಗಿದ್ದಾನೆ. ಎಲ್ಲರ ಬಾಯಿಯೂ ಮೂರ್ಖತನದ ಮಾತುಗಳನ್ನು ಆಡುತ್ತದೆ. ಆದ್ದರಿಂದ ಇಷ್ಟೆಲ್ಲಾ ಆದರೂ ದೇವರ ಕೋಪವು ತೀರದೆ, ಅವರ ಕೈ ಇನ್ನೂ ಚಾಚಿಯೇ ಇದೆ.


ನಿಮ್ಮ ದೇಶವು ಹಾಳಾಗಿದೆ. ನಿಮ್ಮ ಪಟ್ಟಣಗಳು ಬೆಂಕಿಯಿಂದ ಸುಟ್ಟುಹೋಗಿವೆ. ನಿಮ್ಮ ಹೊಲಗಳನ್ನು ಪರರು ನಿಮ್ಮೆದುರಿಗೆ ನುಂಗಿಬಿಡುತ್ತಿದ್ದಾರೆ. ಅದು ಇತರ ಜನರಿಂದ ಕೆಡವಿಬಿದ್ದು ಹಾಳಾಗಿದೆ.


ಆದಕಾರಣ ಯೆಹೋವ ದೇವರು ಅಸ್ಸೀರಿಯದ ಅರಸನ ಸೈನ್ಯದ ಅಧಿಪತಿಗಳನ್ನೂ ಅವನ ಮೇಲೆ ಬರಮಾಡಿದರು. ಆ ಅಧಿಪತಿಗಳು ಮನಸ್ಸೆಯ ಮೂಗಿಗೆ ಕೊಂಡಿಗಳನ್ನು ಹಾಕಿ, ಅವನಿಗೆ ಕಂಚಿನ ಸಂಕೋಲೆಗಳಿಂದ ಬಂಧಿಸಿ, ಅವನನ್ನು ಬಾಬಿಲೋನಿಗೆ ಒಯ್ದರು.


ಇದಲ್ಲದೆ ಫಿಲಿಷ್ಟಿಯರು ತಗ್ಗಿನ ದೇಶದ ಪಟ್ಟಣಗಳಲ್ಲಿಯೂ, ಯೆಹೂದದ ದಕ್ಷಿಣ ಪ್ರಾಂತದಲ್ಲಿಯೂ ನುಗ್ಗಿ, ಬೇತ್ ಷೆಮೆಷ್, ಅಯ್ಯಾಲೋನ್, ಗೆದೇರೋತ್, ಸೋಕೋ ಅದರ ಗ್ರಾಮಗಳನ್ನೂ, ತಿಮ್ನಾ ಅದರ ಗ್ರಾಮಗಳನ್ನೂ, ಗಿಮ್ಜೋ ಅದರ ಗ್ರಾಮಗಳನ್ನೂ ತೆಗೆದುಕೊಂಡು ಅಲ್ಲಿ ವಾಸವಾಗಿದ್ದರು.


ಆಗ ನಾನು, “ಯೆಹೋವ ದೇವರೇ, ಇದು ಎಷ್ಟರವರೆಗೆ?” ಎಂದೆನು. ಅದಕ್ಕೆ ಅವರು ಹೀಗೆ ಉತ್ತರಕೊಟ್ಟರು, “ಪಟ್ಟಣಗಳು ನಿವಾಸಿಗಳಿಲ್ಲದೆ, ಮನೆಗಳು ಮನುಷ್ಯನಿಲ್ಲದೆ, ಹೊಲಗಳು ಸಂಪೂರ್ಣವಾಗಿ ಹಾಳಾಗುವವರೆಗೂ,


“ಏಕೆಂದರೆ ನಿನ್ನ ಹಾಳಾದ ಸ್ಥಳಗಳೂ ನಿನ್ನ ಏಕಾಂತ ಸ್ಥಳಗಳೂ ಕೆಡವಿಬಿದ್ದ ನಿನ್ನ ದೇಶವೂ ಈಗ ನಿವಾಸಿಗಳಿಗೆ ಇಕ್ಕಟ್ಟಾಗುವುವು. ನಿನ್ನನ್ನು ನುಂಗಿದವರು ದೂರವಾಗುವರು.


ಏಕೆಂದರೆ ನಿಮ್ಮ ಕೈಗಳು ರಕ್ತದಿಂದಲೂ, ನಿಮ್ಮ ಬೆರಳುಗಳು ಅಕ್ರಮದಿಂದಲೂ ಮೈಲಿಗೆಯಾಗಿವೆ. ನಿಮ್ಮ ತುಟಿಗಳು ಸುಳ್ಳನ್ನು ಆಡುತ್ತವೆ. ನಿಮ್ಮ ನಾಲಿಗೆ ಅನ್ಯಾಯವನ್ನು ನುಡಿಯುತ್ತದೆ.


ಇಗೋ, ಮೇಘಗಳ ಹಾಗೆ ಏರಿ ಬರುವನು. ಆತನ ರಥಗಳು ಬಿರುಗಾಳಿಯ ಹಾಗೆ ಇರುವುವು. ಆತನ ಕುದುರೆಗಳು ಹದ್ದುಗಳಿಗಿಂತ ತೀವ್ರವಾಗಿವೆ. ನಮ್ಮ ಗತಿಯನ್ನು ಏನು ಹೇಳೋಣ, ಏಕೆಂದರೆ ಹಾಳಾದೆವು.


ಅವರು ನನಗೆ ಕೋಪವನ್ನು ಎಬ್ಬಿಸುವ ಹಾಗೆ ನೀವೂ ನಿಮ್ಮ ಪೂರ್ವಜರೂ ಅರಿಯದ ಬೇರೆ ದೇವರುಗಳನ್ನು ಸೇವಿಸಿ, ಧೂಪ ಸುಟ್ಟು ಮಾಡಿದ ಕೆಟ್ಟತನದ ನಿಮಿತ್ತ ಇಗೋ, ಅವು ಈ ಹೊತ್ತು ಹಾಳಾಗಿವೆ. ಅವುಗಳಲ್ಲಿ ವಾಸಮಾಡುವವನು ಯಾರೂ ಇಲ್ಲ.


ಅವಳ ಅಶುದ್ಧವು ಅವಳ ನೆರಿಗೆಗೆ ಅಂಟಿಕೊಂಡಿದೆ. ಅವಳು ತನ್ನ ಭವಿಷ್ಯವನ್ನು ಜ್ಞಾಪಕಮಾಡಿಕೊಳ್ಳುವುದಿಲ್ಲ. ಆದ್ದರಿಂದ ಅವಳು ಭಯಂಕರವಾಗಿ ಇಳಿದು ಬಂದಳು. ಅವಳನ್ನು ಆದರಿಸುವವರು ಯಾರೂ ಇಲ್ಲ. “ಓ ಯೆಹೋವ ದೇವರೇ, ನನ್ನ ಸಂಕಟವನ್ನು ನೋಡಿರಿ, ಶತ್ರುವು ಜಯಿಸಿದ್ದಾನೆ.”


ಅದರ ಐಶ್ವರ್ಯವಂತರು ಬಲಾತ್ಕಾರದಿಂದ ತುಂಬಿದ್ದಾರೆ. ಅದರ ನಿವಾಸಿಗಳು ಸುಳ್ಳುಗಳನ್ನು ಹೇಳುವವರಾಗಿದ್ದಾರೆ. ಅವರ ನಾಲಿಗೆ ಅವರ ಬಾಯಿಯಲ್ಲಿ ಕಪಟವುಳ್ಳದ್ದೇ.


ಗುಂಡಿಯನ್ನು ತೋಡುವವನು ತಾನೇ ಅದರಲ್ಲಿ ಬೀಳುತ್ತಾನೆ; ಕಲ್ಲು ಹೊರಳಿಸುವವನ ಮೇಲೆಯೇ ಅದು ತಿರುಗಿ ಹೊರಳುವುದು.


‘ಯೆಹೋವ ದೇವರ ಹೊರೆ,’ ಎಂಬ ಮಾತನ್ನು ಎತ್ತಲೇ ಕೂಡದು. ಪ್ರತಿಯೊಬ್ಬನ ನುಡಿ ಅವನವನಿಗೆ ಹೊರೆ. ಜೀವಸ್ವರೂಪನಾದ ದೇವರ ನುಡಿಗಳನ್ನು ಹೌದು, ನಮ್ಮ ದೇವರೂ ಸೇನಾಧೀಶ್ವರ ಯೆಹೋವ ದೇವರ ನುಡಿಗಳನ್ನು ನೀವು ತಲೆಕೆಳಗಾಗಿಸಿದ್ದೀರಿ.


ಇಸ್ರಾಯೇಲಿನ ಗರ್ವವು ಅವರ ಮುಖದ ಮುಂದೆ ಸಾಕ್ಷಿಕೊಡುತ್ತದೆ. ಇಸ್ರಾಯೇಲು ಮತ್ತು ಎಫ್ರಾಯೀಮು ತಮ್ಮ ಪಾಪದಲ್ಲಿ ಎಡವಿ ಬೀಳುವವು. ಯೆಹೂದವು ಸಹ ಅವರೊಂದಿಗೆ ಬೀಳುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು