Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆಶಾಯ 3:14 - ಕನ್ನಡ ಸಮಕಾಲಿಕ ಅನುವಾದ

14 ಯೆಹೋವ ದೇವರು ತಮ್ಮ ಪ್ರಜೆಗಳ ಹಿರಿಯರ ಸಂಗಡ, ಮತ್ತು ಅವರ ಅಧಿಪತಿಗಳ ಸಂಗಡ ನ್ಯಾಯತೀರಿಸಲು ಪ್ರವೇಶಿಸುವರು. ಏಕೆಂದರೆ, “ನೀವು ನನ್ನ ದ್ರಾಕ್ಷಿತೋಟವನ್ನು ತಿಂದುಬಿಟ್ಟಿದ್ದೀರಿ. ಬಡವರಿಂದ ಕೊಳ್ಳೆ ಹೊಡೆದದ್ದು ನಿಮ್ಮ ಮನೆಗಳಲ್ಲಿ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಯೆಹೋವನು ತನ್ನ ಜನರ ಹಿರಿಯರನ್ನು, ಅಧಿಕಾರಿಗಳನ್ನೂ ನ್ಯಾಯವಿಚಾರಣೆಗೆ ತರುವನು. ಏಕೆಂದರೆ, “ನೀವು ದ್ರಾಕ್ಷಿಯ ತೋಟವನ್ನು ನುಂಗಿಬಿಟ್ಟಿದ್ದೀರಿ. ಬಡವರಿಂದ ಕೊಳ್ಳೆಹೊಡೆದದ್ದು ನಿಮ್ಮ ಮನೆಗಳಲ್ಲಿ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಸ್ವಾಮಿ ಜನರ ನಾಯಕರನ್ನೂ ಅಧಿಪತಿಗಳನ್ನೂ ನ್ಯಾಯವಿಚಾರಣೆಗೆ ಗುರಿಪಡಿಸುವರು. “ನೀವು ದ್ರಾಕ್ಷಾತೋಟವನ್ನು ಕಬಳಿಸಿದ್ದೀರಿ. ಬಡವರಿಂದ ಕೊಳ್ಳೆಹೊಡೆದದ್ದನ್ನು ಮನೆಗಳಲ್ಲಿ ತುಂಬಿಸಿಕೊಂಡಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಯೆಹೋವನು ತನ್ನ ಜನರ ಹಿರಿಯರನ್ನೂ ಅಧಿಕಾರಿಗಳನ್ನೂ ನ್ಯಾಯವಿಚಾರಣೆಗೆ ತರುವನು; ನೀವು ದ್ರಾಕ್ಷೆಯ ತೋಟವನ್ನು ನುಂಗಿಬಿಟ್ಟಿದ್ದೀರಿ; ಬಡವರಿಂದ ಕೊಳ್ಳೆಹೊಡೆದದ್ದು ನಿಮ್ಮ ಮನೆಗಳಲ್ಲಿಯೇ ಇದೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ನಾಯಕರಿಗೂ ಹಿರಿಯರಿಗೂ ಅವರು ಮಾಡಿದ ಕಾರ್ಯಗಳ ವಿರುದ್ಧವಾಗಿ ಆತನು ನ್ಯಾಯತೀರಿಸುವನು. ಯೆಹೋವನು ಹೇಳುವುದೇನೆಂದರೆ: “ನೀವು ದಾಕ್ಷಾತೋಟವನ್ನು (ಯೆಹೂದವನ್ನು) ಸುಟ್ಟುಹಾಕಿದ್ದೀರಿ; ಬಡಜನರಿಂದ ನೀವು ಕಿತ್ತುಕೊಂಡ ವಸ್ತುಗಳನ್ನು ಈಗಲೂ ನಿಮ್ಮ ಮನೆಗಳಲ್ಲಿ ಇಟ್ಟುಕೊಂಡಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆಶಾಯ 3:14
34 ತಿಳಿವುಗಳ ಹೋಲಿಕೆ  

“ನಿನ್ನ ಭಕ್ತಿಗಾಗಿ ದೇವರು ನಿನ್ನನ್ನು ಗದರಿಸುತ್ತಾರೋ? ನಿನ್ನ ಭಕ್ತಿಗಾಗಿ ದೇವರು ನ್ಯಾಯತೀರ್ಪಿಗೆ ಗುರಿಪಡಿಸುತ್ತಾರೆಯೇ?


ನೀವಾದರೋ ಬಡವರನ್ನು ಅವಮಾನ ಪಡಿಸಿದ್ದೀರಿ. ನಿಮ್ಮನ್ನು ಬಾಧಿಸಿ ನ್ಯಾಯಸ್ಥಾನಗಳ ಮುಂದೆ ಎಳೆದುಕೊಂಡು ಹೋಗುವವರು ಐಶ್ವರ್ಯವಂತರಲ್ಲವೋ?


ಸಮಾರ್ಯ ಬೆಟ್ಟದಲ್ಲಿರುವ ಬಾಷಾನಿನ ಹಸುಗಳಂತಿರುವ ಮಹಿಳೆಯರೇ, ನೀವು ಬಡವರನ್ನು ಹಿಂಸಾಚಾರ ಮಾಡಿ, ದರಿದ್ರರನ್ನು ಜಜ್ಜಿ, ನಿಮ್ಮ ಪತಿಗಳಿಗೆ, “ಪಾನವನ್ನು ತರಿಸಿರಿ, ಕುಡಿಯೋಣ,” ಎಂದು ಹೇಳುವವರೇ, ಈ ವಾಕ್ಯವನ್ನು ಕೇಳಿರಿ.


ಪಂಜರವು ಪಕ್ಷಿಗಳಿಂದ ತುಂಬಿರುವ ಪ್ರಕಾರ, ಅವರ ಮನೆಗಳು ಮೋಸದಿಂದ ತುಂಬಿವೆ. ಆದ್ದರಿಂದ ಅವರು ಶಕ್ತಿವಂತರೂ, ಐಶ್ವರ್ಯವಂತರೂ ಆಗಿದ್ದಾರೆ.


ಸೇನಾಧೀಶ್ವರ ಯೆಹೋವ ದೇವರ ದ್ರಾಕ್ಷಿತೋಟವು ಇಸ್ರಾಯೇಲಿನ ಮನೆತನವು. ಯೆಹೂದದ ಜನವೋ ದೇವರ ಇಷ್ಟದ ಗಿಡವು. ಅವರು ನ್ಯಾಯವನ್ನು ನಿರೀಕ್ಷಿಸಲು, ಹಿಂಸೆಯೂ, ನೀತಿಯನ್ನು ನಿರೀಕ್ಷಿಸಲು ಗೋಳಾಟವು ಸಿಕ್ಕಿತು.


ನಿಮ್ಮ ಸೇವಕನನ್ನು ನ್ಯಾಯವಿಚಾರಣೆಗೆ ಗುರಿಮಾಡಬೇಡಿರಿ, ಏಕೆಂದರೆ ಜೀವಿಸುವರಲ್ಲಿ ಒಬ್ಬರೂ ನಿಮ್ಮ ಮುಂದೆ ನೀತಿವಂತರಲ್ಲ.


ದುಷ್ಟತ್ವವನ್ನು ನಡೆಸುವವರಿಗೆ ಏನೂ ತಿಳಿಯುವುದಿಲ್ಲವೋ? ಅವರು ನನ್ನ ಜನರನ್ನು ರೊಟ್ಟಿಯಂತೆ ತಿಂದು ಬಿಡುತ್ತಾರೆಯೋ? ಆದರೆ ಅವರು ಯೆಹೋವ ದೇವರಿಗೆ ಎಂದೂ ಮೊರೆಯಿಡುವುದಿಲ್ಲ.


ಆದರೆ ದುಷ್ಟರು ದಿಕ್ಕಿಲ್ಲದ ಶಿಶುವನ್ನು ತಾಯಿಯ ಎದೆಯಿಂದ ಕಸೆದುಕೊಳ್ಳುತ್ತಾರೆ; ಬಡವನ ಶಿಶುವನ್ನು ಒತ್ತೆಯಾಗಿ ತೆಗೆದುಕೊಳ್ಳುತ್ತಾರೆ.


“ಮತ್ತೊಂದು ಸಾಮ್ಯವನ್ನು ಕೇಳಿರಿ: ಒಬ್ಬ ಯಜಮಾನನು ದ್ರಾಕ್ಷಿಯ ತೋಟವನ್ನು ಮಾಡಿ ಅದರ ಸುತ್ತಲೂ ಬೇಲಿ ಹಾಕಿದನು. ಅದರೊಳಗೆ ದ್ರಾಕ್ಷಾರಸವನ್ನು ತೆಗೆಯಲು ಆಲೆಯನ್ನು ಅಗೆದು ಕಾವಲುಗೋಪುರವನ್ನು ಕಟ್ಟಿ ರೈತರಿಗೆ ಗೇಣಿಗೆ ಕೊಟ್ಟು ದೂರದೇಶಕ್ಕೆ ಹೋದನು.


ದುಷ್ಟಮನೆತನವೇ ನೀನು ಕೆಟ್ಟದ್ದಾಗಿ ಸಂಪಾದಿಸಿದ್ದನ್ನು ಶಾಪಗ್ರಸ್ತರಾದ ಕಡಿಮೆ ಅಳತೆಯನ್ನು ನಾನು ಮರೆಯಬೇಕೋ?


ಅವರು ಹೊಲಗಳನ್ನು ಆಶಿಸಿ ಬಲಾತ್ಕಾರದಿಂದ ತೆಗೆದುಕೊಳ್ಳುತ್ತಾರೆ. ಮನೆಗಳನ್ನೂ ಸಹ ತೆಗೆದುಕೊಳ್ಳುತ್ತಾರೆ. ಮನುಷ್ಯನಿಗೂ ಅವನ ಮನೆಗೂ ಇತರರಿಗೂ ಅವನ ಸ್ವಾಸ್ತ್ಯವನ್ನು ಕಸಿದುಕೊಳ್ಳುತ್ತಾರೆ.


ದೇವರು ಮನುಷ್ಯನ ಮೇಲೆ ಹೆಚ್ಚು ಗಮನ ಇಡಬೇಕಾಗಿಲ್ಲ. ಮನುಷ್ಯನು ನ್ಯಾಯವಿಚಾರಣೆಗೆ ಬರಬೇಕೆಂದು ದೇವರು ಕರೆಯುವ ಅವಶ್ಯಕತೆಯೂ ಇಲ್ಲ.


ಕೊಲೆಗಾರನು ಮುಂಜಾನೆಯೇ ಎದ್ದು, ದಿಕ್ಕಿಲ್ಲದವರನ್ನೂ, ಬಡವರನ್ನೂ ಸಂಹರಿಸುತ್ತಾನೆ; ರಾತ್ರಿಯಲ್ಲಿ ಕಳ್ಳನಂತೆ ವರ್ತಿಸುತ್ತಾನೆ.


ಸಿಂಹದ ಹಾಗೆ, ಮರೆಯಲ್ಲಿ ಹೊಂಚುಹಾಕುತ್ತಾನೆ; ಅಸಹಾಯಕರನ್ನು ಹಿಡಿಯಲು ಕಾಯುತ್ತಾನೆ ಕುಗ್ಗಿದವನನ್ನು ಹಿಡಿದೆಳೆದು ತನ್ನ ಬಲೆಯಲ್ಲಿ ಹಾಕುತ್ತಾನೆ.


ಖಡ್ಗಗಳಂತೆ ಹಲ್ಲುಗಳುಳ್ಳವರೂ ಚೂರಿಗಳಂತೆ ದವಡೆಗಳುಳ್ಳವರೂ ಬಡವರನ್ನು ಭೂಮಿಯಿಂದಲೂ ದಿಕ್ಕಿಲ್ಲದವರನ್ನು ಮಾನವಕುಲದಿಂದಲೂ ಕಬಳಿಸುವವರೂ ಆಗಿದ್ದಾರೆ.


ಅನೀತಿಯ ನೇಮಕಗಳನ್ನು ನೇಮಿಸಿ, ಕ್ರೂರವಾದ ಕಾನೂನುಗಳನ್ನು ಬರೆಯುವವರಿಗೆ ಕಷ್ಟ!


ಇವರು ವಿಧವೆಯರನ್ನು ಸೂರೆಮಾಡಿ, ದಿಕ್ಕಿಲ್ಲದವರಿಂದ ಸುಲಿದುಕೊಂಡು ದೀನರಿಗೆ ನ್ಯಾಯವನ್ನು ತಪ್ಪಿಸಿ, ನನ್ನ ಜನರಲ್ಲಿ ಬಡವರ ನ್ಯಾಯವನ್ನು ತೆಗೆಯಬೇಕೆಂದಿದ್ದಾರೆ.


ಆದರೆ ಭೂಮಿಯ ಬಡವರಿಗೆ ನೀತಿಯಿಂದ ನ್ಯಾಯತೀರಿಸುವರು. ಭೂಲೋಕದ ದೀನರಿಗೆ ನ್ಯಾಯವಾಗಿ ತೀರ್ಪುಮಾಡುವರು, ಭೂಮಿಯನ್ನು ತಮ್ಮ ಬಾಯಿಯ ಕೋಲಿನಿಂದ ಹೊಡೆಯುವರು. ತಮ್ಮ ತುಟಿಗಳ ಉಸಿರಿನಿಂದ ದುಷ್ಟರನ್ನು ಹತಮಾಡುವರು.


ಬಡವರಲ್ಲಿ ಬಡವರಾದವರು ಆಹಾರ ಕಂಡುಕೊಳ್ಳುವರು. ಕೊರತೆಯಲ್ಲಿರುವವರು ಸುರಕ್ಷಿತವಾಗಿ ನಿದ್ರಿಸುವರು. ಆದರೆ ನಿನ್ನ ಸಂತಾನದವರೋ ಕ್ಷಾಮದಿಂದ ಹತರಾಗುವರು. ನಿನ್ನಲ್ಲಿ ಉಳಿದವರನ್ನು ಅದು ಹತಮಾಡುವುದು.


ಕಾಲು, ಬಡವರ ಕಾಲುಗಳೂ, ದೀನರ ಪಾದಗಳೂ ಅದನ್ನು ತುಳಿಯುವುವು.


ದೀನರ ಸಂತೋಷವು ಯೆಹೋವ ದೇವರಲ್ಲಿ ಹೆಚ್ಚಾಗುವುವು. ಮನುಷ್ಯರಲ್ಲಿ ಬಡವರು ಇಸ್ರಾಯೇಲಿನ ಪರಿಶುದ್ಧನಲ್ಲಿ ಹರ್ಷಿಸುವರು.


ಆದಕಾರಣ ಇಸ್ರಾಯೇಲರ ಪರಿಶುದ್ಧನು ಹೇಳುವುದೇನೆಂದರೆ, “ನೀವು ಈ ಮಾತನ್ನು ತಿರಸ್ಕಾರ ಮಾಡಿ ಬಲಾತ್ಕಾರ, ಕುಯುಕ್ತಿಗಳನ್ನು ನಂಬಿ, ಅವುಗಳನ್ನೇ ಆಧಾರ ಮಾಡಿಕೊಂಡದ್ದರಿಂದ


ನಿಮ್ಮ ಉಪವಾಸದ ಪರಿಣಾಮಗಳು ಇಷ್ಟೆ: ವ್ಯಾಜ್ಯ, ಕಲಹ, ಹೊಡೆದಾಟ. ಇಲ್ಲಿಯವರೆಗೆ ನೀವು ಮಾಡಿದಂತೆ ಉಪವಾಸ ಮಾಡಿದರೆ, ನಿಮ್ಮ ಪ್ರಾರ್ಥನೆ ಪರಲೋಕವನ್ನು ಮುಟ್ಟುವುದಿಲ್ಲ.


ಬಡವರನ್ನೂ, ದರಿದ್ರರನ್ನೂ ಉಪದ್ರವಗೊಳಿಸಿ, ಹಿಂಸಿಸಿ, ಸುಲಿಗೆ ಮಾಡಿ, ಒತ್ತೆಗಳನ್ನು ಹಿಂದೆ ಕೊಡದೆ, ವಿಗ್ರಹಗಳ ಕಡೆಗೆ ತನ್ನ ಕಣ್ಣುಗಳನ್ನು ಎತ್ತಿ ಅಸಹ್ಯವಾದವುಗಳನ್ನು ಮಾಡಿ,


ನಿಮ್ಮನ್ನು ಜನರಿರುವ ಮರುಭೂಮಿಯೊಳಗೆ ತಂದು, ನಿಮ್ಮೊಂದಿಗೆ ಅಲ್ಲಿ ಮುಖಾಮುಖಿಯಾಗಿ ನ್ಯಾಯತೀರ್ಪು ಮಾಡುವೆನು.


ಅದೇ ರೀತಿ ನಾನು ನಿಮ್ಮ ಪಿತೃಗಳ ಸಂಗಡ ಈಜಿಪ್ಟ್ ದೇಶದ ಮರುಭೂಮಿಯಲ್ಲಿ ನ್ಯಾಯತೀರ್ಪು ಮಾಡಿದೆನು. ಈಗಲೂ ನಿಮ್ಮ ಸಂಗಡ ನ್ಯಾಯತೀರ್ಪು ಮಾಡುವೆನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.


ನನ್ನ ಪ್ರಜೆಯ ಮಾಂಸವನ್ನು ತಿನ್ನುತ್ತಾರೆ. ಅವರ ಚರ್ಮವನ್ನು ಸುಲಿದುಹಾಕುತ್ತಾರೆ. ಅವರ ಎಲುಬುಗಳನ್ನು ಮುರಿದುಹಾಕುತ್ತೀರಿ. ಹಂಡೆಯಲ್ಲಿನ ತುಂಡುಗಳಂತೆ, ಮಡಕೆಯಲ್ಲಿನ ಮಾಂಸದ ಚೂರುಗಳಂತೆ ನನ್ನ ಪ್ರಜೆಯನ್ನು ಚೂರುಚೂರಾಗಿ ಕತ್ತರಿಸಿಹಾಕಿದ್ದೀರಿ.”


“ ‘ನೆರೆಯವನಿಗೆ ಏನಾದರೂ ಮಾರಾಟ ಮಾಡಿದ್ದರೆ, ಇಲ್ಲವೆ ನೆರೆಯವನಿಂದ ಕೊಂಡುಕೊಂಡಿದ್ದರೆ, ಒಬ್ಬರಿಗೊಬ್ಬರು ಅನ್ಯಾಯಮಾಡಬಾರದು.


ಆದ್ದರಿಂದ ನೀವು ಒಬ್ಬರಿಗೊಬ್ಬರು ಅನ್ಯಾಯಮಾಡಬಾರದು. ಆದರೆ ದೇವರಿಗೆ ನೀನು ಭಯಪಡಬೇಕು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.


ಅನೇಕ ಕುರುಬರು ನನ್ನ ದ್ರಾಕ್ಷಿತೋಟವನ್ನು ಕೆಡಿಸಿದ್ದಾರೆ; ನನ್ನ ಹೊಲವನ್ನು ತುಳಿದುಬಿಟ್ಟಿದ್ದಾರೆ; ನಾನು ಮೆಚ್ಚಿದ ಭಾಗವನ್ನು ಹಾಳಾದ ಮರುಭೂಮಿಯಾಗಿ ಮಾಡಿದ್ದಾರೆ.


ಬಡವರ ತಲೆಗಳನ್ನು ಬೀದಿಯ ಧೂಳಿನಂತೆ ತುಳಿದು ಬಿಡುತ್ತಾರೆ. ದೀನದಲಿತರಿಗೆ ನ್ಯಾಯ ದೊರಕದಂತೆ ಮಾಡುತ್ತಾರೆ. ತಂದೆಯೂ ಮಗನೂ ಒಬ್ಬ ಮಹಿಳೆಯನ್ನು ಇಟ್ಟುಕೊಂಡು, ನನ್ನ ಪವಿತ್ರ ನಾಮಕ್ಕೆ ಅಪಕೀರ್ತಿ ತರುತ್ತಾರೆ.


ಅಪರಾಧವನ್ನು ಯೋಚಿಸಿ ಅಪರಾಧವನ್ನು ಕಲ್ಪಿಸಿ, ತಮ್ಮ ಹಾಸಿಗೆಗಳ ಮೇಲೆ ಕೆಟ್ಟದ್ದನ್ನು ನಡೆಸುವವರಿಗೆ ಕಷ್ಟ! ಹೊತ್ತಾರೆ ಬೆಳಕಾಗುವಾಗ ಅದನ್ನು ಮಾಡುತ್ತಾರೆ. ಏಕೆಂದರೆ ಅದು ಅವರ ಕೈಶಕ್ತಿಯಲ್ಲಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು