“ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಮನುಷ್ಯಪುತ್ರನೇ, ನೀನು ಪ್ರತಿಯೊಂದು ರೀತಿಯ ಪಕ್ಷಿಗಳಿಗೂ ಮತ್ತು ಪ್ರತಿಯೊಂದು ಕಾಡುಮೃಗಗಳಿಗೂ, ‘ಮಾತನಾಡಿ ಒಟ್ಟಾಗಿ ಬನ್ನಿರಿ. ನಾನು ನಿಮಗಾಗಿ ಅರ್ಪಿಸುವ ನನ್ನ ಯಜ್ಞಕ್ಕೋಸ್ಕರ ಪ್ರತಿಯೊಂದು ಕಡೆಯಿಂದಲೂ ಸೇರಿರಿ. ಇದು ಇಸ್ರಾಯೇಲ್ ಪರ್ವತಗಳ ಮೇಲೆ ನಡೆಯುವ ಮಹಾಯಜ್ಞವಾಗಿದೆ. ಅಲ್ಲಿ ನೀವು ಮಾಂಸವನ್ನು ತಿನ್ನಬಹುದು ಮತ್ತು ರಕ್ತವನ್ನು ಕುಡಿಯಬಹುದು.
ಆದ್ದರಿಂದ ನನ್ನ ರೋಷವನ್ನು ಅವರ ಮೇಲೆ ಸುರಿಸಿದ್ದೇನೆ. ನನ್ನ ಸಿಟ್ಟಿನ ಬೆಂಕಿಯಿಂದ ಅವರನ್ನು ಸಂಹರಿಸಿದ್ದೇನೆ. ಅವರ ದುರ್ನಡತೆಯ ಹೊಣೆಯನ್ನು ಅವರ ತಲೆಗಳ ಮೇಲೆ ಹೊರಿಸಿದ್ದೇನೆಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”
ಆಗ ಅರಮನೆಯ ಮೇಲ್ವಿಚಾರಕನಾದ ಹಿಲ್ಕೀಯನ ಮಗ ಎಲ್ಯಾಕೀಮನೂ ಕಾರ್ಯದರ್ಶಿಯಾದ ಶೆಬ್ನನೂ, ದಾಖಲೆಗಾರನಾದ ಆಸಾಫನ ಮಗ ಯೋವ ಎಂಬವನೂ ತಮ್ಮ ಬಟ್ಟೆಗಳನ್ನು ಹರಿದುಕೊಂಡು ಹಿಜ್ಕೀಯನ ಬಳಿಗೆ ಬಂದು ಸೈನ್ಯಾಧಿಕಾರಿಯಾದ ರಬ್ಷಾಕೆ ಹೇಳಿದ ಮಾತುಗಳನ್ನು ಅವನಿಗೆ ತಿಳಿಸಿದರು.
ಯೆಹೋವ ದೇವರ ಖಡ್ಗವು ರಕ್ತದಲ್ಲಿ ಸ್ನಾನ ಮಾಡಿದೆ. ಅದು ಕುರಿ ಮತ್ತು ಹೋತಗಳ ರಕ್ತದಿಂದಲೂ, ಟಗರುಗಳ ಮೂತ್ರಪಿಂಡದ ಕೊಬ್ಬಿನಿಂದಲೂ ಮುಚ್ಚಲಾಗಿದೆ. ಏಕೆಂದರೆ ಯೆಹೋವ ದೇವರಿಗೆ ಬೊಚ್ರದಲ್ಲಿ ಬಲಿಯು, ಎದೋಮಿನ ದೇಶದಲ್ಲಿ ದೊಡ್ಡ ಕೊಲೆಯು ಉಂಟು.